Facebook Twitter Instagram
    Thursday, October 22
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಶಿಪ್ ಜಾಬ್ ಕೊಡಿಸುವುದಾಗಿ ನಂಬಿಸಿ ₹4 ಲಕ್ಷಕ್ಕೂ ಹೆಚ್ಚು ವಂಚನೆ
    ಇತ್ತೀಚಿನ ಸುದ್ದಿ

    ಶಿಪ್ ಜಾಬ್ ಕೊಡಿಸುವುದಾಗಿ ನಂಬಿಸಿ ₹4 ಲಕ್ಷಕ್ಕೂ ಹೆಚ್ಚು ವಂಚನೆ

    May 14, 2026
    Share

    ಮಂಗಳೂರು :  ಅಮೆರಿಕದ ಪ್ರತಿಷ್ಠಿತ ‘ಪ್ರಿನ್ಸೆಸ್ ಕ್ರೂಸ್ ಲೈನ್ಸ್’ ಹಡಗಿನಲ್ಲಿ ಬಾರ್ಟೆಂಡರ್ ಕೆಲಸ ಕೊಡಿಸುವುದಾಗಿ ನಂಬಿಸಿ ನಗರದ 21 ವರ್ಷದ ಯುವತಿಯೊಬ್ಬರಿಗೆ ಸೈಬರ್ ಚೋರರು ಬರೋಬ್ಬರಿ ₹4,12,850 ವಂಚಿಸಿದ್ದಾರೆ.

    ಪಿರ್ಯಾದಿದಾರ ಯುವತಿಯು ಏಪ್ರಿಲ್ 13ರಂದು ಇನ್‌ಸ್ಟಾಗ್ರಾಮ್ ವೀಕ್ಷಿಸುತ್ತಿದ್ದಾಗ ‘Recruiting Agency’ ಹೆಸರಿನ ಜಾಹೀರಾತೊಂದು ಕಾಣಿಸಿಕೊಂಡಿದೆ. ಅದನ್ನು ಕ್ಲಿಕ್ ಮಾಡಿದ ಕೂಡಲೇ ಅಪರಿಚಿತ ವಾಟ್ಸಾಪ್ ನಂಬರ್‌ನಿಂದ ಸಂದೇಶ ಬಂದಿದೆ. ತನ್ನನ್ನು ಕ್ಯಾಲಿಫೋರ್ನಿಯಾದ ಹೈರಿಂಗ್ ಮ್ಯಾನೇಜರ್ ‘ಜಾನಿ ಫೆವೆಲೆನ್’ ಎಂದು ಪರಿಚಯಿಸಿಕೊಂಡ ವ್ಯಕ್ತಿ, ಹಡಗಿನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿದ್ದಾನೆ.

    ಹಂತ ಹಂತವಾಗಿ ಹಣ ವಸೂಲಿ:

    ನಂತರ ನೋಂದಣಿ ಶುಲ್ಕ, ವರ್ಕ್ ಪರ್ಮಿಟ್, ಐಇಎಲ್‌ಟಿಎಸ್ (IELTS) ಪರೀಕ್ಷೆ ಮತ್ತು ವೀಸಾ ಪ್ರಕ್ರಿಯೆಯ ನೆಪವೊಡ್ಡಿ ಯುವತಿಯಿಂದ ಹಂತ ಹಂತವಾಗಿ ಹಣ ಪೀಕಲಾಗಿದೆ. ಏಪ್ರಿಲ್ 14 ರಿಂದ ಮೇ 8 ರವರೆಗೆ ವಿವಿಧ ಬ್ಯಾಂಕ್ ಖಾತೆಗಳು ಹಾಗೂ ಕ್ಯೂಆರ್ ಕೋಡ್‌ಗಳ (QR Code) ಮೂಲಕ ಒಟ್ಟು ₹4,12,850 ಹಣವನ್ನು ವರ್ಗಾವಣೆ ಮಾಡಿಸಿಕೊಳ್ಳಲಾಗಿದೆ. ವೀಸಾ ಪ್ರಕ್ರಿಯೆ ಹೆಸರಿನಲ್ಲಿ ಮೇಲ್ ಮತ್ತು ಟೆಲಿಗ್ರಾಂ ಐಡಿಗಳನ್ನು ಬಳಸಿಕೊಂಡು ಯುವತಿಯ ವಿಶ್ವಾಸ ಗಳಿಸಿದ್ದ ವಂಚಕರು, ಕೊನೆಗೆ ಯಾವುದೇ ಕೆಲಸವನ್ನೂ ಕೊಡಿಸದೆ ಕೈಕೊಟ್ಟಿದ್ದಾರೆ.

    ಹಣ ಕಳೆದುಕೊಂಡಿರುವುದು ಮನವರಿಕೆಯಾಗುತ್ತಿದ್ದಂತೆಯೇ ಯುವತಿಯು ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಐಟಿ ಕಾಯ್ದೆ ಹಾಗೂ ಬಿಎನ್‌ಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.

    Post Views: 174

    karnataka PoliceInvestigation

    Related Posts

    ಮಂಗಳೂರು: ಫೇಸ್‌ಬುಕ್‌ನಲ್ಲಿ ಬಂದಿದ್ದ APK ಫೈಲ್ ಡೌನ್‌ಲೋಡ್ ಮಾಡಿ ₹1.78 ಲಕ್ಷ. ಕಳೆದುಕೊಂಡ ವ್ಯಕ್ತಿ!!

    October 21, 2026

    ಕಡಬ: ವೃದ್ಧೆಯ ಮೇಲೆ ಕಲ್ಲು ಎಸೆದು ಹಲ್ಲೆ – ಸೊಸೆಯ ವಿರುದ್ಧ ಪ್ರಕರಣ ದಾಖಲು

    October 21, 2026

    ಮಂಗಳೂರು ದಸರಾ: ಇಂದು ಸಂಜೆ 4ರಿಂದ ವಾಹನ ಸಂಚಾರ ಮಾರ್ಗ ಬದಲಾವಣೆ

    October 21, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಮಂಗಳೂರು: ಫೇಸ್‌ಬುಕ್‌ನಲ್ಲಿ ಬಂದಿದ್ದ APK ಫೈಲ್ ಡೌನ್‌ಲೋಡ್ ಮಾಡಿ ₹1.78 ಲಕ್ಷ. ಕಳೆದುಕೊಂಡ ವ್ಯಕ್ತಿ!!

    October 21, 2026

    ಕಡಬ: ವೃದ್ಧೆಯ ಮೇಲೆ ಕಲ್ಲು ಎಸೆದು ಹಲ್ಲೆ – ಸೊಸೆಯ ವಿರುದ್ಧ ಪ್ರಕರಣ ದಾಖಲು

    October 21, 2026

    ಮಂಗಳೂರು ದಸರಾ: ಇಂದು ಸಂಜೆ 4ರಿಂದ ವಾಹನ ಸಂಚಾರ ಮಾರ್ಗ ಬದಲಾವಣೆ

    October 21, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.