ಉಳ್ಳಾಲ: ಬೆಂಗಳೂರಿಂದ ಮಂಗಳೂರಿನ ನರಿಂಗಾನ ಗ್ರಾಮದ ತೌಡುಗೋಳಿಗೆ ಕಾರಲ್ಲಿ ಸಾಗಿಸಲಾಗುತ್ತಿದ್ದ 2 ಲಕ್ಷ ಮೌಲ್ಯದ ಎಮ್ ಡಿಎಮ್ ಎ ಮತ್ತು ಗಾಂಜಾವನ್ನು ಕೊಣಾಜೆ ಪೊಲೀಸರು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದು, ನಾಲ್ವರು ಆರೋಪಿಗಳನ್ನ ಬಂಧಿಸಿದ್ದಾರೆ. ಬೆಂಗಳೂರಿಂದ ನರಿಂಗಾನ ಗ್ರಾಮದ ತೌಡುಗೋಳಿಗೆ ಗಾಂಜಾ ಮತ್ತು ಎಮ್ ಡಿಎಮ್ ಎ ಮಾದಕ ವಸ್ತುವನ್ನ ತರುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಕೊಣಾಜೆ ಪಿಎಸ್‌ಐ ಶರಣಪ್ಪ ತಂಡವು ನಿನ್ನೆ ರಾತ್ರಿ ಬೊಳಿಯಾರ್ ನಲ್ಲಿ ದಾಳಿ ನಡೆಸಿ ನಿಷೇದಿತ ಮಾದಕ ವಸ್ತು ಸಾಗಾಟ ಮಾಡುತ್ತಿದ್ದ ಮಾರುತಿ ಅಲ್ಟೊ ಕಾರ್ ಸಮೇತ ನಾಲ್ವರು ಆರೋಪಿಗಳನ್ನ ಬಂಧಿಸಿದ್ದಾರೆ. ನರಿಂಗಾನ ಗ್ರಾಮದ ನಿವಾಸಿಗಳಾದ ಮೊಯ್ದಿನ್ ಹಫೀಜ್ (36) ಮಹಮ್ಮದ್ ಸಿರಾಜ್ (43 ) ಅಡ್ಯಾರ್ ಕಟ್ಟೆ,ವಳಚ್ಚಿಲ್ ನಿವಾಸಿ ಇಕ್ಬಾಲ್ (30) ಕೋಡಿಕಲ್ ,ಅಶೋಕ ನಗರ ನಿವಾಸಿ ಮಹಮದ್ ಅಝೀಜ್ (33) ಬಂಧಿತ ಆರೋಪಿಗಳು. ಬಂಧಿತರಿಂದ 2,10,000 ಮೌಲ್ಯದ ನಿಷೇದಿತ 4 ಕೆ.ಜಿ ಗಾಂಜಾ, 40 ಗ್ರಾಂ.ಎಮ್ ಡಿಎಮ್ ಎ ಮತ್ತು 2…
Author: main-admin
ಬೆಂಗಳೂರು: ಮಹಾತ್ಮಾಗಾಂಧಿ ನರೇಗಾ ಯೋಜನೆಯಡಿ ಕೆಲಸಮಾಡಿವ ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ ಕೆಲಸದ ಪ್ರಮಾಣದಲ್ಲಿ ರಿಯಾಯಿತಿಯನ್ನು ನೀಡಿ ರಾಜ್ಯ ಸರ್ಕಾರ ಆದೇಶಿಸಿದೆ. ಈ ಕುರಿತಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಆಯುಕ್ತರು ಆದೇಶ ಹೊರಡಿಸಿದ್ದು, ಮಹಾತ್ಮಾಗಾಂಧಇ ನರೇಗಾ ಯೋಜನೆಯಡಿ ವಿಶೇಷ ಚೇತನರು ಮತ್ತು ಹಿರಿಯ ನಾಗರೀಕರಿಗೆ ದಿನ ಒಂದಕ್ಕೆ ನಿಗದಿತ ಕೂಲಿ ಪಡೆಯಲು ನಿರ್ವಹಿಸಬೇಕಾದ ಕೆಲಸದ ಪ್ರಮಾಣದಲ್ಲಿ ಶೇ.50ರಷ್ಟು ರಿಯಾಯಿತಿ ಇರುತ್ತದೆ ಎಂದಿದ್ದಾರೆ. ಇನ್ನೂ ಪ್ರಸ್ತುತ ಯೋಜನೆಯಡಿ ಮಹಿಳೆಯರ ಭಾಗವಹಿಸುವಿಕೆ ಪ್ರಮಾಣವು ಶೇ.51ರಷ್ಟು ಇದ್ದು, ಇದನ್ನು ಶೇ.60ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಯೋಜನೆಯ ಕಾಮಗಾರಿಗಳನ್ನು ಹೆಚ್ಚಿನ ಸಂಖ್ಯೆಲ್ಲಿ ಮಹಿಳೆಯರು ಭಾಗವಹಿಸುವಂತೆ ಮಾಡಲು ಈಗಾಗಲೇ ಶೇ.60ಕ್ಕಿಂತ ಹೆಚ್ಚಿನ ಪ್ರಮಾಣದ ಮಹಿಳೆಯರನ್ನು ಹೊಂದಿರುವ ಕಾಮಗಾರಿಗಳಲ್ಲಿ ಮಹಿಳೆಯರು ನಿರ್ವಹಿಸಬೇಕಾದ ಕೆಲಸದ ಪ್ರಮಾಣದಲ್ಲಿ ಶೇ.10ರಷ್ಟು ರಿಯಾಯಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಬೆಳ್ತಂಗಡಿ: ವ್ಯಕ್ತಿಯೋರ್ವ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಶಿಬಾಜೆ ಗ್ರಾಮದ ಗುತ್ತುಮನೆ ಎಂಬಲ್ಲಿ ನಡೆದಿದೆ. ರಾತ್ರಿ ಶೆಡ್‌ನಲ್ಲಿ ಮಲಗಿದ್ದ ಶ್ರೀದರ್ ಮೃತದೇಹವು ಇಂದು ಬೆಳಗ್ಗೆ ತೋಟದ ಬದಿಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಶ್ರೀಧರರಿಗೆ ಶನಿವಾರ ಸಂಜೆ ಮೂವರು ಸ್ಥಳೀಯರು ಹಲ್ಲೆ ನಡೆಸಿರುವುದನ್ನು ಸ್ಥಳೀಯರು ನೋಡಿದ್ದಾರೆ ಎನ್ನಲಾಗಿದೆ. ಬಳಿಕ ಶ್ರೀಧರ್ ತಾನು ಕೆಲಸ ಮಾಡುವ ಶೆಡ್‌ಗೆ ತೆರಳಿ ಮಲಗಿದ್ದು,ಆದರೆ ಬೆಳಗ್ಗೆ ಶ್ರೀಧರ ಶೆಡ್‌ನಲ್ಲಿ ಇಲ್ಲದಿರುವುದನ್ನು ಕಂಡು ಹುಡುಕಾಟ ನಡೆಸಿದಾಗ ತೋಟದ ಬದಿಯಲ್ಲಿ ಶ್ರೀಧರನ ಮೃತದೇಹ ಪತ್ತೆಯಗಿತ್ತು. ತೋಟದ ಬೇಲಿ ಕತ್ತರಿಸಲ್ಪಟ್ಟ ಸ್ಥಿತಿಯಲ್ಲಿ ಕಂಡು ಬಂದಿದ್ದು, ಹಲ್ಲೆ ನಡೆಸಿದ ತಂಡವೇ ರಾತ್ರಿ ಅಕ್ರಮವಾಗಿ ಶೆಡ್‌ಗೆ ಪ್ರವೇಶಿಸಿ ಶ್ರೀಧರ್ ಗೆ ಕೊಲೆ ಮಾಡಿರುವ ಶಂಕೆ ಇದೆ. ಇದಲ್ಲದೆ ಶ್ರೀಧರ್ ಬಳಿಯಿದ್ದ 9500 ರೂ.ಗಳನ್ನು ದೋಚಿರುವುದಾಗಿ ಧರ್ಮಸ್ಥಳ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಈ ಕುರಿತು ಧರ್ಮಸ್ಥಳ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಬೆಳಗಾವಿ : ಬೆಳಗಾವಿಯಲ್ಲಿ ಇಂದಿನಿಂದ ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ಇದಕ್ಕೂ ಮುನ್ನ ಸಾವರ್ಕರ್ ಸೇರಿದಂತೆ 7 ಮಹನೀರ ಭಾವಚಿತ್ರಗಳನ್ನು ರಾಜ್ಯ ಸರ್ಕಾರ ಅನಾವರಣ ಮಾಡಿದೆ. ವಿರೋಧದ ನಡುವೆಯೂ ಸುವರ್ಣಸೌಧದಲ್ಲಿ ಇಂದು ವೀರ ಸಾವರ್ಕರ್, ಸ್ವಾಮಿ ವಿವೇಕಾನಂದ, ಸುಭಾಷ್ ಚಂದ್ರ ಬೋಸ್, ಡಾ.ಬಿ.ಅರ್. ಅಂಬೇಸ್ಕರ್, ಬಸವಣ್ಣ, ಮಹಾತ್ಮ ಗಾಂಧೀಜಿ, ಸರ್ದರ್ ವಲ್ಲಭಬಾಯಿ ಪಟೇಲರ ಭಾವಚಿತ್ರಗಳನ್ನು ಅನಾವರಣ ಮಾಡಲಾಗಿದೆ. ಸ್ಪೀಕರ್ ವಿಶ್ವೇಶರ ಹೆಗಡೆ, ಸಿಎಂ ಬೊಮ್ಮಾಯಿ, ಸಚಿವ ಮಾಧುಸ್ವಾಮಿ ಅವರು ವೀರ ಸಾವರ್ಕರ್, ಸ್ವಾಮಿ ವಿವೇಕಾನಂದ, ಸುಭಾಷ್ ಚಂದ್ರ ಬೋಸ್, ಡಾ.ಬಿ.ಆರ್. ಅಂಬೇಡ್ಕರ್, ಬಸವಣ್ಣ, ಮಹಾತ್ಮ ಗಾಂಧೀಜಿ, ಸರ್ದರ್ ವಲ್ಲಭಬಾಯಿ ಪಟೇಲರ ಭಾವಚಿತ್ರಗಳನ್ನು ಅನಾವರಣ ಮಾಡಿದ್ದಾರೆ. ಸುವರ್ಣ ಸೌಧದಲ್ಲಿ ಸಾರ್ವಕರ್ ಫೋಟೋ ಅಳವಡಿಕೆಗೆ ನಮ್ಮ ವಿರೋಧವಿದೆ. ಬ್ರಿಟಿಷರ ಬಳಿ ಕ್ಷಮಾಪಣೆ ಕೇಳಿದ ವ್ಯಕ್ತಿಯ ಫೋಟೋವನ್ನು ಸುವರ್ಣಸೌಧದಲ್ಲಿ ಅಳವಡಿಕೆಗೆ ನಮ್ಮ ವಿರೋಧವಿದೆ ಎಂದು ಕಾಂಗ್ರೆಸ್ ನಾಯಕರು ಧರಣಿ ನಡೆಸುತ್ತಿದ್ದಾರೆ. ಸುವರ್ಣಸೌಧದ ಮೆಟ್ಟಿಲುಗಳ ಮೇಲೆ ಕಾಂಗ್ರೆಸ್ ನಾಯಕರು ಮಹರ್ಷಿ ವಾಲ್ಮೀಕಿ, ಬಸವಣ್ಣ, ಶಿಶುನಾಳ ಷರೀಫ, ಜವಹಾರ್ ಲಾಲ್…
ಮಂಗಳೂರು: ನಗರದ ಹೊರವಲಯದ ಮೂಲ್ಕಿ ಕೆರೆಕಾಡು ಎಂಬಲ್ಲಿ ಯುವಕನನ್ನು ಕಂಬಕ್ಕೆ ಕಟ್ಟಿ ಹಾಕಿ ತೀವ್ರವಾಗಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಲಯವು ಅವರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಿದೆ. ಕೆರೆಕಾಡು ಕೆಂಚನಕೆರೆ ನಿವಾಸಿಗಳಾದ ದಿವೇಶ್ ದೇವಾಡಿಗ(38), ರಾಜೇಶ್ ಹಾಗೂ ಯೋಗೇಶ್ ಕುಮಾರ್(46) ಬಂಧಿತ ಆರೋಪಿಗಳು. ಅವರನ್ನು ಬಂಧಿಸಿರುವ ಮುಲ್ಕಿ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಎಲ್ಲಾ ಮೂವರು ಆರೋಪಿಗಳಿಗೂ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಈ ನಡುವೆ ಹಲ್ಲೆಗೊಳಗಾದ ಹಳೆಯಂಗಡಿ ದಾವೂದ್ ಹಕೀಂ(33) ವಿರುದ್ಧ ಪೊಕ್ಸೊ ಪ್ರಕರಣ ದಾಖಲಾಗಿದ್ದು, ಆತನನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದಾವೂದ್ ಹಕೀಂ ಬಾಲಕಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಿ ಸಂಘ ಪರಿವಾರದ ಕಾರ್ಯಕರ್ತರೆನ್ನಲಾದ ಐವರ ತಂಡವು ಶನಿವಾರ ಕಂಬಕ್ಕೆ ಕಟ್ಟಿ ಹಾಕಿ ತೀವ್ರ ಹಲ್ಲೆ ನಡೆಸಿತ್ತು. ಬಳಿಕ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಹೊಯ್ಸಳ ಪೊಲೀಸರು, ದಾವೂದ್‌ನನ್ನು ವಶಕ್ಕೆ ಪಡೆದು ಮುಲ್ಕಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಇದೀಗ ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ…
ಮಂಗಳೂರು: ಈಗಿನ ಜನತೆಗೆ ಹೊಸ ವರ್ಷ ಎಂದರೇ ಮೋಜು, ಮಸ್ತಿ, ಪಾರ್ಟಿ.! ಕ್ಯಾಲೆಂಡರ್ ವರ್ಷ ಅಂತ್ಯಗೊಳ್ಳುತ್ತಿದ್ದು ಯುವಕ ಯುವತಿರು ಮೋಜು ಮಸ್ತಿಗೆ ಈಗಾಗಲೇ ಸಕಲ ಸಿದ್ಧತೆಯನ್ನು ಮಾಡಿರುತ್ತಾರೆ.. ಆದರೆ ಇಂತಹ ಅಶ್ಲೀಲ ನೃತ್ಯ ಮತ್ತು ಮಾದಕ ದ್ರವ್ಯಗಳ ಕಾರ್ಯಕ್ರಮಗಳಿಗೆ ಅನುಮತಿ ನೀಡಬಾರದಾಗಿ ವಿಶ್ವ ಹಿಂದೂ ಪರಿಷತ್ ಮಂಗಳೂರು ಆಗ್ರಹ ಮಾಡಿದೆ. ಹೊಸ ವರುಷದ ಹೆಸರಿನಲ್ಲಿ ತಾರೀಕು 31 ಡಿಸೆಂಬರ್ ನಂದು ಹಲವು ಹೋಟೆಲ್, ಪಬ್ ಗಳು ಮತ್ತು ಕೆಲವು ಸಾರ್ವಜನಿಕ ಸ್ಥಳಗಳಲ್ಲಿ ಪಾರ್ಟಿ, ಅಶ್ಲೀಲ ನೃತ್ಯ ಮತ್ತು ಮಾದಕ ದ್ರವ್ಯಗಳ ಪಾನ ಪಾರ್ಟಿಗಳನ್ನು ಆಯೋಜನೆ ಮಾಡಿದ್ದಾರೆ. ಹೊಸ ವರುಷದ ಹೆಸರಿನಲ್ಲಿ ನಡೆಯುವ ಕಾರ್ಯ ಕ್ರಮಗಳು ಪಾಶ್ಚಾತ್ಯ ಸಂಸ್ಕೃತಿಯಿಂದ ಕೂಡಿದೆ ಎಂದು ಜರಂಗದಳ ತೀವ್ರವಾಗಿ ವಿರೋಧಿಸಿದೆ. ಈಗಾಗಲೇ ಲವ್ ಜಿಹಾದ್ ಹೆಸರಿನಲ್ಲಿ ಮುಗ್ಧ ಹೆಣ್ಣುಮಕಳನ್ನು ಮೊಸಗೊಳಿಸಿ ಅವರನ್ನು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪ್ರಚೋದನೆ ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಈಗಾಗಲೇ ಕೇರಳ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಕೆಲವೊಂದು ಯುವಕರು ಇಂತಹ ಕೃತ್ಯಗಳಲ್ಲಿ ಸಕ್ರೀಯರಾಗಿದ್ದು,…
ವಿಯೆಟ್ನಾಂ: ತನ್ನ ಮಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಪತಿಯ ಕೃತ್ಯದಿಂದ ಬೇಸತ್ತ ಪತ್ನಿ ಆತನ ಮರ್ಮಾಂಗವನ್ನೇ ಕತ್ತರಿಸಿದ ಘಟನೆ ವಿಯೆಟ್ನಾಂನಲ್ಲಿ ನಡೆದಿದೆ. ಹಾ ಥಿ ನ್ಗುಯೆನ್ ಎಂದು ಗುರುತಿಸಲ್ಪಟ್ಟ ಮಹಿಳೆ ತನ್ನ 29 ವರ್ಷದ ಪತಿ ನ್ಗುಯೆನ್ ವ್ಯಾನ್ ಹೆಚ್ ಅವನ ಮರ್ಮಾಂಗವನ್ನು ಕತ್ತರಿಸಿದ್ದಾಳೆ. ವ್ಯಾನ್ ಹೆಚ್ ತನ್ನ ಮೊದಲ ಪತ್ನಿಯ 15 ವರ್ಷದ ಮಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಈ ಬಗ್ಗೆ ಬಾಲಕಿ ಹಲವು ಬಾರಿ ಹಾ ಥಿಗೆ ದೂರು ನೀಡಿದ್ದಳು. ಆದ್ರೆ, ಇದನ್ನು ಪತಿ ನಿರಾಕರಿಸಿದ್ದ. ಆದ್ರೆ, ಒಂದು ದಿನ ವ್ಯಾನ್ ಹೆಚ್ ಸಿಕ್ಕಿ ಬಿದ್ದಿದ್ದಾನೆ. ಈ ವೇಳೆ ಕೋಪಗೊಂಡ ಮಹಿಳೆ ಚಾಕುವಿನಿಂದ ಮರ್ಮಾಂಗವನ್ನೇ ಕತ್ತರಿಸಿ ಎಸೆದಿದ್ದಾಳೆ. ನಂತ್ರ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಈ ಘಟನೆಯು ಮಾರ್ಚ್ 2022 ರಲ್ಲಿ ವಾಯುವ್ಯ ವಿಯೆಟ್ನಾಂನ ಸೋನ್ ಲಾ ಪ್ರಾಂತ್ಯದಲ್ಲಿ ಸಂಭವಿಸಿದೆ.
ನಿತ್ಯದ ಅಡುಗೆಯಲ್ಲಿ ನಾವು ಟೊಮೆಟೋ ಬಳಸುತ್ತೇವೆ. ಪ್ರತಿದಿನ ಟೊಮೆಟೋ ತಿನ್ನೋದ್ರಿಂದ ಹಲವು ಪ್ರಯೋಜನಗಳಿವೆ. ಹೊಟ್ಟೆ ಕ್ಯಾನ್ಸರ್ ನಿಂದ್ಲೂ ನೀವು ಬಚಾವ್ ಆಗ್ಬಹುದು. ಟೊಮೆಟೋ ಮತ್ತು ಟೊಮೆಟೋ ರಸ ಉತ್ಪಾದಿಸುವ ಜೀವಕೋಶಗಳು, ಕ್ಲೋನಿಂಗ್ ಅನ್ನು ತಡೆಯುತ್ತವೆ. ಅದರಿಂದಾಗಿ ಹೊಟ್ಟೆ ಕ್ಯಾನ್ಸರ್ ಬರುವುದಿಲ್ಲ. ಟೊಮೆಟೋ, ಕ್ಯಾನ್ಸರ್ ಜೀವಕೋಶಗಳನ್ನು ಸಾಯಿಸಲು ನೆರವಾಗುತ್ತದೆ. ಸ್ಯಾನ್ ಮರ್ಜಾನೋ ಹಾಗೂ ಇತರ ಟೊಮೆಟೋಗಳಲ್ಲಿ ಈ ಶಕ್ತಿಯಿದೆ. ಕರುಳಿನ ಕ್ಯಾನ್ಸರ್ ಗೆ ಇದೊಂದು ಉತ್ತಮ ಮನೆ ಮದ್ದು. ಚಿಕಿತ್ಸೆ ವೇಳೆ ಟೊಮೆಟೋ ಪ್ಯೂರೆ ಬಳಸುವುದರಿಂದ ಕ್ಯಾನ್ಸರ್ ಜೀವಕೋಶಗಳ ಕಾರ್ಯಾಚರಣೆಯನ್ನು ತಡೆಯಬಹುದು. ಜೊತೆಗೆ ಕ್ಯಾನ್ಸರ್ ಸೆಲ್ಸ್ ಟ್ರಾನ್ಸ್ ಫರ್ ಪ್ರಕ್ರಿಯೆ ಮೇಲೂ ಇದು ಪರಿಣಾಮ ಬೀರುವುದರಿಂದ, ಅವು ತಾನಾಗಿಯೇ ಸಾಯುತ್ತವೆ. ಈ ಬಗ್ಗೆ ಇನ್ನಷ್ಟು ಸಂಶೋಧನೆಯ ಅಗತ್ಯವಿದೆ ಎನ್ನುತ್ತಾರೆ ವಿಜ್ಞಾನಿಗಳು. ಗ್ಯಾಸ್ಟ್ರಿಕ್ ಕ್ಯಾನ್ಸರ್ ಅಥವಾ ಕರುಳಿನ ಕ್ಯಾನ್ಸರ್ ಈಗ ವಿಶ್ವದಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಕರುಳಿನ ಕ್ಯಾನ್ಸರ್ ಗೆ ಜೆನೆಟಿಕ್ಸ್, ನಾವು ಸೇವಿಸುವ ಆಹಾರ, ಹೆಲಿಕೋಬ್ಯಾಕ್ಟರ್ ಸೋಂಕು ಸೇರಿದಂತೆ ಹಲವು ಅಂಶಗಳು ಕಾರಣ. ಇದರ…
ಮುಲ್ಕಿ: ಅಪ್ರಾಪ್ತೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಲ್ಲದೇ, ಆಕೆಗೆ ಕಿರುಕುಳ ನೀಡುತ್ತಿದ್ದ ಯುವಕನನ್ನು ಪೋಷಕರು ಹಾಗೂ ಗ್ರಾಮಸ್ಥರೇ ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗ ಥಳಿಸಿರುವ ಘಟನೆ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಡಿಸೆಂಬರ್ 13 ರಂದು ಇಲ್ಲಿನ ಕರೆಕಾಡು ಪ್ರದೇಶದಲ್ಲಿ ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅದೇ ಊರಿನವನಾಗಿದ್ದ ಯುವಕ ದಿನವೂ ಬಾಲಕಿಯನ್ನು ಬೈಕ್‌ನಲ್ಲಿ ಹಿಂಬಾಲಿಸಿ ಅಸಭ್ಯವಾಗಿ ವರ್ತಿಸುತ್ತಿದ್ದ, ಅಲ್ಲದೇ ಬಾಲಕಿಗೆ ಕಿರುಕುಳ ನೀಡುತ್ತಿದ್ದ. ಬಾಲಕಿಯಿಂದ ವಿಷಯ ತಿಳಿದ ಪೋಷಕರು ಮರುದಿನ ಹಿಂಬಾಲಿಸಿ, ಕಿರುಕುಳ ನೀಡುತ್ತಿದ್ದ ವೇಳೆ ಯುವಕನನ್ನು ಹಿಡಿದು ಕಂಬಕ್ಕೆ ಕಟ್ಟಿ ಮನಬಂದಂತೆ ಥಳಿಸಿದ್ದಾರೆ. ಸ್ಥಳೀಯರೂ ಇದಕ್ಕೆ ಸಾಥ್ ನೀಡಿದ್ದು, ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.
ಬೆಂಗಳೂರು: ರಾಜ್ಯ ಸರ್ಕಾರದಿಂದ ( Karnataka Government ) ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸೋ ಸಲುವಾಗಿ 45 ಡಿವೈಎಸ್ಪಿ ಹಾಗೂ 8 ಪೊಲೀಸ್ ಇನ್ಸ್ ಪೆಕ್ಟರ್ ಗಳನ್ನು ವರ್ಗಾವಣೆಗೊಳಿಸಿ ( DYSP and PI Transfer ) ಆದೇಶಿಸಿದೆ. ಈ ಕುರಿತಂತೆ ಪೊಲೀಸ್ ಇಲಾಖೆಯಿಂದ ಅಧಿಸೂಚನೆ ಹೊರಡಿಸಲಾಗಿದ್ದು, ಈ ಕೂಡಲೇ ಜಾರಿಗೆ ಬರುವಂತೆ 45 ಡಿವೈಎಸ್ ಪಿ ಸಿವಿಲ್ ಅವರನ್ನು ವರ್ಗಾವಣೆಗೊಳಿಸಿ ಆದೇಶಿಸಿದ್ದಾರೆ.










