Author: main-admin

ಸ್ತುತ ಯುಗದಲ್ಲಿ ಜನ ಆರೋಗ್ಯದ ಬಗ್ಗೆ ಬಹಳ ಕಾಳಜಿ ವಹಿಸುತ್ತಿದ್ದಾರೆ. ಹದಗೆಡುತ್ತಿರುವ ಜೀವನಶೈಲಿ ಇದಕ್ಕೆ ಕಾರಣವಾಗಿದ್ದು, ಜನ ಪ್ರಕೃತಿಯಿಂದ ದೂರವಾಗುತ್ತಿರುವುದು ಇದಕ್ಕೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಈ ಹಿಂದೆ ಹುಲ್ಲಿನ ಮೇಲೆ ಬರಿಗಾಲಿನಲ್ಲಿ ನಡೆಯುವ ಟ್ರೆಂಡ್ ಸಾಕಷ್ಟು ಹೆಚ್ಚಾಗಿತ್ತು, ಆದರೆ ಈಗ ಈ ಪ್ರವೃತ್ತಿ ಸಾಕಷ್ಟು ಕಡಿಮೆಯಾಗಿದೆ. ನೀವು ಹಸಿರು ಹುಲ್ಲಿನ ಮೇಲೆ ಬರಿಗಾಲಿನಲ್ಲಿ ವಾಕ್ ಮಾಡಿದರೆ, ನಿಮ್ಮ ಅನೇಕ ಅಂಗಗಳು ನಿಮ್ಮ ಅಡಿಭಾಗದ ಒತ್ತಡದಿಂದಾಗಿ ನಿಯಂತ್ರಣಕ್ಕೆ ಬರುತ್ತವೆ ಏಕೆಂದರೆ ಹಸಿರು ಹುಲ್ಲು ಗಾಯವನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ. ಭೂಮಿಯ ಮೇಲೆ ಬರಿಗಾಲಿನಲ್ಲಿ ನಡೆಯುವುದರಿಂದ ಆಗುವ ವೈಜ್ಞಾನಿಕ ಪ್ರಯೋಜನಗಳು ಮುನ್ನೆಲೆಗೆ ಬರುವ ಮೊದಲೇ ಮನೆಯ ಹಿರಿಯರು ಸಲಹೆ ನೀಡುತ್ತಿದ್ದರು. ಬರಿಗಾಲಿನಲ್ಲಿ ವಾಕ್ ಮಾಡುವುದರಿಂದ ಆರೋಗ್ಯಕ್ಕೆ ವಿಶಿಷ್ಟ ಪ್ರಯೋಜನಗಳಿವೆ. ಹುಲ್ಲಿನ ಮೇಲೆ ಬರಿಗಾಲಿನಲ್ಲಿ ವಾಕ್ ಮಾಡಿದರೆ ಅದ್ಭುತ ಪ್ರಯೋಜನಗಳು ನಿದ್ದೆ ಮಾಡದೇ ಇರುವ ಸಮಸ್ಯೆ ದೂರವಾಗುತ್ತದೆ ನಿದ್ರಾಹೀನತೆಯ ಸಮಸ್ಯೆಯನ್ನು ಪರಿಹರಿಸುವಲ್ಲಿ ಇದು ಪರಿಣಾಮಕಾರಿಯಾಗಿದೆ. ರಾತ್ರಿಯಲ್ಲಿ ಸರಿಯಾಗಿ ನಿದ್ದೆ ಮಾಡಲು ಸಾಧ್ಯವಾಗದಿದ್ದರೆ, ನೀವು ನಿದ್ರಾಹೀನತೆಗೆ…

Read More

ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದದ್ದು, ಈ ವೇಳೆ ʼಹರ್​ ಘರ್​ ತಿರಂಗಾʼ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇದರ ಅಂಗವಾಗಿ ಭಾರತೀಯ ಕೋಸ್ಟ್​ ಗಾರ್ಡ್​ ಸಮುದ್ರದಲ್ಲಿ ನೀರೊಳಗೆ ಧ್ವಜ ಹಾರಿಸಿದ್ದಾರೆ. “ಜನರ ಹೃದಯದಲ್ಲಿ ದೇಶಭಕ್ತಿಯ ಭಾವನೆಯನ್ನು ಪ್ರೇರೇಪಿಸುವುದು ಮತ್ತು ಭಾರತೀಯ ರಾಷ್ಟ್ರಧ್ವಜದ ಬಗ್ಗೆ ಜಾಗೃತಿ ಮೂಡಿಸುವುದು ಈ ಕಾರ್ಯದ ಹಿಂದಿನ ಉದ್ದೇಶ” ಎಂದು ಐಸಿಜಿ ಅಧಿಕಾರಿಗಳು ತಿಳಿಸಿದ್ದಾರೆ. 75ನೇ ಸ್ವಾತಂತ್ರ್ಯದ ದಿನಾಚರಣೆಯನ್ನು ಜನರ ಪಾಲ್ಗೊಳ್ಳುವಿಕೆಯೊಂದಿಗೆ ಆಚರಿಸಲು ಕೇಂದ್ರ ಸರ್ಕಾರ ‘ಹರ್​ ಘರ್​ ತಿರಂಗ’ ಅಭಿಯಾನ ಹಮ್ಮಿಕೊಂಡಿದ್ದು, ಎಲ್ಲರೂ ತಮ್ಮ ಮನೆಗಳ ಮೇಲೆ ಭಾರತದ ರಾಷ್ಟ್ರಧ್ವಜವನ್ನು ಹಾರಿಸಲು ಬಯಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಜುಲೈ 22ರಂದು ಹರ್​ ಘರ್​ ತಿರಂಗಾ ಅಭಿಯಾನಕ್ಕೆ ಚಾಲನೆ ನೀಡಿದರು. ಧ್ವಜಗಳ ಉತ್ಪಾದನೆಗೆ ರಾಜ್ಯಗಳು ಸ್ವಸಹಾಯ ಗುಂಪುಗಳನ್ನು ಸಜ್ಜುಗೊಳಿಸಿವೆ ಮತ್ತು ಸ್ಥಳೀಯ ಟೈಲರಿಂಗ್​ ಘಟಕಗಳು ಮತ್ತು ಎಂಎಸ್​ಎಂಇ ಗಳನ್ನು ಸಹ ನಿಯೋಜಿಸಲಾಗಿದೆ. ಜವಳಿ ಸಚಿವಾಲಯವು ದೊಡ್ಡ ಪ್ರಮಾಣದಲ್ಲಿ ಧ್ವಜಗಳನ್ನು ಪೂರೈಸುವ ಧ್ವಜ ಉತ್ಪಾದಕರನ್ನು ಗುರುತಿಸಿದೆ. ರಾಜ್ಯ, ಕೇಂದ್ರಾಡಳಿತ ಪ್ರದೇಶಗಳು…

Read More

ಮಂಗಳೂರು: ಸುರತ್ಕಲ್‌ನ ಫಾಝಿಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.ಫಾಝಿಲ್ ಹತ್ಯೆ ಆರೋಪಿಗಳು ಹತ್ಯೆ ವೇಳೆ ಬಳಕೆ ಮಾಡಿದ್ದ ಕಾರಿನ ಚಾಲಕನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಈಗಾಗಲೇ ಈ ಪ್ರಕರಣ ಸಂಬಂಧಿಸಿ 16 ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿರುವ ನಾಲ್ವರು ಮತ್ತು ಇತರ ಇಬ್ಬರನ್ನು ತೀವ್ರ ವಿಚಾರಣೆಗೊಳಪಡಿಸಲಾಗುತ್ತಿದ್ದು, ಶೀಘ್ರ ಬಂಧಿಸಲ್ಪಡಲಿದ್ದಾರೆ ಎಂದು ಮೂಲಗಳು ತಿಳಿಸಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಅಲ್ಲದೆ ವಶಕ್ಕೆ ತೆಗೆದುಕೊಂಡವರ ವಿಚಾರಣೆ ವೇಳೆ ಆರೋಪಿಗಳ ಕುರಿತು ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿದೆ ಎಂದೂ ಹೇಳಲಾಗುತ್ತಿದೆ.ಮಂಗಳೂರು ಹೊರವಲಯದ ಸುರತ್ಕಲ್ ‌ನಲ್ಲಿ ಗುರುವಾರ ರಾತ್ರಿ ಮಂಗಳಪೇಟೆ ನಿವಾಸಿ 23 ವರ್ಷದ ಫಾಝಿಲ್‌ನ ಮೇಲೆ ಮಾರಕಾಸ್ತ್ರಗಳಂದ ಹಲ್ಲೆ ಮಾಡಿ ಹತ್ಯೆ ಮಾಡಲಾಗಿತ್ತು.

Read More

ಬೆಳ್ತಂಗಡಿ; ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದಲ್ಲಿ ಯುವಕನೋರ್ವನನ್ನು ಪುಂಜಾಲಕಟ್ಟೆ ಪೊಲೀಸರು ಬಂಧಿಸಿದ್ದಾರೆ. ಮಹಮ್ಮದ್‌ ಸಿರಾಜ್‌ (28) ಬಂಧಿತ ಆರೋಪಿ. ಈತನನ್ನು‌ ಪುಂಜಾಲಕಟ್ಟೆ ಠಾಣೆ ಪೊಲೀಸರು ಪೋಕ್ಸೊ ಕಾಯ್ದೆಯಡಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಇದೀಗ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ. ಸರಕಾರಿ ಶಾಲಾ ಮೈದಾನದಲ್ಲಿ ಸಂಜೆ ಶಾಲೆ ಬಿಡುವ ಹೊತ್ತು ನಿಂತಿದ್ದ ಶಾಲಾ ಬಸ್‌ನ ಒಳಗಡೆ ಪಾನಮತ್ತನಾಗಿ ಅಕ್ರಮವಾಗಿ ಪ್ರವೇಶಗೈದ ಆರೋಪಿ ಬಾಲಕಿ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಿ ಬಾಲಕಿಯ‌ ಪೋಷಕರು ದೂರು ನೀಡಿದ್ದರು.

Read More

ಮಂಗಳೂರು: ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ ನಗರದ ಹಲವು ತಗ್ಗು ಪ್ರದೇಶಗಳು ಮುಳುಗಡೆಯಾದ ವರದಿಯಾಗಿದೆ. ತಡರಾತ್ರಿಯಿಂದ ಮತ್ತೆ ಗುಡುಗು ಸಹಿತ ಮಳೆ ಸುರಿಯುತ್ತಿದೆ. ಪರಿಣಾಮ ಮಂಗಳೂರು ನಗರ ಸೇರಿದಂತೆ ಹಲವು ಪ್ರದೇಶಗಳು ಮಳೆರಾಣಾರ್ಭಟಕ್ಕೆ ತತ್ತರಿಸಿ ಹೋಗಿದೆ. ನಿನ್ನೆ ರಾತ್ರಿ ಸುರಿದ ಗುಡುಗು ಸಹಿತ ಭಾರಿ ಮಳೆಗೆ ಬಲ್ಲಾಲ್ ಬಾಗ್ ಪ್ರದೇಶ ಸಂಪೂರ್ಣ ಜಲಾವೃತಗೊಂಡಿದ್ದು, ಹಲವು ತಗ್ಗು ಪ್ರದೇಶಗಳಲ್ಲಿ ಮಳೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಪಾಂಡೇಶ್ವರ ಶಿವನಗರ ಭಾಗದಲ್ಲಿ ಮನೆಗಳು ಜಲಾವೃತಗೊಂಡಿವೆ. ಕರಂಗಲ್ಪಾಡಿ, ಮಂಗಳೂರು ರೈಲ್ವೆ ನಿಲ್ದಾಣ , ಪಂಪ್ ವೆಲ್ , ಅತ್ತಾವರ ಹೀಗೆ ಹಲವು ಪ್ರದೇಶದಲ್ಲಿ ಅಂಗಡಿ ಮುಂಗಟ್ಟು ಗಳಿಗೆ ನೀರು ನುಗ್ಗಿದ್ದು, ರಸ್ತೆ ತುಂಬಾ ನೀರು ಆವರಿಸಿಕೊಂಡಿದೆ. ಜು.3೦ರ ನಸುಕಿನ ಜಾವದಿಂದ ಗುಡುಗು ಸಹಿತ ಮಳೆಯಾಗುತ್ತಿದ್ದು, ಈಗಾಗಲೇ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯ ಮಂಗಳೂರು, ಪುತ್ತೂರು, ಬಂಟ್ವಾಳ, ಮೂಡುಬಿದಿರೆ, ಉಳ್ಳಾಲ, ಮೂಲ್ಕಿಯಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

Read More

ಬೆಂಗಳೂರು : ರಾಜ್ಯದಲ್ಲಿ ಸರಣಿ ಹತ್ಯೆ ಪ್ರಕರಣ ಖಂಡಿಸಿ ಹಾಗೂ ಎಸ್ ಡಿ ಪಿ ಐ, ಪಿ ಎಫ್ ಐ ಸಂಘಟನೆಗಳನ್ನು ನಿಷೇಧಿಸುವಂತೆ ಒತ್ತಾಯಿಸಿ ಗೃಹ ಸಚಿವ ಅರಗ ಜ್ಞಾನೇಂದ್ರ ವಿರುದ್ಧ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ತೀವ್ರಕೊಂಡ ಬೆನ್ನಲ್ಲೇ 40 ಎಬಿವಿಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಜಯಮಹಲ್ ನಲ್ಲಿರುವ ಗೃಹ ಸಚಿವ ಅರಗ ಜ್ಞಾನೇಂದ್ರ ಮನೆ ಬಳಿ ಬೆಳಿಗ್ಗೆಯಿಂದ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಗೃಹ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಗೃಹ ಸಚಿವರ ಮನೆ ಬಾಗಿಲು ತೆರೆಯಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ತಡೆಯಲು ಮುಂದಾಗುತ್ತಿದ್ದಂತೆ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ. ಇದೀಗ 40 ಎಬಿವಿಪಿ ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಎಬಿವಿಪಿ ಕಾರ್ಯಕರ್ತರು ಪೊಲೀಸರನ್ನು ಲೆಕ್ಕಿಸದೇ ಗೃಹ ಸಚಿವರ ಮನೆಯ ಗೇಟ್ ಗಳನ್ನು ತಳ್ಳಿ ಒಳನುಗ್ಗಿದ್ದು, ಗೃಹ ಸಚಿವರ…

Read More

ಉಡುಪಿ: ಉಡುಪಿಯ ಅಷ್ಟಮಠಗಳಲ್ಲೊಂದಾದ ಪುತ್ತಿಗೆ ಮಠದಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನದ ಗಿಂಡಿ ಕಳವಾದ ಬಗ್ಗೆ ದೂರು ದಾಖಲಾಗಿದೆ. ಜು.26 ರಂದು ಬೆಳಿಗ್ಗೆ ಮಠದಲ್ಲಿ ಪೂಜೆ ಸಂದರ್ಭ 6 ಮಂದಿ ಮಠದ ವಿದ್ಯಾರ್ಥಿಗಳು ಮತ್ತು ಪುರೋಹಿತರು ಬಂದು ಹೋಗಿದ್ದು, ಪೂಜೆ ನಂತರ ಪೂಜಾ ಸಾಮಗ್ರಿ ನೋಡುವಾಗ 7 ಲಕ್ಷ ರೂ. ಮೌಲ್ಯದ 146 ಗ್ರಾಂ ತೂಕದ ಚಿನ್ನದ ಗಿಂಡಿ ಕಾಣೆಯಾಗಿದ್ದು ಗಮನಕ್ಕೆ ಬಂದಿದೆ. ಮಠದ ವ್ಯವಸ್ಥಾಪಕ ವಿಷ್ಣುಮೂರ್ತಿ ಪೂಜೆಯ ನಂತರ ಸಾಮಗ್ರಿ ತೆಗೆದಿಡುವಾಗ ಪೂಜೆಗೆ ಬಳಸುವ 146 ಗ್ರಾಂ ತೂಕದ ಚಿನ್ನದ ಗಿಂಡಿ ಕಾಣೆಯಾಗಿದ್ದು, ತಿಳಿದು ಬಂತು.ಈ ಕುರಿತು ನಗರ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

Read More

ಮಂಗಳೂರು: ನಗರ ಪಾಲಿಕೆ ವ್ಯಾಪ್ತಿಯ ಉಳ್ಳಾಲ, ಮುಲ್ಕಿ, ಮೂಡಬಿದಿರೆ ಮತ್ತು ಬಂಟ್ವಾಳ ತಾಲೂಕಿನಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಈ ಪ್ರದೇಶದ ಎಲ್ಲಾ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಇಂದು ರಜೆ ಘೋಷಿಸಲಾಗಿದೆ. ಮಕ್ಕಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಇಂದು ಮಂಗಳೂರು ಉಪ ವಿಭಾಗದಾದ್ಯಂತ (ಮಂಗಳೂರು ನಗರ ಪಾಲಿಕೆ, ಮುಲ್ಕಿ, ಮೂಡಬಿದಿರೆ, ಉಳ್ಳಾಲ ಮತ್ತು ಬಂಟ್ವಾಳ ತಾಲೂಕು) ಎಲ್ಲಾ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ.ಇನ್ನು ಪುತ್ತೂರು ಉಪವಿಭಾಗದ ಇತರ ಸ್ಥಳಗಳಲ್ಲಿ, ಸ್ಥಳೀಯ ಪರಿಸ್ಥಿತಿಯನ್ನು ನಿರ್ಣಯಿಸಿ ತಹಶೀಲ್ದಾರರು ಮತ್ತು ಬಿಇಒಗಳು ಸ್ಥಳೀಯವಾಗಿ ನಿರ್ಧಾರ ತೆಗೆದುಕೊಳ್ಳುತ್ತಾರೆ.

Read More

ಕಾರ್ಕಳ: ಕಾರ್ಕಳ ತಾಲೂಕಿನ ತೆಳ್ಳಾರು ಗುಡ್ಡೆಯಂಗಡಿ ನಿವಾಸಿ ಉರಗತಜ್ಞ ಅನಿಲ್ ಪ್ರಭು ಅವರು ಹಾವು ಕಡಿತಕ್ಕೊಳಗಾಗಿ ಗಂಭೀರವಾಗಿ ಅಸ್ವಸ್ಥಗೊಂಡು ಕಾರ್ಕಳದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅನಿಲ್ ಪ್ರಭು ನಿನ್ಮೆ ತಮ್ಮ ಮನೆಯಲ್ಲಿ ಗಾಯಗೊಂಡಿದ್ದ ನಾಗರ ಹಾವಿನ ಆರೈಕೆ ಮಾಡುತ್ತಿದ್ದರು.ಈ ವೇಳೆ ಹಾವು ಅವರ ಕೈಗೆ ಕಡಿದಿದೆ. ತಕ್ಷಣ ಅವರನ್ನು ಕಾರ್ಕಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಿತಿ ಗಂಭೀರವಿದೆ ಎಂದು ತಿಳಿದುಬಂದಿದೆ.ಈ ಹಿಂದೆ ಆರೇಳು ಬಾರಿ ಅವರಿಗೆ ಹಾವು ಕಡಿದಿದ್ದರೂ ಪ್ತಾಣಾಪಾಯದಿಂದ ಪಾರಾಗಿದ್ದರು.

Read More

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಸಂಜೆ 6 ಗಂಟೆಗೆ ಮುಚ್ಚುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಆದೇಶಿಸಿದ್ದಾರೆ. ಇಂದು ಸಂಜೆ (ಜು.29) ರಿಂದ ಆ.1 ರವರೆಗೆ ಈ ಆದೇಶ ಜಾರಿಯಲ್ಲಿರುತ್ತದೆ. ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮಾತ್ರ ಅಂಗಡಿ-ಮುಂಗಟ್ಟು ತೆರೆಯಲು ಅನುಮತಿ. ಉಳಿದಂತೆ ಸಂಜೆ 6 ಗಂಟೆಯಿಂದ ಮರುದಿನ ಬೆಳಗ್ಗೆ 6 ಗಂಟೆಯವರೆಗೆ ಮುಚ್ಚಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

Read More