ಮಂಗಳೂರಿನ ಶಿಖಾ ಸುಶೀಲ್ ಪ್ರತಿಷ್ಟಿತ ಹಿಸ್ನಾ ಮಿಸ್ಸ್ ದಾಯ್ಜಿವರ್ಲ್ಡ್-2026 ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಶನಿವಾರ ರಾತ್ರಿ ಮಂಗಳೂರಿನ ಮಿಲಾಗ್ರಿಸ್ ಸಭಾಭವನದಲ್ಲಿ ನಡೆದ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಶಿಖಾ ಸುಶೀಲ್ ಇವರನ್ನ ವಿಜೇತರೆಂದು ಘೋಷಿಸಲಾಯಿತು. ಸೆರೆನಾ ಎವ್ಜಿನ್ ಪ್ರಥಮ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡರೆ ಫೇ ಮಾರ್ಟಿಸ್ ದ್ವಿತೀಯ ರನ್ನರ್ ಅಪ್ ಪ್ರಶಸ್ತಿಗೆ ಭಾಜನಾರದರು. ದೇಶ ವಿದೇಶಗಳಿಂದ ಸಾವಿರಕ್ಕಿಂತಲೂ ಹೆಚ್ಚಿನ ಸ್ಪರ್ಧಿಗಳು ಭಾಗವಹಿಸಿದ್ದ ಈ ಸೌಂದರ್ಯ ಸ್ಪರ್ಧೆಯಲ್ಲಿ ದ್ವಿತೀಯ ಹಂತಕ್ಕೆ ಇಪ್ಪತ್ತೈದು ಸ್ಪರ್ಧಿಗಳು ಆಯ್ಕೆಯಾಗಿದ್ದರು. ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಆತ್ಮಸ್ಥೈರ್ಯ, ಸ್ವ ಪರಿಚಯಿಸುವಿಕೆ, ರೇಂಪ್ ವಾಕ್, ಪ್ರಶ್ನೋತ್ತರಿ, ಹಾಗೂ ಎಕ್ಸ್ ಫಾಕ್ಟರ್ ವಿಭಾಗಳಲ್ಲಿ ಮಿಂಚಿದ ಶಿಖಾ ಸುಶೀಲ್, ಹಿಸ್ನಾ ಮಿಸ್ಸ್ ದಾಯ್ಜಿವರ್ಲ್ಡ್ ಕಿರೀಟಕ್ಕೆ ಭಾಜನರಾದರು. ಹಿಸ್ನಾ ಇಂಟರ್ ನ್ಯಾಶನಲ್ ನಿರ್ದೇಶಕರಾದ ರೊನಾಲ್ಡ್ ಪಿಂಟೊ , ಪತ್ನಿ ದೊರೊತಿ ಪಿಂಟೊ, ವಿಜೇತರನ್ನು ಕಿರೀಟದ ಜೊತೆಗೆ ತಲಾ ಮೂರು, ಎರಡು ಹಾಗೂ ಒಂದು ಲಕ್ಷದ ನಗದು ಬಹುಮಾನಗಳನ್ನು ನೀಡಿ ಗೌರವಿಸಿದರು. ಅಂತಿಮ ಸುತ್ತಿಗೆ ಪ್ರವೇಶಿಸಿದ ಇತರ ಒಂಭತ್ತು…
Author: main-admin
ಮಂಗಳೂರು: ಇಂಜಿನಿಯರಿಂಗ್ ವಿಭಾಗದಲ್ಲಿ ರಾಷ್ಟ್ರ ಮಟ್ಟದಲ್ಲಿ ನಡೆಸುವ ಜೆಇಇ ಮೈನ್ಸ್ ಪರೀಕ್ಷೆಯಲ್ಲಿ ಮಂಗಳೂರಿನ ಎಕ್ಸ್ ಪರ್ಟ್ ಪದವಿ ಪೂರ್ವ ಕಾಲೇಜಿನ ಒಟ್ಟು 15 ವಿದ್ಯಾರ್ಥಿಗಳು 99 ಪರ್ಸೆಂಟೈಲ್ ಗಿಂತ ಅಧಿಕ ಅಂಕ ಪಡೆದಿದ್ದಾರೆ. 2026ರ ಜನವರಿಯಲ್ಲಿ ನಡೆದ ಜೆಇಇ ಪರೀಕ್ಷೆಯಲ್ಲಿ ನಗರದ ಎಕ್ಸ್ ಪರ್ಟ್ ಪದವಿ ಪೂರ್ವ ಕಾಲೇಜಿನ ಮತ್ತು ಕೊಡಿಯಾಲ್ ಬೈಲ್ ಎಕ್ಸ್ ಪರ್ಟ್ ಪದವಿ ಪೂರ್ವ ಕಾಲೇಜಿನ 36 ವಿದ್ಯಾರ್ಥಿಗಳು 98 ಪರ್ಸೆಂಟೈಲ್ ಗಿಂತ ಅಧಿಕ, 72 ವಿದ್ಯಾರ್ಥಿಗಳು 97 ಪರ್ಸೆಂಟೈಲ್ ಗಿಂತ 104 ವಿದ್ಯಾರ್ಥಿಗಳು 96 ಪರ್ಸೆಂಟೈಲ್ ಗಿಂತ ಅಧಿಕ, 135 ವಿದ್ಯಾರ್ಥಿಗಳು 95 ಪರ್ಸೆಂಟೈಲ್ ಗಿಂತ ಅಧಿಕ ಹಾಗೂ 342 ವಿದ್ಯಾರ್ಥಿಗಳು 90 ಪರ್ಸೆಂಟೈಲ್ ಗಿಂತ ಅಧಿಕ ಫಲಿತಾಂಶವನ್ನು ಗಳಿಸಿದ್ದಾರೆ. ಎರಡನೇ ಹಂತದ ಜೆಇಇ ಪರೀಕ್ಷೆ ಎಪ್ರಿಲ್ ತಿಂಗಳಿನಲ್ಲಿ ನಡೆಯಲಿದ್ದು, ಎರಡೂ ಪರೀಕ್ಷೆಗಳಲ್ಲಿ ಪಡೆದ ಅಂಕವನ್ನು ಪರಿಗಣಿಸಿ ಅಂತಿಮವಾಗಿ ರ್ಯಾಂಕ್ ಘೋಷಿಸಲಾಗುತ್ತದೆ. ತಮ್ಮ ಸಂಸ್ಥೆಯ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ಎಕ್ಸ್ ಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ…
ಪುತ್ತೂರು: ಬಜತ್ತೂರು ಗ್ರಾಮದ ಕಾಂಚನ ಮುಕ್ವೆ ಎಂಬಲ್ಲಿ ಸಿಗರೇಟ್ ಸೇದುತ್ತಾ ಅಸಭ್ಯವಾಗಿ ವರ್ತಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಫೆ.17 ರಂದು ನಡೆದಿದೆ. ಸಾರ್ವಜನಿಕರಿಂದ ಬಂದ ಮಾಹಿತಿಯ ಮೇರೆಗೆ ರೌಂಡ್ಸ್ ಕರ್ತವ್ಯದಲ್ಲಿದ್ದ ಉಪ್ಪಿನಂಗಡಿ ಪೊಲೀಸ್ ಠಾಣೆ ಉಪ ನಿರೀಕ್ಷಕ ಸುರೇಶ್ ಸಿ.ಟಿ ಅವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ವ್ಯಕ್ತಿಯನ್ನು ವಶಕ್ಕೆ ಪಡೆದರು. ವಿಚಾರಣೆ ವೇಳೆ ಆತ ಮಹಮ್ಮದ್ ಮೋಹಾದ್ ಎಸ್ (33), ವಿಟ್ಲ ಪಡ್ನೂರು ಗ್ರಾಮ ನಿವಾಸಿ ಎಂದು ತಿಳಿದುಬಂದಿದೆ. ನಂತರ ವೈದ್ಯಕೀಯ ತಪಾಸಣೆಯಲ್ಲಿ ಆತ ಮಾದಕ ದ್ರವ್ಯ ಸೇವನೆ ಮಾಡಿರುವುದು ದೃಢಪಟ್ಟಿದೆ. ಈ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 24/2026 ರಂತೆ ಎನ್‌ಡಿಪಿಎಸ್ ಕಾಯ್ದೆ ಕಲಂ 27(b) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ.
ಬೆಳ್ತಂಗಡಿ: ಓಡಿಲ್ನಾಳದಲ್ಲಿ ನಡೆದ ಸುಮಂತ್ ಅಸಹಜ ಸಾವಿನ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಇಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರನ್ನು ಬಾಲಕನ ಪೋಷಕರು ಭೇಟಿ ಮಾಡಿ ನ್ಯಾಯ ದೊರಕಿಸಿಕೊಡಬೇಕೆಂದು ಮನವಿ ಮಾಡಿದ್ದಾರೆ. ಇತ್ತೀಚೆಗೆ ಬೆಳ್ತಂಗಡಿ ತಾಲೂಕಿನ ಓಡಿಲ್ನಾಳ ಗ್ರಾಮದ ಸಂಬೋಳ್ಯ ಎಂಬಲ್ಲಿ ಗೇರುಕಟ್ಟೆ ಪ್ರೌಢ ಶಾಲೆಯ 9ನೇ ತರಗತಿಯ ಪ್ರತಿಭಾನ್ವಿತ ವಿದ್ಯಾರ್ಥಿ ಸುಮಂತ್ ನಾಳ ದೇವಸ್ಥಾನಕ್ಕೆ ಧನುಪೂಜೆಗೆ ಹೋಗುವ ತೋಟದ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದ, ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಆದರೆ ಪ್ರಕರಣದ ತನಿಖೆಯು ನಿಧಾನಗತಿಯಲ್ಲಿ ಸಾಗುತ್ತಿದೆ,ಕೂಡಲೇ ಆರೋಪಿಗಳನ್ನು ಪತ್ತೆಹಚ್ಚಿ ನಮಗೆ ನ್ಯಾಯ ದೊರಕಿಸಿಕೊಡಬೇಕೆಂದು ಬಾಲಕನ ಪೋಷಕರು ಕೆ.ಪಿ.ಸಿ.ಸಿ.ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ನೇತೃತ್ವದಲ್ಲಿ ಮನವಿ ಸಲ್ಲಿಸಿದರು. ಈ ವೇಳೆ ಗೃಹಸಚಿವರು ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿಯಾದ ಅರುಣ್ ಕುಮಾರ್ ಮತ್ತು ಪಶ್ಚಿಮ ವಲಯದ ಪಶ್ಚಿಮ ವಲಯದ ಐಜಿಪಿ ಅಮಿತ್ ಸಿಂಗ್ ರವರಿಂದ ತನಿಖೆ ಬಗ್ಗೆ ಲ ವರದಿಯನ್ನು ಕೇಳಿ ತಿಳಿದುಕೊಂಡರು.ಈ ವೇಳೆ ಎಸ್ಪಿ ಅರುಣ್ ಕುಮಾರ್…
ಮಲ್ಪೆ : ಮಲ್ಪೆ ಕೊಚ್ಚಿನ್ ಶಿಪ್‌ಯಾರ್ಡ್‌ನ ನೌಕರರು ಭಾರತದ ನೌಕಾಸೇನೆಗೆ ಸಂಬಂಧಪಟ್ಟ ವಿವಿಧ ಗೌಪ್ಯ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ಅನಧಿಕೃತವಾಗಿ ಹಂಚಿಕೊಂಡು ಅಕ್ರಮ ಲಾಭ ಪಡೆದ ಪ್ರಕರಣದಲ್ಲಿ ಇನ್ನೋರ್ವ ಆರೋಪಿಯನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ. ಇದರೊಂದಿಗೆ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ಪಶ್ಚಿಮ ಬಂಗಾಳ ಮೂಲದ, ಪ್ರಸ್ತುತ ಕೇರಳದ ಇಡುಕಿ ಜಿಲ್ಲೆಯ ಮರಾಯು ಗ್ರಾಮದ ಆಲಿಫ್ ಇಸ್ಲಾಮ್ (21) ಬಂಧಿತ ಆರೋಪಿ. ಈ ಪ್ರಕರಣದಲ್ಲಿ ಇದಕ್ಕೂ ಮುನ್ನ 2025ರ ಡಿಸೆಂಬರ್ 21ರಂದು ಗುಜರಾತ್‌ನ ಹೀರೇಂದ್ರ ಕುಮಾರ್ ಹಾಗೂ 2025ರ ನವೆಂಬರ್ 21ರಂದು ಉತ್ತರ ಪ್ರದೇಶದ ರೋಹಿತ್ ಮತ್ತು ಸಂತ್ರಿ ಎಂಬವರನ್ನು ಬಂಧಿಸಲಾಗಿತ್ತು. ಆರೋಪಿಗಳು ಭಾರತೀಯ ನೌಕಾಸೇನೆಗೆ ಸಂಬಂಧಪಟ್ಟ ಹಡಗುಗಳ ನಂಬರ್‌ಗಳ ಗೌಪ್ಯ ಪಟ್ಟಿ ಸೇರಿದಂತೆ ಇತರ ರಹಸ್ಯ ಮಾಹಿತಿಗಳನ್ನು ವಾಟ್ಸಾಪ್ ಹಾಗೂ ಫೇಸ್‌ಬುಕ್ ಮೂಲಕ ಪಾಕಿಸ್ತಾನಕ್ಕೆ ಅನಧಿಕೃತವಾಗಿ ರವಾನಿಸಿ ಅಕ್ರಮ ಲಾಭ ಪಡೆದಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ತನಿಖೆಯನ್ನು ಮುಂದುವರಿಸಿದ ಪೊಲೀಸರು ಐದನೇ…
2,000 ರೂ. ಮೌಲ್ಯದ ಟಿ.ವಿ ಕಳ್ಳತನ ಮಾಡಿ 28 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ದಾವಣಗೆರೆ ಗ್ರಾಮಾಂತರ ಠಾಣೆಯ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ದೇವರಾಜ ಅರಸು ಬಡಾವಣೆ ನಿವಾಸಿ ಫಕೀರ (50) ಬಂಧಿತ ಆರೋಪಿ.1998ರ ಸೆ.23ರಂದು ಗ್ರಾಮಾಂತರ ಠಾಣಾ ವ್ಯಾಪ್ತಿಯ ರಂಗನಾಥ ಬಡಾವಣೆಯ ರುದ್ರಯ್ಯ ಎಂಬುವರ ಮನೆಯಲ್ಲಿ ಆರೋಪಿಯು ಟಿ.ವಿ ಕಳ್ಳತನ ಮಾಡಿದ್ದ. ದೂರು ಆಧರಿಸಿ ಪೊಲೀಸರು ರವಿ ಮತ್ತು ಮುನಾವರ್ ಎಂಬುವರನ್ನು ಬಂಧಿಸಿ ಕಳವಾಗಿದ್ದ ಟಿ.ವಿ ಜಪ್ತಿ ಮಾಡಿದ್ದರು. ಕಳ್ಳತನ ಕೃತ್ಯದಲ್ಲಿ ಭಾಗಿಯಾಗಿದ್ದ ಫಕೀರ ಹಾಗೂ ರಾಜ ಪರಾರಿಯಾಗಿದ್ದರು.ತಲೆಮರೆಸಿಕೊಂಡ ಆರೋಪಿಗಳ ಪತ್ತೆಗೆ 2019ರವರೆಗೆ ಪೊಲೀಸರು ಪ್ರಯತ್ನಿಸಿದ್ದರು. ನಂತರ ಇದನ್ನು ಬಹುದಿನಗಳಿಂದ ಪತ್ತೆಯಾಗದ ಪ್ರಕರಣದ ಪಟ್ಟಿಗೆ ಸೇರಿಸಲಾಗಿತ್ತು. ಈಗ ಮತ್ತೆ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ನ್ಯಾಯಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಉಳ್ಳಾಲ: ಅತಿ ವೇಗದ ಚಾಲನೆಯಿಂದಾಗಿ ನಿಯಂತ್ರಣ ತಪ್ಪಿದ ಬೈಕು ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಕಾಂಕ್ರೀಟ್ ಕಂಬ ಅರ್ಧದಿಂದ ತುಂಡಾಗಿ ಬಿದ್ದಿದ್ದು ಬೈಕ್ ಸವಾರಿ ಮಾಡುತ್ತಿದ್ದ ವಿದ್ಯಾರ್ಥಿಗಳಿಬ್ಬರು ಪವಾಡ ಸದೃಶ ಪಾರಾದ ಘಟನೆ ಉಳ್ಳಾಲ ತಾಲೂಕಿನ ಕಿನ್ಯ ಸಂಕೇಶ ಎಂಬಲ್ಲಿ ಸೋಮವಾರ ಸಂಜೆ ನಡೆದಿದೆ. ಬೈಕ್ ನೇರವಾಗಿ ಬಂದು ವಿದ್ಯುತ್ ಕಂಬಕ್ಕೆ ಢಿಕ್ಕಿಯಾಗಿದ್ದು ಇದರ ರಭಸಕ್ಕೆ ಕಂಬ ತುಂಡಾಗಿ ತಂತಿ ಸಮೇತ ಬಿದ್ದಿದೆ. ಕೂಡಲೇ ಜನ ಸೇರಿದರೂ ವಿದ್ಯುತ್ ಪ್ರವಹಿಸಬಹುದೆಂಬ ಭಯದಿಂದ ಯಾರೂ ಹತ್ತಿರಕ್ಕೆ ಹೋಗಿಲ್ಲ. ಅವರು ಒಂದಷ್ಟು ಹೊತ್ತು ಹೊರಳಾಡಿದ್ದಾರೆ. ಆದರೆ ಕಂಬ ಉರುಳುತ್ತಲೇ ವಿದ್ಯುತ್ ಲೈನ್ ಕಟ್ ಆಗಿದ್ದರಿಂದ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ವರದಿ ಮೂಲಕ ತಿಳಿದು ಬಂದಿದೆ.
ಬೆಂಗಳೂರು : ಮಹಿಳೆ ಮತ್ತು ಮಕ್ಕಳ ಮೇಲೆ ನಡೆಯುವ ಅತ್ಯಾಚಾರ ಮತ್ತು ಪೋಕೋ ಪ್ರಕರಣಗಳಲ್ಲಿ ದಾಖಲು ಮಾಡುವ ಸಂದರ್ಭದಲ್ಲಿ ಪೊಲೀಸರು ದೂರು ಅರ್ಜಿ, ಪ್ರಥಮ ವರ್ತಮಾನ ವರದಿ ಮತ್ತು ತನಿಖಾ ವರದಿಗಳಲ್ಲಿ ನೊಂದ ಮಹಿಳೆ ಅಥವಾ ಅಪ್ರಾಪ್ತರ ಹೆಸರು ಮತ್ತು ವಿಳಾಸಗಳ ಗೌಪತ್ಯೆಯನ್ನು ಕಾಪಾಡುವುದು ಕಡ್ಡಾಯವಾಗಿದೆ. ಮಹಿಳೆ ಮತ್ತು ಮಕ್ಕಳ ಮೇಲೆ ನಡೆಯುವ ಅತ್ಯಾಚಾರ ಮತ್ತು ಪೋಕೋ ಪ್ರಕರಣಗಳಲ್ಲಿ ದಾಖಲು ಮಾಡುವ ಸಂದರ್ಭದಲ್ಲಿ ದೂರು ಅರ್ಜಿ, ಪ್ರಥಮ ವರ್ತಮಾನ ವರದಿ ಮತ್ತು ತನಿಖಾ ವರದಿಗಳಲ್ಲಿ ನೊಂದ ಮಹಿಳೆ ಅಥವಾ ಅಪ್ರಾಪ್ತರ ಹೆಸರು ಮತ್ತು ವಿಳಾಸಗಳ ಗೌಪತ್ಯೆಯನ್ನು ಕಾಪಾಡುವ ಸಂಬಂಧ ಉಲ್ಲೇಖಿ-(1)ರ ಮಾನ್ಯ ಸರ್ವೋಚ್ಛ ನ್ಯಾಯಾಲಯದ ತೀರ್ಪಿನಲ್ಲಿ ಪಾಲಿಸುವಂತೆ ಆದೇಶಿಸಲಾಗಿರುತ್ತದೆ. ಅದರಂತೆ ನ್ಯಾಯಾಲಯದ ಆದೇಶದಂತೆ ಮಹಿಳೆ ಮತ್ತು ಅಪ್ರಾಪ್ತ ಮಕ್ಕಳ ಮೇಲೆ ನಡೆಯುವ ದೌರ್ಜನ್ಯಗಳಾದ ಅತ್ಯಾಚಾರ ಮತ್ತು ಪೋಕೋ ಪ್ರಕರಣಗಳಲ್ಲಿ ನೊಂದ ಮಹಿಳೆ ಅಥವಾ ಅಪ್ರಾಪ್ತರ ಹೆಸರು, ಗುರುತು ಮತ್ತು ವಿಳಾಸವನ್ನು ಪೊಲೀಸ್ ಠಾಣಾಧಿಕಾರಿಗಳು ಸಾರ್ವಜನಿಕಗೊಳಿಸದಂತೆ ಗೌಪ್ಯತೆ ಕಾಪಾಡಿಕೊಳ್ಳುವಂತೆ ಈ ಕಛೇರಿಯಿಂದ ಉಲ್ಲೇಖಿತ-2ರ…
ಪೊಲೀಸರಿಗೆ ಒಂದು ಲಕ್ಷ ವಸತಿಗೃಹಗಳನ್ನು ನಿರ್ಮಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ. ಕೊಡಗು ಜಿಲ್ಲೆ ಸುಂಟಿಕೊಪ್ಪದಲ್ಲಿ ನಿರ್ಮಿಸಿರುವ ನೂತನ ಪೊಲೀಸ್ ವಸತಿಗೃಹ ಕಟ್ಟಡ ಉದ್ಘಾಟಿಸಿ ಮಾತನಾಡಿದ ಸಚಿವರು, 2030 ವೇಳೆಗೆ ರಾಜ್ಯದಲ್ಲಿ ಪೊಲೀಸರಿಗೆ ಪೊಲೀಸ್ ಗೃಹ ಯೋಜನೆ ಅಡಿಯಲ್ಲಿ ಒಂದು ಲಕ್ಷ ವಸತಿಗೃಹ ನಿರ್ಮಾಣದ ಗುರಿ ಗೊಂದಲಾಗಿದೆ ಎಂದು ತಿಳಿಸಿದ್ದಾರೆ. ಈಗಾಗಲೇ ಪೊಲೀಸ್ ಗೃಹ ಯೋಜನೆ ಅಡಿಯಲ್ಲಿ 40,000 ಮನೆಗಳು ಪೂರ್ಣವಾಗಿವೆ. ಇನ್ನೂ 60 ಸಾವಿರ ಮನೆಗಳನ್ನು ಪೂರ್ಣಗೊಳಿಸಬೇಕಿದೆ. ಬಜೆಟ್ ಪೂರ್ವ ಸಭೆಯಲ್ಲಿ ಇಲಾಖಾವಾರು ಬೇಡಿಕೆ ಚರ್ಚೆಯ ಸಂದರ್ಭದಲ್ಲಿ ಪೊಲೀಸ್ ಮನೆಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಹೆಚ್ಚಿನ ಅನುದಾನಕ್ಕೆ ಬೇಡಿಕೆ ಇಡಲಾಗಿದೆ ಎಂದು ಹೇಳಿದ್ದಾರೆ.
ಬಂಟ್ವಾಳ: ಮಾರಿಪಳ್ಳ ಸಮೀಪದ ಕಡೆಗೋಳಿ ಎಂಬಲ್ಲಿ ರಿಕ್ಷಾ ಪಲ್ಟಿಯಾಗಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ನಡೆದಿದೆ. ಮಂಗಳೂರಿನಿಂದ ಕಲ್ಲಡ್ಕ ದೇವಸ್ಥಾನಕ್ಕೆ ಬರುವ ವೇಳೆ ಕಡೆಗೋಳಿಯಲ್ಲಿ ರಿಕ್ಷಾ ಅಪಘಾತವಾಗಿದೆ ಎನ್ನಲಾಗಿದೆ. ಮಂಗಳೂರು ನಿವಾಸಿ, ವಿಶಾಲಾಕ್ಷಿ (45) ಮೃತಪಟ್ಟ ಮಹಿಳೆ. ಮಂಗಳೂರು ಕಡೆಯಿಂದ ಬರುತ್ತಿರುವ ವೇಳೆ ಕಡೆಗೋಳಿ ಜಂಕ್ಷನ್ ನಲ್ಲಿ ಬೈಕ್ ಸವಾರನೋರ್ವ ಎದುರುಗಡೆ ಕ್ರಾಸ್ ಆಗಿದ್ದು, ರಿಕ್ಷಾ ಬೈಕ್ ಗೆ ಡಿಕ್ಕಿಯಾಗಿ, ಬಳಿಕ ನಿಯಂತ್ರಣ ತಪ್ಪಿ ರಿಕ್ಷಾ ಎದುರುಭಾಗದಲ್ಲಿ ನಿಂತಿದ್ದ ಮತ್ತೊಂದು ರಿಕ್ಷಾಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ರಿಕ್ಷಾದಲ್ಲಿ ವಿಶಾಲಾಕ್ಷಿ ಅವರ ತಂಗಿ ಹಾಗೂ ಅವರ ಇಬ್ಬರು ಮಕ್ಕಳು ಕೂಡ ಪ್ರಯಾಣಿಸುತ್ತಿದ್ದರು. ಆದರೆ ಚಾಲಕ ಸಹಿತ ನಾಲ್ವರು ಸಣ್ಣ ಪುಟ್ಟ ಗಾಯಗಳಿಂದ ಜೀವಕ್ಕೆ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಬಂಟ್ವಾಳ ಟ್ರಾಫಿಕ್ ಎಸ್.ಐ.ಆದರ್ಶ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ವರದಿ ಮೂಲಕ ತಿಳಿದುಬಂದಿದೆ










