ಸುಳ್ಯ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಸಂಬಂಧಿಸಿ ಸುಳ್ಯದ ಗಾಂಧಿನಗರದಲ್ಲಿರುವ ಪಿಎಫ್‌ಐ ಕಚೇರಿಯನ್ನು ಜಪ್ತಿ ಮಾಡಲು ಎನ್‌ಐಎ ನೋಟಿಸ್ ಜಾರಿ ಮಾಡಿದೆ. ಆರೋಪಿಗಳು ಪ್ರವೀಣ್ ನೆಟ್ಟಾರು ಹತ್ಯೆಗೆ ಸಂಚು ಸಭೆಗಳನ್ನು ನಡೆಸಲು ಇದನ್ನು ಬಳಸುತ್ತಿದ್ದರು.ಜನರಲ್ಲಿ ಭಯೋತ್ಪಾದನೆಯನ್ನು ಸೃಷ್ಟಿಸುವ ಉದ್ದೇಶದಿಂದ ಮತ್ತು ಶಾಂತಿ ಮತ್ತು ಕೋಮು ಸೌಹಾರ್ದತೆಯನ್ನು ಕದಡುವ ಉದ್ದೇಶದಿಂದ ಈ ಕಛೇರಿಯನ್ನು ಮಾಡಲ್ಪಟ್ಟಿದೆ, ಆ ಮೂಲಕ ಭಾರತದ ಏಕತೆ, ಸಮಗ್ರತೆ, ಭದ್ರತೆ ಮತ್ತು ಸಾರ್ವಭೌಮತೆಗೆ ಧಕ್ಕೆ ತರಲು ಪ್ರಯತ್ನಿಸುತ್ತಿದೆ. ಈ ಎಲ್ಲಾ ಆರೋಪದಡಿಯಲ್ಲಿ ಎನ್ಐಎ ಇನ್ಸ್‌ಪೆಕ್ಟರ್ ಷಣ್ಮುಗಂ.ಎಂ, ನೇತೃತ್ವದಲ್ಲಿ ಸುಳ್ಯದ ಗಾಂಧಿನಗರದ ಆಲೆಟ್ಟಿ ರಸ್ತೆಯ ತಾಹಿರಾ ಕಾಂಪ್ಲೆಕ್ಸ್‌ನಲ್ಲಿ ಇರುವ ಪಾಪ್ಯುಲರ್ ಫ್ರಂಟ್ ಆಫ್ ಕಚೇರಿಯನ್ನು ಜಪ್ತಿ ಮಾಡುಲು ನೋಟೀಸ್ ಜಾರಿ ಮಾಡಿದೆ.
Author: main-admin
ಸುಳ್ಯ : ತಡೆಗೋಡೆ ಕಾಮಗಾರಿ ಮೇಳೆ ಗುಡ್ಡದ ಮಣ್ಣು ಜರಿದು ಮೂವರು ಮಣ್ಣಿನಡಿ ಸಿಲುಕಿ ಸಾವನಪ್ಪಿದ್ದ ಘಟನೆ ಸುಳ್ಯದ ಗಾಂಧಿನಗರ ಬಳಿ ನಡೆದಿದೆ.ಮೃತರನ್ನು ಸೋಮಶೇಖರ (45), ಪತ್ನಿ ಶಾಂತ (40) ಮತ್ತು ಇನ್ನೋರ್ವ ಕಾರ್ಮಿಕ ಎಂದು ಗುರುತಿಸಲಾಗಿದೆ. ಸೋಮಶೇಖರ್ ಮತ್ತು ಶಾಂತಾ ಗದಗ ಮೂಲದ ಮುಂಡರಗಿ ತಾಲೂಕಿನವರು ಎಂದು ತಿಳಿದು ಬಂದಿದೆ. ಗಾಂಧಿನಗರ-ಆಲೆಟ್ಟಿ ರಸ್ತೆಯಲ್ಲಿ ಕಾರ್ಮಿಕರು ಸೆಂಟರಿಂಗ್ ಕೆಲಸ ಮಾಡುತ್ತಿದ್ದ ವೇಳೆ ಗುರುಂಪು ಬಳಿ ಬರೆ ಜರಿದು ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಬಿದ್ದಿದೆ, ಇದರಿಂದ ಮೂವರು ಕಾರ್ಮಿಕರು ಮಣ್ಣಿನಡಿ ಸಿಲುಕಿದ್ದರು. ಈ ಪೈಕಿ ಇಬ್ಬರ ಮೃತದೇಹ ಪತ್ತೆಯಾಗಿದ್ದು, ಮತ್ತೋರ್ವ ಮಹಿಳೆಗಾಗಿ ಹುಡುಕಾಟ ನಡೆಯುತ್ತಿದೆ ಎಂದು ತಿಳಿದು ಬಂದಿದೆ. ಸದ್ಯ ರಕ್ಷಣಾ ತಂಡದಿಂದ ಕಾರ್ಯಾಚರಣೆ ನಡೆಯುತ್ತಿದೆ. ಜೆಸಿಬಿ ಮುಖಾಂತರ ಮಣ್ಣು ತೆಗೆಯುವ ಕೆಲಸ ನಡೆಯುತ್ತಿದೆ. ಸ್ಥಳಕ್ಕೆ ಶಾಸಕ ಅಂಗಾರ ಅವರು ಭೇಟಿ ನೀಡಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭಿಸಬೇಕಿದೆ.
ಶಿವಮೊಗ್ಗ: ತೀರ್ಥಹಳ್ಳಿ ಪಟ್ಟಣದ ಮೀನು ಮಾರುಕಟ್ಟೆಯಲ್ಲಿ ರಕ್ತದ ಮಡುವಿನಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ಮೃತದೇಹ ಕೊಲೆಯಾದ ಸ್ಥಿತಿಯಲ್ಲಿ ಪತ್ತೆ ಆಗಿದ್ದು, ಸ್ಥಳೀಯರನ್ನು ಬೆಚ್ಚಿಬೀಳಿಸುವಂತೆ ಮಾಡಿದೆ ಪೊಲೀಸ್ ಕಾನ್‌ಸ್ಟೆಬಲ್ ಪೂರ್ಣೇಶ್ ಎಂಬವರ ಶವ ಪತ್ತೆಯಾಗಿದೆ ಎಂದು ಗುರುತಿಸಲಾಗಿದೆ. ಇವರು ಮದ್ಯ ವ್ಯಸನಿಯಾಗಿದ್ದು, ಇವರು ಆಗುಂಬೆ, ತೀರ್ಥಹಳ್ಳಿ, ಮಾಳೂರು, ಕುಂಸಿಯಲ್ಲಿ ಪೂರ್ಣೇಶ್ ಸೇವೆ ಸಲ್ಲಿಸಿದ್ದರು. ಕೆಲ ದಿನಗಳ ಹಿಂದೆ ಕೆಲಸದಿಂದ ವಜಾಗೊಂಡಿದ್ದರು. ಪೂರ್ಣೇಶ್ ಅವರ ತಲೆಯ ಮೇಲೆ ಕಲ್ಲು ಹೊತ್ತು ಹಾಕಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಆಗುಂಬೆ, ತೀರ್ಥಹಳ್ಳಿ, ಮಾಳೂರು, ಕುಂಸಿಯಲ್ಲಿ ಪೂರ್ಣೇಶ್ ಸೇವೆ ಸಲ್ಲಿಸಿದ್ದರು. ಳಕ್ಕೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಯಿತು. ತೀರ್ಥಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಾಗಿದೆ.
ಕುಂದಾಪುರ: ಟಿಪ್ಪರ್‌ವೊಂದು ರಸ್ತೆ ದಾಟುತ್ತಿದ್ದ ವ್ಯಕ್ತಿಯೊಬ್ಬರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ಮೃತಪಟ್ಟ ಘಟನೆ ಶುಕ್ರವಾರ ವಡೇರಹೋಬಳಿ ಗ್ರಾಮದ ನೆಹರೂ ಮೈದಾನದ ಎದುರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಭವಿಸಿದೆ. ಕೋಟೇಶ್ವರ ಕಡೆಯಿಂದ ತಲ್ಲೂರು ಕಡೆಗೆ ಹೋಗುತ್ತಿದ್ದ ಟಿಪ್ಪರ್, ರಸ್ತೆ ದಾಟುತ್ತಿದ್ದ ಕುಮಾರ್ ಎಂಬುವರಿಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಗಂಭೀರವಾಗಿ ಗಾಯಗೊಂಡ ಕುಮಾರ್ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು: ನಗರದ ಬೆಂದೂರ್‌ವೆಲ್‌ನಲ್ಲಿ ಖಾಸಗಿ ಬಸ್‌ನಡಿಗೆ ಮಗುವೊಂದು ಬಿದ್ದು ಸಾವನ್ನಪ್ಪಿ, ಮಗುವಿನ ತಾಯಿ ಗಂಭೀರ ಗಾಯಗೊಂಡಿರುವ ಘಟನೆ ಇಂದು ಸಂಜೆ ನಡೆದಿದೆ. ಮೃತಪಟ್ಟ ಮಗುವನ್ನು ಹಾರ್ದಿಕ್(7), ಗಾಯಾಳು ತಾಯಿಯನ್ನು ಸ್ವಾತಿ ಎಂದು ಗುರುತಿಸಲಾಗಿದೆ. ಇಂದು ಅಪರಾಹ್ನ 2.45 ರ ಹೊತ್ತಿಗೆ ಸ್ವಾತಿ ತನ್ನ ಪುಟ್ಟ ಮಗನೊಂದಿಗೆ ಸ್ಕೂಟಿಯಲ್ಲಿ ತೆರಳುತ್ತಿದ್ದ ವೇಳೆ ಬಸ್ ಚಾಲಕನ ನಿರ್ಲಕ್ಷ್ಯದಿಂದ ಚಲಾಯಿಸಿದ ಪರಿಣಾಮ ಸ್ಕೂಟಿಯ ಹ್ಯಾಂಡಲ್ ಬಸ್‌ಗೆ ತಾಗಿ ಮಗುವಿನ ಸಮೇತ ತಾಯಿ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಬಸ್‌ನ ಚಕ್ರದಡಿಗೆ ಮಗು ಸಿಲುಕಿ ಮೃತಪಟ್ಟಿದೆ. ಘಟನೆಯಲ್ಲಿ ತಾಯಿ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ಮಂಗಳೂರು ನಗರ ಪೂರ್ವ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು : ಕರ್ನಾಟಕ ವಿಧಾನಸಭೆ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸಿರುವ ಕಾಂಗ್ರೆಸ್ ಇಂದು ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, ವರುಣಾ ಕ್ಷೇತ್ರದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಕಣಕ್ಕೆ ಇಳಿಯಲಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಳೆದು ತೂಗಿ 124 ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ವರುಣಾ ಕ್ಷೇತ್ರದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧಿಸಲಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ತನ್ನ 124 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮೊದಲ ಪಟ್ಟಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಹೆಸರಿದೆ. ಕ್ರಮ ಸಂಖ್ಯೆ – ಕ್ಷೇತ್ರದ ಸಂಖ್ಯೆ – ಮೀಸಲು – ಅಭ್ಯರ್ಥಿ ಹೆಸರು – ವಿಧಾನಸಭಾ ಕ್ಷೇತ್ರ 2 – ಚಿಕ್ಕೋಡಿ – ಸದಲಗಾ ಗಣೇಶ ಹುಕ್ಕೇರಿ 2. 4 – ಕಾಗವಾಡ – ಭರಮಗೌಡ ಆಲಗೌಡ ಕಾಗೆ 3. 5 – ಕುಡಚಿ – ಎಸ್‌ಸಿ ಮಹೇಂದ್ರ ಕೆ.ತಮ್ಮಣ್ಣನವರ್ 4. 7…
ಮಂಗಳೂರು : ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ 8 ಪೊಲೀಸ್ ಠಾಣೆಗಳಲ್ಲಿ ವಶಪಡಿಸಿಕೊಳ್ಳಲಾದ ಗಾಂಜಾ ಸಹಿತ ಮಾದಕ ವಸ್ತುವನ್ನು ಪೊಲೀಸ್ ಅಧಿಕಾರಿಗಳು ಶುಕ್ರವಾರ(ಮಾ 24) ರಂದು ನಾಶ ಪಡಿಸಿದ್ದಾರೆ. ಮಾದಕ ವಸ್ತುಗಳಾದ ಗಾಂಜಾ ಒಟ್ಟು 11 ಕೆಜಿ 194 ಗ್ರಾಂ ಮತ್ತು ಎಂಡಿಎಂಎ 0.014 ಗ್ರಾಂ ಅನ್ನು ನ್ಯಾಯಾಲಯದ ಅನುಮತಿ ಪಡೆದುಕೊಂಡು ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ M/s Ramky Energy and Environment Ltd ನಲ್ಲಿ ನಾಶಪಡಿಸಲಾಯಿತು. ಪೊಲೀಸ್ ಅಧಿಕಾರಿಗಳು ಈ ವೇಳೆ ಹಾಜರಿದ್ದು, ನಾಶ ಪ್ರಕ್ರಿಯೆ ನಡೆಸಿದರು. ಈ ಪ್ರಕರಣಗಳಿಗೆ ಸಂಬಂಧಿಸಿ 10 ಮಂದಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.
ನವದೆಹಲಿ : ರಾಹುಲ್ ಗಾಂಧಿ ಅವರ ಸಂಸತ್ ಸದಸ್ಯತ್ವ ರದ್ದುಗೊಳಿಸಿ ಲೋಕಸಭೆ ಸಚಿವಾಲಯ ಇಂದು ಅಧಿಸೂಚನೆ ಹೊರಡಿಸಿದೆ. ಗುರುವಾರ (ಮಾರ್ಚ್ 23) ಸೂರತ್ ನ್ಯಾಯಾಲಯವು ಮಾನನಷ್ಟ ಮೊಕದ್ದಮೆಯಲ್ಲಿ ಅವರನ್ನ ದೋಷಿ ಎಂದು ಘೋಷಿಸಿದ್ದು, ಎರಡು ವರ್ಷಗಳ ಜೈಲು ಶಿಕ್ಷೆ ಮತ್ತು 15,000 ರೂಪಾಯಿ ದಂಡ ವಿಧಿಸಿದೆ. 2019ರ ಕ್ರಿಮಿನಲ್ ಮಾನನಷ್ಟ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡ ರಾಹುಲ್ ಗಾಂಧಿ ಅವ್ರನ್ನ ಸೂರತ್ ನ್ಯಾಯಾಲಯ ದೋಷಿ ಎಂದು ಘೋಷಿಸಿದ ಒಂದು ದಿನದ ನಂತರ ಸಂಸತ್ತು ಶುಕ್ರವಾರ ಅವರನ್ನು ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿಸಿದೆ. ‘ಎಲ್ಲಾ ಕಳ್ಳರು ಮೋದಿಯನ್ನ ಸಾಮಾನ್ಯ ಉಪನಾಮವಾಗಿ ಏಕೆ ಹೊಂದಿದ್ದಾರೆ?’ ಎಂದು ಹೇಳಿಕೆ ನೀಡಿದ್ದಕ್ಕಾಗಿ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಅವರು ಸಲ್ಲಿಸಿದ ದೂರಿನ ಮೇರೆಗೆ ಗುಜರಾತ್ ನ್ಯಾಯಾಲಯವು ರಾಹುಲ್ ಗಾಂಧಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 499 ಮತ್ತು 500 ರ ಅಡಿಯಲ್ಲಿ 52 ವರ್ಷದ ರಾಹುಲ್ ಗಾಂಧಿ ಅವರನ್ನ ತಪ್ಪಿತಸ್ಥರೆಂದು…
ಮಂಗಳೂರು: ಸುಮಾರು 14 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕೊಣಾಜೆ ಪೊಲೀಸರು ಮಾರ್ಚ್ 23 ರಂದು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ತುಂಬೆ ವ್ಯಾಪ್ತಿಯ ತಲಪಾಡಿ ನಿವಾಸಿ ಅಬ್ದುಲ್ ಅಜೀಜ್ ಅಲಿಯಾಸ್ ಅಜೀಜ್ (45) ಎಂದು ಗುರುತಿಸಲಾಗಿದೆ.ಈತ ಕೇರಳ ಮತ್ತು ಕರ್ನಾಟಕದ ವಿವಿಧ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಅಜೀಜ್ ವಿರುದ್ಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ನಾಲ್ಕು, ಉಳ್ಳಾಲದಲ್ಲಿ ಮೂರು, ಬಂಟ್ವಾಳದಲ್ಲಿ ಒಂದು ಮತ್ತು ಹಾಸನದ ಅರೇಹಳ್ಳಿ ಮತ್ತು ಕೇರಳ ರಾಜ್ಯದ ಕುಟ್ಯಾಡಿಯಲ್ಲಿ ತಲಾ ಒಂದು ಪ್ರಕರಣಗಳಿವೆ.ನಗರ ಪೊಲೀಸ್ ಕಮಿಷನರ್ ಕುಲದೀಪ್ ಜೈನ್ ಅವರ ಆದೇಶದಂತೆ ಎಸಿಪಿ ಧನ್ಯ ಎಸ್ ನಾಯಕ್ ಅವರ ಮಾರ್ಗದರ್ಶನದಲ್ಲಿಕೊಣಾಜೆ ಇನ್ಸ್ ಪೆಕ್ಟರ್ ಕೀರ್ತಿಕುಮಾರ್, ಪಿಎಸ್ ಐ ಅಶೋಕ್, ಸಿಬ್ಬಂದಿಗಳಾದ ಶಿವಕುಮಾರ್ ಮತ್ತು ಪುರುಷೋತ್ತಮ್ ಆರೋಪಿಯನ್ನು ಬಂಧಿಸಿದ್ದಾರೆ.
ಬೆಳ್ತಂಗಡಿ : ಕುಟುಂಬಸ್ಥರ ಜೊತೆ ಉತ್ತರ ಕನ್ನಡದಿಂದ ದಕ್ಷಿಣ ಕನ್ನಡದ ಶ್ರೀ ಕ್ಷೇತ್ರಗಳನ್ನು ಸಂದರ್ಶಿಸಲು ಬಂದಿದ್ದ ಹದಿ ಹರೆಯದ ಯುವತಿ ನಾಪತ್ತೆಯಾಗಿದ್ದಾಳೆ. ಉತ್ತರ ಕನ್ನಡ ಜಿಲ್ಲೆಯ ಮಿರ್ಜಾನ್ ,ದೇವಸ್ಥಾನ ಕೇರಿಯ ಹರಿಹರ ಕೃಪಾ ನಿವಾಸಿ ರೇಷ್ಮಾ.ಆರ್.ನಾಯ್ಕ್ (23) ಎಂಬಾಕ್ಕೆ ನಾಪತ್ತೆಯಾದ ಯುವತಿಯಾಗಿದ್ದಾಳೆ. ದಕ್ಷಿಣ ಕನ್ನಡ ಜಿಲ್ಲೆಯ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ದೇವರ ದರ್ಶನ ಬಳಿಕ ಎಲ್ಲರೂ ರೂಂ ಹೋಗಿದ್ದ ನಂತರ ರಾತ್ರಿ ಏಕಾಏಕಿ ಯುವತಿ ರೇಶ್ಮಾ ನಾಪತ್ತೆಯಾಗಿದ್ದಾಳೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ. ಉತ್ತರ ಕನ್ನಡದ ಕುಮಟಾದಿಂದ ರೈಲಿನ ಮೂಲಕ ಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೆ ಮಾ.20 ರಂದು ಕುಟುಂಬ ಸಮೇತ ಬಂದಿದ್ದು ಮಾ.21 ರಂದು ದೇವರ ದರ್ಶನ ಬಳಿಕ ಧರ್ಮಸ್ಥಳಕ್ಕೆ ಬಸ್ ಮೂಲಕ ಬಂದು ದೇವರ ದರ್ಶನ ಪಡೆದ ಬಳಿಕ ರಾತ್ರಿ 8:45 ಕ್ಕೆ ವಸತಿ ಗೃಹದಲ್ಲಿ ರೂಂ ಮಾಡಿದ್ದರು. ಈ ವೇಳೆ ಯುವತಿ ರೂಂ ನ ಹೊರಾಂಗಣದಲ್ಲಿ ಸುತ್ತಾಡುತ್ತಿದ್ದಳು, ಬಳಿಕ ಏಕಾಏಕಿ ರೇಶ್ಮಾ (23)…










