ಕಳೆದ ವಾರವಷ್ಟೇ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಶಿರಾಡಿ ಘಾಟಿಯ ದೊಡ್ಡತಪ್ಲೆ ಬಳಿ ಭೂಕುಸಿತ ಸಂಭವಿಸಿ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಸಂಚಾರ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಅದೇ ಜಾಗದಲ್ಲಿ ಭೂಕುಸಿತ ಸಂಭವಿಸಿದೆ. ಹಲವು ವಾಹನಗಳು ಮಣ್ಣಿನಡಿ ಸಿಲುಕಿವೆ. ಪ್ರದೇಶದಲ್ಲಿ ಕಳೆದ ಹದಿನೈದು ದಿನಗಳಿಂದ ಮಣ್ಣು ಕುಸಿಯುತ್ತಿದೆ. ಇಂದು ಮತ್ತೆ ಭಾರಿ ಪ್ರಮಾಣದಲ್ಲಿ ಮಣ್ಣು ಕುಸಿದಿದೆ. ಇದೇ ವೇಳೆ ಕಾರಿನಲ್ಲಿ ಸಂಚರಿಸುತ್ತಿದ್ದವರು ಅದರಡಿ ಸಿಲುಕಿದ್ದಾರೆ. ಸದ್ಯ ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ. ರಕ್ಷಣಾ ಸಿಬ್ಬಂದಿ ಜೆಸಿಬಿ ಮೂಲಕ ಮಣ್ಣು ತೆರವು ಮಾಡುತ್ತಿದ್ದಾರೆ. ಸ್ಥಳದಲ್ಲಿ ಆತಂಕ ಹೆಚ್ಚಾಗಿದೆ. ಮತ್ತಷ್ಟು ಮಣ್ಣು ಕುಸಿದರೆ ದೊಡ್ಡ ಅನಾಹುತವೇ ಸಂಭವಿಸುವ ಭೀತಿ ಎದುರಾಗಿದೆ. ಸಮರೋಪಾದಿಯಲ್ಲಿ ಮಣ್ಣು ತೆರವು ಮಾಡಲು ಪ್ರಯತ್ನಿಸಲಾಗುತ್ತಿದೆ. ವಾಹನ ಸಂಚಾರ ಸಂಪೂರ್ಣ ಬಂದ್ ಸದ್ಯ ಶಿರಾಡಿ ಘಾಟ್ ರಸ್ತೆಯಲ್ಲಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪ್ರದೇಶಗಳಿಂದ ಬರುತ್ತಿರುವ ವಾಹನಗಳನ್ನು ಗುಂಡ್ಯದಲ್ಲೇ ಪೊಲೀಸರು ತಡೆಯುತ್ತಿದ್ದಾರೆ.
Author: main-admin
ಮಂಗಳೂರು: ನಗರದ ನಂತೂರು ಪದವು – ಜಂಕ್ಷನ್ ನಡುವಿನ ಎನ್ಎಚ್66ನಲ್ಲಿ ಟ್ಯಾಂಕರ್ ಹರಿದು ಸ್ಕೂಟರಿನಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಯೋರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಮಂಗಳೂರು ನಗರದ ಅಡ್ಯಾರು ಕಣ್ಣಗುಡ್ಡೆ ನಿವಾಸಿ ಶಿವಾನಂದ ಶೆಟ್ಟಿ(42) ಮೃತಪಟ್ಟವರು. ಶಿವಾನಂದ ಶೆಟ್ಟಿ ಅಡ್ಯಾರ್ ಕಣ್ಣೂರಿನಲ್ಲಿ ವಾಚ್‌ಗಳ ಬಿಡಿ ಭಾಗಗಳ ಫ್ಯಾಕ್ಟರಿಯಲ್ಲಿ ಉದ್ಯೋಗಿಯಾಗಿದ್ದರು. ಇವರು ಕಾರ್ಯ ನಿಮಿತ್ತ ನಂತೂರು ವೃತ್ತದ ಮೂಲಕ ಕದ್ರಿ ಪದವು ಕಡೆಗೆ ಸ್ಕೂಟರಿನಲ್ಲಿ ಆಗಮಿಸುತ್ತಿದ್ದರು. ಈ ವೇಳೆ ಹಿಂಭಾಗದಿಂದ ಬರುತ್ತಿದ್ದ ಟ್ಯಾಂಕರ್ ಲಾರಿ ಇವರ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಕೂಟರ್ ಸವಾರ ಶಿವಾನಂದ ಶೆಟ್ಟಿ ರಸ್ತೆಗೆಸೆಯಲ್ಪಟ್ಟಿದ್ದಾರೆ. ಆದರೆ ಟ್ಯಾಂಕರ್ ನಿಲ್ಲದೆ ಚಕ್ರ ಅವರ ತಲೆಯ ಮೇಲೆಯೇ ಹರಿದ ಪರಿಣಾಮ ಶಿವಾನಂದ ಶೆಟ್ಟಿಯವರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ. ಕದ್ರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಟ್ಯಾಂಕರ್ ಹಾಗೂ ಚಾಲಕನನ್ನು ವಶಪಡಿಸಿಕೊಂಡಿದ್ದಾರೆ. ಸ್ಕೂಟರ್ ಸ್ಕಿಡ್ ಆಗಿ ಬೀಳಲು ರಸ್ತೆ ಗುಂಡಿ ಕಾರಣವೇ ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆ ಸ್ಥಳದಲ್ಲಿ ಅಂಥಹ…
ವಯನಾಡು: ಕೇರಳದ ವಯನಾಡಿನಲ್ಲಿ ಭಾರಿ ಮಳೆಗೆ ಸಂಭವಿಸಿದ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ ಏರುತ್ತಲೇ ಇದ್ದು, ಸದ್ಯದ ಮಾಹಿತಿ ಪ್ರಕಾರ ಸಾವಿನ ಸಂಖ್ಯೆ ಇದೀಗ 73ಕ್ಕೆ ಏರಿಕೆಯಾಗಿದೆ. ಮೃತರ ದೇಹಗಳು ಮೆಪ್ಪಾಡಿ ಆಸ್ಪತ್ರೆಯಲ್ಲಿದ್ದು, ಗುರುತು ಪತ್ತೆ ಹಚ್ಚುವಿಕೆಗೆ ಹರಸಾಹಸ ಪಡುವಂತಾಗಿದೆ. 100ಕ್ಕೂ ಅಧಿಕ ಮಂದಿ ಮಣ್ಣಿನಡಿ ಸಿಲುಕಿಕೊಂಡಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ನಿರ್ವಹಣ ತಂಡ ಸೇರಿದಂತೆ ಎಲ್ಲ ರಕ್ಷಣಾ ಏಜೆನ್ಸಿಗಳು ಸ್ಥಳದಲ್ಲಿ ಬೀಡುಬಿಟ್ಟು, ರಕ್ಷಣಾ ಕಾರ್ಯದಲ್ಲಿ ತೊಡಗಿವೆ.
ಮುಖೇಶ್ ಅಂಬಾನಿಯವರ ರಿಲಯನ್ಸ್ ಜಿಯೋ ಭಾರತದಲ್ಲಿ ಅತಿದೊಡ್ಡ ಟೆಲಿಕಾಂ ಆಪರೇಟರ್ ಆಗಿದ್ದು, ಭಾರತೀಯರು ಸ್ಮಾರ್ಟ್‌ಫೋನ್‌ಗಳನ್ನು ಬಳಸುವ ರೀತಿಯಲ್ಲಿ ಕ್ರಾಂತಿಯನ್ನು ಮಾಡಿದೆ. ಕಂಪನಿಯು ಕಳೆದ ವರ್ಷ ಕೇವಲ 999 ರೂಗಳಲ್ಲಿ ಕೈಗೆಟುಕುವ ಬೆಲೆಯ JioBharat V2 ಫೋನ್ ಅನ್ನು ಬಿಡುಗಡೆ ಮಾಡಿತು. ಈಗ, ಕಂಪನಿಯು 4G ಫೀಚರ್ ಫೋನ್‌ಗಾಗಿ ಹೊಸ ಪ್ರಿಪೇಯ್ಡ್ ಪ್ಯಾಕ್ ಹೊರತಂದಿದೆ. ಕೈಗೆಟುಕುವ ಕರೆಗಳು, 5G ಡೇಟಾ, OTT ಚಂದಾದಾರಿಕೆಗಳು ಮತ್ತು ಅಗ್ಗದ ಫೋನ್‌ಗಳನ್ನು ನೀಡುವ ಮೂಲಕ ಭಾರತದಲ್ಲಿ ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿಯನ್ನುಂಟು ಮಾಡಿದೆ. ಇತರ ಯೋಜನೆಗಳಂತೆ, ರಿಲಯನ್ಸ್ ಜಿಯೋ ಕೈಗೆಟುಕುವ ಯೋಜನೆಯು 42GB ಒಟ್ಟು ಡೇಟಾ ಮತ್ತು OTT ಚಂದಾದಾರಿಕೆಯೊಂದಿಗೆ ಅನಿಯಮಿತ ಕರೆಗಳನ್ನು ನೀಡುತ್ತದೆ. ಯೋಜನೆಯ ಬೆಲೆ 299 ರೂ. ಈ ಯೋಜನೆಯಲ್ಲಿ, ನೀವು 28 ದಿನಗಳ ವ್ಯಾಲಿಡಿಟಿಯನ್ನು ಪಡೆಯುತ್ತೀರಿ. ಇದರಲ್ಲಿ, ನೀವು ಅನಿಯಮಿತ ಕರೆ ಮತ್ತು ಸಾಕಷ್ಟು ಡೇಟಾವನ್ನು ಸಹ ಪಡೆಯುತ್ತೀರಿ. ಈ ಯೋಜನೆಯಲ್ಲಿ, ನೀವು ಒಟ್ಟು 42GB ಡೇಟಾವನ್ನು ಪಡೆಯುತ್ತೀರಿ, ಅಂದರೆ, ನೀವು ಪ್ರತಿದಿನ 1.5GB…
ಕೊಚ್ಚಿ: “ಬಾಲ್ಯ ವಿವಾಹ ನಿಷೇಧ ಕಾಯ್ದೆ, 2006 ಭಾರತದ ಎಲ್ಲ ನಾಗರಿಕರಿಗೂ ಅನ್ವಯ ವಾಗುವಂಥದ್ದು. ಅದಕ್ಕೆ ಯಾವುದೇ ಧರ್ಮವೂ ಹೊರತಾಗಿಲ್ಲ’ ಎಂಬ ಮಹತ್ವದ ತೀರ್ಪನ್ನು ಕೇರಳ ಹೈಕೋರ್ಟ್ ನೀಡಿದೆ. ಇಲ್ಲಿ ನಾಗರಿ ಕತ್ವ ಮುಖ್ಯ, ಧರ್ಮಕ್ಕೆ ಬಳಿಕದ ಸ್ಥಾನ ಎಂದು ನ್ಯಾ| ಪಿ.ವಿ. ಕುಂಞಿಕೃಷ್ಣನ್ ಅವರಿದ್ದ ಪೀಠ ಹೇಳಿದೆ. 2012ರಲ್ಲಿ ಪಾಲಕ್ಕಾಡ್‌ನಲ್ಲಿ ನಡೆ ದಿದ್ದ ಬಾಲ್ಯವಿವಾಹ ಪ್ರಕರಣದ ಆರೋಪಿಗಳಾದ ಬಾಲಕಿಯ ತಂದೆ ಮತ್ತು ಉದ್ದೇಶಿತ “ಪತಿ’ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡುವ ವೇಳೆ ಕೇರಳ ಹೈಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ವಾದ ಮಂಡಿಸುವ ವೇಳೆ ಮುಸ್ಲಿಂ ವೈಯಕ್ತಿಕ ಕಾನೂನನ್ನು ಪ್ರಸ್ತಾವಿಸಿದ್ದ ಅರ್ಜಿದಾರರ ಪರ ವಕೀಲರು, ಬಾಲಕಿ ಪ್ರೌಢಾವಸ್ಥೆಗೆ ಬಂದಿದ್ದ ಕಾರಣ ಆಕೆಗೆ ಮದುವೆ ಮಾಡಿಸುವುದು ತಪ್ಪಲ್ಲ. ಬಾಲ್ಯ ವಿವಾಹ ಕಾಯ್ದೆಯು ಮುಸ್ಲಿಂ ವೈಯಕ್ತಿಕ ಕಾನೂನಿನಿಗಿಂತ ದೊಡ್ಡದಲ್ಲ.
ಕಡಬ: ನಿಫಾ ವೈರಸ್ ಬಾಧಿಸಿದ್ದ ರೋಗಿಗೆ ಆರೈಕೆ ನೀಡಿದ್ದ ಕಡಬದ ನರ್ಸ್ ಓರ್ವರು ನಿಫಾ ವೈರಸ್ ಗೆ ತುತ್ತಾಗಿ ಕಳೆದ ಎಂಟು ತಿಂಗಳಿನಿಂದ ಕೋಮಾದಲ್ಲಿ ದಿನ ದೂಡುತ್ತಿರುವ ಹೃದಯ ವಿದ್ರಾವಕ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಡಬ ತಾಲೂಕಿನ ಐತ್ತೂರು ಗ್ರಾಮದ ಮರ್ಧಾಳ ಸಮೀಪದ ತುಂಬ್ಯ ನಿವಾಸಿ ತೋಮಸ್ ಟಿ.ಸಿ. ಎಂಬವರ ಪುತ್ರ ಟಿಟ್ಟೋ ತೋಮಸ್(24) ಇದೀಗ ಜೀವನ್ಮರಣ ಸ್ಥಿತಿಯಲ್ಲಿ ದಿನದೂಡುತ್ತಿರುವ ಯುವಕ. ಬಿಎಸ್ಸಿ ನರ್ಸಿಂಗ್ ಪದವೀಧರನಾಗಿರುವ ಟಿಟ್ಟೋ ತೋಮಸ್ ಕೇರಳದ ಕ್ಯಾಲಿಕಟ್ ನಲ್ಲಿರುವ ಇಕ್ರಾ ಇಂಟರ್ನ್ಯಾಷನಲ್ ಹಾಸ್ಪಿಟಲ್ ಆಯಂಡ್ ರಿಸರ್ಚ್ ಸೆಂಟರ್ ನಲ್ಲಿ 2023 ರಿಂದ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದು, 2023 ರ ಸೆಪ್ಟೆಂಬರ್ ನಲ್ಲಿ ನಿಫಾ ವೈರಸ್ ಹೊಂದಿದ್ದ ರೋಗಿಯ ಆರೈಕೆ ಮಾಡಿದ್ದಾರೆ ಎನ್ನಲಾಗಿದೆ. ಕ್ವಾರಂಟೈನ್ ನಲ್ಲಿದ್ದ ಟಿಟ್ಟೋ ಥಾಮಸ್ ಗೆ ಎರಡು ತಿಂಗಳು ಕಳೆದ ನಂತರ ವಿಪರೀತ ತಲೆನೋವು ಕಾಣಿಸಿಕೊಂಡಿದ್ದು, ಡಿಸೆಂಬರ್ ನಲ್ಲಿ ಸ್ಕ್ಯಾನಿಂಗ್ ನಡೆಸಿದಾಗ ಮಿದುಳಿನ ಸ್ಟ್ರೋಕ್‌ಗೆ ತುತ್ತಾಗಿರುವುದು ತಿಳಿದು ಬಂದಿದ್ದು, ಮರುದಿನವೇ ಕೋಮಾಗೆ ಜಾರಿದ್ದಾರೆ…
ಉಪ್ಪಿನಂಗಡಿ: ಬಚ್ಚಲು ಮನೆಯಲ್ಲಿ ಯುವತಿಯೋರ್ವಳು ಸ್ನಾನ ಮಾಡುತ್ತಿರುವುದನ್ನು ಇಣುಕಿ ನೋಡಿದ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಪೆರಿಯಡ್ಕ ನಿವಾಸಿ ಅಬ್ದುಲ್ ರಹಿಮಾನ್ (41) ನನ್ನು ನ್ಯಾಯಾಲಯ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಜು. 21ರಂದು ರಾತ್ರಿ 9ರ ಸುಮಾರಿಗೆ ಪೆರಿಯಡ್ಕದ 22 ವರ್ಷದ ಯುವತಿಯೋರ್ವಳು ಬಚ್ಚಲು ಕೋಣೆಗೆ ಹೋಗಿ ಸ್ನಾನ ಮಾಡುತ್ತಿದ್ದಾಗ ಸ್ಥಳೀಯ ಉದ್ಯಮಿ ಅಬ್ದುಲ್ ರಹಿಮಾನ್ ಇಣುಕಿ ನೋಡಿದ್ದನ್ನು ಕಂಡು ಊರವರು ಹಿಡಿದು ಪೊಲೀಸರಿಗೊಪ್ಪಿಸಿದ್ದರು. ಈತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಇದೀಗ ಪೊಲೀಸ್ ಕಸ್ಟಡಿಯಲ್ಲಿರುವ ಈತನನ್ನು ಪೊಲೀಸರು ವಿಚಾರಣೆ ನಡೆಸಿದ ವೇಳೆ ಪೆರಿಯಡ್ಕ ಪರಿಸರದಲ್ಲಿ ಮನೆ ಮಂದಿ ಗಾಢ ನಿದ್ದೆಯಲ್ಲಿರುವ ಸಮಯ ಮನೆಯ ಹಿಂದಿನ ಬಾಗಿಲು ತೆರೆದು ಒಳಗೆ ನುಗ್ಗಿ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದ ಪ್ರಕರಣಗಳಲ್ಲಿಯೂ ಈತನೇ ಆರೋಪಿ ಎಂಬುದು ತಿಳಿದು ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ಯಾರಿಸ್: 2024ರ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತ ಪದಕ ಪಟ್ಟಿಯಲ್ಲಿ ಹೆಸರು ಮೂಡಿಸಿದೆ. 10 ಮೀಟರ್ ವನಿತಾ ಏರ್ ಪಿಸ್ತೂಲ್ ವಿಭಾಗದಲ್ಲಿ ಭಾರತದ ಮನು ಭಾಕರ್ ಅವರು ಕಂಚು ಗೆದ್ದು ಸಂಭ್ರಮಿಸಿದ್ದಾರೆ. ಕೊರಿಯಾ, ಚೀನಾ ಆಟಗಾರರ ಹೋರಾಟದ ನಡುವೆ ಅಚಲವಾದ ಆತ್ಮ ವಿಶ್ವಾಸವನ್ನು ಪ್ರದರ್ಶಿಸಿದ ಮನು ಭಾಕರ್ 10 ಮೀಟರ್ ವನಿತಾ ಏರ್ ಪಿಸ್ತೂಲ್ ಫೈನಲ್ ನಲ್ಲಿ ಮೂರನೇ ಸ್ಥಾನಿಯಾದರು. 221.7 ಅಂಕ ಪಡೆದರು. ಕೊರಿಯಾದ ಇಬ್ಬರು ಮೊದಲೆರಡು ಸ್ಥಾನ ಪಡೆದರು. ಪ್ಯಾರಿಸ್: 2024ರ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತ ಪದಕ ಪಟ್ಟಿಯಲ್ಲಿ ಹೆಸರು ಮೂಡಿಸಿದೆ. 10 ಮೀಟರ್ ವನಿತಾ ಏರ್ ಪಿಸ್ತೂಲ್ ವಿಭಾಗದಲ್ಲಿ ಭಾರತದ ಮನು ಭಾಕರ್ ಅವರು ಕಂಚು ಗೆದ್ದು ಸಂಭ್ರಮಿಸಿದ್ದಾರೆ. ಕೊರಿಯಾ, ಚೀನಾ ಆಟಗಾರರ ಹೋರಾಟದ ನಡುವೆ ಅಚಲವಾದ ಆತ್ಮ ವಿಶ್ವಾಸವನ್ನು ಪ್ರದರ್ಶಿಸಿದ ಮನು ಭಾಕರ್ 10 ಮೀಟರ್ ವನಿತಾ ಏರ್ ಪಿಸ್ತೂಲ್ ಫೈನಲ್ ನಲ್ಲಿ ಮೂರನೇ ಸ್ಥಾನಿಯಾದರು. 221.7 ಅಂಕ ಪಡೆದರು. ಕೊರಿಯಾದ ಇಬ್ಬರು ಮೊದಲೆರಡು…
ಬೆಂಗಳೂರು: ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಮೂಗಿನಿಂದ ರಕ್ತ ಸುರಿದಿದೆ! ಮುಡಾ ಹಗರಣದ ಕುರಿತಂತೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಹೋರಾಟದ ರೂಪುರೇಷೆ ಕುರಿತಂತೆ ಬೆಂಗಳೂರಿನಲ್ಲಿ ಸಭೆ ನಡೆದಿತ್ತು. ಸಭೆ ಬಳಿಕ ಸುದ್ದಿಗಾರರೊಂದಿಗೆ ಕುಮಾರಸ್ವಾಮಿ ಮಾತನಾಡುತ್ತಿದ್ದರು. ಈ ವೇಳೆ ಅವರ ಮೂಗಿನಿಂದ ಏಕಾಏಕಿ ರಕ್ತ ಸುರಿದಿದೆ. ಮೊದಲು ತಮ್ಮ ಬಳಿ ಇರುವ ಟವೆಲ್‌ನಿಂದ ಹೆಚ್‌ಡಿಕೆ ರಕ್ತ ಒರೆಸಿಕೊಂಡಿದ್ದಾರೆ. ಆದರೆ ಮತ್ತೆ ಜಾಸ್ತಿ ರಕ್ತ ಬಂದು, ಅವರ ಬಿಳಿ ಶರ್ಟ್‌ಗೂ ಮೆತ್ತಿಕೊಂಡಿದೆ. ಈ ವೇಳೆ ಹೆಚ್‌ಡಿ ಕುಮಾರಸ್ವಾಮಿ ಕೊಂಚ ಗಾಬರಿಗೊಂಡ್ರು. ಅಷ್ಟೇ ಅಲ್ಲದೇ ಅವರ ಬಳಿಯೇ ಇದ್ದ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಹೆಚ್‌ಡಿಕೆ ಪುತ್ರ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಅಲ್ಲಿದ್ದವರೆಲ್ಲ ಗಾಬರಿಯಾಗಿದ್ದಾರೆ. ನಂತರ ಬೆಂಗಳೂರಿನ ಜಯನಗರದಲ್ಲಿ ಇರುವ ಖಾಸಗಿ ಆಸ್ಪತ್ರೆಗೆ ದೌಡಾಯಿಸಿದ್ರು.
ಆರೋಗ್ಯಕರ ಜೀವನವನ್ನು ನಡೆಸಲು, ನಾವು ಸರಿಯಾಗಿ ತಿನ್ನಬೇಕು. ಆರೋಗ್ಯಕರ ಆಹಾರಗಳಲ್ಲಿ ಕ್ಯಾರೆಟ್ ಕೂಡ ಒಂದು. ಕ್ಯಾರೆಟ್ ಅನ್ನು ವಿವಿಧ ರೀತಿಯಲ್ಲಿ ಬಳಸಬಹುದು. ಕ್ಯಾರೆಟ್ ಪುಡಿಂಗ್ ಮತ್ತು ಸಲಾಡ್ ಕೂಡ ಬಹಳ ಒಳ್ಳೆಯದು. ಕ್ಯಾರೆಟ್ ಜ್ಯೂಸ್ ಅನ್ನು ವಿವಿಧ ರೀತಿಯಲ್ಲಿ ಬಳಸಬಹುದು. ಕ್ಯಾರೆಟ್‌ನಲ್ಲಿ ಪೋಷಕಾಂಶಗಳ ಕೊರತೆಯಿಲ್ಲ. ಇದು ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಸಿ ಮತ್ತು ಅನೇಕ ಖನಿಜಗಳನ್ನು ಹೊಂದಿರುತ್ತದೆ. ಆದರೆ ಕ್ಯಾರೆಟ್ ಗೆ ನಾವು ಬಹಳಷ್ಟು ಸಕ್ಕರೆ ಮತ್ತು ಎಣ್ಣೆಯನ್ನು ಬಳಸುತ್ತೇವೆ, ಆದ್ದರಿಂದ ಅದರ ಸೇವನೆಯನ್ನು ಶಿಫಾರಸು ಮಾಡುವುದಿಲ್ಲ. ಕ್ಯಾರೆಟ್ ಸಲಾಡ್ ಮತ್ತು ಜ್ಯೂಸ್ ಅನ್ನು ಸುರಕ್ಷಿತವಾಗಿ ಸೇವಿಸಬಹುದು. ಇದರ ಪರಿಣಾಮವೂ ಶೀಘ್ರದಲ್ಲೇ ಗಮನಕ್ಕೆ ಬರುವುದು.