ಆರೋಗ್ಯಕರ ಜೀವನವನ್ನು ನಡೆಸಲು, ನಾವು ಸರಿಯಾಗಿ ತಿನ್ನಬೇಕು. ಆರೋಗ್ಯಕರ ಆಹಾರಗಳಲ್ಲಿ ಕ್ಯಾರೆಟ್ ಕೂಡ ಒಂದು. ಕ್ಯಾರೆಟ್ ಅನ್ನು ವಿವಿಧ ರೀತಿಯಲ್ಲಿ ಬಳಸಬಹುದು. ಕ್ಯಾರೆಟ್ ಪುಡಿಂಗ್ ಮತ್ತು ಸಲಾಡ್ ಕೂಡ ಬಹಳ ಒಳ್ಳೆಯದು. ಕ್ಯಾರೆಟ್ ಜ್ಯೂಸ್ ಅನ್ನು ವಿವಿಧ ರೀತಿಯಲ್ಲಿ ಬಳಸಬಹುದು. ಕ್ಯಾರೆಟ್‌ನಲ್ಲಿ ಪೋಷಕಾಂಶಗಳ ಕೊರತೆಯಿಲ್ಲ. ಇದು ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಸಿ ಮತ್ತು ಅನೇಕ ಖನಿಜಗಳನ್ನು ಹೊಂದಿರುತ್ತದೆ. ಆದರೆ ಕ್ಯಾರೆಟ್ ಗೆ ನಾವು ಬಹಳಷ್ಟು ಸಕ್ಕರೆ ಮತ್ತು ಎಣ್ಣೆಯನ್ನು ಬಳಸುತ್ತೇವೆ, ಆದ್ದರಿಂದ ಅದರ ಸೇವನೆಯನ್ನು ಶಿಫಾರಸು ಮಾಡುವುದಿಲ್ಲ. ಕ್ಯಾರೆಟ್ ಸಲಾಡ್ ಮತ್ತು ಜ್ಯೂಸ್ ಅನ್ನು ಸುರಕ್ಷಿತವಾಗಿ ಸೇವಿಸಬಹುದು. ಇದರ ಪರಿಣಾಮವೂ ಶೀಘ್ರದಲ್ಲೇ ಗಮನಕ್ಕೆ ಬರುವುದು.
Author: main-admin
ಬೆಂಗಳೂರು:ಯಾವುದೇ ಚಾಲಕರು 130 ಕಿಮೀ ವೇಗದಲ್ಲಿ ವಾಹನ ಓಡಿಸಿ ಸಿಕ್ಕಿಬಿದ್ದರೇ ಅಂತವರ ವಿರುದ್ಧ ಆಗಸ್ಟ್ 1 ರಿಂದ ಎಫ್ ಐಆರ್ ದಾಖಲಿಸಲಾಗುವುದು ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಸಂಚಾರ ಮತ್ತು ರಸ್ತೆ ಸುರಕ್ಷತೆ) ಅಲೋಕ್ ಕುಮಾರ್ ತಿಳಿಸಿದ್ದಾರೆ. ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಿರುವ ಅವರು, ಕರ್ನಾಟಕದಲ್ಲಿ ಎಲ್ಲಿಯಾದರೂ ಗಂಟೆಗೆ 130 ಕಿಮೀ ವೇಗದಲ್ಲಿ ಚಾಲನೆ ಮಾಡುವವರ ವಿರುದ್ಧ ಎಫ್‌ಐಆರ್‌ಗಳನ್ನು ದಾಖಲು ಮಾಡಲಾಗುವುದು, ದುಡುಕಿನ ಮತ್ತು ಅಪಾಯಕಾರಿ ಚಾಲನೆ ತಪ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಶೇ. 90 ರಷ್ಟು ಮಾರಣಾಂತಿಕ ಅಪಘಾತಗಳಿಗೆ ಅತಿ ವೇಗವು ಕಾರಣವಾಗುತ್ತದೆ. ಗುರುವಾರ, ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ, 155 ವಾಹನಗಳು ಗಂಟೆಗೆ 130 ಕಿಮೀ ವೇಗದಲ್ಲಿ ಚಲಿಸುತ್ತಿದ್ದವು. ಸ್ಪಾಟ್ ಮತ್ತು ಸೆಕ್ಷನಲ್ ಸ್ಪೀಡ್ ದಾಖಲಿಸಲಾಗುತ್ತದೆ ಎಂದು ಟ್ವಿಟ್ಟರ್ ನಲ್ಲಿ ಮಾಹಿತಿ ನೀಡಿದ್ದಾರೆ. ಸ್ಪಾಟ್ ಮತ್ತು ಸೆಕ್ಷನಲ್ ಸ್ಪೀಡ್ ನಡುವಿನ ವ್ಯತ್ಯಾಸದ ಕುರಿತು ಮಾಹಿತಿ ನೀಡಿರುವ ಅವರು ಓವರ್ ಸ್ಪೀಡಿಂಗ್…
ಕಾರ್ಕಳ: ನಗರದ ಅಪಾರ್ಟ್ಮೆಂಟ್ ವೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡು ಇಬ್ಬರು ಗಂಭೀರ ಗಾಯಗೊಂಡ ಘಟನೆ ರಾತ್ರಿ ಸಂಭವಿಸಿದೆ. ಕಾರ್ಕಳದ ಅನೆಕೆರೆ ಬಳಿಯ ಕೃಷ್ಣಾ ಅಪಾರ್ಟ್ಮೆಂಟ್ ನ ಫ್ಲಾಟ್ ನಲ್ಲಿ ಈ ಸಿಲಿಂಡರ್ ಸ್ಪೋಟ ನಡೆದಿದ್ದು, ಸ್ಪೋಟದ ಶಬ್ದಕ್ಕೆ ಅಸುಪಾಸಿನ ಜನ ಬೆಚ್ವಿಬಿದ್ದಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ. ಸಿಲಿಂಡರ್ ಸ್ಪೋಟದಿಂದಾಗಿ ಮನೆಯ ಗೋಡೆಗಳು ಛಿದ್ರವಾಗಿದ್ದು ಮನೆಯಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ ಎನ್ನಲಾಗಿದೆ. ಅಷ್ಟೇ ಅಲ್ಲದೇ ಅಕ್ಕಪಕ್ಕದ ನಾಲ್ಕು ಮನೆಗಳಿಗೂ ಹಾನಿ ಉಂಟಾಗಿದೆ. ಮನೆಯಲ್ಲಿದ್ದ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು ಇಬ್ಬರನ್ನು ಕಾರ್ಕಳದ ಖಾಸಗಿ ಅಸ್ಪತ್ರೆಗೆ ದಾಖಲಿಸಲಾಗಿದೆ. ಈ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಪುತ್ತೂರು : ಗಲಾಟೆ ವಿಷಯವಾಗಿ ಕರೆ ಬಂದ ಹಿನ್ನಲೆ ವಿಚಾರಣೆಗೆ ತೆರಳಿದ ಪೊಲೀಸರ ಮೇಲೆ ವ್ಯಕ್ತಿಯೋರ್ವ ಹಲ್ಲೆ ನಡೆಸಿರುವ ಕುರಿತು ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿತನನ್ನು ಪೊಲೀಸರು ಬಂಧಿಸಿದ್ದಾರೆ. ಬನ್ನೂರು ಗ್ರಾಮದ ಕಂಜೂರು ನಿವಾಸಿ ತೇಜಸ್ ಬಂಧಿತ. ಜು.26 ರಂದು ಜಿಲ್ಲಾ ಕಂಟ್ರೋಲ್ ರೂಮ್ ನಿಂದ ಇವೆಂಟ್ ಬಂದಿದ್ದು, ಇವೆಂಟ್‌ನಲ್ಲಿ ಬಂದಿರುವ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಘಟನಾ ಸ್ದಳವನ್ನು ಖಚಿತ ಪಡಿಸಿಕೊಂಡು ಘಟನಾ ಸ್ದಳವಾದ ಪುತ್ತೂರು ಬನ್ನೂರು ಗ್ರಾಮದ ಕಂಜೂರು ಎಂಬಲ್ಲಿ ತೇಜಸ್ ಎಂಬವರು ತನ್ನ ತಾಯಿಯೊಂದಿಗೆ ಗಲಾಟೆ ಮಾಡುತ್ತಿದ್ದು ತೇಜಸ್‌ನ ತಾಯಿ ಚಂದ್ರಾವತಿಯವರು ಪಕ್ಕದ ಮನೆಗೆ ಬಂದಿರುವುದಾಗಿ ತಿಳಿಸಿದ್ದು, ಆಗ ಪೊಲೀಸ್ ಸಿಬ್ಬಂದಿ ಚಂದ್ರಾವತಿಯವರನ್ನು ವಿಚಾರಿಸುತ್ತಿರುವಾಗ ತೇಜಸ್‌ನು ಆತನ ಮನೆಯಿಂದ ಪೊಲೀಸರನ್ನು ನೋಡಿ ಅವಾಚ್ಯವಾಗಿ ಬೈದು, ನಮ್ಮ ಮನೆಗೆ ಪೊಲೀಸರು ಬರುವುದು ಯಾಕೆ? ಎಂದು ಹೇಳಿ ಆತನ ಮನೆಯ ಅಂಗಳದಲ್ಲಿದ್ದ ಪೋರ್ಡ್ ಕಾರನ್ನು ತುರ್ತು ಸ್ಪಂದನಾ ( ಇಆರ್‌ಎಸ್‌ಎಸ್) ವಾಹನಕ್ಕೆ ಅಡ್ಡವಾಗಿ ನಿಲ್ಲಿಸಿದ್ದು, ಆ ಸಮಯ…
ಉಡುಪಿ: ದಕ್ಷ ಅಧಿಕಾರಿಯಾಗಿರುವ ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತೆ ರಶ್ಮಿ ಎಸ್.ಆರ್. ಅವರಿಗೆ ದಿಢೀರ್ ವರ್ಗಾವಣೆ ಶಿಕ್ಷೆ ಎದುರಾಗಿದೆ. ಈ ವರ್ಗಾವಣೆ ಶಿಕ್ಷೆಯ ಹಿಂದೆ ಕಾಂಗ್ರೆಸ್ ಮುಖಂಡ, ಮಾಜಿ ಶಾಸಕರ ಒತ್ತಡ ಇದೆ ಎಂಬ ಆರೋಪ ಕೇಳಿಬರುತ್ತಿದೆ. ಹೌದು, ಮಾಜಿ ಶಾಸಕನ ಆಪ್ತನ ಜಾಗದ ತಕರಾರಿಗೆ ಸಂಬಂಧಪಟ್ಟಂತೆ ಅವರಿಗೆ ಸಹಕರಿಸದಿದ್ದಕ್ಕೆ ರಶ್ಮಿ ಅವರಿಗೆ ಈ ವರ್ಗಾವಣೆ ಶಿಕ್ಷೆಯನ್ನು ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಇನ್ನು ಮಾಜಿ ಶಾಸಕನ ಆಪ್ತನ ಜಾಗದ ತಕರಾರನ್ನು ವಿಲೇವಾರಿ ಮಾಡುವಂತೆ ಕಾನೂನು ಮೀರಿ ರಶ್ಮಿ ಅವರಿಗೆ ಒತ್ತಡ ಹೇರಲಾಗಿತ್ತು. ಇದಕ್ಕೆ ಒಪ್ಪದ ಸಹಾಯಕ ಆಯುಕ್ತೆ ರಶ್ಮಿ ಕಾನೂನು ವ್ಯಾಪ್ತಿಯಲ್ಲೇ ಕೆಲಸ ಮಾಡಿಕೊಡುವುದಾಗಿ ಹೇಳಿದ್ದರು. ಇದರಿಂದಾಗಿ ಮಾಜಿಶಾಸಕ ರಿಗೆ ಭಾರೀ ಹಿನ್ನೆಡೆಯಾಗಿತ್ತು. ಜೊತೆಗೆ ರಶ್ಮಿ ಅವರ ದಿಟ್ಟ ನಿರ್ಧಾರ ಮತ್ತು ದಕ್ಷತೆಗೆ ಕುಂದಾಪುರದ ಜನತೆ ಶಹಭ್ಬಾಸ್ ಎಂದು ಹಾಡಿ ಹೊಗಳಿದ್ದರು. ಅಧಿಕಾರಿ ಎಂದರೆ ಪ್ರಾಮಾಣಿಕವಾಗಿ ರಶ್ಮಿ ಅವರಂತೆ ಇರಬೇಕು ಎಂದು ಸಾರ್ವಜನಿಕರಿಂದಲೂ ಉತ್ತಮ ಪ್ರಶಂಸೆ ಬಂದಿತ್ತು. ಬಡವರಿಗೊಂದು ಕಾನೂನು ಶ್ರೀಮಂತರಿಗೊಂದು…
ಮಂಗಳೂರು: ನಗರದ ಬಜಪೆ ಸಮೀಪ ಜನರಿಗೆ ಈಗ ಹೊಸ ಹೊಸ ಗ್ಯಾಂಗ್ ಪರಿಚಯವಾಗುತ್ತಿರುವುದು ಅಚ್ಚರಿಯಾಗುತ್ತಿದೆ. ಕಳ್ಳತನ, ಮೋಸ-ವಂಚನೆ ಪ್ರಕರಣಗಳು ಹೆಚ್ಚುತ್ತಲೇ ಇವೆ.ನಗರದಲ್ಲಿ ಈಗ ಹೊಸ ಗ್ಯಾಂಗ್ ಒಂದು ಹುಟ್ಟಿಕೊಂಡಿದೆ. ಅದುವೇ “ಆರ್ಡರ್ ಗ್ಯಾಂಗ್” ಎಂದು ತಿಳಿದು ಬಂದಿದೆ. ಈ “ಆರ್ಡರ್ ಗ್ಯಾಂಗ್’’ ಈ ಹಿಂದೆ ಮಂಗಳೂರಿನಲ್ಲಿ ಬೆಳಕಿಗೆ ಬಂದ ಕಳ್ಳತನದ “ಚಡ್ಡಿ ಗ್ಯಾಂಗ್’’ ನಂತಹ ಗ್ಯಾಂಗ್ ಅಲ್ಲ. ಅವರದ್ದು ಮನೆಗಳಲ್ಲಿ ಕಳ್ಳತನ ನಡೆಸುವುದು. ಆದರೆ ಈ “ಆರ್ಡರ್ ಗ್ಯಾಂಗ್’’ನ ಕಥೆವೇ ಭಿನ್ನವಾದುದು. ಇವರದ್ದು ಅಂಗಡಿಗಳಲ್ಲಿ ಭಾರೀ ಪ್ರಮಾಣದ “ಆರ್ಡರ್’ಗಳನ್ನು ನೀಡಿ ಅವರನ್ನೇ ಯಾಮಾರಿಸಿ ಹಣ ದೋಚುವುದು. ಅದರಲ್ಲೂ ಈ ಗ್ಯಾಂಗ್ ಬರುವುದು ಹಗಲಿನಲ್ಲೇ, ಅದೂ ಕಾರಿನಲ್ಲಿ! ಈ ಗ್ಯಾಂಗ್‌ಗೆ ಹೆಚ್ಚು ಮೋಸ ಹೋದವರು ಪ್ರಮುಖ ವ್ಯಾಪಾರಿಗಳು ಎಂದು ತಿಳಿಯಲಾಗಿದೆ. ಬೇರೆ ಜಿಲ್ಲೆಗಳಿಂದ ಬಂದು ಚಡಿ ಹಾಕಿ ಮನೆಗಳ ಕಿಟಿಕಿ, ಬಾಗಿಲುಗಳನ್ನು ತುಂಡರಿಸಿ ಮನೆಯೊಳಗೆ ನುಗ್ಗಿ ಬೆದರಿಸಿ ನಗ-ನಗದು ದೋಚುವ “ಚಡ್ಡಿ ಗ್ಯಾಂಗ್’’ ಹೆಸರು ಪ್ರಚಲಿತದಲ್ಲಿ ಇದ್ದಂತೆ ವ್ಯಾಪಾರಿಗಳನ್ನು ದೋಚುವ “ಆರ್ಡರ್ ಗ್ಯಾಂಗ್’’ಗೆ…
ಬೆಳ್ತಂಗಡಿ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿವ ಭಾರೀ ಮಳೆಗೆ ಚಾರ್ಮಾಡಿ ಘಾಟ್‌ನಲ್ಲಿ ಗುಡ್ಡ ಕುಸಿದು ಟ್ರಾಫಿಕ್ ಜಾಮ್ ಉಂಟಾಗಿದ್ದ ಘಟನೆ ಜು.26 ರ ತಡ ರಾತ್ರಿ ಸಂಭವಿಸಿದೆ. ದಕ್ಷಿಣ ಕನ್ನಡ ಜಿಲ್ಲೆ ವ್ಯಾಪ್ತಿಯ 10ನೇ ತಿರುವಿನಲ್ಲಿ ಗುಡ್ಡ ಕುಸಿದಿದ್ದು ಚಾರ್ಮಾಡಿ ಘಾಟ್ನಿಂದ ಕೊಟ್ಟಿಗೆಹಾರದವರೆಗೂ ವಾಹನಗಳು ನಿಂತಲ್ಲೇ ನಿಂತಿದ್ದವು. ಜೆಸಿಬಿ ಮೂಲಕ ಮಣ್ಣು ತೆರವು ಕಾರ್ಯಾಚರಣೆ ನಡೆಸಲಾಯ್ತು.
ಮಂಗಳೂರು : ವಿದ್ಯಾರ್ಥಿಗಳನ್ನು ಮದ್ಯಪಾರ್ಟಿ ಮಾಡಲು ನಗರದ ದೇರೆಬೈಲ್‌ನಲ್ಲಿ ನೂತನವಾಗಿ ಆರಂಭಗೊಂಡಿದ್ದ ಹೋಟೆಲ್ ಲಾಲ್‌ಬಾಗ್ ಇನ್ (ಲಿಕ್ವಿಡ್ ಲಾಂಜ್ ಬಾರ್) ವಿಶೇಷ ಆಫರ್ ನೀಡಿತ್ತು. ಇದರ ಬೆನ್ನಲ್ಲೇ ಅಬಕಾರಿ ಇಲಾಖೆ ಹೊಟೇಲ್ ಮೇಲೆ ಎಫ್ಐಆರ್ ದಾಖಲು ಮಾಡಿದೆ. ಲಾಲ್‌ಬಾಗ್ ಇನ್ (ಲಿಕ್ವಿಡ್ ಲಾಂಜ್ ಬಾರ್) ವಿದ್ಯಾರ್ಥಿಗಳು ಹಾಗೂ ಅಪ್ರಾಪ್ತರಿಗೆ ಸ್ಪೂಡೆಂಟ್ಸ್ ನೈಟ್ಸ್ ಹೆಸರಿನಲ್ಲಿ ಮದ್ಯಸೇವಿಸಲು ಆಫರ್ ನೀಡಿತ್ತು. ಸ್ಕೂಲ್ ಐಡಿ ತಂದರೆ ವಿದ್ಯಾರ್ಥಿಗಳಿಗೆ 15 ಪರ್ಸೆಂಟ್ ಆಫರ್ ನೀಡಲಾಗುತ್ತದೆ. ಅಲ್ಲದೆ, ವಿದ್ಯಾರ್ಥಿನಿಯರಿಗೆ ಐಡಿ ತೋರಿಸಿದರೆ ಫ್ರೀ ಶೂಟರ್ ವ್ಯವಸ್ಥೆ ಇದೆಯೆಂದು ಪಾರ್ಟಿ ಆಯೋಜಕರು ಆಫರ್ ನೀಡಿದ್ದರು. ಲಿಕ್ಕರ್ ಲಾಂಜ್ ಆಯೋಜಿಸಿದ್ದ ನೈಟ್ ಪಾರ್ಟಿಯ ಸ್ಟಿಕ್ಕರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಅಬಕಾರಿ ಅಧಿಕಾರಿಗಳು ಬಾರ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಸದ್ಯ ಲಿಕ್ಕರ್ ಲಾಂಜ್‌ನಲ್ಲಿ ಆಯೋಜನೆ ಆಗಿದ್ದ ಪಾರ್ಟಿಗೆ ಕಾವೂರು ಪೊಲೀಸರು ತಡೆ ನೀಡಿ ಬಾರ್ ಮಾಲಕನಿಗೆ ನೋಟೀಸ್…
ಬೆಳ್ತಂಗಡಿ : ಬ್ಯಾಂಕ್ ಅಧಿಕಾರಿ ಎಂದು ನಂಬಿಸಿ ಅಪರಿಚಿತ ವ್ಯಕ್ತಿಯೋರ್ವ ಓ.ಟಿ.ಪಿ ಪಡೆದು ಮಹಿಳೆಯೊಬ್ಬರಿಗೆ ಲಕ್ಷಾಂತರ ರೂ ವಂಚಿಸಿದ ಪ್ರಕರಣ ಜು.26ರಂದು ವರದಿಯಾಗಿದೆ. ಕೊಕ್ಕಡ ಗಾಣಗಿರಿ ಸುಶೀಲ ಅವರ ಬ್ಯಾಂಕ್ ಖಾತೆಯಿಂದ ರೂ. 1.50 ಲಕ್ಷವನ್ನು ಅಪರಿಚಿತ ವ್ಯಕ್ತಿ ಎಗರಿಸಿದ್ದಾನೆ. ಸುಶೀಲರವರು ಕೊಕ್ಕಡ ಕೆನರಾ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದು, ಎಟಿಎಂ ಗಾಗಿ ಅಪ್ಲಿಕೇಶನ್ ಹಾಕಿದ್ದು 3-4 ದಿನದ ಹಿಂದೆ ಎಟಿಎಂ ಕಾರ್ಡ್ ಬಂದಿತ್ತು. ಇಂದು ಬೆಳಗ್ಗೆ ಅಪರಿಚಿತ ವ್ಯಕ್ತಿಯೊಬ್ಬರು ಸುಶೀಲ ಅವರಿಗೆ ಫೋನ್ ಮಾಡಿ ನಾನು ಬ್ಯಾಂಕ್ ಅಧಿಕಾರಿ ಎಂದು ಪರಿಚಯಿಸಿಕೊಂಡು ನಂಬಿಸಿ, ನಂತರ ಫೋನ್ ಮಾಡಿ ನಿಮಗೆ ಒಟಿಪಿ ಬಂದಿದೆ ನಂಬರ್ ಹೇಳಿ ಎಂದರು. ಅದರಂತೆ ಓಟಿಪಿ ನಂಬರ್ ಕೊಟ್ಟ ಸ್ವಲ್ಪ ಸಮಯದ ನಂತರ ಸುಶೀಲ ಅವರ ಖಾತೆಯಿಂದ ರೂ. 1.50 ಲಕ್ಷ ಡ್ರಾ ಆಗಿರುವುದು ಕಂಡು ಬಂದಿದೆ. ಕೊಕ್ಕಡ ಕೆನರಾ ಬ್ಯಾಂಕ್ ನಲ್ಲಿ ಖಾತೆ ಹೊಂದಿರುವ ಹಲವಾರು ಗ್ರಾಹಕರು ಪದೇ ಪದೇ ಈ ರೀತಿಯ ಮೋಸಕ್ಕೆ ಬಲಿಯಾಗಿದ್ದಾರೆ.ಈ…
ಮಂಗಳೂರು: ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ಅಧಿಕ ಲಾಭಾಂಶ ನೀಡುವುದಾಗಿ ಹೇಳಿ ವ್ಯಕ್ತಿಯೋರ್ವರಿಗೆ 10 ಲಕ್ಷ ರೂ. ವಂಚಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ ದೂರುದಾರ 2023ರ ನವೆಂಬರ್‌ನಲ್ಲಿ ಓಶಿಯನ್ ಫೈನಾನ್ಸ್ ಅಕಾಡೆಮಿ ಎಂಬ ಕಂಪೆನಿಯ ವೆಬ್‌ಸೈಟ್‌ನಲ್ಲಿ ಕ್ರಿಫ್ಟೋ ಕರೆನ್ಸಿಯ ಬಗ್ಗೆ ಆನ್‌ಲೈನ್‌ನಲ್ಲಿ ತರಬೇತಿ ಪಡೆದಿದ್ದರು. ಬಳಿಕ ಕಂಪೆನಿಯವರು ದೂರುದಾರರ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಸಂಖ್ಯೆ ಪಡೆದುಕೊಂಡು Viyako.com ಎಂಬ ಕ್ರಿಪ್ಟೋ ಕರೆನ್ಸಿಯ ವೆಬ್‌ಸೈಟ್ Exchange centre ಅನ್ನು ಪರಿಚಯಿಸಿದರು. ಬಳಿಕ ಅಡ್ಡಿರ್ ಕಾದಿರ್ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬ ಆನ್‌ಲೈನ್ ಮೂಲಕ ಮೆಸೇಜ್ ಮಾಡಿ ಹಣ ಹೂಡುವಂತೆ ತಿಳಿಸಿದ್ದ. ಅದರಂತೆ ದೂರುದಾರರು 12,500 ರೂ.ಗಳನ್ನು ಹೂಡಿಕೆ ಮಾಡಿದ್ದರು. ಅದರ ಲಾಭಾಂಶವೆಂದು 46,000 ರೂ. ಗಳನ್ನು ದೂರುದಾರರ ಖಾತೆಗೆ ಕಳುಹಿಸಲಾಗಿತ್ತು. ಅನಂತರ ಆರೋಪಿಗಳು 2024ರ ಮೇ ತಿಂಗಳಲ್ಲಿ ಮೆಸೇಜ್ ಮಾಡಿ ಕ್ರಿಪ್ಟ್ ಕರೆನ್ಸಿಯಲ್ಲಿ ಒಳ್ಳೆಯ ಲಾಭವಿದೆ ಎಂದು ನಂಬಿಸಿ ಕಾಯಿನ್ ಖರೀದಿಸುವಂತೆ ತಿಳಿಸಿದರು. ಮೇ 13ರಂದು ಎರಡು ಕಾಯಿನ್‌ಗಳಿಗೆ ತಲಾ 5…