ಸೌದಿಅರೇಬಿಯಾ: ಉಮ್ರಾ ನೆರವೇರಿಸಲು ಹೋಗಿದ್ದ ಉಡುಪಿಯ ಇಬ್ಬರು ಮಹಿಳೆಯರು ಅನಾರೋಗ್ಯದಿಂದ ಮೃತಪಟ್ಟ ಘಟನೆ ಸೌದಿ ಅರೇಬಿಯಾದ ಮೆಕ್ಕಾದಲ್ಲಿ ನಡೆದಿದೆ. ಬ್ರಹ್ಮಾವರದ ಮರಿಯಮ್ಮ(66) ಮಾ.9 ರಂದು ಹೃದಯಾಘಾತದಿಂದ ಮೃತಪಟ್ಟರೆ, ಅಚ್ಲಾಡಿಯ ಖತಿಜಮ್ಮ (68) ಮಾರ್ಚ್ 11 ರಂದು ಅನಾರೋಗ್ಯದಿಂದ ಮೃತಪಟ್ಟರು ಎಂದು ತಿಳಿದು ಬಂದಿದೆ. ಇಬ್ಬರ ಮೃತದೇಹವನ್ನು ಮೆಕ್ಕಾದಲ್ಲಿ ಧಪನ ಮಾಡಲಾಗಿದೆ ಎಂದು ತಿಳಿದುಬಂದಿದೆ. ಮಂಗಳೂರಿನ ಟ್ರಾವೆಲ್ ಏಜೆನ್ಸಿ ವತಿಯಿಂದ 23 ಮಹಿಳೆಯರು ಹಾಗೂ 11 ಪುರುಷರು ಸೇರಿ 34 ಮಂದಿಯ ತಂಡವು ಮಾರ್ಚ್ 1ರಂದು ಮಂಗಳೂರಿನಿಂದ ಉಮ್ರಾ ನೆರವೇರಿಸಲು ಮೆಕ್ಕಾಗೆ ತೆರಳಿದ್ದರು.
Author: main-admin
ಮಂಡ್ಯ: ಮಂಡ್ಯ ತಾಲೂಕಿನ ಹನಕೆರೆ ಗ್ರಾಮದ ಬಳಿ 118 ಕಿ.ಮೀ. ಉದ್ದದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೇಯನ್ನು ಪ್ರಧಾನಿ ಮೋದಿ ಅಧಿಕೃತವಾಗಿ ಉದ್ಘಾಟನೆ ಮಾಡಿದ್ದಾರೆ. ಮಂಡ್ಯದ ಗೆಜ್ಜಲಗೆರೆಯಲ್ಲಿ ಬಿಜೆಪಿ ಬೃಹತ್ ಸಮಾವೇಶ ನಡೆಸಿದ್ದಾರೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಕನ್ನಡದಲ್ಲೇ ಭಾಷಣ ಆರಂಭಿಸಿದ್ದಾರೆ. ತಾಯಿ ಭುವನೇಶ್ವರಿಗೆ ನಮಸ್ಕಾರಗಳು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ನಿಮ್ಮ ಪ್ರೀತಿಯ ಋಣವನ್ನು ಬಡ್ಡಿ ಸಮೇತ ನಮ್ಮ ಸರ್ಕಾರ ತೀರಿಸಲಿದೆ. ಕೆಲವು ದಿನಗಳಿಂದ ಎಕ್ಸ್ ಪ್ರೆಸ್ ಹೈವೇ ಬಗ್ಗೆ ಸಾಕಷ್ಟ ಚರ್ಚೆ ನಡೆಯುತ್ತಿತ್ತು. ಸಾಮಾಜಿಕ ಜಾಲತಾಣದಲ್ಲಿ ದಶಪಥ ಹೆದ್ದಾರಿ ಬಗ್ಗೆ ಚರ್ಚೆ ನಡೆಯುತ್ತಿದ್ದವು. ಮೈಸೂರು- ಬೆಂಗಳೂರು ಎಕ್ಸ್ ಪ್ರೆಸ್ ಹೈವೇ ಫೋಟೋಗಳು ವೈರಲ್ ಆಗಿದೆ. ಮೈಸೂರು-ಕುಶಾಲನಗರ 4 ಪಥದ ರಸ್ತೆಗೆ ಶಿಲಾನ್ಯಾಸ ನೆರೆವೇರಿಸಿದ್ದೇವೆ ಎಂದರು. ಇನ್ನು ದಶಪಥ ಹೆದ್ದಾರಿಯಿಂದ ಈ ಭಾಗದಲ್ಲಿ ಸಾಕಷ್ಟು ಅನುಕೂಲವಾಗಲಿದೆ. ಈ ಪುಣ್ಯ ಭೂಮಿಯಲ್ಲಿ ಒಡೆಯರ್ , ವಿಶ್ವೇಶ್ವರಯ್ಯರನ್ನು ದೇಶಕ್ಕೆ ನೀಡಿದೆ. ಭಾರತ ಇಂದು ಸಾಕಷ್ಟು ಬದಲಾವಣೆ ಆಗುತ್ತಿದೆ. ಭಾರತ ಮಾಲಾ,…
ನವದೆಹಲಿ: ಧಾರ್ಮಿಕ ಕಟ್ಟಡಗಳ ಮೇಲೆ ನಡೆಯುವ ಯಾವುದೇ ತೀವ್ರವಾದ ಕ್ರಮಗಳು ಮತ್ತು ದಾಳಿಗಳನ್ನು ಆಸ್ಟ್ರೇಲಿಯಾ ಸಹಿಸುವುದಿಲ್ಲ ಮತ್ತು ಹಿಂದೂ ದೇವಾಲಯಗಳ ವಿರುದ್ಧ ಅಂತಹ ಕ್ರಮಕ್ಕೆ ಯಾವುದೇ ಸ್ಥಾನವಿಲ್ಲಎಂದು ಪ್ರಧಾನ ಮಂತ್ರಿ ಆಂಟನಿ ಅಲ್ಬನೀಸ್ ಹೇಳಿದ್ದಾರೆ. ಕಳೆದ ಕೆಲವು ದಿನಗಳಿಂದ ಆಸ್ಟ್ರೇಲಿಯಾದಲ್ಲಿ ಹಿಂದೂ ದೇವಾಲಯಗಳನ್ನು ಗುರಿಯಾಗಿಸಲಾಗುತ್ತಿದೆ. ಪ್ರಧಾನಿ ಮೋದಿ ಅವರು ಶನಿವಾರ (ಮಾರ್ಚ್ 11) ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರ ಮುಂದೆ ಈ ವಿಷಯವನ್ನು ಪ್ರಸ್ತಾಪಿಸಿದರು. ಈ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಕೂಡ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ʻಆಸ್ಟ್ರೇಲಿಯಾ ಜನರ ನಂಬಿಕೆಯನ್ನು ಗೌರವಿಸುವ ದೇಶ. ನಾವು ತೀವ್ರವಾದ ಕ್ರಮಗಳು ಮತ್ತು ದಾಳಿಗಳನ್ನು ಸಹಿಸುವುದಿಲ್ಲ. ನಾವು ಹಿಂದೂ ದೇವಾಲಯಗಳು, ಮಸೀದಿಗಳು, ಸಿನಗಾಗ್‌ಗಳು ಅಥವಾ ಚರ್ಚ್‌ಗಳ ಮೇಲೆ ಧಾರ್ಮಿಕ ಕಟ್ಟಡಗಳನ್ನು ನೋಡಿದ್ದೇವೆ. ಆಸ್ಟ್ರೇಲಿಯಾದಲ್ಲಿ ಧರ್ಮಾಂಧತೆಗೆ ಸ್ಥಾನವಿಲ್ಲʼ ಎಂದಿದ್ದಾರೆ. ನಾವು ಅದನ್ನು ಖಚಿತಪಡಿಸಿಕೊಳ್ಳಲು ನಮ್ಮ ಪೊಲೀಸ್ ಮತ್ತು ನಮ್ಮ ಭದ್ರತಾ ಏಜೆನ್ಸಿಗಳ ಮೂಲಕ ನಾವು ಪ್ರತಿ…
ಬೆಳ್ತಂಗಡಿ: ಮಿಯಾರು ಮೀಸಲು ಅರಣ್ಯ ಸಹಿತ ಶಿಬಾಜೆಯಲ್ಲಿ ವಾರದಿಂದ ಸುಡುತ್ತಿದ್ದ ಕಾಳ್ಗಿಚ್ಚು ಶಾಂತರೂಪ ಪಡೆದಿದೆ. ಆದರೆ ಮತ್ತೆ ಅರಣ್ಯವನ್ನು ಆಹುತಿ ಪಡೆಯುವ ಮುನ್ನ ಗೋವಾದ ನೌಕಾಪಡೆ ತಂಡವು ಅರಣ್ಯ ಸಮೀಕ್ಷೆ ನಡೆಸಿ ಜಿಲ್ಲಾ ಕೇಂದ್ರದಲ್ಲಿ ಬೆಂಕಿ ನಂದಿಸಲು ಕನಿಷ್ಠ 2 ಹೆಲಿಕಾಪ್ಟರ್‌ಗಳನ್ನು ನಿಯೋಜಿಸುವಂತೆ ಸಾರ್ವಜನಿಕ ವಲಯದಿಂದ ಆಗ್ರಹ ಕೇಳಿಬಂದಿದೆ. ಕುದುರೆಮುಖ ವನ್ಯಜೀವಿ ವಿಭಾಗ ಸಹಿತ ಶಿಶಿಲ, ಶಿಬಾಜೆ, ಮಿಯಾರು, ಸವಣಾಲು, ಶಿರ್ಲಾಲು ವ್ಯಾಪ್ತಿಯ ಮೇಲ್ಭಾಗದ ಅರಣ್ಯ ಬೆಂಕಿಯ ಜ್ವಾಲೆಗೆ ಅಕ್ಷ ರಶಃ ಸುಟ್ಟು ಕರಕಲಾಗಿದೆ. ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ದಳ, ಸ್ಥಳೀಯ ತಂಡಗಳ ನಿರಂತರ ಕಾರ್ಯಾ ಚರಣೆಯಿಂದ ಬೆಂಕಿ ಶಮನದ ಹಂತದಲ್ಲಿದೆ. ಹೆಲಿಕಾಪ್ಟರ್ ಬಳಕೆ: ಅಭಿಯಾನ ಮುಂದುವರಿಕೆಮಂಗಳೂರು: ಹೆಲಿಕಾಪ್ಟರ್ ಬಳಸಿ ಕಾಳ್ಗಿಚ್ಚು ನಂದಿಸುವಂತೆ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಮುಂದುವರಿದಿದೆ. ಈ ಕುರಿತು ಮಾ. 10ರಂದು “ಉದಯವಾಣಿ’ ವರದಿ ಮಾಡಿದ್ದು, ಬಹಳಷ್ಟು ಮಂದಿ ವರದಿಯನ್ನು ಟ್ವೀಟ್ ಮಾಡಿದ್ದರು. ಪ್ರಧಾನಿ ಮತ್ತು ಮುಖ್ಯಮಂತ್ರಿ ಕಚೇರಿಗೂ ಟ್ಯಾಗ್ ಮಾಡಿದ್ದರು. ಸಿಎಂ ಕಚೇರಿ ಯಿಂದಲೇ ಈ ಕುರಿತು…
ಮಂಗಳೂರು: ಪೊಲೀಸ್ ಎಂದು ಹೇಳಿಕೊಂಡು ಮಹಿಳೆಗೆ ಬೆದರಿಕೆ ಹಾಕಿ ಹಣ ಪಡೆದು ವಂಚನೆ ಎಸಗಿದ ಆರೋಪಿಯನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ. ಕಾವೂರು ಈಶ್ವರನಗರ ಸರಕಾರಿ ಗುಡ್ಡೆಯ ಶಿವರಾಜ್ ದೇವಾಡಿಗ ಬಂಧಿತ ಆರೋಪಿ. ಈತ ಮಹಿಳೆಯೊಬ್ಬರಿಗೆ ಬೆದರಿಕೆ ಹಾಕಿ ಹಣ ಪಡೆದು ವಂಚಿಸಿದ್ದ. ನೀವು ಮಸಾಜ್ ಪಾರ್ಲರ್ ನಡೆಸುತ್ತಿರುವುದುಕ್ಕೆ ಹಾಗೂ ಹಣ, ಬಂಗಾರ ಹೆಚ್ಚು ಇರಿಸಿಕೊಂಡಿರುವ ವಿಚಾರವಾಗಿ ನಮಗೆ ದೂರು ಬಂದಿದೆ. ಪ್ರಕರಣವನ್ನು ಮುಚ್ಚಿ ಹಾಕಬೇಕಾದರೆ ಹಣ ನೀಡಬೇಕು. ಇಲ್ಲವಾದಲ್ಲಿ ನಿಮ್ಮ ಪಾರ್ಲರ್ ಮತ್ತು ಮನೆಗೆ ದಾಳಿ ನಡೆಸಲಾಗುವುದು ಎಂದು ಬೆದರಿಕೆ ಹಾಕಿದ್ದ.ಅಲ್ಲದೆ ಮಹಿಳೆಗೆ ಬೆದರಿಕೆ ಹಾಕಿ ಆಕೆಯಿಂದ 38 ಸಾವಿರ ರೂಪಾಯಿಗಳನ್ನು ಪಡೆದುಕೊಂಡಿದ್ದಾನೆ. ಘಟನೆ ಸಂಬಂಧ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಆ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈತ ಈ ಹಿಂದೆ ಗೃಹರಕ್ಷದ ದಳದಲ್ಲಿ ಕರ್ತವ್ಯ ನಿರ್ವಹಿಸಿದ್ದು, ಅದೇ ಸಮವಸ್ತ್ರ ಧರಿಸಿ ಮಹಿಳೆಗೆ ಬೆದರಿಕೆ ಹಾಕಿ ಪೊಲೀಸ್ ಎಂದು ನಂಬಿಸಿದ್ದ ಎಂದು ತಿಳಿದು ಬಂದಿದೆ.
ಘಾಜಿಯಾಬಾದ್ : ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯಲ್ಲಿ ಪತ್ನಿಯೊಂದಿಗೆ ಜಗಳವಾಡಿದ ಬಳಿಕ ವ್ಯಕ್ತಿಯೊಬ್ಬ ಮನೆಗೆ ಬೆಂಕಿ ಹಚ್ಚಿದ ಘಟನೆ ನಡೆದಿದೆ. ಮನೆಯಲ್ಲಿದ್ದವರಿಗೆ ಏನಾಗ್ತಿದೆ ಎಂದು ಅರ್ಥವಾಗುವಷ್ಟರಲ್ಲಿ ಬೆಂಕಿ ದೈತ್ಯ ರೂಪ ಪಡೆದಿದೆ. ಅಪಘಾತದಲ್ಲಿ 10 ಜನರಿಗೆ ಸುಟ್ಟ ಗಾಯಾಗಳಾಗಿದ್ದು, ಸುತ್ತಮುತ್ತಲಿನವರು ಪೊಲೀಸ್ ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದೇ ಸಮಯದಲ್ಲಿ, ಪೊಲೀಸ್ ತಂಡದ ಸಹಾಯದಿಂದ, ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಲಾಯಿತು, ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರ ಪ್ರಕಾರ, ನಿನ್ನೆ ತಡರಾತ್ರಿ ಲೋಣಿ ಪ್ರದೇಶದ ತಿಲಕ್ ನಗರ ಕಾಲೋನಿಯಲ್ಲಿ ಸುರೇಶ್ (40) ಎಂಬುವರ ಪತ್ನಿ ರಿತು (36) ಅವರೊಂದಿಗೆ ಜಗಳವಾಡಿದ್ದಾರೆ. ಸುರೇಶ್ ತನ್ನ ಪತ್ನಿಯನ್ನ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದು, ಕೋಪದ ಭರದಲ್ಲಿ ಸ್ಟವ್ನಿಂದ ಎಲ್ಪಿಜಿ ಗ್ಯಾಸ್ ಪೈಪ್ ಎಳೆದಿದ್ದಾನೆ, ಅದು ಕೊಠಡಿಯಲ್ಲಿ ಗ್ಯಾಸ್ ತುಂಬಿವಂತೆ ಮಾಡಿತ್ತು. ಗ್ಯಾಸ್ ಲೈಟರ್ ಹೊತ್ತಿಸಿದ್ದೇ ಬೆಂಕಿ ಹೊತ್ತಿಕೊಂಡಿತು.!ಕೊಠಡಿಗೆ ಗ್ಯಾಸ್ ತುಂಬಿಸುವಾಗ, ರಿತು ಸಹಾಯಕ್ಕಾಗಿ ಕೂಗಿದ್ದು,…
ಮಂಗಳೂರು: ನಗರದಿಂದ ಹೊರಟಿದ್ದ ಸರಕು ಸಾಗಾಟದ ರೈಲಿನ ಗ್ಯಾಸ್ ಟ್ಯಾಂಕ್‌ನಿಂದ ಅನಿಲ ಸೋರಿಕೆಯಾದ ಅನುಮಾನ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಜೋಕಟ್ಟೆ ಬಳಿ ರೈಲ್ವೆ ಹಳಿ ಸುತ್ತಮುತ್ತ ಜನಸಂಚಾರ ನಿರ್ಬಂಧ ಮಾಡಲಾಗಿರುವ ಘಟನೆ ಶುಕ್ರವಾರ ಸಂಜೆ ವೇಳೆಗೆ ನಡೆದಿದೆ. ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ (ಹೆಚ್‌ಪಿಸಿ) ಲಿಮಿಟೆಡ್‌ನಿಂದ ರೈಲು ಗ್ಯಾಸ್ ಟ್ಯಾಂಕರ್‌ಗಳಲ್ಲಿ ಅನಿಲ ತುಂಬಿಸಿ ಕಳುಹಿಸಲಾಗಿತ್ತು. ಆದರೆ ರೈಲು ಏಳು ಕಿ.ಮೀ. ತಲುಪಿದ ಬಳಿಕ ಗ್ಯಾಸ್ ಸೋರಿಕೆಯ ಬಗ್ಗೆ ಅನುಮಾನ ವ್ಯಕ್ತವಾಗಿದೆ. ರೈಲು ವಾಪಸ್ ಹೆಚ್ ಪಿಸಿಎಲ್‌ಗೆ ಆಗಮಿಸಿದೆ. ಗ್ಯಾಸ್ ಸೋರಿಕೆಯಾದ ಅನುಮಾನದ ಹಿನ್ನಲೆಯಲ್ಲಿ ಜೋಕಟ್ಟೆ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿತ್ತು. ಅಲ್ಲದೆ ರೈಲ್ವೆ ಗೇಟ್ ಬಳಿ ಅಗ್ನಿಶಾಮಕ ವಾಹನ ನಿಯೋಜನೆ ಮಾಡಲಾಗಿದ್ದು, ರೈಲ್ವೆ ಹಳಿ ಸುತ್ತಮುತ್ತಲೂ ನಾಗರಿಕರು ಬಾರದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿದೆ. ಘಟನೆಯಿಂದ ಜೋಕಟ್ಟೆ ಪ್ರದೇಶದ ಜನರು ಆತಂಕಿತರಾಗಿದ್ದರು.
ಮಂಗಳೂರು; ವಿಧಾನ ಸಭಾ ಚುನಾವಣೆ ಸಮೀಪಿಸುತ್ತಿರುವ ಕಾರಣ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ನಿಟ್ಟಿನಲ್ಲಿ ಗಮನ ಹರಿಸಿರುವ ದ.ಕ ಜಿಲ್ಲಾಧಿಕಾರಿ ರವಿ ಕುಮಾರ್ ಅಪರಾಧ ಹಿನ್ನೆಲೆಯುಳ್ಳ ಹನ್ನೊಂದು ಮಂದಿಯನ್ನು 6 ತಿಂಗಳ ಕಾಲ ದ.ಕ.ಜಿಲ್ಲೆಯಿಂದ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ. ಜಿಲ್ಲಾ ಪೊಲೀಸ್ ಅಧೀಕ್ಷಕರ ವರದಿಯ ಆಧಾರದ ಮೇಲೆ ತನಿಖೆ ನಡೆಸಿರುವ ಜಿಲ್ಲಾಧಿಕಾರಿ, ಅಪರಾಧ ಪ್ರವೃತ್ತಿಯುಳ್ಳ, ಸಮಾಜದ ಸ್ವಾಸ್ಥ್ಯಕ್ಕೆ ಗಂಡಾಂತರಕಾರಿಯಾಗಿರುವ ಆರೋಪದಲ್ಲಿ ಇವರನ್ನು ಗಡಿಪಾರು ಮಾಡಿದ್ದಾರೆ. ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಹಿಂದೆ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ಜಯರಾಜ್ ರೈ ಯಾನೆ ಜಯರಾಜ ಶೆಟ್ಟಿ, ಪುತ್ತೂರು ನಗರ ಠಾಣಾ ವ್ಯಾಪ್ತಿಯ ಇಬ್ರಾಹಿಂ ಯಾನೆ ಇಬ್ಬಿ , ಹಕೀಂ ಕೂರ್ನಡ್ಕ ಯಾನೆ ಅಬ್ದುಲ್, ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಅಬೂಬಕ್ಕರ್ ಸಿದ್ದೀಕ್ ಯಾನೆ ಜೆಸಿಬಿ ಸಿದ್ದೀಕ್ ಯಾನೆ ಸಿದ್ದೀಕ್ 34ನೆಕ್ಕಿಲಾಡಿ, ಉಬೈದ್ ಬಿ.ಎಸ್.ಯಾನೆ ಉಬೈದ್ ಕುಪ್ಪೆಟ್ಟಿ, , ತಸ್ಲೀಂ ಯಾನೆ ತಸಲೀಂ ತಣ್ಣೀರುಪಂಥ, ಬೆಳ್ಳಾರೆ ಠಾಣಾ ವ್ಯಾಪ್ತಿಯ ರೋಷನ್, ಪ್ರಸಾದ್…
ಮೈಸೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಸಂಸದ ಆರ್. ಧ್ರುವ ನಾರಾಯಣ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಹಠಾತ್ ಹೃದಯಾಘಾತ ಸಂಭವಿಸಿದ ಕೂಡಲೇ ಅವರನ್ನು ಮೈಸೂರಿನ ಡಿಆರ್ಎಂಎಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ. 1961 ಜುಲೈ 31ರಂದು ಚಾಮರಾಜನಗರ ಜಿಲ್ಲೆಯ ಹೆಗ್ಗವಾಡಿ ಗ್ರಾಮದಲ್ಲಿ ಜನನಿಸಿದ್ದ ಧ್ರುವನಾರಾಯಣ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಿಂದ ಬಿಎಸ್ಸಿ ಕೃಷಿ ಪದವಿ ಪಡೆದುಕೊಂಡಿದ್ದರು. ನಂತರ ಸ್ನಾತಕೋತ್ತರ ಪದವಿ ಪಡೆದು, 1983ರಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಕಾಂಗ್ರೆಸ್ಗೆ ಸೇರ್ಪಡೆಗೊಂಡಿದ್ದರು. 2004ರಲ್ಲಿ ಸಂತೇಮರಹಳ್ಳಿ ವಿಧಾನ ಸಭಾ ಕ್ಷೇತ್ರ ಹಾಗೂ 2008ರಲ್ಲಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರಗಳಿಂದ ಸತತ ಎರಡು ಬಾರಿ ಶಾಸಕರಾಗಿ ಜಯ ಗಳಿಸಿದ್ದರು. 1999ರಲ್ಲಿ ಸಂತೇಮರಹಳ್ಳಿ ಕ್ಷೇತ್ರದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಎ.ಆರ್. ಕೃಷ್ಣಮೂರ್ತಿ ಅವರ ಎದುರು ಪರಾಜಿತರಾದರು. ಆದರೆ ಇದೇ ಕೃಷ್ಣಮೂರ್ತಿ ಅವರನ್ನು 2004ರ ವಿಧಾನಸಭಾ ಚುನಾವಣೆಯಲ್ಲಿ ಕೇವಲ 1 ಮತದಿಂದ ಧೃವನಾರಾಯಣ ಸೋಲಿಸಿದ್ದರು. ಹಾಗೆಯೇ 2009 ಹಾಗೂ 2014ರ ಲೋಕಸಭಾ ಚುನಾವಣೆಯಲ್ಲಿ ಕೂಡ ಕೃಷ್ಣಮೂರ್ತಿ ಅವರನ್ನು ಸೋಲಿಸಿ…
ಬೆಂಗಳೂರು : 5 ಮತ್ತು 8 ನೇ ತರಗತಿಯ ಪಬ್ಲಿಕ್ ಪರೀಕ್ಷೆ ರದ್ದುಗೊಳಿಸಿ ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ಹೊರಡಿಸಿದೆ. ಈ ಬಾರಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ರಾಜ್ಯದ 5ನೇ ತರಗತಿ ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಯನ್ನು ನಡೆಸಲು ನಿರ್ಧರಿಸಿತ್ತು, ಆದರೆ ಇದೀಗ ಹೈಕೋರ್ಟ್ ಏಕಸದಸ್ಯ ಪೀಠ ಬೋರ್ಡ್ ಪರೀಕ್ಷೆ ರದ್ದುಗೊಳಿಸಿ ಆದೇಶ ಹೊರಡಿಸಿದೆ.ಮುಂದಿನ ವರ್ಷದಿಂದ ಪರೀಕ್ಷೆ ನಡೆಸಬಹುದು, ಆಯಾ ನಿಯಮಗಳಿಗನುಸಾರವಾಗಿ ಪರೀಕ್ಷೆ ನಡೆಸಬಹುದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. 2022-23ನೇ ಸಾಲಿನಿಂದ 5ನೇ ತರಗತಿ ಮತ್ತು 8ನೇ ತರಗತಿ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ಪರಿಶೀಲನೆಗಾಗಿ ಪಬ್ಲಿಕ್ ಪರೀಕ್ಷೆ ನಡೆಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನಿರ್ಧರಿಸಿತ್ತು, ರಾಜ್ಯ ಪಠ್ಯಕ್ರಮವನ್ನು ಅನುಸರಿಸುತ್ತಿರುವ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ 5ನೇ ತರಗತಿ ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನಿರ್ಧರಿಸಿತ್ತು, ಶಿಕ್ಷಣ ಇಲಾಖೆಗೆ ನಿರ್ಧಾರಕ್ಕೆ…










