Author: main-admin

ಉಪ್ಪಿನಂಗಡಿ: ಕಾರಿನಲ್ಲಿ ಮಾದಕ ವಸ್ತು ಸಾಗಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ಪುತ್ತೂರು ತಾಲೂಕು ಬಜತ್ತೂರು ಗ್ರಾಮದ ಬೆದ್ರೋಡಿ ಎಂಬಲ್ಲಿ ನಡೆದಿದೆ. ಉಪ್ಪಿನಂಗಡಿ ಗ್ರಾಮದ ಮಠ ನಿವಾಸಿ ರಜಾಕ್ (43) ಬಂಧಿತ ಆರೋಪಿ.ದಿನಾಂಕ ಅಕ್ಟೋಬರ್ 1 ರಂದು ಉಪ್ಪಿನಂಗಡಿ ಪೊಲೀಸ್ ಠಾಣೆಯ ಪೊಲೀಸ್‌ ಉಪನಿರೀಕ್ಷಕರಾದ ಅವಿನಾಶ್ ಹೆಚ್ ರವರು ಮತ್ತು ಸಿಬ್ಬಂದಿ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿ ವಾಹನ ತಪಾಸಣೆ ಮಾಡುವ ಸಮಯ ಸುಮಾರು 4 ಗಂಟೆಗೆ ನೆಲ್ಯಾಡಿ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದ ಕಪ್ಪು ಕಾರೊಂದನ್ನು ನಿಲ್ಲಿಸುವಂತೆ ಸೂಚಿಸಿದಾಗ ಅದರ ಚಾಲಕ ನಿಲ್ಲಿಸದೇ ದೂರದಲ್ಲಿ ನಿಲ್ಲಿಸಿ ಚಾಲಕ ಇಳಿದು ಅಲ್ಲಿಂದ ಓಡಿ ಹೋಗಲು ಪ್ರಯತ್ನಿಸಿದ್ದಾನೆ. ಕೂಡಲೇ ಪೊಲೀಸ್ ಉಪನಿರೀಕ್ಷಕರಾದ ಅವಿನಾಶ್ ಮತ್ತು ಸಿಬ್ಬಂದಿ ಓಡಿಹೋಗಿ ಚಾಲಕನನ್ನು ಹಿಡಿದುಕೊಂಡು ವಿಚಾರಿಸಿದಾಗ ಸರಿಯಾಗಿ ಉತ್ತರವನ್ನು ಹೇಳದೆ ಅಸ್ಪಷ್ಟವಾಗಿ, ತೊದಲುತ್ತಾ ಅಮಲು ಪದಾರ್ಥ ಅಥವಾ ಮಾದಕ ವಸ್ತುವನ್ನು ಸೇವನೆ ಮಾಡಿರುವಂತೆ ಮಾತನಾಡುತ್ತಿರುವುದು ಕಂಡು ಆತನ ಬಗ್ಗೆ ಅನುಮಾನಗೊಂಡು ಅವನ ಹೆಸರು ವಿಳಾಸವನ್ನು ಕೇಳಿದ್ದಾರೆ. ಆಗ…

Read More

ಧರ್ಮಸ್ಥಳದಲ್ಲಿ ದೊರೆತ ಮಾನವನ ಮೂಳೆಗಳು ಹಾಗೂ ಬುರುಡೆಗಳ ಕುರಿತು ಇದೀಗ ಈ ಒಂದು ಪ್ರಕರಣಕ್ಕೆ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಬಂಗ್ಲೆ ಗುಡ್ಡದಲ್ಲಿ ಇದುವರೆಗೂ ದೊರೆತ ಬುರುಡೆ ಮತ್ತು ಮೂಳೆಗಳನ್ನು SIT ಅಧಿಕಾರಿಗಳು FSL ಗೆ ಕಳುಹಿಸಿಯೇ ಇಲ್ಲ ಎನ್ನುವುದು ಬಯಲಾಗಿದೆ. ಹೌದು ಬಂಗ್ಲೆ ಗುಡ್ಡದಲ್ಲಿ ಸಿಕ್ಕಿದ್ದ 7 ಬುರುಡೆ ಹಾಗೂ ಹಲವು ಮೂಳೆಗಳನ್ನು ಎಸ್ಐಟಿ ಅಧಿಕಾರಿಗಳು FSL ಗೆ ಕಳುಹಿಸಿಯೇ ಇಲ್ಲ ಎಂದು ತಿಳಿದುಬಂದಿದೆ . ಸೆಪ್ಟೆಂಬರ್ 6 ರಂದು ಬುರುಡೆ ಮತ್ತು ಮೂಳೆಗಳು ಬಂಗ್ಲೆ ಗುಡ್ಡದಲ್ಲಿ ಪತ್ತೆಯಾಗಿದ್ದವು. ಇದುವರೆಗೂ ಪತ್ತೆಯಾದ ಬುರುಡೆ ಮತ್ತು ಮೂಳೆಗಳು ಯಾರದ್ದು ಎಂದು ಕುತೂಹಲ ಮೂಡಿಸಿದ್ದು, ಎಸ್ಐಟಿಗೆ ಸಲ್ಲಿಕೆಯಾದ ಎಫ್ಎಸ್ಎಲ್ ರಿಪೋರ್ಟ್ ಇದೀಗ ಲಭ್ಯವಾಗಿದೆ. ಈ ಒಂದು ವರದಿಯಲ್ಲಿ ಮೂರು ತಲೆ ಬುರುಡೆ ಮತ್ತು ಮೂಳೆಗಳ ಎಫಎಸ್ಎಲ್ ವರದಿ ಲಭ್ಯವಾಗಿದೆ. ಮೊದಲನೆಯದ್ದು ಚಿನ್ನಯ್ಯ ಕೋರ್ಟಿಗೆ ತಂದಿದ್ದ ಬುರುಡೆ ಇದು ಸುಮಾರು 40 ವರ್ಷದ ಗಂಡಸಿನ ತಲೆ ಬುರುಡೆ ಎಂದು ತಿಳಿದುಬಂದಿದೆ. ಇನ್ನು ಸ್ಮಾರ್ಟ್ ನಂಬರ್…

Read More

ಬಂಟ್ವಾಳ: ಮಹಿಳೆಯೋರ್ವರು ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ನೆಲ್ಲಿಗುಡ್ಡೆ ಎಂಬಲ್ಲಿ ನಡೆದಿದೆ. ಕಾವಳಮೂಡೂರು ಗ್ರಾಮದ ನೆಲ್ಲಿಗುಡ್ಡೆ ನಿವಾಸಿ ಉಮಾವತಿ ( 68) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. 15 ವರ್ಷಗಳ ಹಿಂದೆ ಉಮಾವತಿಯವರ ಮಗ ಮನೆ ಬಿಟ್ಟು ಹೋಗಿ ಕಾಣೆಯಾಗಿದ್ದಾರೆ. ಅದೇ ಚಿಂತೆಯಲ್ಲಿದ್ದವರಿಗೆ ಮಗನ ಚಿಂತೆಯಿಂದ ರಕ್ತದ ಒತ್ತಡ ಕಾಯಿಲೆಯಿಂದ ಬಳಲುತ್ತಿದ್ದರು. ಹಾಗಾಗಿ ಮಾನಸಿಕವಾಗಿ ನೊಂದು ಜೀವನದಲ್ಲಿ ಜುಗುಪ್ಸೆ ಹೊಂದಿದ್ದ ಇವರು ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಮೃತರ ಕುಟುಂಬವರು ನೀಡಿದ ದೂರಿನಂತೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಇನ್ಮುಂದೆ ಬೈಕ್ ನಂಬರ್ ಪ್ಲೇಟ್  ಮರೆ ಮಾಚಿದ್ರೆ   ಕ್ರಿಮಿನಲ್ ಕೇಸ್ ಬೀಳುತ್ತೆ.ಟ್ರಾಫಿಕ್ ಪೊಲೀಸರು, ಎಐ ಕ್ಯಾಮೆರಾ ಮತ್ತು ಸಿಗ್ನಲ್​​ಗಳ ಕಣ್ತಪ್ಪಿಸಲು ಬೈಕ್ ಸವಾರರು ನಾನಾ ಕಸರತ್ತು ನಡೆಸುತ್ತಾರೆ. ಅದರಲ್ಲೂ ನಂಬರ್ ಪ್ಲೇಟ್​​ಗಳು ಸರಿಯಾಗಿ ಕಾಣಿಸಬಾರದು ಅಂತಾ ಕೊನೆ ನಂಬರ್​​ಗಳಿಗೆ ಬಣ್ಣ ಬಳೆಯುವುದು, ಟೇಪ್ ಹಾಕುವುದು, ಬಟ್ಟೆ ಸುತ್ತುವುದನ್ನು ಮಾಡುತ್ತಾರೆ. ಹೀಗೆ ನಂಬರ್ ಪ್ಲೇಟ್​​ಗಳನ್ನ ತಿದ್ದುವ ಸವಾರರಿಗೆ ಬಿಸಿ ಮುಟ್ಟಿಸುವ ನಿಟ್ಟಿನಲ್ಲಿ ಪೊಲೀಸರು ಕ್ರಿಮಿನಲ್ ಕೇಸ್ ದಾಖಲಿಸುತ್ತಿದ್ದಾರೆ.   ಇತ್ತೀಚಿಗೆ ನಗರದಲ್ಲಿ ಪೊಲೀಸರು ವಾಹನ ತಪಾಸಣೆಗೆ ಮುಂದಾಗಿದ್ದು, ಈ ವೇಳೆ ಹಲವು ಬೈಕ್ ಸವಾರರು ತಮ್ಮ ಬೈಕ್​​ ನಂಬರ್ ಪ್ಲೇಟ್​​ ಅನ್ನು ಮರೆಮಾಚಿ ಸಂಚಾರ ಮಾಡುತ್ತಿರುವುದು ಕಂಡು ಬಂದಿದೆ. ಇದರಿಂದ ಎಚ್ಚೆತ್ತ ಪೊಲೀಸರು ಅಂತಹ ಬೈಕ್ ಸವಾರರನ್ನ ಪತ್ತೆ ಹಚ್ಚಿ ಅವರ ಮೇಲೆ ವಂಚನೆ ಪ್ರಕರಣ ದಾಖಲು ಮಾಡುತ್ತಿದ್ದಾರೆ.    

Read More

ಕಾಸರಗೋಡು : ಡಿವೈಎಫ್‌ಐ ನಾಯಕಿ ಮತ್ತು ಯುವ ವಕೀಲೆ ರಂಜಿತಾ ಕುಮಾರಿ (30) ಮಂಗಳವಾರ ಸಂಜೆ ಕುಂಬ್ಳೆಯ ಬಥೇರಿಯಲ್ಲಿರುವ ತಮ್ಮ ಕಚೇರಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದುರಂತ ಘಟನೆ ಬೆಳಕಿಗೆ ಬಂದಿದೆ. ಪೊಲೀಸರ ಪ್ರಕಾರ, ಅವರು ತಮ್ಮ ಕಚೇರಿಯೊಳಗೆ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸಂಜೆಯಿಂದ ಅವರಿಗೆ ಕರೆ ಮಾಡಲು ಪ್ರಯತ್ನಿಸಿದರೂ ಯಾವುದೇ ಪ್ರತಿಕ್ರಿಯೆ ಬಾರದ ಕುಟುಂಬ ಸದಸ್ಯರು ಅವರ ಕಚೇರಿಗೆ ಹೋದಾಗ ಬಾಗಿಲು ಒಳಗಿನಿಂದ ಚಿಲಕ ಹಾಕಿರುವುದನ್ನು ಕಂಡುಕೊಂಡರು. ಅವರು ಪೊಲೀಸರಿಗೆ ಮಾಹಿತಿ ನೀಡಿದಾಗ, ಅವರು ಬಾಗಿಲು ಒಡೆದು ನೋಡಿದಾಗ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ರಂಜಿತಾ ಕುಂಬ್ಳೆಯಲ್ಲಿ ಡಿವೈಎಫ್‌ಐನ ಪ್ರಮುಖ ನಾಯಕಿಯಾಗಿದ್ದರು, ಮಹಿಳಾ ಸಂಘದ ಪ್ರದೇಶ ಸಮಿತಿಯ ಅಧ್ಯಕ್ಷೆ, ಡಿವೈಎಫ್‌ಐ ಬ್ಲಾಕ್ ಘಟಕದ ಖಜಾಂಚಿ ಮತ್ತು ವನಿತಾ ಸೇವಾ ಸಹಕಾರಿ ಸಂಘದ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದರು. ಅವರು ಆ ಪ್ರದೇಶದ ಪ್ರಬಲ ಮತ್ತು ಭರವಸೆಯ ಸಿಪಿಐ(ಎಂ) ನಾಯಕಿ ಎಂದೂ ಪರಿಗಣಿಸಲ್ಪಟ್ಟಿದ್ದರು. ಮೃತದೇಹದ ಬಳಿ…

Read More

ಕಾರ್ಕಳ: ಮಹಿಳೆಯೋರ್ವರಿಗೆ ಕತ್ತಿಯಿಂದ ಕಡಿದು ಕೊಲೆಯತ್ನ ನಡೆಸಿದ್ದ ಪ್ರಕರಣದಲ್ಲಿ ಆರೋಪಿಯನ್ನು ಎರಡನೇ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಲಯದ ಸಂಚಾರಿ ಪೀಠ ( ಕಾರ್ಕಳ) ನ್ಯಾಯಧೀಶ ಸಮೀವುಲ್ಲಾ ದೋಷಿ ಎಂದು ಮಂಗಳವಾರ ಆದೇಶಿಸಿದ್ದಾರೆ. ಶಿಕ್ಷೆಗೆ ಗುರಿಯಾದ ಆರೋಪಿಯನ್ನು ಬಲರಾಮ ಹೆಗ್ಡೆ ಎಂದು ಗುರುತಿಸಲಾಗಿದೆ. ಪ್ರಕರಣ ಹಿನ್ನಲೆ: 2022 ರ ಮಾ.14 ರಂದು ಹೆಬ್ರಿ ಠಾಣಾ ವ್ಯಾಪ್ತಿಯ ಮುದ್ರಾಡಿ ಗ್ರಾಮದ ಬಲ್ಲಾಡಿಯ ಗೇರುಬೀಜ ಕಾರ್ಖಾನೆಯಿಂದ ಮಧ್ಯಾಹ್ನ ಮನೆಗೆ ವಾಪಾಸಾಗುತ್ತಿದ್ದ ಪ್ರಮೋದಾ ಕುಲಾಲ್ ಎಂಬವರನ್ನು ಬಲ್ಲಾಡಿ 5 ಸೆಂಟ್ಸ್ ಈಶ್ವರ ನಗರ ಎಂಬಲ್ಲಿ ಆರೋಪಿ ಬಲರಾಮ ಹೆಗ್ಡೆ ಅಡ್ಡಗಟ್ಟಿ, ಅವ್ಯಾಚ ಶಬ್ದಗಳಿಂದ ನಿಂದಿಸಿ, ಕತ್ತಿಯಿಂದ ಕಡಿದು ಕೊಲೆಗೈಯಲು ಯತ್ನಿಸಿದರು. ಈ ಬಗ್ಗೆ ಹೆಬ್ರಿ ಠಾಣೆಯಲ್ಲಿ ಕೊಲೆಯತ್ನ, ಮಹಿಳೆಗೆ ಲೈಂಗಿಕ ದೌರ್ಜನ್ಯ ಸೇರಿದಂತೆ ಇತರ ಕಲಂನಂತೆ ಪ್ರಕರಣ ದಾಖಲಾಗಿತ್ತು. ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿಯನ್ನು ದೋಷಿ ಎಂದು ಆದೇಶಿಸಿದ್ದು, ಆರೋಪಿ ಬಲರಾಮ ಹೆಗ್ಡೆಯನ್ನು ಬಂಧಿಸಿ, ಹಿರಿಯಡ್ಕದ ಕಾರಗೃಹಕ್ಕೆ ಕಳುಹಿಸಲಾಗಿದೆ. ಮಂಗಳವಾರ (ಸೆ.30) ರಂದು ಶಿಕ್ಷೆಯ…

Read More

ಬೆಳ್ತಂಗಡಿ: ನೆರಿಯ ಪೆಟ್ರೋನೆಟ್ ಪೈಪ್‌‌ಲೈನ್‌‌ನಿಂದ 2010 ರಲ್ಲಿ ಪೆಟ್ರೋಲ್ ಕಳ್ಳತನ ಪ್ರಕರಣದಲ್ಲಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗದೆ ಸುಮಾರು 10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ. ಬಂಧಿತ ಆರೋಪಿಯನ್ನು ಬೆಳ್ತಂಗಡಿ ತಾಲೂಕಿನ ಚಿಬಿದ್ರೆ ನಿವಾಸಿ ತಮ್ಮಯ್ಯ(35) ಎಂದು ಗುರುತಿಸಲಾಗಿದೆ. ಸೆ.28ರಂದು ಮಂಗಳೂರು ನಗರದ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದವನನ್ನು ನೋಡಿ ಸುರತ್ಕಲ್ ಪೊಲೀಸ್ ಠಾಣೆಯ ಸಿಬ್ಬಂದಿ ಉಮೇಶ್ ಅವರು ವಶಕ್ಕೆ ಪಡೆದು ವಿಚಾರಿಸಿದ್ದಾರೆ. ಈ ವೇಳೆ ಆರೋಪಿಯು ತಾನು ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಚಿಬಿದ್ರೆ ನಿವಾಸಿ ಎಂದು ತಿಳಿಸಿದ್ದು, ಅದರಂತೆ ಧರ್ಮಸ್ಥಳ ಪೊಲೀಸರಿಗೆ ಮಾಹಿತಿ ನೀಡಿ ವಿಚಾರಿಸಿದಾಗ ವಾರಂಟ್ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ತಮ್ಮಯ್ಯ ಎಂದು ತಿಳಿದುಬಂದಿದೆ. ಆರೋಪಿಯನ್ನು ಸೆ.29 ರಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Read More

ಬೆಂಗಳೂರು : ಸೌಜನ್ಯಪರ ಹೋರಾಟಗಾರ ಮತ್ತು ಧರ್ಮಸ್ಥಳ ‘ಬುರುಡೆ’ ಪ್ರಕರಣದಲ್ಲಿಯೂ ಮುಂಚೂಣಿಯಲ್ಲಿರುವ ಮಹೇಶ್​ ಶೆಟ್ಟಿ ತಿಮರೋಡಿಯನ್ನ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ವಿಚಾರಕ್ಕೆ ಸಂಬಂಧಪಟ್ಟಂತೆ ಗಡಿಪಾರು ಪ್ರಶ್ನಿಸಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಬಲವಂತದ ಕ್ರಮ ಬೇಡ ಎಂದು ಆದೇಶ ಹೊರಡಿಸಿದೆ. ಹೌದು ಹೈಕೋರ್ಟ್ ನಲ್ಲಿ ಪಾರು ಪ್ರಶ್ನಿಸಿದ್ದ ಅರ್ಜಿಯ ವಿಚಾರಣೆ ನಡೆಯಿತು. ಗಡಿಪಾರು ಸಂಬಂಧ ಬಲವಂತದ ಕ್ರಮ ಬೇಡ ಎಂದು ಹೈಕೋರ್ಟ್ ಸೂಚನೆ ನೀಡಿ, ಅಕ್ಟೋಬರ್ 8ರವರೆಗೆ ಬಲವಂತದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಸೂಚನೆ ನೀಡಿತು. ಅಕ್ಟೋಬರ್ 8ರವರೆಗೆ ಗಡಿಪಾರು ಆದೇಶ ಜಾರಿಗೊಳಿಸಿದಂತೆ ಹೈಕೋರ್ಟ್ ಸೂಚನೆ ನೀಡಿದೆ.

Read More

ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಮೂವರು ಗಾಯಗೊಂಡ ಘಟನೆ ಮಾಣಿ-ಮೈಸೂರು ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕನಕಮಜಲು ಸಮೀಪದ ಪಂಜಿಗುಂಡಿ ಬಳಿ ನಡೆದಿದೆ. ಸುಳ್ಯದಿಂದ ಮಂಗಳೂರು ಕಡೆ ಹೋಗುತ್ತಿದ್ದ ಬಲೇನೋ ಕಾರು ಹಾಗೂ ಪುತ್ತೂರಿನಿಂದ ಗುತ್ತಿಗಾರು ಕಡೆಗೆ ಬರುತ್ತಿದ್ದ ಆಲ್ಟೊ ಕಾರು ನಡುವೆ ಈ ಅಪಘಾತ ಸಂಭವಿಸಿದೆ. ಘಟನೆಯಿಂದ ಎರಡು ಕಾರುಗಳು ಜಖಂ ಗೊಂಡಿದ್ದು ಬಲೇನೋ ಕಾರು ಚಾಲಕ ಹಾಗೂ ಆಲ್ಟೊಕಾರಿನಲ್ಲಿದ್ದ ಗುತ್ತಿಗಾರಿನ ಮೂವರಿಗೂ ಗಾಯವಾಗಿದ್ದು ಅವರೆಲ್ಲರನ್ನೂ ಸುಳ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

Read More

ಪಡುಬಿದ್ರೆ: ಇಲ್ಲಿಗೆ ಸಮೀಪದ ಉಚ್ಚಿಲ ಕೆನರಾ ಬ್ಯಾಂಕ್ ಎಟಿಎಂ ಎದುರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಇಂದು ಬೆಳಗಿನ ಜಾವ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಬಗ್ಗೆ ವರದಿಯಾಗಿದೆ ಮೃತ ಬೈಕ್ ಸವಾರನ ಗುರುತು ಇನ್ನೂ ಪತ್ತೆಯಾಗಿಲ್ಲ. ಉಡುಪಿ ಕಡೆಯಿಂದ ಮಂಗಳೂರು ಕಡೆ ಹೋಗುತ್ತಿದ್ದ ಪುತ್ತೂರು ನೋಂದಣಿ ಇರುವ ಬೈಕಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದ್ದು ಇದರಿಂದ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡ ಸವಾರ ಸ್ಥಳದಲ್ಲೇ ಮೃತಪಟ್ಟರು ಎಂದು ತಿಳಿದುಬಂದಿದೆ. ಮೃತದೇಹವನ್ನು ಸಾಮಾಜಿಕ ಕಾರ್ಯಕರ್ತ ಜಮಾಲುದ್ದೀನ್ ಉಚ್ಚಿಲ, ಮೂಳೂರು‌ ಅಂಬುಲೆನ್ಸ್ ನ ಹಮೀದ್, ರೈಸ್, ರಜಾಕ್, ಅನ್ವರ್ ಕೋಟೇಶ್ವರ, ಸಾದಿಕ್ ಮತದಾನವನ್ನು ಪಡುಬಿದ್ರೆಯ ಸಹಕಾರಕ್ಕೆ ಸಾಗಿಸಲು ಸಹಕರಿಸಿದರು. ಸ್ಥಳಕ್ಕೆ ಆಗಮಿಸಿರುವ ಪಡುಬಿದ್ರೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

Read More