ಮೂಡುಬಿದಿರೆ: ವೇಶ್ಯಾವಾಟಿಕೆ ಅಡ್ಡಗೆ ದಾಳಿ ನಡೆಸಿದ ಮೂಡುಬಿದ್ರೆ ಪೊಲೀಸರು ನಾಲ್ವರನ್ನು ಬಂಧಿಸಿರುವ ಘಟನೆ ನಿಡ್ಡೋಡಿಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ. ಬಂಧಿತ ಆರೋಪಿಗಳನ್ನು ನಿಡ್ಡೋಡಿಯ ಮಹೇಶ, ಕಟೀಲು ಪರಿಸರದ ಯಜ್ನೇಶ್, ದಿಲೀಪ್ ಹಾಗೂ ಶ್ರೀಕಾಂತ್ ಎಂದು ಗುರುತಿಸಲಾಗಿದೆ. ಇಬ್ಬರು ಅಪ್ರಾಪ್ತ ಬಾಲಕಿಯರೊಂದಿಗೆ ನಾಲ್ಕು ಮಂದಿ ಯುವಕರ ತಂಡವೊಂದು ನಿಡ್ಡೋಡಿಯ ಮನೆಯೊಂದರಲ್ಲಿದ್ದಾರೆ ಎನ್ನುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಇನ್ನೆಕ್ಟರ್ ಸಂದೇಶ್ ಪಿ.ಜಿ.ನೇತೃತ್ವದ ಪೊಲೀಸ್ ತಂಡವು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಮಹೇಶನ ಮನೆಯಲ್ಲಿ ಅವನೊಬ್ಬನೇ ವಾಸವಿದ್ದುದರಿಂದ ಆ ಮನೆಯನ್ನು ಈ ಕೃತ್ಯಕ್ಕೆ ಉಪಯೋಗಿಸುತ್ತಿದ್ದನು ಎಂಬ ಮಾಹಿತಿ ಲಭಿಸಿದೆ. ಆರೋಪಿಗಳ ವಿರುದ್ಧ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ. ಸಂತ್ರಸ್ತ ಬಾಲಕಿಯರನ್ನು ಮತ್ತು ಆರೋಪಿಗಳನ್ನು ಠಾಣೆಗೆ ತಂದು ವಿಚಾರಿಸಿದಾಗ ಎಲ್ಲ ವಿಚಾರಗಳನ್ನೂ ಬಾಯಿಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ.ಅವರ ಸಮಯಪ್ರಜ್ಞೆ ಮತ್ತು ಆರೋಪಿಗಳನ್ನು ಬಂಧಿಸಿರುವ ಕ್ರಮಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
Author: main-admin
ಉಡುಪಿ ಜಿಲ್ಲಾ ರಸ್ತೆ ಸಾರಿಗೆ ಅಧಿಕಾರಿ (ಆರ್‌ಟಿಒ) ಲಕ್ಷ್ಮಿನಾರಾಯಣ ಪಿ ನಾಯಕ್ ಅವರ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಬೆಳಿಗ್ಗೆ ದಾಳಿ ನಡೆಸಿದ್ದಾರೆ. ಅಕ್ರಮಗಳ ಬಗ್ಗೆ ಸಾರ್ವಜನಿಕ ದೂರುಗಳ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಯಿತು ಎನ್ನಲಾಗಿದೆ. ಉಡುಪಿಯ ಕಿನ್ನಿಮೂಲ್ಕಿಯಲ್ಲಿರುವ ಅವರ ಅಪಾರ್ಟ್‌ಮೆಂಟ್ ಹಾಗೂ ಕುಮಟಾ (ಉತ್ತರ ಕನ್ನಡ ಜಿಲ್ಲೆ) ಮತ್ತು ಪಡು ಅಲೆವೂರಿನಲ್ಲಿರುವ ಅವರ ಸಂಬಂಧಿಕರ ನಿವಾಸಗಳಲ್ಲೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಕುಮಟಾ ಮೂಲದ ಲಕ್ಷ್ಮಿನಾರಾಯಣ ಪಿ ನಾಯಕ್ ಪ್ರಸ್ತುತ ಉಡುಪಿಯಲ್ಲಿ ಆರ್‌ಟಿಒ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ತಂಡವು ಪಡು ಅಲೆವೂರಿನ ರವಿ ಎಂಬವರ ಮನೆಯಲ್ಲೂ ಶೋಧ ನಡೆಸಿದೆ ಎಂಬುವುದು ವರದಿಯಾಗಿದೆ.
ಮಂಗಳೂರು: ಮುಂಬೈನಿಂದ ವಿಮಾನದ ಮೂಲಕ ಹೈಡ್ರೋಪೋನಿಕ್ ಗಾಂಜಾ ಸಾಗಿಸುತ್ತಿದ್ದ ಓರ್ವನನ್ನು ಸಿಐಎಫ್ ಸಿಬ್ಬಂದಿಗಳು ವಶಕ್ಕೆ ಪಡೆದು ಬಜ್ಪೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಬಂಧಿತನನ್ನು ಶಂಕರ್ ನಾರಾಯಣ್ ಪೊದ್ದಾರ್ ಎಂದು ತಿಳಿದು ಬಂದಿದೆ. ಈತ ಅ.14ರಂದು ಸಂಜೆ 6:30ಕ್ಕೆ ಮುಂಬೈನಿ0ದ ಮಂಗಳೂರಿಗೆ ಬಂದ ಇಂಡಿಗೋ ವಿಮಾನದಲ್ಲಿ ಹೈಡ್ರೋಪೋನಿಕ್ ಗಾಂಜಾ ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನೆಲೆ ವಿಮಾನ ನಿಲ್ದಾಣ ಸಿಬ್ಬಂದಿ ಆಧರಿಸಿ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಸಿಐಎಫ್ ಸಿಬ್ಬಂದಿಗೆ ಮಾಹಿತಿ ನೀಡಿದ್ದರು.
ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟಿರುವುದಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಚಿನ್ನಯ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸೌಜನ್ಯ ಹೋರಾಟಗಾರ ಮಹೇಶ್ ತಿಮರೋಡಿಗೆ ಹೈಕೋರ್ಟ್‌ನಿಂದ ದೊಡ್ಡ ರಿಲೀಫ್ ಲಭಿಸಿದೆ. ತಮ್ಮ ವಿರುದ್ಧದ ಗಡಿಪಾರು ಆದೇಶವನ್ನು ರದ್ದುಗೊಳಿಸುವಂತೆ ಕೋರಿ ಮಹೇಶ್ ತಿಮರೋಡಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಒಳಪಡಿಸಿದ ಹೈಕೋರ್ಟ್, ತಿಮರೋಡಿ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಆದೇಶಿಸಿದೆ. ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠವು ಈ ಮಹತ್ವದ ತೀರ್ಪನ್ನು ಕಾಯ್ದಿರಿಸಿದ್ದು, ಮುಂದಿನ ಆದೇಶದವರೆಗೆ ಗಡಿಪಾರು ಆದೇಶವನ್ನು ಜಾರಿಗೊಳಿಸದಂತೆ ಸ್ಪಷ್ಟ ಸೂಚನೆ ನೀಡಿದೆ. ಹೈಕೋರ್ಟ್‌ನಲ್ಲಿ ವಾದ-ಪ್ರತಿವಾದ ವಿಚಾರಣೆಯ ಸಂದರ್ಭದಲ್ಲಿ ಎರಡೂ ಕಡೆಯ ವಕೀಲರು ತಮ್ಮ ವಾದಗಳನ್ನು ತೀವ್ರವಾಗಿ ಮಂಡಿಸಿದರು. ತಿಮರೋಡಿಯವರ ಪರ ವಕೀಲರು, ಗಡಿಪಾರು ಆದೇಶವು ತಿಮರೋಡಿಯವರ ಘನತೆ ಮತ್ತು ಹಕ್ಕುಗಳಿಗೆ ಧಕ್ಕೆ ತರುವಂತಿದೆ ಎಂದು ಹೇಳಿದರು. ಇದಕ್ಕೆ ಪ್ರತಿವಾದವಾಗಿ, ಸರ್ಕಾರದ ಪರ ವಕೀಲರು, ತಿಮರೋಡಿಯವರ ಹೇಳಿಕೆಗಳು ಸಾರ್ವಜನಿಕ ಶಾಂತಿಗೆ ಭಂಗ ತರುವ ಸಾಧ್ಯತೆಯಿದೆ ಎಂದು ವಾದಿಸಿದರು. ಎರಡೂ ಕಡೆಯ ವಾದಗಳನ್ನು ಆಲಿಸಿದ ನ್ಯಾಯಮೂರ್ತಿ…
ಕಾರ್ಕಳ: ಕಾರ್ಕಳ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಚ್. ಗೋಪಾಲ ಭಂಡಾರಿ ಅವರ ಪುತ್ರ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ಸುದೀಪ್ ಭಂಡಾರಿ ಅವರು ಬಾರಕೂರಿನಲ್ಲಿ ರೈಲ್ವೇ ಹಳಿಗೆ ತಲೆಯೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ಸುದೀಪ್ ಭಂಡಾರಿ ಅವರು ತಾಯಿ ಪ್ರಕಾಶಿನಿ, ಸಹೋದರ ಪ್ರದೀಪ, ಸಹೋದರಿ ದೀಪಾ, ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಉಳ್ಳಾಲ: ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ ಆರೋಪ ಸಂಬಂಧ ಮೂವರನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಮುಹಮ್ಮದ್ ಹನೀಫ್ (48), ಮನೋಜ್ (56) ಹಾಗೂ ಉಮರ್ ಫಾರೂಕ್ ಬಂಧಿತ ಆರೋಪಿಗಳು. ಇವರು ದೇಶ ವಿರೋಧಿ ಹೇಳಿಕೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದರು ಎಂದು ಆರೋಪಿಸಲಾಗಿದೆ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುತ್ತೂರು: ಇಬ್ಬರು ಯುವತಿಯರು ನಾಪತ್ತೆಯಾಗಿರುವ ಕುರಿತು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪುತ್ತೂರಿನ ಇನಾಮೊಗ್ರುವಿನ ಮೋನಿಶಾ (23) ಮತ್ತು ಮಂಡ್ಯದ ಪಾಂಡವಪುರದ ದಿವ್ಯಾ (20) ನಾಪತ್ತೆಯಾದ ಯುವತಿಯರು ಎಂದು ಗುರುತಿಸಲಾಗಿದೆ. ಇವರಿಬ್ಬರೂ ಮಂಡ್ಯದಲ್ಲಿ ಒಂದೇ ಸಂಸ್ಥೆಯಲ್ಲಿ ಉದ್ಯೋಗಿಗಳಾಗಿದ್ದರು. ವರದಿಯ ಪ್ರಕಾರ, ಇವರಿಬ್ಬರೂ ನಾಲ್ಕು ದಿನಗಳ ಹಿಂದೆ ಮೋನಿಶಾ ಅವರ ಮನೆಗೆ ಬಂದಿದ್ದು, ಅಂದಿನಿಂದ ನಾಪತ್ತೆಯಾಗಿದ್ದಾರೆ. ಈ ಇಬ್ಬರೂ ಯುವತಿಯರು ಶ್ರವಣ ಮತ್ತು ಮಾತಿನ ಸಮಸ್ಯೆಗಳಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ.
ಮಂಗಳೂರು : ಕಾವೂರಿನ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ನಕಲಿ ಚಿನ್ನವನ್ನು ಅಡಮಾನವಿರಿಸಿ 6.24 ಲಕ್ಷ ಸಾಲ ಪಡೆದು ವಂಚಿಸಿದ ಪ್ರಕರಣದಲ್ಲಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಆಕಾಶಭವನ ನಿವಾಸಿ ಹಾರಿಫ್ ಅಬುಬಕ್ಕರ್ (39), ನಂತೂರು ಬಿಕರ್ನಕಟ್ಟೆ ನಿವಾಸಿ ಮಹಮ್ಮದ್ ಆಶೀಕ್ ಕಟ್ಟತ್ತಾರ್ (34), ಪುತ್ತೂರು ಬೆಳಂದೂರು ನಿವಾಸಿ ಅಬ್ದುಲ್ ರಮೀಜ್ (33) ಬಂಧಿತರು. ಅಸಲಿ ಚಿನ್ನಾಭರಣಗಳೆಂದು ನಂಬಿಸಿ ನಕಲಿ ಚಿನ್ನವನ್ನು ಅಡವಿಟ್ಟು ಇವರು ಆತ್ಮಶಕ್ತಿ ಸಹಕಾರಿ ಸಂಘದಲ್ಲಿ 6.24 ಲಕ್ಷ ರು. ಸಾಲ ಪಡೆದಿದ್ದರು. ನಕಲಿ ಚಿನ್ನದ ಮಾಹಿತಿ ಸಿಗುತ್ತಿದ್ದಂತೆ ಸೊಸೈಟಿ ಕಡೆಯಿಂದ ಕಾವೂರು ಠಾಣೆಗೆ ದೂರು ನೀಡಲಾಗಿತ್ತು. ಪೊಲೀಸರು ಮೂವರನ್ನು ಬಂಧಿಸಿದ್ದು ಅವರಿಂದ 5 ಲಕ್ಷ ನಗದು, 45 ಗ್ರಾಮ್ ನಕಲಿ ಚಿನ್ನದ ಒಡವೆಗಳು, 20 ಲಕ್ಷ ಮೌಲ್ಯದ ಒಂದು ಕಾರು, ನಾಲ್ಕು ಮೊಬೈಲ್ ಫೋನ್ ವಶಕ್ಕೆ ಪಡೆದಿದ್ದಾರೆ. ಸೊತ್ತಿನ ಒಟ್ಟು ಮೌಲ್ಯ 26.50 ಲಕ್ಷ ಆಗಬಹುದೆಂದು ಅಂದಾಜಿಸಲಾಗಿದೆ. ಮಂಗಳೂರು ಉತ್ತರ ಉಪವಿಭಾಗದ ಎ.ಸಿ.ಪಿ. ಶ್ರೀಕಾಂತ್ ಕೆ. ಅವರ ಮಾರ್ಗದರ್ಶನದಲ್ಲಿ…
ಬಂಟ್ವಾಳ: ಕಳೆದ ಕೆಲವು ದಿನಗಳ ಹಿಂದೆ ಬೊಲೆರೊ ವಾಹನದಲ್ಲಿ ಗಾಂಜಾ ಸಾಗಿಸುವಾಗ ಅಬಕಾರಿ ಅಧಿಕಾರಿಗಳಿಂದ ತಪ್ಪಿಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು, ಅವರು ಬೈಕ್‌ನಲ್ಲಿ ಗಾಂಜಾ ಮಾರಾಟ ಮಾಡಲು ತೆರಳುತ್ತಿದ್ದ ವೇಳೆ ಪೊಲೀಸರು ಬಂಧಿಸಿದ್ದಾರೆ. ಇದರೊಂದಿಗೆ ಗಾಂಜಾ ಸಾಗಾಟ ಪ್ರಕರಣದಲ್ಲಿ ಮತ್ತಿಬ್ಬರನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳನ್ನು ಫರಂಗಿಪೇಟೆಯ ಮೊಹಮ್ಮದ್ ಅಜರುದ್ದೀನ್ ಮತ್ತು ಅಮ್ಮೆಮಾರ್‌ನ ಮೊಹಮ್ಮದ್ ಅಶ್ರಫ್ ಎಂದು ಗುರುತಿಸಲಾಗಿದೆ. ಬಂಧಿತರಿಂದ 10 ಕೆಜಿ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಕ್ಟೋಬರ್ 8 ರಂದು ಬಂಟ್ವಾಳ ನಗರ ಪೊಲೀಸ್ ಠಾಣಾ ಪಿಎಐ ಸಂದೀಪ್ ಕುಮಾರ್ ಶೆಟ್ಟಿ ಅವರು ಗಸ್ತು ತಿರುಗುತ್ತಿದ್ದಾಗ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ., ಹೆಚ್ಚುವರಿ ಎಸ್‌ಪಿ ಅನಿಲ್ ಕುಮಾರ್ ಬೂಮರೆಡ್ಡಿ ಮಾರ್ಗದರ್ಶನದಲ್ಲಿ ಬಂಟ್ವಾಳ ಡಿವೈಎಸ್‌ಪಿ ಎಸ್. ವಿಜಯಪ್ರಸಾದ್ ಅವರ ಸೂಚನೆಯಂತೆ ಈ ಕಾರ್ಯಾಚರಣೆ ನಡೆಸಲಾಯಿತು. ಬಂಟ್ವಾಳ ನಗರ ಪೊಲೀಸ್ ಇನ್ಸ್‌ಪೆಕ್ಟರ್ ಅನಂತಪದ್ಮನಾಭ ಅವರ ನೇತೃತ್ವದಲ್ಲಿ ಪಿಎಸ್‌ಐಗಳಾದ ಸಂದೀಪ್ ಕುಮಾರ್ ಶೆಟ್ಟಿ…
ಕರ್ನಾಟಕ ಹಾಗೂ ಗೋವಾ ನಿರ್ದೇಶನಾಲಯದ 72 ನೌಕಾ ಎನ್.ಸಿ.ಸಿ ವಿದ್ಯಾರ್ಥಿಗಳು ಉಡುಪಿಯ ಮಲ್ಪೆ ಬಂದರಿನಿಂದ ಮಂಗಳೂರು ದಕ್ಕೆ ಪರೀಕ್ಷಾತ್ಮಕ ಸಾಗರ ಯಾನವನ್ನು ಪ್ರಾರಂಭಿಸಿದ್ದಾರೆ. ಈ ಯಾನವು ಸಾಗರ ನೌಕಾಯಾನ ದಂಡಯಾತ್ರೆ – ಮೆನು (ಅತ್ಯಂತ ಉದ್ಯಮಶೀಲ ನೌಕಾ ಘಟಕ) 2025 ಎಂಬ ಗಣನೀಯ All India ಟ್ರೋಫಿಯ ಭಾಗವಾಗಿದೆ. ಶಿಬಿರವು ಸಾಹಸ ಮತ್ತು ಕೌಶಲ್ಯಾಭಿವೃದ್ಧಿಯ ಮಿಶ್ರಣವನ್ನು ಒದಗಿಸುತ್ತದೆ: ತೀವ್ರ ನೌಕಾ ಕೌಶಲ್ಯ ಪ್ರ್ಯಾಸಗಳು, ನದಿ ಹಾಗೂ ಸಾಗರ ನ್ಯಾವಿಗೇಶನ್ ಅಭ್ಯಾಸಗಳು, ಟ್ರೆಕ್ಕಿಂಗ್ ಮತ್ತು ಉಡುಪಿ ಜಿಲ್ಲೆಯ ಸಾಂಸ್ಕೃತಿಕ ಸ್ಥಳಗಳಿಗೆ ಭೇಟಿ, ಮಂಗಳೂರು ಬ್ಲೂ ಫ್ಲ್ಯಾಗ್ ಬೀಚ್, ತಣ್ಣೀರು ಬಾವಿ ಬಳಿಕ ಉಡುಪಿ ದಿಕ್ಕಿನಲ್ಲಿ ಹಿಂದಿರುಗುವ ಪಯಣವನ್ನು ಪ್ರಾರಂಭಿಸಲಾಯಿತು; ನಂತರ ಪ್ರಸಿದ್ಧ ಕಟೀಲ್ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಸಾದವನ್ನು ಸ್ವೀಕರಿಸಲಾಯಿತು ಮತ್ತು ಮುಲ್ಕಿಯ ಮಂಡ್ರಾ ಕ್ಲಬ್ ನಲ್ಲಿ ಸಿಬ್ಬಂದಿ ಮತ್ತು ನೌಕಾ ವಿದ್ಯಾರ್ಥಿಗಳೊಂದಿಗೆ ವಿಶ್ರಾಂತಿ ಸಮಯವನ್ನು ಕಳೆದರು. ಈ ಯಾನದ ಗುರಿಗಳು ಕೇವಲ ನೌಕಾ ತಂತ್ರಗಳನ್ನು ಕಲಿಸುವಷ್ಟಲ್ಲ. ಇದು ವಿದ್ಯಾರ್ಥಿಗಳಿಗೆ ಗಾಳಿಚಾಲಿತ…










