Author: main-admin

ಮಂಗಳೂರು: ಕೌಟುಂಬಿಕ ಕಲಹದಿಂದ ಮನನೊಂದು ತನ್ನ ಮಗುವಿನೊಂದಿಗೆ ಆತ್ಮಹತ್ಯೆಗೆ ಮುಂದಾಗಿದ್ದ ಯುವಕನೊಬ್ಬನನ್ನು ಪಣಂಬೂರು ಪೊಲೀಸರು ಸಮಯಪ್ರಜ್ಞೆ ಮೆರೆದು ರಕ್ಷಿಸಿದ ಘಟನೆ ಸೋಮವಾರ ಮುಸ್ಸಂಜೆ ವೇಳೆಗೆ ಸಂಭವಿಸಿದೆ. ಕೂಳೂರು ಪಂಜಿಮೊಗರು ಅಂಬಿಕಾ ನಗರ ನಿವಾಸಿ ರಾಜೇಶ್(35) ಮತ್ತವರ ನಾಲ್ಕು ವರ್ಷದ ಪುತ್ರಿಯನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪತ್ನಿಯೊಂದಿಗೆ ಜಗಳ ಮಾಡಿಕೊಂಡಿದ್ದ ರಾಜೇಶ್ ತನ್ನ ಮಗಳೊಂದಿಗೆ ತಣ್ಣೀರುಬಾವಿ ಬೀಚ್‌ಗೆ ತೆರಳಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸೆಲ್ಫಿ ವೀಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ವೀಡಿಯೊವನ್ನು ಸಾರ್ವಜನಿಕರೊಬ್ಬರು ಪಣಂಬೂರು ಉಪವಿಭಾಗದ ಎಸಿಪಿ ಶ್ರೀಕಾಂತ್‌ರಿಗೆ ಕಳುಹಿಸಿದ್ದರು. ವೀಡಿಯೊವನ್ನು ಗಂಭೀರವಾಗಿ ಪರಿಗಣಿಸಿದ ಎಸಿಪಿ ತಕ್ಷಣ ಪಣಂಬೂರು ಪೊಲೀಸರಿಗೆ ನೀಡಿದ್ದರು. ಆದರೆ ಆ ವೀಡಿಯೊ ಯಾವ ಬೀಚ್‌ನಲ್ಲಿ ಚಿತ್ರೀಕರಿಸಿದ್ದು ಎಂದು ಗೊತ್ತಾಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರು ಎರಡು ತಂಡಗಳಾಗಿ ಪಣಂಬೂರು ಮತ್ತು ತಣ್ಣೀರುಬಾವಿ ಬೀಚ್‌ಗೆ ತೆರಳಿ ಪರಿಶೀಲಿಸಿದ್ದರು. ತಣ್ಣೀರುಬಾವಿ ಬೀಚ್‌ನಲ್ಲಿ ಗಂಟೆಯ ಹಿಂದೆ ವೀಡಿಯೋದಲ್ಲಿದ್ದ ತಂದೆ-ಮಗಳನ್ನು ನೋಡಿದ್ದಾಗಿ ಸಾರ್ವಜನಿಕರೊಬ್ಬರು ಮಾಹಿತಿ ನೀಡಿದ್ದರು. ಆ ಮಾಹಿತಿಯನ್ನು ಆಧರಿಸಿ ವಿಚಾರಿಸಿದಾಗ…

Read More

ಕೋಮುಸೌಹಾರ್ದತೆ ಮತ್ತು ಮಹಿಳೆಯ ಘನತೆಗೆ ಧಕ್ಕೆ ತಂದ ಆರೋಪ ಎದುರಿಸುತ್ತಿರುವ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಜಾಮೀನು ಅರ್ಜಿ ಇಂದೂ ಇತ್ಯರ್ಥವಾಗದೆ ಮುಂದೂಡಲ್ಪಟ್ಟಿತು.ಬಿಎನ್ಎಸ್ಎಸ್ ಸೆಕ್ಷನ್ 338, 339 ಪ್ರಕಾರ ಜನವಾದಿ ಮಹಿಳಾ ಸಂಘಟನೆಯ ನಾಯಕಿ ಈಶ್ವರಿ ಪದ್ಮುಂಜ ಪರ ಹಿರಿಯ ವಕೀಲ ಸತೀಶನ್ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ವಾದ ಮಂಡಿಸಲು ಸಮಾಯಾವಕಾಶ ಕೇಳಿದರು.ಪೊಲೀಸರ ಪರ ಸರ್ಕಾರಿ ವಕೀಲರು ಜಾಮೀನು ಅರ್ಜಿಗೆ ಆರು ಪುಟಗಳ ತಕರಾರು ಅರ್ಜಿ ಸಲ್ಲಿಸಿದ್ದು, ನ್ಯಾಯಾಲವು ವಿಚಾರಣೆಯನ್ನು ನವೆಂಬರ್ 10ಕ್ಕೆ ಮುಂದೂಡಿದೆ. ಪ್ರಭಾಕರ ಭಟ್ ತಾನು ಮಾಡಿದ ಭಾಷಣದ ವಿರುದ್ದ ದಾಖಲಾಗಿರುವ ಎಫ್ಐಆರ್ ಗೆ ನಿರೀಕ್ಷಣಾ ಜಾಮೀನು ಕೋರಿ ಪುತ್ತೂರು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಅಕ್ಟೋಬರ್ 27 ರಂದು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು ‘ಬಲವಂತದ ಕ್ರಮ ತೆಗೆದುಕೊಳ್ಳದಂತೆ ಮಧ್ಯಂತರ ಆದೇಶ’ ನೀಡಿ ಪೂರ್ಣ ಪ್ರಮಾಣದ ವಿಚಾರಣೆ ಮತ್ತು ನಿರೀಕ್ಷಣಾ ಜಾಮೀನು ಸಂಬಂಧ ಅದೇಶವನ್ನು ಅಕ್ಟೋಬರ್…

Read More

ಮಂಗಳೂರು: ಲೋಕೋಪಯೋಗಿ ಹಾಗೂ ಅಬಕಾರಿ ಇಲಾಖೆಗಳ ಭ್ರಷ್ಟಾಚಾರದ ಬಗ್ಗೆ ವಿವರ ನೀಡಲು ದಿನಾಂಕ 3-11-2025 ಸೋಮವಾರದಂದು ಚಿತ್ರ ನಿರ್ಮಾಪಕರಾದ ಆರ್ ಧನರಾಜ್ ರವರು ಪತ್ರಿಕಾಗೋಷ್ಠಿ ನಡೆಸಿದರು ಚಿತ್ರ ನಿರ್ಮಾಪಕರಾದ ಆರ್. ಧನರಾಜ್ ರವರ ಪತ್ರಿಕಾಗೋಷ್ಟಿಯಲ್ಲಿ 3 ಬೇಡಿಕೆಗಳನ್ನು ಹಾಕಲಾಯಿತು. ತುಳು ನಿರ್ಮಾಪಕರಿಗೆ ಮಾನ್ಯತೆ ಕೊಡಬೇಕು. ಅಬಕಾರಿ ಇಲಾಖೆಯ ಸಿ ಆರ್7 ಲೈಸನ್ಸ್ ನಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ, ಅಬಕಾರಿ ಸುಂಕ ಜಾಸ್ತಿಯಾಗುತ್ತಿದೆ. ಆದುದರಿಂದ ಅಬಕಾರಿ ಸಚಿವರನ್ನು ಬದಲಾಯಿಸಬೇಕು. ಲೋಕೋಪಯೋಗಿ ಇಲಾಖೆಯಲ್ಲಿ 9 ವರ್ಷಗಳಿಂದ ಆಫಿಸರ್ ಆಗಿ ಕೆಲಸಮಾಡುತ್ತಿರುವ ಭ್ರಷ್ಟ ಅಧಿಕಾರಿಯನ್ನು, ಸಚಿವರಾದ ಸತೀಶ್ ಜಾರಕಿಯವರು ವರ್ಗಾವಣೆ ಮಾಡಬೇಕು.

Read More

ಪೂಂಜಾಲಕಟ್ಟೆ: ಗಾಂಜಾ ಸೇವಿಸಿ ಮಡಂತ್ಯಾರು ಪೇಟೆಯಲ್ಲಿ ಅಸಭ್ಯ ರೀತಿಯಲ್ಲಿ ವರ್ತಿಸಿದ ವ್ಯಕ್ತಿಯನ್ನು ಪೂಂಜಾಲಕಟ್ಟೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಬೆಳ್ತಂಗಡಿ ತಾಲೂಕಿನ ಪಾರೆಂಕಿ ಗ್ರಾಮದ ರಕ್ತಶ್ವರಿಪದವು ನಿವಾಸಿ ಸದಾನಂದ ಪೂಜಾರಿ ಮಗ ಸಂಕೇತ್ (28) ಎಂದು ಗುರುತಿಸಲಾಗಿದೆ. ಈತನನ್ನು ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯಕೀಯ ಪರೀಕ್ಷೆ ನಡೆಸಿದಾಗ ನಿಷೇಧಿತ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದ್ದ. ಈ ಬಗ್ಗೆ ಪೂಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.

Read More

ನವದೆಹಲಿ: ಬ್ಲೂಫಿಲಂಗಳ ನಿಷೇಧ ಕೋರಿ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಲಾಗಿದ್ದ ಅರ್ಜಿಗೆ ಮನ್ನಣೆ ನೀಡಲು ಹಿಂದೇಟು ಹಾಕಿರುವ ಸುಪ್ರೀಂ ಕೋರ್ಟ್, ನೇಪಾಳದಲ್ಲಿ ಸೋಷಿಯಲ್‌ ಮೀಡಿಯಾ ನಿಷೇಧದ ವಿರುದ್ಧ ಉಂಟಾಗಿದ್ದ ಜೆನ್‌ಝೀ ದಂಗೆಯನ್ನು ಉದಾಹರಣೆಯಾಗಿ ನೀಡಿದೆ.‌‘ನೇಪಾಳದಲ್ಲಿ ನಿಷೇಧ ಹೇರಲು ಯತ್ನಿಸಿದಾಗ ಏನಾಯಿತು ಎಂದು ಗೊತ್ತಿದೆಯಲ್ಲವೇ?’ ಎಂದು ಹೇಳಿದೆ. ಅಲ್ಲದೆ, ‘ಆನ್‌ಲೈನ್‌ ಕಂಟೆಂಟ್‌ ನಿಷೇಧವು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತದೆ’ ಎಂದು ಅಭಿಪ್ರಾಯಪಟ್ಟಿದೆ. ಆದಾಗ್ಯೂ ವಿಚಾರಣೆಯನ್ನು 4 ವಾರಗಳ ಕಾಲ ಮುಂದೂಡಿದೆ. ‘ಪೋರ್ನ್‌ ಚಿತ್ರಗಳ ವೀಕ್ಷಣೆಯಿಂದ ವ್ಯಕ್ತಿ, ವಿಶೇಷವಾಗಿ 13ರಿಂದ 18ರ ಹರೆಯದವರು ಮತ್ತು ಸಮಾಜದ ಮೇಲೆ ಕೆಟ್ಟ ಪರಿಣಾಮಗಳಾಗುತ್ತಿವೆ. ಅಂತಹ ದೃಶ್ಯಗಳು ಜನರಿಗೆ ಸುಲಭವಾಗಿ ಸಿಗುವುದನ್ನು ತಡೆಯಲು ಯಾವುದೇ ಕ್ರಮಗಳಿಲ್ಲ. ಅಶ್ಲೀಲ ಚಿತ್ರಗಳನ್ನು ನಿರ್ಬಂಧಿಸಲು ಕೇಂದ್ರ ಸರ್ಕಾರ ನೀತಿ ರೂಪಿಸಬೇಕು’ ಎಂದು ವ್ಯಕ್ತಿಯೊಬ್ಬರು ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ಸಿಜೆಐ ನ್ಯಾ। ಬಿ.ಆರ್‌. ಗವಾಯಿ ಅವರ ಪೀಠ, ‘ಬ್ಯಾನ್‌ನಿಂದಾಗಿ ನೇಪಾಳದಲ್ಲಿ ಏನಾಯಿತು ನೋಡಿ’ ಎಂದು ಅಲ್ಲಿ ನಡೆದ ಜೆನ್‌ಝೀ ದಂಗೆಯನ್ನು ಉಲ್ಲೇಖಿಸಿದರು ಹಾಗೂ ‘ಆನ್‌ಲೈನ್‌ ಕಂಟೆಂಟ್‌…

Read More

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಹೆಸರಿನಲ್ಲಿ ನಕಲಿ ವೆಬ್‌ಸೈಟ್ ಖಾತೆ ತೆರೆದು ಅತಿಥಿ ಗೃಹದ ಕೊಠಡಿಯನ್ನು ಕಾಯ್ದಿರಿಸುವುದಾಗಿ ಹಣ ಪಡೆದು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಮೂಕಾಂಬಿಕಾ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ ನೀಡಿದ ದೂರಿನಂತೆ ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ದೇವಸ್ಥಾನದ ಅಧಿಕೃತ ವೆಬ್‌ಸೈಟ್  http://karnatakatemplesaccommodation.com ಇದರ ಬದಲಿಗೆ ವೆಬ್‌ಸೈಟನ್ನು ತೆರೆದು, ನಕಲಿ ವೆಬ್‌ಸೈಟ್ karnataka temple accommodation ಮೂಲಕ ಲಲಿತಾಂಬಿಕಾ ಅತಿಥಿ ಗ್ರಹದ ಕೊಠಡಿಯನ್ನು ಕಾಯ್ದಿರಿಸುವುದಾಗಿ ನಂಬಿಸಿ, ಕ್ಯೂ ಆರ್‌ಕೋಡ್ ಮೂಲಕ ಹಣ ಪಡೆದು ವಂಚಿಸಲಾಗಿದೆ. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ದೂರು ನೀಡಲಾಗಿದೆ. ಅದರಂತೆ ಕೊಲ್ಲೂರು ಠಾಣೆಯಲ್ಲಿ ಯುಡಿಆರ್‌ ಕ್ರಮಾಂಕ 53/2025 ಕಲಂ: 194 BNSS ರಂತೆ ಪ್ರಕರಣ ದಾಖಲಾಗಿದೆ.

Read More

ಮಕ್ಕಳನ್ನು ಮಾರುವವರಿಗೂ ಹಾಗೂ ಕೊಳ್ಳುವವರಿಗೂ ಬಾಲನ್ಯಾಯ ಕಾಯ್ದೆ -2015 ಸೆಕ್ಷನ್ 80 ಮತ್ತು 81ರ ಅನ್ವಯ 5 ವರ್ಷಗಳವರೆಗೂ ಸೆರೆಮನೆ ವಾಸದೊಂದಿಗೆ ರೂ. 1.00 ಲಕ್ಷಗಳವರೆಗೆ ದಂಡ ವಿಧಿಸಬಹುದು. ಈ ಅಪರಾಧದಲ್ಲಿ ಆಸ್ಪತ್ರೆಯವರು ಶಾಮೀಲಾದರೆ ಶಿಕ್ಷೆಯ ಅವಧಿ 3 ವರ್ಷಗಳಿಂದ 7 ವರ್ಷಗಳವರೆಗೆ ವಿಧಿಸಲಾಗುವುದು. ಸಾರ್ವಜನಿಕ ಸ್ಥಳಗಳಲ್ಲಿ ಅನಾಥ, ಪರಿತ್ಯಕ್ತ ಮತ್ತು ಒಪ್ಪಿಸಲ್ಪಟ್ಟ ಮಕ್ಕಳ ಮಾಹಿತಿಯು ಕಂಡು ಬಂದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಆಲ್ಕೋಳ, ಶಿವಮೊಗ್ಗ ದೂ.ಸಂ.: 08182-295709 ಇಲ್ಲಿಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಶಿವಮೊಗ್ಗ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ

Read More

ಮಂಗಳೂರು : ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಹೆಚ್ಚು ಲಾಭ ದೊರೆಯುವುದಾಗಿ ನಂಬಿಸಿ 32.06 ಲಕ್ಷ ರೂ. ವಂಚಿಸಿರುವ ಬಗ್ಗೆ ಮಂಗಳೂರಿನ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರುದಾರರು ಸೆ.9ರಂದು ಫೇಸ್‌ಬುಕ್ ನೋಡುತ್ತಿರುವಾಗ ಕಾವ್ಯ ಶೆಟ್ಟಿ ಹೆಸರಿನಲ್ಲಿ ಫ್ರೆಂಡ್ಸ್ ರಿಕ್ವೆಸ್ಟ್ ಬಂದಿದೆ. ಅದನ್ನು ಅಕ್ಸೆಪ್ಟ್ ಮಾಡಿ ಅವರೊಂದಿಗೆ ಚಾಟ್ ಮಾಡಿದ್ದಾರೆ. ಆಕೆ ತಾನು ಮುಂಬಯಿನಲ್ಲಿ ಟ್ರೇಡಿಂಗ್ ಕೆಲಸ ಮಾಡಿಕೊಂಡಿದ್ದು, ಅದರಿಂದ ಹೆಚ್ಚಿನ ಲಾಭ ಬರುತ್ತದೆ ಎಂದು ನಂಬಿಸಿದ್ದಾಳೆ. ಇದರಿಂದ ಆಸಕ್ತಿಗೊಂಡು ಟ್ರೇಡಿಂಗ್‌ನಲ್ಲಿ ಕೆಲಸ ಮಾಡಲು ಒಪ್ಪಿದ ದೂರುದಾರಿಗೆ ಅನಂತರ ಕಾವ್ಯ ಶೆಟ್ಟಿ ತನ್ನ ವಾಟ್ಸಾಪ್ ನಂಬರ್‌ನಿಂದ ಲಿಂಕ್ ಕಳುಹಿಸಿ ಅದಕ್ಕೆ ಸೇರುವಂತೆ ತಿಳಿಸಿದ್ದಾಳೆ. ಲಿಂಕ್ ಒತ್ತಿದಾಗ ಟ್ರೇಡಿಂಗ್ ಆ್ಯಪ್ ತೆರೆದುಕೊಂಡಿದೆ. ಬಳಿಕ ಹೆಸರು, ಮೇಲ್ ಐಡಿ ಹಾಗೂ ವೈಯಕ್ತಿಕ ವಿವರಗಳನ್ನು ನಮೂದಿಸಿದ್ದಾರೆ. ಬಳಿಕ ಟ್ರೇಡಿಂಗ್‌ನಲ್ಲಿ ಷೇರ್ ಖರೀದಿಸಲು 40,000 ರೂ. ಪಾವತಿ ಮಾಡಲು ತಿಳಿಸಿದಂತೆ ಸೆ.13ರಂದು ಪಾವತಿ ಮಾಡಿದ್ದು, ಲಾಭಾಂಶವಾಗಿ 9,504 ರೂ. ಹಣ ಖಾತೆಗೆ ಜಮೆಯಾಗಿದೆ. ಅನಂತರ 2,00,000 ರೂ.…

Read More

ಪುತ್ತೂರು: ಮಾಣಿ ಸಮೀಪದ ಕೊಡಾಜೆಯಲ್ಲಿ ಓಮ್ನಿ ಕಾರು ಪಲ್ಟಿಯಾಗಿ ಹೊಂಡಕ್ಕೆ ಬಿದ್ದ ಘಟನೆ ನಡೆದಿದೆ. ಕುಶಾಲನಗರ ಮೂಲದ ಕುಟುಂಬವಿದ್ದ ಓಮ್ನಿ ಕಾರು ಮಂಗಳೂರಿನಿಂದ ಬರುತ್ತಿದ್ದ ವೇಳೆ ಕೊಡಾಜೆಯಲ್ಲಿ ವೀಲ್ ತುಂಡಾಗಿ ರಸ್ತೆ ಸಮೀಪದ ಹೊಂಡಕ್ಕೆ ಪಲ್ಟಿಯಾಗಿದ್ದು, ವಾಹನದಲ್ಲಿದ್ದ ಐವರು ಪ್ರಯಾಣಿಕರಲ್ಲಿ ವಾಹನ ಚಾಲನೆ ಮಾಡುತ್ತಿದ್ದ ವ್ಯಕ್ತಿಯ ಕಾಲಿಗೆ ಗಂಭೀರ ಗಾಯವಾಗಿದೆ. ಇತರರು ಸಣ್ಣ-ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದಿಂದಾಗಿ ಕಾರು ಜಖಂಗೊಂಡಿದ್ದು, ಕಾರಿನೊಳಗೆ ಸಿಲುಕಿದವರನ್ನು ಸ್ಥಳೀಯ ಯುವಕರ ಸಹಾಯದಿಂದ ಹೊರತೆಗೆಯಲಾಯಿತು. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗಾಯಾಳುಗಳನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

Read More

ಮಂಗಳೂರು: ನಗರ ಹೊರವಲಯದ ಅಡ್ಯಾರ್ ಪದವು ಎಂಬಲ್ಲಿನ ಮನೆಯೊಂದರಲ್ಲಿ ರವಿವಾರ ಸಂಜೆ ಎಸಿ ಸ್ಫೋಟಗೊಂಡು ಅಪಾರ ಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿದೆ. ಫೈಝಲ್ ಎಂಬವರಿಗೆ ಸೇರಿದ ಮನೆ ಇದಾಗಿದ್ದು, ಕೃತ್ಯ ನಡೆಯುವಾಗ ಮನೆಯಲ್ಲಿ ಯಾರೂ ಇರಲಿಲ್ಲ ಮತ್ತು ಮನೆಗೆ ಬೀಗ ಹಾಕಲಾಗಿತ್ತು ಎನ್ನಲಾಗಿದೆ. ಸಂಜೆಯ ವೇಳೆಗೆ ಮನೆಯೊಳಗಿನಿಂದ ಹೊಗೆ ಹೊರಬರುತ್ತಿರುವುದನ್ನು ಗಮನಿಸಿದ ಅಕ್ಕಪಕ್ಕದ ಮನೆಯವರು ತಕ್ಷಣ ಮನೆಯ ಬಾಗಿಲು ಮುರಿದು ಒಳಹೊಕ್ಕಿ ಬೆಂಕಿ ನಂದಿಸಿರುವುದಾಗಿ ತಿಳಿದು ಬಂದಿದೆ. ಫೈಝಲ್ ಅವರು ಬೇರೊಂದು ಮನೆಯಲ್ಲಿ ವಾಸವಾಗಿದ್ದರು. ಇತ್ತೀಚೆಗೆ ಈ ಮನೆಯಲ್ಲಿ ಮತ್ತೆ ವಾಸಿಸಲು ಬೇಕಾದ ಸಿದ್ಧತೆ ಮಾಡಿಕೊಂಡಿದ್ದರು. ಅದರಂತೆ ನಾಲೈದು ದಿನದ ಹಿಂದೆ ಎಸಿ ಅಳವಡಿಸಿದ್ದರು ಎನ್ನಲಾಗಿದೆ. ರವಿವಾರ ಸಂಜೆ ಈ ಎಸಿ ಸ್ಪೋಟಗೊಂಡಿದೆ. ಮನೆಯ ಬಾಗಿಲು ಮುಚ್ಚಲ್ಪಟ್ಟ ಕಾರಣ ಹೊಗೆ ಆವರಿಸಿದೆ, ಬೆಂಕಿ ಕಾಣಿಸಿದೆ. ಇದರಿಂದ ಪೀಠೋಪಕರಣಗಳು, ಬಟ್ಟೆಬರೆ, ನಗದು, ಪಾಸ್‌ಪೋರ್ಟ್ ಸಹಿತ ಮನೆಯ ಬೆಲೆ ಬಾಳುವ ಸಾಮಗ್ರಿಗಳು ಸುಟ್ಟು ಕರಕಲಾಗಿವೆ ಎಂದು ತಿಳಿದು ಬಂದಿದೆ.

Read More