ಮಂಗಳೂರು: ದೇಹದಲ್ಲಿ ಬಚ್ಚಿಟ್ಟು ಚಿನ್ನ ಸಾಗಾಟ ಮಾಡುತ್ತಿರುವುದನ್ನು ಮಂಗಳೂರು ಕಸ್ಟಮ್ಸ್ ಅಧಿಕಾರಿಗಳು ಕಂಡು ಹಿಡಿದಿದ್ದಾರೆ. ದುಬೈನಿಂದ ಮಂಗಳೂರಿಗೆ ಬಂದ ಪ್ರಯಾಣಿಕ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದು, ತಪಾಸಣೆ ವೇಳೆ 45,83,160 ರೂ. ಮೌಲ್ಯದ 24 ಕ್ಯಾರೆಟ್‌ನ 878 ಗ್ರಾಂ ಚಿನ್ನವನ್ನು ಪತ್ತೆಹಚ್ಚಿದ್ದಾರೆ. ಬಂಟ್ವಾಳ ಮೂಲದ ಪ್ರಯಾಣಿಕ ಚಿನ್ನವನ್ನು ಪೌಡರ್ ರೂಪದಲ್ಲಿ ಅಂಡಾಕಾರದ ಪ್ಯಾಕೆಟ್‌ಗಳಲ್ಲಿಟ್ಟು ಅಕ್ರಮವಾಗಿ ಸಾಗಿಸುತ್ತಿದ್ದ ಚಿನ್ನ ಮತ್ತು ಪ್ರಯಾಣಿಕನನ್ನು ವಶಕ್ಕೆ ಪಡೆದುಕೊಂಡು ಕಸ್ಟಮ್ಸ್ ಅಧಿಕಾರಿಗಳು ವಿಚಾರಣೆ ಮುಂದುವರಿಸಿದ್ದಾರೆ.
Author: main-admin
ಬೆಳ್ತಂಗಡಿ: ಶ್ರೀಕ್ಷೇತ್ರ ಧರ್ಮಸ್ಥಳದಿಂದ ಇತಿಹಾಸ ಪ್ರಸಿದ್ಧ ವೇಣೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ಕೆ ವಿಶೇಷ ಅನುದಾನ ದೊರಕಿದೆ. ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು 15 ಲಕ್ಷ ರೂ. ಮೊತ್ತದ ಚೆಕ್ ಅನ್ನು ವೇಣೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು. ಶ್ರೀಕ್ಷೇತ್ರ ಧರ್ಮಸ್ಥಳದಿಂದ ವಿವಿಧ ದೇವಸ್ಥಾನಗಳ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಪುರಾತನ ದೇವಸ್ಥಾನಗಳ ಜೀರ್ಣೋದ್ಧಾರ, ಪುನರ್ನಿರ್ಮಾಣ ಕಾರ್ಯಗಳನ್ನು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ವಿಶೇಷ ಆಸ್ಥೆವಹಿಸಿ ಮಾಡಿ ಅನುದಾನವನ್ನು ನೀಡುತ್ತಾರೆ. ಈ ಹಿನ್ನೆಲೆಯಲ್ಲಿ ವೇಣೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೂ ಅನುದಾನ ಹೆಗ್ಗಡೆಯವರು ನೀಡಿದ್ದಾರೆ.
ಕುಂದಾಪುರ : ಕುಡಿದ ಮತ್ತಿನಲ್ಲಿ ಪತ್ನಿಯನ್ನು ಕೊಂದು ಕೊನೆಗೆ ತಾನೂ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂದಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯ ದೇವಲ್ಮುಂದ ಶಾಲೆ ಸಮೀಪ ನಡೆದಿದೆ. ಕೊಲೆಯಾದ ಮಹಿಳೆ ಸೊರಬ ನಿವಾಸಿ ಆಗಿರುವ ಪೂರ್ಣಿಮಾ ಆಚಾರ್ಯ(38) ಕೋಗಾರ್ ಮೂಲದ ರವಿ ಆಚಾರ್ಯ (42) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ . ಸೊರಬ ನಿವಾಸಿಯಾಗಿರುವ ಪೂರ್ಣಿಮಾ ಅವರು ರವಿ ಆಚಾರ್ಯ ಅವರನ್ನು ಕಳೆದ ಹದಿನಾರು ವರ್ಷಗಳ ಹಿಂದೆ ವಿವಾಹವಾಗಿದ್ದರು. ಇನ್ನು ಟಿಪ್ಪರ್ ಚಾಲಕನಾಗಿರುವ ರವಿ ಹೆಮ್ಮಾಡಿ ಸಮೀಪದ ಬಗ್ದಾಡಿಯಲ್ಲಿ ಟಿಪ್ಪರ್ ಚಾಲಕನಾಗಿ ದುಡಿಯುತ್ತಿದ್ದು, ಪತಿ ಹಾಗೂ ಪತ್ನಿ ತಮ್ಮ ಎರಡು ಮಕ್ಕಳೊಂದಿಗೆ ಮೊದಲು ಇಲ್ಲಿಯೇ ನೆಲೆಸಿದ್ದರು. ಆದರೆ ವಿಪರೀತ ಕುಡಿತದ ಚಟ ಹೊಂದಿರುವ ರವಿ ಕುಡಿದು ಪ್ರತಿನಿತ್ಯ ಗಲಾಟೆ ಮಾಡುತ್ತಿದ್ದು, ಪತ್ನಿಗೂ ಕಿರುಕುಳ ನೀಡುತ್ತಿದ್ದನು. ಈ ಹಿನ್ನೆಲೆ ಮನೆಯವರು ಮಾತುಕತೆ ನಡೆಸಿ ಆ ಬಳಿಕ ಪತಿಯಿಂದ ದೂರ ಉಳಿದುಕೊಂಡಿದ್ದ ಪತ್ನಿ ಪೂರ್ಣಿಮಾ ತಮ್ಮ ಇಬ್ಬರು ಮಕ್ಕಳೊಂದಿಗೆ ತಾಯಿಯ ಮನೆ ಸೊರಬದಲ್ಲಿ ನೆಲೆಸಿದ್ದರು.…
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಿಂದ ಬ್ರೆಡ್ ತರಲೆಂದು ಹೋಗಿದ್ದ 8 ವರ್ಷದ ಅಲಿ ಇಸ್ಲಾಂ ಸಾದಾ ಎಂಬ ಬಾಲಕ ಎರಡು ದಿನಗಳ ಹಿಂದೆ ಅಪಹರಣಕ್ಕೊಳಗಾಗಿದ್ದು, ಇದೀಗ ಗೋವಾದಲ್ಲಿ ಪತ್ತೆಯಾಗಿದ್ದಾನೆ ಎಂದು ತಿಳಿದು ಬಂದಿದೆ. ಬಾಲಕನನ್ನು ಕಾರಿನಲ್ಲಿ ಬಂದು ಕಿಡ್ನಾಪ್ ಮಾಡಲಾಗಿದ್ದು, ಕಿಡ್ನಾಪ್ ಮಾಡಿದ್ದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಕಾರ್ಯಚರಣೆ ಮುಂದುವರೆಸಿದ ಭಟ್ಕಳ ನಗರ ಠಾಣೆ ಪೊಲೀಸರು ಇದೀಗ ಬಾಲಕನನ್ನು ಗೋವಾದಲ್ಲಿ ಪತ್ತೆ ಮಾಡಿ ರಕ್ಷಿಸಿದ್ದಾರೆ.ಇನ್ನು ಬಾಲಕನ ಕುಟುಂಬದವರು ಪೊಲೀಸ್ ಠಾಣೆಯಲ್ಲಿ ಬಾಲಕ ನಾಪತ್ತೆ ಬಗ್ಗೆ ದೂರು ನೀಡಿದ್ದು, ಪರಿಶೀಲನೆ ನಡೆಸಿದಾಗ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಬಾಲಕನನ್ನು ಕಿಡ್ನಾಪ್ ಮಾಡಿದ್ದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು.ಕೌಟುಂಬಿಕ ದ್ವೇಷದ ಕಾರಣಕ್ಕೆ ಬಾಲಕನನ್ನು ಅಪಹರಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಹಾಸನ : ಸಕಲೇಶಪುರ ತಾಲ್ಲೂಕಿನ ಕೊಲ್ಲಹಳ್ಳಿ ಗ್ರಾಮದಲ್ಲಿ ಹೈವೇಯನ್ನು ಒಂಟಿ ಸಲಗ ಪ್ರತ್ಯಕ್ಷಗೊಂಡಿದ್ದು, ಗ್ರಾಮದಲ್ಲಿ ಕಾಡಾನೆಗಳು ಜನರಲ್ಲಿ ಆತಂಕ ಸೃಷ್ಟಿ ಮಾಡ್ತಿದೆ. ಬೆಂಗಳೂರು-ಮಂಗಳೂರು ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಆನೆ ನೋಡಿ ಸವಾರರು ವಾಹನವನ್ನು ನಿಲ್ಲಿಸಿದ್ದಾರೆ. ಎರಡು ಬದಿ ಸಂಚಾರ ಸ್ಥಗಿತಗೊಳಿಸಿ ಕಾಡಾನೆ ದಾಟಲು ಅವಕಾಶ ಮಾಡಿಕೊಟ್ಟಿದ್ದಾರೆ. ಇನ್ನೊಂದೆಡೆ ಸಕಲೇಶಪುರ ಪಟ್ಟಣದ ಸಮೀಪವೇ ಕಾಡಾನೆ ಬಂದಿದೆ. ಭತ್ತದ ಗದ್ದೆಯಲ್ಲಿ ಓಡಾಡಿ ಬೆಳೆಯನ್ನು ನಾಶ ಮಾಡಿದೆ. ಕಾಡಾನೆ ನೋಡಿ ಗ್ರಾಮಸ್ಥರು ಭಯಗೊಂಡಿದ್ದಾರೆ.
ಮಂಡ್ಯ: ಚಿನ್ನದ ಉದ್ಯಮಿಯಿಂದ ಹನಿಟ್ರ್ಯಾಪ್ ಮಾಡಿ ಸುಮಾರು 50 ಲಕ್ಷ ರೂ.ಹಣ ಸುಲಿಗೆ ಮಾಡಿದ ಆರೋಪದಲ್ಲಿ ಮಹಿಳೆಯೊಬ್ಬರನ್ನು ನಗರದ ಪೊಲೀಸರು ಬಂಧಿಸಿದ್ದಾರೆ. ಮಂಡ್ಯ ವಿವಿ ರಸ್ತೆಯಲ್ಲಿರುವ ಶ್ರೀನಿಗೋಲ್ಡ್‌ನ ಮಾಲಕ ಮತ್ತು ಪಕ್ಷವೊಂದರ ವ್ಯಾಪಾರ ವಿಭಾಗದ ನಾಯಕ ಜಗನ್ನಾಥ್ ಎಸ್ ಗೆ ಈ ರೀತಿ ಹನಿಟ್ರ್ಯಾಪ್ ಮಾಡಲಾಗಿದೆ. ಘಟನೆಗೆ ಸಂಬಂಧಿಸಿ ಮಂಡ್ಯದ ಸುಭಾಷ್ ನಗರದ 8ನೇ ಕ್ರಾಸ್ ನಿವಾಸಿ ಸಲ್ಮಾಬಾನು ಹಾಗೂ ಜಯಂತ್ ನನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿಗೆ ತೆರಳಲು ಮಂಡ್ಯದ ಸಾರಿಗೆ ಬಸ್ ನಿಲ್ದಾಣದಲ್ಲಿ ಜಗನ್ನಾಥ್ ಎಸ್. ಶೆಟ್ಟಿ ನಿಂತಿದ್ದಾಗ ಆರೋಪಿಗಳಾದ ಸಲ್ಮಾಬಾನು ಹಾಗೂ ಜಯಂತ್ ಸೇರಿ ಇತರರು ಕಾರಿನಲ್ಲಿ ಬಂದು ಪರಿಚಯ ಮಾಡಿಕೊಂಡು ತಾವು ಮೈಸೂರಿಗೆ ತೆರಳುತ್ತಿದ್ದು,ಬನ್ನಿ ಎಂದು ಕಾರು ಹತ್ತಿಸಿಕೊಂಡಿದ್ದಾರೆ.ಅನಂತರ ನಮ್ಮ ಸ್ನೇಹಿತ ಮೈಸೂರಿನ ದರ್ಶನ್ ಲಾಡ್ಜ್ ನಲ್ಲಿ ಚಿನ್ನದ ಬಿಸ್ಕೆಟ್ ತಂದಿದ್ದಾನೆ. ಅದನ್ನು ಪರೀಕ್ಷಿಸಿ ಅಸಲಿಯೇ, ನಕಲಿಯೇ ಎಂದು ಹೇಳಿ ಎಂದು ಜಗನ್ನಾಥ್ ಗೆ ಲಾಡ್ಜ್ ಗೆ ಕರೆದುಕೊಂಡು ಹೋಗಿದ್ದಾರೆ. ಚಿನ್ನ ಪರಿಶೀಲಿಸಲು 5 ನಿಮಿಷ ಬನ್ನಿ…
ಬೆಂಗಳೂರು/ಕುಂದಾಪುರ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಆಗಸ್ಟ್ 22ರಿಂದ 24ರವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಈ ಹಿನ್ನೆಲೆಯಲ್ಲಿ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಸುಮಾರು ಹತ್ತು ದಿನಗಳಿಂದ ಬಿಡುವು ಪಡೆದಿದ್ದ ಮಳೆ ಮತ್ತೆ ಶುರುವಾಗುವ ಮುನ್ಸೂಚನೆ ನೀಡಿದೆ. ಅಲ್ಲದೇ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಕೋಲಾರದಲ್ಲಿ ಆ.23ರಿಂದ ಮುಂದಿನ ಎರಡು ದಿನ ಭಾರಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ. ಈ ವರ್ಷ ನಿರೀಕ್ಷೆಗೂ ಮೀರಿದ ಮಳೆಯಾಗಿದ್ದು ರಾಜ್ಯದಾದ್ಯಂತ ಭಾರೀ ಅನಾಹುತಗಳು ಸಂಭವಿಸಿದ್ದವು. ಇದರ ಬೆನ್ನಿಗೇ ವಿರಾಮ ಘೋಷಿಸಿದ್ದ ಮಳೆ ಮತ್ತೆ ಚುರುಕುಗೊಳ್ಳುವ ಸೂಚನೆ ಕರಾವಳಿಗರಿಗೆ ಆತಂಕ ಸೃಷ್ಟಿಸಿದೆ. ಅಲ್ಲದೇ ಮೀನುಗಾರಿಕೆಯನ್ನೇ ನಂಬಿ ಬದುಕುವ ಮೀನುಗಾರ ಕುಟುಂಬಗಳು ಕಂಗಾಲಾಗಿವೆ.
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಸುರತ್ಕಲ್ ಕಚೇರಿಯಲ್ಲಿ ವೀರ ಸಾವರ್ಕರ್ ಪೋಟೋ ಆಳಡಿಸಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. ಪಾಲಿಕೆಯ ಸುರತ್ಕಲ್‌ನ ಹೊಸ ವಲಯ ಕಚೇರಿ ನಿನ್ನೆ ಉದ್ಘಾಟನೆಗೊಂಡಿತ್ತು. ಅದರಲ್ಲಿರುವ ಮಂಗಳೂರು ಉತ್ತರ ಶಾಸಕ ವೈ ಭರತ್ ಶೆಟ್ಟಿ ತನ್ನ ಶಾಸಕ ಕಛೇರಿಯಲ್ಲಿ ಸಾವರ್ಕರ್ ಭಾವಚಿತ್ರ ಅಳವಡಿಸಿ ಉದ್ಘಾಟನೆ ವೇಳೆ ಅದಕ್ಕೆ ಪುಷ್ಪಾರ್ಚನೆಗೈದು ಗೌರವ ಸೂಚಿಸಿದ್ದಾರೆ. ಅಲ್ಲದೆ ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ನೇತೃತ್ವದಲ್ಲಿ ಬಿಜೆಪಿ ನಾಯಕರು ಮಂಗಳೂರು ನಗರ ಹೊರವಲಯದ ಸುರತ್ಕಲ್ ಜಂಕ್ಷನ್‍ಗೆ ಸಾವರ್ಕರ್ ಹೆಸರಿಡಲು ಒತ್ತಾಯಿಸಿದ್ದಾರೆ. ಈ ಕುರಿತು ಶಾಸಕ ಭರತ್ ಶೆಟ್ಟಿ ಅವರು ಕಳೆದ ವರ್ಷವೇ ಮಹಾನಗರ ಪಾಲಿಕೆಗೆ ಅರ್ಜಿ ಸಲ್ಲಿಸಿದ್ದರು. ಅತ್ಯಂತ ಸೂಕ್ಷ್ಮ ಪ್ರದೇಶವಾಗಿರುವ ಸುರತ್ಕಲ್ ಜಂಕ್ಷನ್‍ಗೆ ಸಾವರ್ಕರ್ ಹೆಸರಿಡುವ ಪ್ರಸ್ತಾಪ ತೀವ್ರ ಚರ್ಚೆಗೆ ಕಾರಣವಾಗಿದೆ. ಹಿಂದೂ ಸಂಘಟನೆಗಳು, ಸ್ಥಳೀಯರು ಸಾವರ್ಕರ್ ಹೆಸರಿಡಲು ಮನವಿ ಸಲ್ಲಿಸಿದ್ದರು. ಒಂಬತ್ತು ತಿಂಗಳ ಹಿಂದೆ ಈ ಪ್ರಕ್ರಿಯೆ ಶುರು ಆಗಿದೆ. ಸ್ವಾತಂತ್ರ್ಯ ಸೇನಾನಿ ವೀರಸಾವರ್ಕರ್ ವಿರುದ್ಧ ಯಾಕೆ ಈ ಮನಸ್ಥಿತಿಯಲ್ಲಿದ್ದಾರೆ…
ಉಡುಪಿ: ಶುಕ್ರವಾರದಿಂದ ಮೊದಲ್ಗೊಂಡ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ ಮುಗಿಲು ಮುಟ್ಟಿದೆ. ನಿನ್ನೆ (ಶನಿವಾರ) ನಡೆದ ವಿಟ್ಲಪಿಂಡಿ ಮಹೋತ್ಸವದಲ್ಲಿ ಸಾವಿರಾರು ಭಕ್ತರು ಭಕ್ತಿಸಾಗರದಲ್ಲಿ ಮಿಂದೆದ್ದರು. ಪರ್ಯಾಯ ಮಠಾಧೀಶರಾದ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಶ್ರೀಕೃಷ್ಣನಿಗೆ ಯಶೋಧೆ ಅಲಂಕಾರ ಮಾಡಿ ವಿಶೇಷ ಪೂಜೆ ನಡೆಸಿದರೆ, ಸಾವಿರಾರು ಭಕ್ತರು ಕೃಷ್ಣನ ದರ್ಶನ ಮಾಡಿ ಕೃತಾರ್ಥರಾದರು. ಶನಿವಾರ ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಕೃಷ್ಣಮಠದ ರಥಬೀದಿಗೆ ಭಕ್ತರ ದಂಡೇ ಹರಿದುಬಂತು. ರಥಬೀದಿಯಲ್ಲಿ ಹುಲಿ ಕುಣಿತ ಪ್ರದರ್ಶನ ನಡೆಯಿತು. ವಿವಿಧ ವೇಷಧಾರಿಗಳು ನೆರೆದ ಭಕ್ತರನ್ನು ರಂಜಿಸಿದರು. ರಥಬೀದಿಯಲ್ಲಿ ಸಾಂಪ್ರದಾಯಿಕ ಮೊಸರು ಕುಡಿಕೆ ಒಡೆಯುವ ಆಚರಣೆ ನಡೆಯಿತು. ಮಧ್ಯಾಹ್ನ ಮೂರೂವರೆ ಸುಮಾರಿಗೆ ಗೊಲ್ಲರು ಕೃಷ್ಣಮಠದ ಮುಂಭಾಗ ಮೊಸರು ಕುಡಿಕೆಗಳನ್ನು ಒಡೆಯುವುದರೊಂದಿಗೆ ವಿಟ್ಲಪಿಂಡಿಗೆ ಚಾಲನೆ ದೊರೆಯಿತು. ಬಳಿಕ ಕೃಷ್ಣನ ಮೃಣ್ಮಯ ಮೂರ್ತಿಯನ್ನು ಚಿನ್ನದ ರಥದಲ್ಲಿಟ್ಟು ವೈಭವದ ಶೋಭಾಯಾತ್ರೆ ನಡೆಸಲಾಯಿತು. ಕೊರೊನಾ ಮಹಾಮಾರಿ ಕಾರಣದಿಂದಾಗಿ ಕಳೆದ ಎರಡು ವರ್ಷ ಸರಳವಾಗಿ ಅಷ್ಟಮಿ ಆಚರಣೆ ನಡೆದಿತ್ತು. ಈ ಬಾರಿ ನಡೆದ ಉತ್ಸವದಲ್ಲಿ ಹೊರ ಜಿಲ್ಲೆ ಮತ್ತು…
ಹೊಸದಿಲ್ಲಿ: ಹಿಮಾಚಲಪ್ರದೇಶ ಮತ್ತು ಉತ್ತರಾಖಂಡದಲ್ಲಿ ಮೇಘಸ್ಪೋಟದಿಂದಾಗಿ ಸಾವನ್ನಪ್ಪುತ್ತಿರುವ ಸಂಖ್ಯೆ ಹೆಚ್ಚುತ್ತಲೇ ಇದ್ದು, ಸಾವಿನ ಸಂಖ್ಯೆ 31ಕ್ಕೆ ಏರಿಕೆಯಾಗಿದೆ. ಈ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದ್ದು, ಈಗಾಗಲೇ 18 ಮಂದಿ ಅವಶೇಷಗಳಡಿ ಸಿಲುಕಿ ನಾಪತ್ತೆಯಾಗಿದ್ದಾರೆ. ಶುಕ್ರವಾರ ತಡರಾತ್ರಿ ಜನರೆಲ್ಲರೂ ಗಾಢ ನಿದ್ರೆಯಲ್ಲಿದ್ದ ವೇಳೆ ಮೇಘಸ್ಪೋಟ ಸಂಭವಿಸಿದೆ. ಕಳೆದೆರಡು ದಿನಗಳಿಂದ ಅವಶೇಷಗಳಡಿ ಸಿಲುಕಿರುವವರ ಪತ್ತೆ ಕಾರ್ಯ ನಡೆಯುತ್ತಿದ್ದು, ಈ ಪೈಕಿ ಹಲವರ ಮೃತದೇಹ ಪತ್ತೆಯಾಗಿದೆ. ಹಿಮಾಚಲ ಪ್ರದೇಶದಲ್ಲಿ ಕನಿಷ್ಠ 22 ಮಂದಿ ಸಾವಿಗೀಡಾಗಿದ್ದು, 8 ಮಂದಿ ಅವಶೇಷಗಳಡಿ ಸಿಲುಕಿ ನಾಪತ್ತೆಯಾಗಿದ್ದಾರೆ. ಉತ್ತರಾಖಂಡ ಮತ್ತು ಒಡಿಶಾದಲ್ಲಿ ತಲಾ ನಾಲ್ವರು ಸಾವಿಗೀಡಾಗಿದ್ದಾರೆ. ಜಾರ್ಖಂಡ್‌ನಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಕುಶಾನ್ ಗ್ರಾಮದಲ್ಲಿ ಮನೆ ಕುಸಿದು ಬಿದ್ದು ಒಂದೇ ಕುಟುಂಬದ 8 ಮಂದಿ ಅವಶೇಷಗಳಡಿಯಲ್ಲಿ ಸಿಲುಕಿದ್ದಾರೆ. 2 ಲಕ್ಷ ಮನೆಗಳಿಗೆ ಹಾನಿಜೀವ, ಆಸ್ತಿಪಾಸ್ತಿ ಹಾನಿ, ಸಾರ್ವಜನಿಕ ಸೌಲಭ್ಯಗಳಿಗೂ ಹಾನಿ ಸಂಭವಿಸಿದೆ. ಬೃಹತ್ ಗಾತ್ರದ ಬಂಡೆಕಲ್ಲುಗಳು ಉರುಳಿದ ಪರಿಣಾಮ ರಸ್ತೆ ಸಂಪರ್ಕ ಕಡಿತಗೊಂಡಿದೆ. ಈ ವರ್ಷದ ಮಳೆಗೆ ಪ್ರವಾಹ ಪರಿಸ್ಥಿತಿಯಿಂದಾಗಿ ಅಸ್ಸಾಂನಲ್ಲಿ…










