Facebook Twitter Instagram
    Tuesday, June 9
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಬೆಳ್ತಂಗಡಿ: ಹೀಲಿಯಂ ಗ್ಯಾಸ್ ಸೋರಿಕೆಯಿಂದ ಬೆಂಕಿ ಅವಘಡ; ಅಂಗಡಿ ಸುಟ್ಟು ಭಸ್ಮ
    ಇತ್ತೀಚಿನ ಸುದ್ದಿ

    ಬೆಳ್ತಂಗಡಿ: ಹೀಲಿಯಂ ಗ್ಯಾಸ್ ಸೋರಿಕೆಯಿಂದ ಬೆಂಕಿ ಅವಘಡ; ಅಂಗಡಿ ಸುಟ್ಟು ಭಸ್ಮ

    February 14, 2026
    Share

    ಬೆಳ್ತಂಗಡಿ: ಹೀಲಿಯಂ ಗ್ಯಾಸ್ ಸೋರಿಕೆಯಿಂದ ಉಂಟಾದ ಬೆಂಕಿ ಅವಘಡದಲ್ಲಿ ಅಂಗಡಿ ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ ಶನಿವಾರ ಬೆಳಗ್ಗೆ ಬೆಳ್ತಂಗಡಿ ಪಟ್ಟಣದಲ್ಲಿ ನಡೆದಿದೆ.

    ಪಟ್ಟಣದ ಸಂತೆಕಟ್ಟೆ ಪ್ರದೇಶದಲ್ಲಿರುವ ಹೇರಾಜೆ ಕಾಂಪ್ಲೆಕ್ಸ್‌ನ ಮೊದಲ ಮಹಡಿಯಲ್ಲಿ ಮುಹಮ್ಮದ್‌ ಸಮೀಲ್ ಮಾಲಕತ್ವದ KAF ಕ್ರಿಯೇಟಿವ್ ಆರ್ಟ್ & ಕ್ರಾಫ್ಟ್ ಸ್ಟೋರ್ ನಲ್ಲಿ ಫೆ.14ರಂದು ಬೆಳಗ್ಗೆ 7:30ಕ್ಕೆ ಕಾರ್ಯಕ್ರಮವೊಂದಕ್ಕಾಗಿ ಬಲೂನ್‌ಗಳಿಗೆ ಗ್ಯಾಸ್ ತುಂಬುವ ವೇಳೆ ಹೀಲಿಯಂ ಗ್ಯಾಸ್ ಸೋರಿಕೆಯಾಗಿದ್ದು, ಬಳಿಕ ಸ್ಪೋಟ ಸಂಭವಿಸಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಅಂಗಡಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ ಎಂದು ತಿಳಿದುಬಂದಿದೆ.

    ಅಂಗಡಿಯೊಳಗೆ ಇಬ್ಬರು ಕೆಲಸದವರು ಇದ್ದು, ಅವರು ತಕ್ಷಣ ಹೊರಗೆ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಸ್ಥಳೀಯರ ಸಹಕಾರದೊಂದಿಗೆ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಬೆಂಕಿಯ ಕೆನ್ನಾಲಿಗೆಗೆ ಅಕ್ಕಪಕ್ಕದ ಕೆಲವು ಅಂಗಡಿಗಳಿಗೂ ಹಾನಿ ಸಂಭವಿಸಿದ್ದು, ಗ್ಯಾಸ್ ಸೋರಿಕೆಯಿಂದ ಯಾವುದೇ ದೊಡ್ಡ ಅನಾಹುತ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

    Post Views: 109

    Related Posts

    ಮಹಿಳಾ ಐಪಿಎಸ್ ಅಧಿಕಾರಿಯ ರಹಸ್ಯ ಎಂಟ್ರಿ; ಪಬ್‌ನ ಕರಾಳ ಮುಖ ಅನಾವರಣ

    June 8, 2026

    ಆಂಬ್ಯುಲೆನ್ಸ್ ಸಿಗದೆ ಹೃದಯಾಘಾತ ರೋಗಿ ಸಾವು; ಕೊಕ್ಕಡ ಆರೋಗ್ಯ ವ್ಯವಸ್ಥೆ ವಿರುದ್ಧ ಆಕ್ರೋಶ

    June 8, 2026

    ಹಠಾತ್ ಹವಾಮಾನ ವೈಪರೀತ್ಯದ ಹೊಡೆತ: ದೆಹಲಿ ಏರ್‌ಪೋರ್ಟ್‌ನಲ್ಲಿ 3 ವಿಮಾನಗಳು ಜಖಂ

    June 8, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.