Author: main-admin

ಮಂಗಳೂರು: ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡಿರುವ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಕಂಬಳಪದವು ಎಂಬಲ್ಲಿ ಗುರುವಾರ ಸಂಜೆ ನಡೆದಿದೆ. ಗಾಯಗೊಂಡ ಯುವಕನನ್ನು ನಡುಪದವು ನಿವಾಸಿ ಬೇಬಿ ಎಂಬವರ ಮಗ ಸುಶಾಂತ್ (23) ಎಂದು ಗುರುತಿಸಲಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ಸುಶಾಂತ್ ರಸ್ತೆಗೆ ಎಸೆಯಲ್ಪಟ್ಟಿದ್ದು, ಈ ವೇಳೆ ತಲೆಗೆ ತೀವ್ರ ಗಾಯಗಳಾಗಿದೆ. ತಕ್ಷಣ ಅವರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯನ್ನು ಹಿಟ್‌ ಅಂಡ್‌ ರನ್‌ ಪ್ರಕರಣವೆಂದು ಪರಿಗಣಿಸಲಾಗಿದ್ದು, ಟ್ರಕ್ ಚಾಲಕ ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದ ನಂತರ ನಿಲ್ಲಿಸದೆ ಸ್ಥಳದಿಂದ ಪರಾರಿಯಾಗಿದ್ದಾನೆ. ಚಾಲಕನ ಅಜಾಗರೂಕತೆಯಿಂದ ಸ್ಥಳೀಯ ಸಾರ್ವಜನಿಕರಿಂದ ತೀವ್ರ ಆಕ್ರೋಶವಾಗಿದೆ. ಅಪಘಾತದ ಸ್ವಲ್ಪ ಸಮಯದ ನಂತರ ಸ್ಥಳಕ್ಕೆ ಆಗಮಿಸಿದ ಕೊಣಾಜೆ ಪೊಲೀಸರು ಶೋಧ ಕಾರ್ಯಾಚರಣೆಯನ್ನು ನಡೆಸಿ ಅಪಘಾತಕ್ಕೆ ಕಾರಣವಾದ ಟ್ರಕ್ ಅನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಚಾಲಕನನ್ನು ಬಂಧಿಸಲು ಮತ್ತು ಘಟನೆಗಳ ನಿಖರವಾದ ಮಾಹಿತಿ ಪಡೆಯಲು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂಬುದಾಗಿ…

Read More

ಬೆಂಗಳೂರು: ಸೈಬರ್ ಅಪರಾಧ ಸೇರಿದಂತೆ ನಾನಾ ಅಪರಾಧಗಳಲ್ಲಿ ನಮ್ಮ ರಾಜ್ಯವು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಾಗಿದ್ದು, ಇದನ್ನು ಕಟ್ಟುನಿಟ್ಟಾಗಿ ತಡೆಗಟ್ಟಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ. ಕೋರಮಂಗಲದ ಪರೇಡ್ ಮೈದಾನದಲ್ಲಿ ಗುರುವಾರ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ 158 ಪೊಲೀಸರಿಗೆ ಮುಖ್ಯಮಂತ್ರಿಗಳ ಪದಕ ಪ್ರಧಾನ ಮಾಡಿ ಮಾತನಾಡಿದ ಅವರು, ಸೈಬರ್‌ ಕ್ರೈಂ ಹಾಗೂ ಮಾದಕ ದ್ರವ್ಯಗಳ ಅಪರಾಧಗಳಲ್ಲಿ ಶಿಕ್ಷೆಯ ಪ್ರಮಾಣ ಕಡಿಮೆ ಇದೆ. ಈ ಶಿಕ್ಷೆಯ ಪ್ರಮಾಣ ಹೆಚ್ಚಿಸುವ ಕೆಲಸ ಆಗಬೇಕು. ಡ್ರಗ್ಸ್‌ ಮುಕ್ತ ರಾಜ್ಯ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಪೊಲೀಸರು ಪ್ರಯತ್ನ ಮಾಡದಿದ್ದರೆ, ಅಂತಹವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದರು. ನಾನು ಹಲವು ಸಂದರ್ಭಗಳಲ್ಲಿ ಹೇಳಿದ್ದೇನೆ ಮತ್ತು ಈಗಲೂ ಪುನರುಚ್ಚರಿಸುತ್ತಿದ್ದೇನೆ. ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರ ಗಮನಕ್ಕೆ ಬಾರದೆ ಯಾವುದೇ ಕ್ರಿಮಿನಲ್ ಅಪರಾಧಗಳು ನಡೆಯಲು ಸಾಧ್ಯವಿಲ್ಲ. ಇದನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು. ಪೊಲೀಸ್ ಇನ್ಸ್‌ಪೆಕ್ಟರ್‌ಗಳು ತಮ್ಮ ಮಿತಿಯಲ್ಲಿ ದಕ್ಷತೆಯಿಂದ ಮತ್ತು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಹಲವಾರು…

Read More

ತುಳು ಚಲನಚಿತ್ರರಂಗದಲ್ಲಿ ವಿಭಿನ್ನ ಶೀರ್ಷಿಕೆ ಹಾಗೂ ವಿನೂತನ ಕಥಾಹಂದರದಿಂದಲೇ ಕುತೂಹಲ ಮೂಡಿಸಿರುವ “90ಎಂಎಲ್ – ಕುಲ್ಲುಗನಾ…?” ಸಿನಿಮಾ ಇದೇ ಏಪ್ರಿಲ್ 10 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲು ಸಜ್ಜಾಗಿದೆ. ಕರಾವಳಿಯ ಸೊಗಡನ್ನು ಹಾಸ್ಯ, ಭಾವನೆ ಮತ್ತು ಸಾಮಾಜಿಕ ಸಂದೇಶದೊಂದಿಗೆ ಬೆರೆಸಿಕೊಂಡಿರುವ ಈ ಚಿತ್ರ, ಕೋಸ್ಟಲ್‌ವುಡ್‌ಗೆ ಹೊಸ ಚೈತನ್ಯ ತುಂಬುವ ನಿರೀಕ್ಷೆ ಮೂಡಿಸಿದೆ. ಡಿಡಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಡೋಲ್ಫಿ ಡಿಸೋಜ ನಿರ್ಮಿಸಿರುವ ಈ ಚಿತ್ರವನ್ನು ರಂಜಿತ್ ಸಿ. ಬಜಾಲ್ ನಿರ್ದೇಶಿಸಿದ್ದಾರೆ. ಹಲವು ವರ್ಷಗಳ ಸಹಾಯಕ ನಿರ್ದೇಶಕರಾಗಿ ಅನುಭವ ಪಡೆದಿರುವ ಅವರು, ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಗುರುತಿಸಿಕೊಳ್ಳಲು ಮುಂದಾಗಿದ್ದಾರೆ. ತುಳಸಿದಾಸ್ ಮಂಜೇಶ್ವರ ರವರ ಸಂಭಾಷಣೆ ಚಿತ್ರಕ್ಕೆ ಜೀವ ತುಂಬಿದರೆ, ವಿಶಾಲ್ ದೇವಾಡಿಗ ಸಂಕಲನ ಹಾಗೂ ಪ್ರತಿಭಾವಂತರ ತಂಡ ಚಿತ್ರಕ್ಕೆ ಕೈಜೋಡಿಸಿದೆ. ಮನರಂಜನೆ ಜೊತೆಗೆ ಸಂದೇಶ : ‘90 ಎಂಎಲ್’ ಕೇವಲ ಹಾಸ್ಯಚಿತ್ರವಲ್ಲ. ಕುಟುಂಬ ಮನರಂಜನೆ, ಪ್ರೀತಿ, ಸ್ನೇಹ ಮತ್ತು ಜೀವನ ಮೌಲ್ಯಗಳನ್ನು ಒಳಗೊಂಡ ಕಥಾಹಂದರ ಹೊಂದಿದೆ. ಮದ್ಯಪಾನದಂತಹ ಸೂಕ್ಷ್ಮ ವಿಷಯವನ್ನು ಕೇಂದ್ರವಾಗಿಟ್ಟುಕೊಂಡು,…

Read More

ಬೆಳ್ತಂಗಡಿ: ತಾಲೂಕಿನ ಕೊಕ್ಕಡ ಗ್ರಾಮದಲ್ಲಿ ವ್ಯಕ್ತಿಯೋರ್ವರಿಗೆ ಹಣಕಾಸು ವಿಚಾರಕ್ಕೆ ತಕರಾರು ತೆಗೆದು, ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ ಘಟನೆ ನಡೆದಿದೆ. ಕೊಕ್ಕಡ ಗ್ರಾಮದ ಅಕ್ಷಯ್‌ (31) ಎಂಬವರು ನೀಡಿದ ದೂರಿನಂತೆ, ಅಕ್ಷಯ್‌ ಅವರು ಮಾರ್ಚ್‌ 29ರಂದು ರಾತ್ರಿ ಕೊಕ್ಕಡ ಎಂಬಲ್ಲಿನ ಬಾರ್‌ ಅಂಡ್‌ ರೆಸ್ಟೋರೆಂಟ್‌ನಲ್ಲಿ ಮದ್ಯ ಸೇವಿಸಲು ಕುಳಿತಿರುವಾಗ, ಅಲ್ಲಿಗೆ ಬಂದ ಯತೀಶ್‌ ಎಂಬಾತ ಹಣಕಾಸಿನ ವಿಷಯವಾಗಿ ತಕರಾರು ತೆಗೆದು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾನೆ. ಈ ವೇಳೆ ಯತೀಶ್‌ನೊಂದಿಗೆ ಇದ್ದ ಆರೋಪಿಗಳಾದ ಯತೀಶ, ಧನುಷ್‌ ಭಂಡಾರಿ, ಶರತ್‌ ಭಂಡಾರಿ ಹಾಗೂ ಪ್ರವೀಣ್‌ ಕೂಡ ಸೇರಿಕೊಂಡು ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುವುದಾಗಿ ಅವರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ.ಕ್ರ: 23/2026. ಕಲಂ: 352,115(2), 118(1), 351(2) R/W 3(5)ಬಿಎನ್ಎಸ್-2023ಯಂತೆ ಪ್ರಕರಣ ದಾಖಲಾಗಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

Read More

ಮಣಿಪಾಲ ಆಸ್ಪತ್ರೆ ಬಳಿಯ ಕ್ಯಾಂಟೀನ್‌ನಲ್ಲಿ ಚಹಾ ಕುಡಿಯುತ್ತಿದ್ದ ವ್ಯಕ್ತಿಯೋರ್ವರನ್ನು ಅಪಹರಿಸಿರುವ ಬಗ್ಗೆ ದೂರು ದಾಖಲಾಗಿದೆ.  ಕೊಡ್ಲಾಡಿ ಗ್ರಾಮದ ರಾಮ ಮಡಿವಾಳ ಅವರು ತನ್ನ ಸಹೋದರ ಲಕ್ಷ್ಮಣ ಅವರಿಗೆ ಚಿಕಿತ್ಸೆ ಕೊಡಿಸಲು ಮಣಿಪಾಲದ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಆಸ್ಪತ್ರೆ ಹೊರಬದಿಯ ಕ್ಯಾಂಟೀನ್‌ಲ್ಲಿ ಇನ್ನೋರ್ವ ಸಹೋದರ ರಾಜೇಶ್ ಮತ್ತು ಸುಧೀ‌ರ್ ಜತೆ ಚಹಾ ಕುಡಿಯುತ್ತಿರುವಾಗ ನಂಬರ್ ಪ್ಲೇಟ್ ಇಲ್ಲದ ಕಪ್ಪು ಬಣ್ಣದ  ಕಾರಿನಲ್ಲಿ ಬಂದ ಏಳೆಂಟು ಮಂದಿ ರಾಜೇಶ್ ಅವರನ್ನು ಏಕಾಏಕಿ ಹಿಡಿದು ಕಾರಿನಲ್ಲಿ ಮಣಿಪಾಲದಿಂದ ಹಿರಿಯಡಕ ಕಡೆ ಕರೆದುಕೊಂಡು ಹೋಗಿದ್ದಾರೆ. ಕಾರಿನಲ್ಲಿ ಬಂದ ಮಲ್ಲಾರೆಡ್ಡಿ, ತುಳಜಾ, ನರಸಿಂಗ, ಹುಸೇನ್, ಶಂಕರ, ನಾಗೇಶ್, ಪರಮೇಶ್ವ‌ರ್ ಮತ್ತು ವಿಜಯ್ ಅವರು ರಾಜೇಶ್ ಜತೆ ಈ ಹಿಂದೆ ವ್ಯವಹಾರದ ವಿಷಯದಲ್ಲಿ ಹುಡುಕಿಕೊಂಡು ಮನೆಗೆ ಬಂದಿದ್ದರು ಎನ್ನಲಾಗಿದೆ. ಅವರೊಂದಿಗಿನ ತೆಲಂಗಾಣದಲ್ಲಿರುವ ವ್ಯವಹಾರದ ವಿಷಯದಲ್ಲಿ ಸಹೋದರನ್ನು ಬಲತ್ಕಾರವಾಗಿ ಅಪಹರಿಸಿಕೊಂಡು ಹೋಗಿರುವ ಬಗ್ಗೆ ರಾಮ ಮಡಿವಾಳ ಅವರು ಮಣಿಪಾಲ ಠಾಣಾ ಪೊಲೀಸರಿಗೆ ದೂರು ನೀಡಿದ್ದಾರೆ. 

Read More

ಮಂಗಳೂರು : ಶಿಕ್ಷಕಿ ದಾಖಲಿಸಿದ ಅತ್ಯಾಚಾರ ಪ್ರಕರಣ ರದ್ದುಕೋರಿ ಅಮಾನತಿನಲ್ಲಿರುವ ಮೂಡುಬಿದಿರೆಯ ಇನ್‌ಸ್ಪೆಕ್ಟರ್ ಸಂದೇಶ್‌ಗೆ ಹೈಕೋರ್ಟ್‌ ತೀಕ್ಷ್ಣವಾಗಿ ಚಾಟಿ ಬೀಸಿದೆ. ಎಫ್ಐಆರ್ ರದ್ದುಕೋರಿ ಸಂದೇಶ ಹೈಕೋರ್ಟ್ ಮೆಟ್ಟಿಲೇದ್ದರು. ಆದರೆ ಹೈಕೋರ್ಟ್​, ಇನ್‌ಸ್ಪೆಕ್ಟರ್ ಮಾಡಿರುವುದು ಅಧಿಕಾರದ ದುರುಪಯೋಗವಲ್ಲವೇ? ದೂರು ಕೊಡಲು ಬಂದ ಮಹಿಳೆಯೊಂದಿಗೆ ಸಂಬಂಧ ಬೆಳೆಸಿದರೆ ಇನ್ನೇನಾಗುತ್ತೆ ಎಂದು ಸಂದೇಶ್​​ಗೆ ತರಾಟೆಗೆ ತೆಗೆದುಕೊಂಡಿದ್ದು, ಪ್ರಕರಣಕ್ಕೆ ಮಧ್ಯಂತರ ತಡೆ ನೀಡಲು ನಿರಾಕರಿಸಿ ವಿಚಾರಣೆಯನ್ನು ಮುಂದೂಡಿದೆ. ಸಂದೇಶ್‌ ಪರ ವಾದಿಸಿದ ವಕೀಲರು, ಮಹಿಳೆಯೊಂದಿಗೆ ಒಪ್ಪಿತ ಸಂಬಂಧವಿತ್ತು. ಇನ್‌ಸ್ಪೆಕ್ಟರ್ ವಿರುದ್ಧದ ಅತ್ಯಾಚಾರ ಆರೋಪಕ್ಕೆ ಆಧಾರಗಳಿಲ್ಲ ಎಂದು ಹೇಳಿದರು. ಇನ್‌ಸ್ಪೆಕ್ಟರ್ ಪರ ವಕೀಲರ ವಾದ ಆಲಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ, ಇನ್‌ಸ್ಪೆಕ್ಟರ್ ಮಾಡಿರುವುದು ಅಧಿಕಾರದ ದುರುಪಯೋಗವಲ್ಲವೇ? ದೂರು ಕೊಡಲು ಬಂದ ಮಹಿಳೆಯೊಂದಿಗೆ ಸಂಬಂಧ ಬೆಳೆಸಿದರೆ ಇನ್ನೇನಾಗುತ್ತೆ ಎಂದು ಖಾರವಾಗಿ ಪ್ರಶ್ನಿಸಿದ್ದು, ವಿಚಾರಣೆಯನ್ನು ಏಪ್ರಿಲ್ 6ಕ್ಕೆ ಮುಂದೂಡಿದೆ. ಅಲ್ಲಿಯವರೆಗೆ ಬಂಧಿಸದಂತೆ ಮಧ್ಯಂತರ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದೆ. ಸಂತ್ರಸ್ತೆ ಶಿಕ್ಷಕಿ ನೀಡಿದ ದೂರಿನ ಮೇರೆಗೆ ಮೂಡಿಬಿದಿರೆ ಇನ್ಸ್‌ಪೆಕ್ಟರ್…

Read More

ಉಡುಪಿ: ಸಾಸ್ತಾನದಲ್ಲಿನ ಕೋಸ್ಟಲ್ ಪ್ಯಾರಡೈಸ್ ಹೊಟೇಲ್ ಎದುರು ನಡೆದ ಯುವಕನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ಕೋಟ ಪೊಲೀಸರು ಮಹತ್ವದ ಕ್ರಮ ಕೈಗೊಂಡಿದ್ದು, ಪ್ರಕರಣವನ್ನು KCOCA ಕಾಯ್ದೆಯಡಿ ದಾಖಲಿಸಿ ಈಗಾಗಲೇ 7 ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನಿಬ್ಬರು ಪ್ರಮುಖ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಸಿದ್ದಾಪುರ ಗ್ರಾಮದ ಮೋಹನ ದಾಸ್ ಶೆಟ್ಟಿ ಅವರ ಪುತ್ರ ತೇಜಸ್ ಅವರನ್ನು ಅಪರಿಚಿತರು ಅಪಹರಿಸಿರುವ ಕುರಿತು ಪ್ರಕರಣ ದಾಖಲಾಗಿದೆ. ತೇಜಸ್‌ನ ಸ್ನೇಹಿತ ಪ್ರಜ್ವಲ್ ನೀಡಿದ ಮಾಹಿತಿಯಂತೆ, ನ.19, 2025ರಂದು ಮಧ್ಯಾಹ್ನ ತೇಜಸ್‌ನನ್ನು ಸಾಸ್ತಾನದಲ್ಲಿರುವ ಕೋಸ್ಟಲ್ ಪ್ಯಾರಡೈಸ್ ಹೊಟೇಲ್ ಎದುರು ಕೆಲವರು ಕಿಡ್ನಾಪ್ ಮಾಡಿಕೊಂಡು ಹೋಗಿದ್ದರು. ಸ್ಥಳಕ್ಕೆ ಧಾವಿಸಿದ ಕುಟುಂಬಸ್ಥರು, ತೇಜಸ್ ಬಳಸುತ್ತಿದ್ದ KA-15-Z-0007 ಫಾರ್ಚೂನರ್ ಕಾರು ಅಲ್ಲಿಯೇ ಇದ್ದುದನ್ನು ಗಮನಿಸಿದರು. ಈ ವೇಳೆ ತೇಜಸ್‌ನ ವಾಟ್ಸ್‌ಆಪ್ ನಂಬರಿನಿಂದ ಪ್ರಜ್ವಲ್‌ಗೆ ಕರೆ ಬಂದಿದ್ದು, ಅಪಹರಣದ ಬಗ್ಗೆ ಮಾಹಿತಿ ನೀಡಲಾಗಿದೆ. ಬಳಿಕ ಅಪರಿಚಿತರು 50 ಲಕ್ಷ ರೂ. ಹಾಗೂ ನಂತರ 3 ಕೋಟಿ ರೂ. ನೀಡುವಂತೆ ಬೆದರಿಕೆ ಹಾಕಿ, ಹಣ ನೀಡದಿದ್ದರೆ ತೇಜಸ್‌ನನ್ನು ಕೊಲ್ಲುವುದಾಗಿ…

Read More

ಬಂಟ್ವಾಳ: ತಾಲೂಕಿನ ಸಜಿಪಮುನ್ನೂರು ಗ್ರಾಮದ ದಾಸರಗುಡ್ಡೆ ಎಂಬಲ್ಲಿ ರಸ್ತೆ ದಾಟುತ್ತಿದ್ದ ವೇಳೆ ಮಹಿಳೆಯೋರ್ವರಿಗೆ ಕಾರು ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಗಾಯಗೊಂಡ ಮಹಿಳೆಯನ್ನು ಉಳ್ಳಾಲ ತಾಲೂಕಿನ ಬೋಳಿಯಾರು ಗ್ರಾಮದ ಭಾರತಿ(48) ಎಂದು ಗುರುತಿಸಲಾಗಿದೆ. ಅವರು ತನ್ನ ಮಗಳೊಂದಿಗೆ ಮಾ.30 ರಂದು ಸಜಿಪಮುನ್ನೂರು ಗ್ರಾಮದ ದಾಸರಗುಡ್ಡೆ ಎಂಬಲ್ಲಿ ಗುಳಿಗಜ್ಜ ಕಟ್ಟೆಗೆ ಹಣ ಹಾಕುವ ಸಲುವಾಗಿ ಬೆಳಿಗ್ಗೆ ಬಂದಿದ್ದರು. ಮೆಲ್ಕಾರ್-ಮುಡಿಪು ರಾಜ್ಯ ಹೆದ್ದಾರಿ ರಸ್ತೆಯನ್ನು ದಾಟಿ ಹೆದ್ದಾರಿ ರಸ್ತೆಯ ಅಂಚಿಗೆ ತಲುಪಿದಾಗ ಮೆಲ್ಕಾರ್ ಕಡೆಯಿಂದ ಮುಡಿಪು ಬರುತ್ತಿದ್ದ ಕಾರು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಗಾಯಗೊಂಡ ಮಹಿಳೆಯನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಂಟ್ವಾಳ ಟ್ರಾಫಿಕ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

Read More

ಮಂಗಳೂರು: ಕಳೆದ 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಒಬ್ಬನನ್ನು ಉರ್ವಾ ಪೊಲೀಸರು ಮುಂಬೈನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉರ್ವಾ ಹಾಗೂ ಮಂಗಳೂರು ಉತ್ತರ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರಕರಣದಲ್ಲಿ ಆರೋಪಿಯಾಗಿದ್ದ ಸುಹಾನ್ @ ಸೋನು (33), ತಂದೆ ದಿ. ಸೋಮಯ್ಯ, ವಾಸಸ್ಥಳ ಬಿರಾ ಪೂಜಾರಿ ಕಂಪೌಂಡ್, ಅಶೋಕನಗರ, ಮಂಗಳೂರು ಈತನು ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದನು. ಈ ಹಿನ್ನೆಲೆಯಲ್ಲಿ ಉರ್ವಾ ಪೊಲೀಸ್ ಠಾಣೆ ಪ್ರಕರಣದಲ್ಲಿ ಘನ ನ್ಯಾಯಾಲಯವು ಅವನ ವಿರುದ್ಧ LPC ವಾರಂಟ್ ಜಾರಿಗೊಳಿಸಿತ್ತು. ಈತನನ್ನು ದಿನಾಂಕ 29-03-2026 ರಂದು ಮುಂಬೈನಲ್ಲಿ ಉರ್ವಾ ಪೊಲೀಸ್ ಠಾಣೆಯ ಎಎಸ್ಐ ಲಕ್ಷ್ಮಣ್, ಹೆಡ್ ಕಾನ್ಸ್ಟೇಬಲ್ 956 ನಾರಾಯಣ, ಪೊಲೀಸ್ ಕಾನ್ಸ್ಟೇಬಲ್ 3240 ಯಲ್ಲಾಲಿಂಗ ಹಾಗೂ ಪೊಲೀಸ್ ಕಾನ್ಸ್ಟೇಬಲ್ 330 ಮೊಹಮ್ಮದ್ ಹದಿಯ ತಂಡವು ಬಂಧಿಸಿದೆ. ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Read More

ಮಂಗಳೂರು : ಪುತ್ತೂರು ತಾಲೂಕಿನ ನೆಲ್ಯಾಡಿ ನಿವಾಸಿ, ಯುವ ಉದ್ಯಮಿ ಸುದೀಪ್ ರೈ ಮದುವೆಯಾದ ಒಂದೇ ತಿಂಗಳಿಗೆ ಕಾರ್ಕಳದಲ್ಲಿರುವ ಪತ್ನಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಿರುವು ಪಡದುಕೊಂಡಿದೆ. ಪತ್ನಿ ಸೌಮ್ಯಾ ಶೆಟ್ಟಿಯೇ ಸುದೀಪ್ ಸಾವಿಗೆ ಕಾರಣ ಎಂಬ ಆರೋಪ ಕೇಳಿಬಂದಿದೆ. ಮದುವೆಯಾಗಿ ಕೆಲವೇ ದಿನಗಳಲ್ಲಿ ಪತ್ನಿ ಈ ಮೊದಲು ಕೆಲವು ಮದುವೆಯಾಗಿರುವುದು ಬಯಲಾಗಿದೆ. ಹೀಗಾಗಿ ಮದುವೆಯಾದ ಒಂದು ತಿಂಗಳ ಬಳಿಕ ತನ್ನ ತಂದೆ-ತಾಯಿ ಮನೆಗೆ ಬಂದಿದ್ದ ಸುದೀಪ್​​ ಪತ್ನಿ ಹಣ ಒಡವೆ ಕಿತ್ತುಕೊಂಡಿದ್ದಾಳೆ, ತುಂಬಾ ಟಾರ್ಚರ್ ಕೊಡುತ್ತಿದ್ದಾಳೆ ಎಂದು ಅಲವತ್ತುಕೊಂಡಿದ್ದರು ಎಂದು ಸಂದೀಪ್‌ ರೈಯ ತಂದೆ ಮತ್ತು ತಾಯಿ ಮಾಧ್ಯಮದ ಎದುರು ಆರೋಪಿಸಿದ್ದಾರೆ. ಸುದೀಪ್​​ ತನ್ನ ತಂದೆ-ತಾಯಿ ಬಳಿ ಬಂದಿರುವ ವಿಷಯ ತಿಳಿದ ಸೌಮ್ಯಾ ಸ್ಕೂಟಿಯಲ್ಲೇ ನೂರು ಕಿಲೋಮೀಟರ್ ಪ್ರಯಾಣ ಮಾಡಿ ಬಂದಿದ್ದಳು. ನೆಲ್ಯಾಡಿಯಲ್ಲಿ ತಾಯಿ ಜೊತೆ ಕಾರಿನಲ್ಲಿ ತೆರಳುತ್ತಿದ್ದ ಸುದೀಪ್​​ರನ್ನು ಅಡ್ಡಗಟ್ಟಿ, ಗ್ರಾಮಸ್ಥರ ಎದುರು ಗಲಾಟೆ ಮಾಡಿದ್ದಳು ಬಳಿಕ ಪತಿ ಕಾರು ಹತ್ತಿದ್ದ ಈಕೆ ಅರ್ಧ ದಾರಿಯಲ್ಲೇ ತಾಯಿಯನ್ನು…

Read More