Author: main-admin

ರಾಜ್ಯ ವಿಧಾನಸಭೆ ಚುನಾವಣೆಗೆ ಮೇ.10ಕ್ಕೆ ಮತದಾನ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿದ್ದು, ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಲಿದೆ. ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ;ನಾಮಪತ್ರ ಹಿಂಪಡೆತ:24 ಏಪ್ರೀಲ್ಚುನಾವಣೆ ಪ್ರಚಾರಕ್ಕೆ ಕೊನೇ‌ ದಿನಾಂಕ;ಮೇ.10 ಕ್ಕೆ ಚುನಾವಣೆರಿಸಲ್ಟ್;ಮೇ.13ಕ್ಕೆ ಚುನಾವಣೆ ರಿಸಲ್ಟ್ ಹೊರಬರಲಿದೆ.ಒಂದೇ ದಹಂತದಲ್ಲಿ ಮತದಾನ ನಡೆಯಲಿದೆ. ದೆಹಲಿಯ ಚುನಾವಣಾ ಆಯೋಗದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ರಾಜ್ಯ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್, ಮುಕ್ತ ,ನ್ಯಾಯ ಸಮ್ಮತ ಚುನಾವಣೆಗೆ ಆಯೋಗ ಸಿದ್ದವಾಗಿದೆ ಎಂದು ಹೇಳಿದ್ದಾರೆ.ವಿದ್ಯುನ್ಮಾನ ಸೇರಿ ಎಲ್ಲಾ ಸಿದ್ಧತೆ ನಡೆದಿದೆ.ಕರ್ನಾಟಕದಲ್ಲಿ 5 ಕೋಟಿ 21 ಲಕ್ಷ ಮತದಾರರಿದ್ದಾರೆ ಎಂದು ಹೇಳಿದ್ದಾರೆ.ಮೊದಲ ಬಾರಿಗೆ 80 ಕ್ಕಿಂತ ಮೇಲಿನ ವಯಸ್ಕರಿಗೆ ಮನೆಯಲ್ಲಿ ಮತದಾನಕ್ಕೆ ಅವಕಾಶ ನೀಡಲಾಗಿದೆ.58,282 ಮತಗಟ್ಟೆಗಳು ಇರಲಿದೆ.

Read More

ಉಡುಪಿ : ಜಿಲ್ಲೆಯ ಶಿರ್ವ ಕುತ್ಯಾರ್ ಶಾಲೆಯೊಂದರ ಬಸ್‌ನಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದ ಕುತ್ಯಾರು ಬ್ಯಾಂಕ್‌ ಆಫ್‌ ಬರೋಡಾ ಶಾಖೆಯ ಬಳಿಯ ಬಾಡಿಗೆ ಮನೆ ನಿವಾಸಿ ಶೈಲೇಶ್‌ ಕೆ. ಪ್ರಭು (44) ಏಕಾಎಕಿ ನಾಪತ್ತೆಯಾಗಿದ್ದಾರೆ. ಮಾ. 27ರ ಬೆಳಗ್ಗಿನಿಂದ ನಾಪತ್ತೆಯಾಗಿದ್ದು ಈ ಸಂಬಂಧ ದೂರು ದಾಖಲಾಗಿದೆ. ಕುತ್ಯಾರಿನಲ್ಲಿ ತಿಂಗಳ ಹಿಂದೆ ಖರೀದಿಸಿದ ರಿಕ್ಷಾದಲ್ಲಿ ಚಾಲಕನಾಗಿ ಕೂಡ ಶೈಲೇಶ್ ದುಡಿಯುತ್ತಿದ್ದು, ಮಾ. 27ರಂದು ಬೆಳಗ್ಗೆ 9.30ರ ವೇಳೆಗೆ ಬಾಡಿಗೆಗೆ ಹೋದವರು ಮಧ್ಯಾಹ್ನ ಊಟಕ್ಕೆ ಬಾರದೆ ಇದ್ದಾಗ ಪತ್ನಿ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದ ಅವರು ಬರೋಡಾ ಬ್ಯಾಂಕ್‌ನ ಸಿಬಂದಿಗೆ ಊಟ ಕೊಟ್ಟು ಬರುತ್ತೇನೆ ಎಂದು ಹೇಳಿದವರು ವಾಪಸ್‌ ಮನೆಗೆ ಬಾರದೆ ಕರೆ ಮಾಡಿದರೂ ಸ್ವೀಕರಿಸದೆ ನಾಪತ್ತೆಯಾಗಿದ್ದಾರೆ. ಮಾ. 28ರಂದು ಬೆಳಗ್ಗೆ 10ರ ವರೆಗೆ ಮೊಬೈಲ್‌ ರಿಂಗ್‌ ಆಗುತ್ತಿದ್ದು,ಬಳಿಕ ಸ್ವಿಚ್‌ಆಫ್‌ ಆಗಿದೆ. ಸಂಬಂಧಿಕರೆಲ್ಲರಿಗೆ ಕರೆ ಮಾಡಿ ವಿಚಾರಿಸಿದ್ದು, ಮಾಹಿತಿ ಸಿಗದೆ ಇದ್ದು, ಪತ್ನಿ ಅಂಬಿಕಾ ಪ್ರಭು ನೀಡಿದ ದೂರಿನಂತೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಸುಳ್ಯ ವೃತ್ತ ನಿರೀಕ್ಷಕರಾಗಿದ್ದ ನವೀನ್ ಚಂದ್ರ ಜೋಗಿ ಅವರು ಮುಖ್ಯಮಂತ್ರಿಗಳ ಚಿನ್ನದ ಪದಕ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಗುಪ್ತವಾರ್ತೆಯಲ್ಲಿ ಇನ್ಸ್‌ಪೆಕ್ಟರ್ ಆಗಿದ್ದ ನವೀನ್ ಚಂದ್ರ ಜೋಗಿ ಮೂರು ವರ್ಷಗಳ ಹಿಂದೆ ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕರಾಗಿ ಆಗಮಿಸಿದ್ದರು. ಸುಳ್ಯದಲ್ಲಿ ಕರ್ತವ್ಯದಲ್ಲಿದ್ದ ವೇಳೆ ಹಲವಾರು ಪ್ರಕರಣಗಳನ್ನು ಬೇದಿಸುವಲ್ಲಿ ಯಶಸ್ವಿಯಾಗಿದ್ದರು. ಉಡುಪಿ ಜಿಲ್ಲೆಯ ಕಾಪು ಮೂಲದವರಾದ ನವೀನ್ ಚಂದ್ರ ಅವರನ್ನು ಮುಂಬರುವ ವಿಧಾನ ಸಭೆ ಚುನಾವಣೆ ಹಿನ್ನಲೆಯಲ್ಲಿ ಕೆಲ ದಿನಗಳ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಗ್ರಾಮಾಂತರ ವೃತ್ತಕ್ಕೆ ವರ್ಗಾವಣೆ ಮಾಡಲಾಗಿದೆ.

Read More

ರಾಜ್ಯ ವಿಧಾನಸಭಾ ಚುನಾವಣಾ ದಿನಾಂಕ ನಿಗದಿಗೆ ಕ್ಷಣಗಣನೆ ಆರಂಭಗೊಂಡಿದೆ. ಕೇಂದ್ರ ಚುನಾವಣಾ ಆಯೋಗ ಬುಧವಾರ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಲಿದೆ. ಚುನಾವಣಾ ಆಯೋಗ ಹಾಗೂ ರಾಜ್ಯ ಸರ್ಕಾರದ ಉನ್ನತ ಮೂಲಗಳ ಪ್ರಕಾರ, ಚುನಾವಣಾ ಅಧಿಸೂಚನೆ ಪ್ರಕಟಿಸುವುದಕ್ಕೆ ಅಗತ್ಯವಾದ ಎಲ್ಲ ಸಿದ್ಧತೆಗಳನ್ನು ಕೇಂದ್ರ ಆಯೋಗ ಪೂರ್ಣಗೊಳಿಸಿದೆ. ಕೇಂದ್ರ ಮುಖ್ಯ ಚುನಾವಣಾ ಆಯುಕ್ತರಾದ ರಾಜೀವ್‌ ಕುಮಾರ್‌ ಅವರು ದೆಹಲಿಯ ವಿಜ್ಞಾನ ಭವನದ ಕಚೇರಿಯಲ್ಲಿ ಬೆಳಗ್ಗೆ 11:30 ಕ್ಕೆ ಸುದ್ದಿಗೋಷ್ಠಿ ನಡೆಸಿ ಕರ್ನಾಟಕ ವಿಧಾನ ಸಭಾ ಚುನಾವಣಾ ದಿನಾಂಕವನ್ನು ನಿಗದಿಪಡಿಸಲಿದ್ದಾರೆ. ದಾವಣಗೆರೆಯಲ್ಲಿ ನಡೆಯುವ ಮಹಾಸಂಗಮ ಕಾರ್ಯಕ್ರಮದ ಬಳಿಕ ಯಾವುದೇ ಕ್ಷಣದಲ್ಲಿ ಅಧಿಸೂಚನೆ ಪ್ರಕಟವಾಗಬಹುದೆಂದು ರಾಜಕೀಯ ಪಕ್ಷಗಳು ನಿರೀಕ್ಷಿಸಿದ್ದವು. ಮಾ.27ರಂದೇ ಘೋಷಣೆಯಾಗಬಹುದೆಂಬುದು ಬಹುತೇಕರ ನಿರೀಕ್ಷೆಯಾಗಿತ್ತು. ಬುಧವಾರವೇ ವೇಳಾಪಟ್ಟಿ ಘೋಷಣೆಯಾದರೆ, ತಕ್ಷಣವೇ ಮಾದರಿ ನೀತಿ ಸಂಹಿತೆ ಜಾರಿಯಾಗಲಿದೆ.

Read More

ಮಂಗಳೂರು : ದಾಖಲೆ ಇಲ್ಲದೇ ಸಾಗಿಸುತ್ತಿದ್ದ 1.10 ಲಕ್ಷ ರೂ ಹಣವನ್ನು ಮಂಗಳೂರು ಪೂರ್ವ ಠಾಣಾ ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ. ನಂತೂರು ಪೊಲೀಸ್ ಚೆಕ್ ಪಾಯಿಂಟ್ ನಲ್ಲಿ ಪೊಲೀಸರು ಕಾರನ್ನು ತಡೆದು ತಪಾಸಣೆ ನಡೆಸಿದಾಗ ಹಣ ಪತ್ತೆಯಾಗಿದೆ. ಈ ಸಂಬಂಧ ಅನಿಲ್ (35) ಶಮೀಲ್ (38) ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Read More

ನವದೆಹಲಿ: ಶಾಶ್ವತ ಖಾತೆ ಸಂಖ್ಯೆ (PAN) ಕಾರ್ಡ್ ಮತ್ತು ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಲು ಗಡುವನ್ನು ಜೂನ್ 30, 2023 ರವರೆಗೆ ವಿಸ್ತರಿಸಲಾಗಿದೆ. ಮಂಗಳವಾರದ ಅಧಿಸೂಚನೆಯಲ್ಲಿ ಹಣಕಾಸು ಸಚಿವಾಲಯವು ಜುಲೈ 1, 2023 ರಿಂದ ಎಲ್ಲಾ ಲಿಂಕ್ ಮಾಡದೇ ಹೋದ್ರೆ ಪ್ಯಾನ್ ಕಾರ್ಡ್‌ಗಳು ನಿಷ್ಕ್ರಿಯವಾಗುತ್ತವೆ. ಜೂನ್ 30, 2023 ರವರೆಗೆ ಪ್ಯಾನ್ ಕಾರ್ಡ್‌ಗಳನ್ನು ಆಧಾರ್ ಕಾರ್ಡ್‌ಗಳಿಗೆ ಲಿಂಕ್ ಮಾಡದಿದ್ದರೆ, ಪ್ಯಾನ್ ಕಾರ್ಡ್ ಕಾರ್ಯನಿರ್ವಹಿಸುವುದಿಲ್ಲ ಎಂದು ಹಣಕಾಸು ಸಚಿವಾಲಯ ಹೇಳಿದೆ. ಜೊತೆಗೆ, ಹೆಸರು, ಫೋನ್ ಸಂಖ್ಯೆ ಅಥವಾ ಜನ್ಮ ದಿನಾಂಕದಲ್ಲಿ ಹೊಂದಿಕೆಯಾಗದ ಕಾರಣ ನೀವು ಪ್ಯಾನ್-ಆಧಾರ್ ಅನ್ನು ಲಿಂಕ್ ಮಾಡಲು ಸಾಧ್ಯವಾಗದಿದ್ದರೆ, ನಿಮ್ಮ ವಿವರಗಳನ್ನು ನೀವು ಪ್ಯಾನ್ ಅಥವಾ ಆಧಾರ್ ಡೇಟಾಬೇಸ್‌ನಲ್ಲಿ ಸರಿಪಡಿಸಬಹುದು. https://twitter.com/IncomeTaxIndia/status/1640647046146211840?ref_src=twsrc%5Etfw%7Ctwcamp%5Etweetembed%7Ctwterm%5E1640647046146211840%7Ctwgr%5E16735a3ef2b09fe3fe8fda039d687fd4256b983d%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fkannada%2Fkannadanewsnow-epaper-dh71ad7b0a01d347d2a0a68e5f262fdb7d%2Fbreakingnewspyaanaadhaarlinkgaduvujun30ravaregevistaranekendrasarkaaraaadeshapanaadhaarlinkingextends-newsid-n484600650

Read More

ಬೆಂಗಳೂರು: ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಕಳೆದ ಕೆಲ ತಿಂಗಳಿನಿಂದ ನಾಪತ್ತೆಯಾಗಿದ್ದ ಪಿಎಸ್ಐ ಅರೆಸ್ಟ್ ಆಗಿದೆ‌. ಈ ಹಿಂದೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿದ್ದ ನವೀನ್‌ರನ್ನು ತಡರಾತ್ರಿ ಸಿಐಡಿ ಪೊಲೀಸರು ಬಂಧಿಸಿದ್ದಾರೆ. ನವೀನ್ ಪಿಎಸ್‌ಐ ಹಗರಣ ಆರೋಪಿಗಳ ಜೊತೆ ಸಂಪರ್ಕದಲ್ಲಿದ್ದು ತಮ್ಮ ಸ್ನೇಹಿತರಿಗೆ ಕೆಲಸ ಕೊಡಿಸುವಲ್ಲಿ ಸಹಾಯ ಮಾಡಿದ್ದರು ಅನ್ನೋ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಪಿಎಸ್ಐ ನವೀನ್‌ರನ್ನ ಹುಡುಕಾಡಿದ್ದ ಸಿಐಡಿ ಅಧಿಕಾರಿಗಳು ಸದ್ಯ ಬಂಧಿಸಿದ್ದಾರೆ. ನವೀನ್ ವಿಚಾರಣೆ ವೇಳೆ ಮತ್ತಷ್ಟು ವಿಚಾರಗಳು ಹೊರ ಬೀಳುವ ಸಾಧ್ಯತೆ ಇದೆ.

Read More

ಧರ್ಮಸ್ಥಳ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕದ ಧರ್ಮಸ್ಥಳ ಪೊಲೀಸ್ ಠಾಣೆಯ ನೂತನ ಕಟ್ಟಡದ ಉದ್ಘಾಟನೆಯನ್ನು ಧರ್ಮದರ್ಶಿಗಳು ಹಾಗೂ ರಾಜ್ಯ ಸಭಾ ಸದಸ್ಯ ಡಾ.ವೀರೇಂದ್ರ ಹೆಗ್ಗಡೆಯವರು ಹಾಗೂ ಶ್ರೀ ಬ್ರಹ್ಮನಂದ ಸರಸ್ವತಿ ಸ್ವಾಮೀಜಿಯವರು ನೆರವೇರಿಸಿದರು. ಈ ಸಂದರ್ಭದಲ್ಲಿ ದ.ಕ ಪೊಲೀಸ್ ಅಧೀಕ್ಷಕ ಡಾ.ವಿಕ್ರಮ್ ಅಮಟೆ IPS, ಶಾಸಕ ಹರೀಶ್ ಪೂಂಜಾ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಗ್ರಾಮ ಪಂಚಾಯತ್ ಅಧ್ಯಕ್ಷ ಜಯ ಮೋನ್ನಪ್ಪ ಗೌಡ ಹಾಗೂ ಇತರ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ರಾಜ್ಯದಲ್ಲೇ ವಿಶಿಷ್ಟ ವಾಸ್ತುಶಿಲ್ಪದ ಪೊಲೀಸ್ ಠಾಣೆ..! 2.16 ಕೋಟಿ ವೆಚ್ಚದಲ್ಲಿ ಧರ್ಮಸ್ಥಳದಲ್ಲಿ ನಿರ್ಮಾಣಗೊಂಡಿರುವ ಈ ಪೊಲೀಸ್ ಠಾಣೆ ಹಲವು ವಿಶೇಷತೆಗಳನ್ನು ಒಳಗೊಂಡಿದೆ. ವಿನೂತನ ಮಾದರಿ, ವಿಶಿಷ್ಟ ವಾಸ್ತುಶಿಲ್ಪದಲ್ಲಿ ಪೊಲೀಸ್ ಠಾಣೆಯನ್ನು ಬರೋಬ್ಬರಿ 2.16 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದು ಎಲ್ಲರ ಗಮನಸೆಳೆಯುತ್ತಿದ್ದು ಪೊಲೀಸ್ ಠಾಣೆಯ ಫೋಟೊ, ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕೆಲವರು ಇದು ತುಂಬಾ…

Read More

ಮಂಗಳೂರು: ಐಸ್ ಕ್ರೀಮ್ ದಾಸ್ತಾನು ಮಳಿಗೆಗೆ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ಸೊತ್ತುಗಳು ಬೆಂಕಿಗಾಹುತಿಯಾಗಿರುವ ಘಟನೆ ಮಂಗಳೂರು ಹೊರವಲಯದ ಅಡ್ಯಾರ್ ಬಳಿ ನಡೆದಿದೆ.ಮಧ್ಯರಾತ್ರಿ ಸುಮಾರು 2 ಗಂಟೆ ಹೊತ್ತಿಗೆ ಐಸ್ ಕ್ರೀಮ್ ದಾಸ್ತಾನು ಕೊಠಡಿಗೆ ಆರಂಭದಲ್ಲಿ ಬೆಂಕಿ ಹತ್ತಿಕೊಂಡಿದ್ದು, ಅದು ಸನಿಹದಲ್ಲಿದ್ದ ವಾಹನಕ್ಕೂ ತಗುಲಿ ವಾಹನ ಹಾಗೂ ದಾಸ್ತಾನು ಕೊಠಡಿ ಸಂಪೂರ್ಣ ಸುಟ್ಟು ಹೋಗಿದೆ,ಇನ್ನು ಮಾಹಿತಿ ಪಡೆದ ಪಾಂಡೇಶ್ವರ ಹಾಗೂ ಕದ್ರಿ ಅಗ್ನಿ ಶಾಮಕ ದಳದ ಅದಿಕಾರಿಗಳ ತಂಡ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದ್ದಾರೆ.

Read More

ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಭೇಟಿಯ ವೇಳೆ ಭದ್ರತೆ ನಿಯಮವನ್ನು ಉಲ್ಲಂಘಿಸಿದ್ದಕ್ಕಾಗಿ ಪೊಲೀಸರು ಬೆಂಗಳೂರಿನ ಇಬ್ಬರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಬೆಂಗಳೂರಿನ ನೀಲಸಂದ್ರ ನಿವಾಸಿ ವಿದ್ಯಾರ್ಥಿಗಳಾದ ಇಮ್ರಾನ್ ಮತ್ತು ಜಿಬ್ರಾನ್ ಅವರನ್ನು ವಶಕ್ಕೆ ಪಡೆಯಲಾಗಿದೆ. ಅಮಿತ್ ಶಾ ಬೆಂಗಳೂರಿನ ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸಿ ರವಿವಾರ ತಡರಾತ್ರಿ ಎಚ್‍ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಾಗ ಈ ಘಟನೆ ನಡೆದಿದೆ. ವಿದ್ಯಾರ್ಥಿಗಳು ಅಮಿತ್ ಶಾ ಅವರ ಬೆಂಗಾವಲು ವಾಹನಗಳೊಂದಿಗೆ ಸಫೀನಾ ಪ್ಲಾಜಾದಿಂದ ಮಣಿಪಾಲ್ ಸೆಂಟರ್‍ ಗೆ ಹೇಗೋ ಹಠಾತ್ತನೆ ಮಧ್ಯೆ ಪ್ರವೇಶಿಸಿ ಪ್ರಯಾಣಿಸಿದ್ದಾರೆ. 300 ಮೀಟರ್‍ ವರೆಗೆ ಪೊಲೀಸರಿಂದ ತಪ್ಪುಸಿ ಪ್ರಯಾಣಿಸಿದ್ದರು. ಪೊಲೀಸರು ಮಣಿಪಾಲ ಕೇಂದ್ರದಲ್ಲಿ ಅವರನ್ನು ತಡೆದು ಒಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಮತ್ತೊಬ್ಬ ಪರಾರಿಯಾಗಿದ್ದು ನಂತರ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಇಬ್ಬರೂ ವಿದ್ಯಾರ್ಥಿಗಳು ಯಾವುದೇ ಅಪರಾಧ ಹಿನ್ನೆಲೆ ಅಥವಾ ಯಾವುದೇ ಕೆಟ್ಟ ಉದ್ದೇಶವನ್ನು ಹೊಂದಿಲ್ಲ.ಪೊಲೀಸರನ್ನು ಕಂಡು ಗಾಬರಿಗೊಂಡು ತೆರಳಿದ್ದಾರೆ ಎನ್ನಲಾಗಿದೆ. ಈ ಸಂಬಂಧ…

Read More