Author: main-admin

ಪುತ್ತೂರು: ಆಟೋ ಚಾಲಕನೊಬ್ಬ ಕಂಠಪೂರ್ತಿ ಕುಡಿದು ಆಟೋದಲ್ಲೇ ಮಲಗಿ ಮುಖ್ಯ ರಸ್ತೆ ಬದಿ ಪಾರ್ಕ್‌ ಮಾಡಿದ್ದ ಕಾರಣಕ್ಕಾಗಿ ಸಾರ್ವಜನಿಕರು ಚಾಲಕನನ್ನು ಪೊಲೀಸರಿಗೊಪ್ಪಿಸಿದ ಘಟನೆ ಪುತ್ತೂರು-ದರ್ಬೆ ರಸ್ತೆಯ ಕಲ್ಲಾರೆಯಲ್ಲಿ ನಡೆದಿದೆ. ಕಲ್ಲಾರೆ ಧನ್ವಂತರಿ ಆಸ್ಪತ್ರೆಯ ಮುಂಭಾಗದಲ್ಲಿರುವ ಮುಖ್ಯ ರಸ್ತೆ ಬದಿಯ ಪಾರ್ಕಿಂಗ್ ನಲ್ಲಿ ಆಟೋ ಚಾಲಕನೋರ್ವ ಕಂಠಪೂರ್ತಿ ಕುಡಿದು ಆಟೋ ರಿಕ್ಷಾದಲ್ಲಿ ಮಲಗಿದ್ದು, ಸುಮಾರು ಒಂದು ಗಂಟೆಯ ವರೆಗೂ ವ್ಯಕ್ತಿ ಮಲಗಿದಾಗೆಯೇ ಇದ್ದ ಹಿನ್ನೆಲೆ ಇದನ್ನು ಗಮನಿಸಿದ ಸಾರ್ವಜನಿಕರು ವ್ಯಕ್ತಿಗೆ ಏನೋ ಅಪಾಯ ಸಂಭವಿಸಿದೆ ಎಂದು ಯೋಚಿಸಿ, ಸಂಚಾರಿ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಬಂದು ಪರಿಶೀಲನೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ. ಚಾಲಕ ಕುಡಿದು ಆಟೋ ರಿಕ್ಷಾ ಚಾಲನೆ ಮಾಡಿದ ಹಿನ್ನೆಲೆ ಸಂಚಾರಿ ಠಾಣಾ ಪೊಲೀಸರು ಡ್ರಿಂಕ್ ಅಂಡ್ ಡ್ರೈವ್ ಪ್ರಕರಣ ದಾಖಲಿಸಿದ್ದು, ಆಟೋ ರಿಕ್ಷಾವನ್ನು ಸೀಜ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.

Read More

ನವದೆಹಲಿ: ಕನ್ನಡಿಗ ʻಮಲ್ಲಿಕಾರ್ಜುನ ಖರ್ಗೆʼ(Mallikarjun Kharge)ಅವರು ಇಂದು ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದ್ದಾರೆ. ದೆಹಲಿಯ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಕೇಂದ್ರ ಕಚೇರಿಯಲ್ಲಿ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಂದು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಈ ವೇಳೆ ಸಮಾರಂಭದಲ್ಲಿ ಸೋನಿಯಾ ಗಾಂಧಿ ಅವರು ಚುನಾವಣಾ ಪ್ರಮಾಣಪತ್ರವನ್ನು ಹಸ್ತಾಂತರಿಸಿದ್ದಾರೆ. 24 ವರ್ಷಗಳ ನಂತ್ರ ಮೊದಲ ಬಾರಿಗೆ ಗಾಂಧಿಯೇತರರು ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಈ ಬಾರಿ ಗಾಂಧಿ ಕುಟುಂಬದವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆಯಿಂದ ಹೊರಗುಳಿಸಿದ್ದಾರೆ. ಅಧಿಕಾರ ವಹಿಸಿಕೊಳ್ಳುವ ಮುನ್ನ ಖರ್ಗೆ ಅವರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಅವರ ನಿವಾಸಕ್ಕೆ ಭೇಟಿ ಮಾಡಿ ನೀಡಿದ್ದರು. ನಂತ್ರ, ಇಂದು ಬೆಳಗ್ಗೆ ಖರ್ಗೆ ಅವರು ರಾಜ್‌ಘಾಟ್‌ನಲ್ಲಿ ಮಹಾತ್ಮ ಗಾಂಧಿ ಅವರಿಗೆ ನಮನ ಸಲ್ಲಿಸಿದರು ಮತ್ತು ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರು, ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ, ಮಾಜಿ ಉಪ ಪ್ರಧಾನಿ ಜಗಜೀವನ್…

Read More

ಬೆಂಗಳೂರು : ಮಹಾರಾಷ್ಟ್ರದಲ್ಲಿ ಕೊರೋನಾ ವೈರಸ್ನ ಒಮಿಕ್ರೋನ್ ತಳಿಯ ಹೊಸ ರೂಪಾಂತರಿ ಬಿಕ್ಯು.1 (Omicron BQ.1 ) ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಹೈ ಅಲರ್ಟ್(High alert in Karnataka) ಘೋಷಿಸಲಾಗಿದೆ. ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರು ಮಾರ್ಗಸೂಚಿ ಕ್ರಮಗಳನ್ನು ಪ್ರಕಟಿಸಿದ್ದಾರೆ. ನೆರೆಯ ಮಹಾರಾಷ್ಟ್ರದಲ್ಲಿ ಓಮಿಕ್ರಾನ್ ಹೊಸ ಉಪ ರೂಪಾಂತರಿ ಪತ್ತೆಯಾಗಿದೆ. ಈ ಹಿನ್ನಲೆಯಲ್ಲಿ ದೀಪಾವಳಿ ಹಾಗೂ ಕನ್ನಡ ರಾಜ್ಯೋತ್ಸವ ಆಚರಣೆಯ ಸಂದರ್ಭದಲ್ಲಿ ಸಾರ್ವಜನಕಿರು ಗುಂಪು ಸೇರುವ ಸಾಧ್ಯತೆಗಳು ಅಧಿಕವಾಗಿರುವುದರಿಂದ, ಈ ಕೆಳಕಂಡ ಮಾರ್ಗಸೂಚಿ ಕ್ರಮಗಳನ್ನು ಪಾಲಿಸುವಂತೆ ತಿಳಿಸಿದ್ದಾರೆ. ಮಾಸ್ಕ್ ಧಾರಣೆ, ಗುಂಪು ಸೇರುವಿಕೆಯಿಂದ ದೂರ ಇರುವುದು ಹಾಗೂ ಮೂರನೇ ಡೋಸ್ ಲಸಿಕೆ ಪಡೆಯುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಾರ್ವಜನಿಕರಿಗೆ ಸೂಚನೆ ನೀಡಿದೆ, ಕೋವಿಡ್-19ರ ಬಿಎ.2.75 ಹಾಗೂ ಬಿಜೆ.1ನ ಓಮಿಕ್ರಾನ್ ಹೊಸ ಉಪ ರೂಪಾಂತರ ತಳಿ ಮಹಾರಾಷ್ಟ್ರದಲ್ಲಿ ಕಾಣಿಸಿಕೊಂಡಿದೆ. ಹೀಗಾಗಿ ರಾಜ್ಯದಲ್ಲಿ ದೀಪಾವಳಿ ಹಬ್ಬ ಹಾಗೂ ನವೆಂಬರ್ 1ರ ಕನ್ನಡ ರಾಜ್ಯೋತ್ಸವಕ್ಕೆ ಮುನ್ನೆಚ್ಚರಿಕೆ…

Read More

ಮಂಗಳೂರು : ಮಂಗಳೂರಿನಿಂದ ಉಡುಪಿ ಕಡೆಗೆ ಹೋಗುವ ಮೀನು ಸಾಗಾಟದ ಲಾರಿಯು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿರುವ ಘಟನೆ ಉಚ್ಚಿಲ ಸಮೀಪದ ನಡೆದಿದೆ. ಘಟನೆಯಿಂದಾಗಿ ಲಾರಿ ಚಾಲಕ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.ಲಾರಿ ಪಲ್ಟಿಯಾದ ಹಿನ್ನೆಲೆ ರಸ್ತೆಯಲ್ಲೆಲ್ಲಾ ಮೀನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಈ ಬಗ್ಗೆ ತಿಳಿಯುತ್ತಿದ್ದಂತೆ ಹಲವಾರು ಜನ ಜಮಾವಣೆಗೊಂಡಿದ್ದಾರೆ.

Read More

ವಿಟ್ಲ: ಒಂದೂವರೆ ತಿಂಗಳ ಮಗುವಿಗೆ ಅವಧಿ ಮುಗಿದ ಚುಚ್ಚು ಮದ್ದು ನೀಡಿದ ಬೇಜವ್ದಾರಿ ಘಟನೆ ಪುತ್ತೂರಿನ ಸಿಟಿ ಆಸ್ಪತ್ರೆಯಲ್ಲಿ ನಡೆದಿದೆ.ಕನ್ಯಾನ ದ ಜೀವನ್ ಪ್ರಕಾಶ್ ಡಿಸೋಜ ರವರ ಪತ್ನಿ ಹೆರಿಗೆಗೆಂದು ಪುತ್ತೂರು ಸಿಟಿ ಆಸ್ಪತ್ರೆಗೆ ತೆರಳಿದ್ದು,ಕಳೆದ ಸೆಪ್ಟಂಬರ್ 3ರಂದು ಡಾ. ಶೆಣೈ ರವರ ಚಿಕಿತ್ಸೆಯಲ್ಲಿ ಹೆರಿಗೆಯಾಗಿರುತ್ತದೆ. ಡಾ.ಶೆಣೈರವರ ಸೂಚನೆಯಂತೆ ಒಂದೂವರೆ ತಿಂಗಳ ನಂತರ ಮಗುವಿನ ಆರೋಗ್ಯ ದೃಷ್ಟಿಯಿಂದ ಒಂದೂವರೆ ತಿಂಗಳ ಚುಚ್ಚುಮದ್ದು ನೀಡಲು ಬರುವಂತೆ ತಿಳಿಸಿದ್ದರು.ಅದೇ ರೀತಿ ಅಕ್ಟೋಬರ್ 24ರಂದು ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭ ಡಾ. ಶೆಣೈರವರ ಅನುಮತಿಯಂತೆ ಒಂದೂವರೆ ತಿಂಗಳ ಮಗುವಿಗೆ ನೀಡ ಬೇಕಾದ (DPT 1 Polio Hepatitis B 1 Hib1) ಎಂಬ ಹೆಸರಿನ ಚುಚ್ಚು ಮದ್ದನ್ನು ನೀಡುವಂತೆ ತನ್ನ ಸಹಾಯಕಿ ಶುಶ್ರುಕಿಗೆ ಸೂಚಿಸಿದ್ದರು.ಅದರಂತೆ ಶಿಶುವಿಗೆ ಚುಚ್ಚು ಮದ್ದು ನೀಡಿದ್ದು,ಚುಚ್ಚು ಮದ್ದಿನ ಸ್ಟಿಕ್ಕರ್ ನ್ನು ನವಜಾತ ಶಿಶುವಿನ ಆರೋಗ್ಯ ದಾಖಲೆ ಪುಸ್ತಕದಲ್ಲಿ ಅಂಟಿಸಿದ್ದರು.ಚುಚ್ಚು ಮದ್ದಿನ ಅವಧಿ 22/08/22 ಎಂದು ನಮೂದಿಸಲಾಗಿದ್ದು,ಅವಧಿ ಮುಗಿದು 2ತಿಂಗಳು ಕಳೆದ ಮದ್ದನ್ನು…

Read More

ಬಂಟ್ವಾಳ: ತಲೆನೋವಿನಿಂದ ಬಳಲುತ್ತಿದ್ದ ಕಾಲೇಜು ವಿದ್ಯಾರ್ಥಿನಿಯೋರ್ವಳು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಮಂಚಿಯಲ್ಲಿ ನಡೆದಿದೆ. ಭವ್ಯಾ, ಮೃತಪಟ್ಟ ವಿದ್ಯಾರ್ಥಿನಿ. ಭವ್ಯಾ ಅವಳು ಪುತ್ತೂರು ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಕೆಲ ದಿನಗಳಿಂದ ತಲೆನೋವು ಎಂದು ಸ್ಥಳೀಯ ಖಾಸಗಿ ವೈದ್ಯರ ಬಳಿ ಪರೀಕ್ಷೆ ಮಾಡಿ ಮದ್ದು ಪಡೆಯುತ್ತಿದ್ದಳು. ಆದರೆ ಆದಿತ್ಯವಾರ ರಾತ್ರಿ ಸುಮಾರು 7 ಗಂಟೆ ವೇಳೆ ತಲೆ ನೋವು ಕಾಣಿಸಿಕೊಂಡು ವಾಂತಿ ಮಾಡಿದ್ದಳು.

Read More

ಉಪ್ಪಿನಂಗಡಿ: ತಾನು ಬಯಸಿದ ಸ್ಥಳದಲ್ಲಿ ಕೆಎಸ್‌ಆರ್‌ಟಿಸಿ ಬಸ್ಸನ್ನು ನಿಲ್ಲಿಸಲಿಲ್ಲ ಎಂಬ ಕಾರಣಕ್ಕೆ ಕೋಪಗೊಂಡ ವ್ಯಕ್ತಿಯೊಬ್ಬ ಬೆಂಗಳೂರಿನಿಂದ ಮಂಗಳೂರಿಗೆ ಸಂಚರಿಸುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವೇಗದೂತ ಬಸ್ ಗಾಜಿಗೆ ಕಲ್ಲು ಎಸೆದು ಪುಡಿಗಟ್ಟಿದ ಘಟನೆ ನಡೆದಿದೆ. ಅಕ್ಟೋಬರ್ 24 ರಂದು ಉಪ್ಪಿನಂಗಡಿಯಲ್ಲಿ ಈ ಘಟನೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕಮದ್ಯದ ಅಮಲಿನಲ್ಲಿದ್ದು ಬಸ್ ನಿಲ್ಲಿಸಲು ಸೂಚಿಸಿದ್ದಾನೆ. ಬಸ್ ನಿಲ್ಲದೆ ಮುಂದುವರಿದು ಸಾಗಿದಾಗ ಬಳಿಕ ಬಸ್‌ನಿಂದ ಕೆಳಗಿಳಿದ ಕೂಡಲೇ ಬಸ್‌ನ ಗಾಜುಗೆ ಕಲ್ಲು ಎಸೆದು ಹಾನಿ ಮಾಡಿದ್ದಾನೆ.

Read More

ಮಂಡ್ಯ ಜಿಲ್ಲೆಯ ನಾಗಮಂಗಲದ ವೆಂಕಟೇಶ್ವರ ಚಿತ್ರಮಂದಿರದಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಕಾಂತಾರ ಸಿನಿಮಾ ನೋಡಿ ಹೊರಗೆ ಬರುತ್ತಿದ್ದಂತೆ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ನಾಗಮಂಗಲ ತಾಲ್ಲೂಕಿನ ಸಾರೆಮೇಗಲಕೊಪ್ಪ ನಿವಾಸಿ ರಾಜಶೇಖರ್ ಮೃತ ವ್ಯಕ್ತಿ. ನಿನ್ನೆ ಕಾಂತಾರ ಸಿನಿಮಾ ನೋಡಲು ವೆಂಕಟೇಶ್ ಚಿತ್ರಮಂದಿರಕ್ಕೆ ಬಂದಿದ್ದರು.45 ವಯಸ್ಸಿನ ರಾಜಶೇಖರ್ ಕಾಂತಾರ ಸಿನಿಮಾ ನೋಡಿ ಬರುತ್ತಿದ್ದಂತೆ ಎದೆನೋವು ಕಾಣಿಸಿಕೊಂಡಿದೆ. ಅಲ್ಲಿಯೇ ಕುಸಿದಿದ್ದಾರೆ. ತೀವ್ರ ಹೃದಯಾಘಾತದಿಂದ ರಾಜಶೇಖರ್ ನಿಧನರಾಗಿದ್ದಾರೆ ಎಂದು ವರದಿಯಾಗಿದೆ. ಈ ಕುರಿತಂತೆ ನಾಗಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಕಾಂತಾರ ಸಿನಿಮಾ ವಿಶ್ವಾದ್ಯಂತ ಖ್ಯಾತಿ ಗಳಿಸಿದೆ. ಭಾರತ ಚಿತ್ರರಂಗದಲ್ಲಿಯೇ ದೊಡ್ಡ ಹಿಟ್ ಆಗಿ ಹೊರಹೊಮ್ಮಿರುವ ರಿಷಬ್ ಶೆಟ್ಟಿ ಅವರ ಸಿನಿಮಾಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಸಿನಿಮಾಗೆ ಪಾಸಿಟಿವ್ ರೆಸ್ಪಾನ್ಸ್ ಬಂದಿರುವ ಹಾಗೆಯೇ ಕಾಲೆಳೆಯೋ ಕೆಲಸ ಕೂಡಾ ನಡೆದಿದೆ. ಸಿನಿಮಾದ ಹಾಡಿನ ಕುರಿತು ಈಗಾಗಲೇ ವಿವಾದ ಎದ್ದಿದ್ದು ಈಗ ಧರ್ಮದ ಬಣ್ಣದಲ್ಲಿ ಸಿನಿಮಾ ಚರ್ಚೆ ನಡೆಯುತ್ತಿದೆ. ಸಿನಿಮಾಗೆ ಧರ್ಮದ ಬಣ್ಣ ಬಳಿದು…

Read More

ಶಿವಮೊಗ್ಗ ನಗರದಲ್ಲಿ ಮತ್ತೆ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿದ್ದು, ಬಜರಂಗದಳದ ಮೃತ ಹರ್ಷನ ಕುಟುಂಬಸ್ಥರಿಗೆ ದುಷ್ಕರ್ಮಿಗಳು ಬೆದರಿಕೆ ಹಾಕಿರುವ ಘಟನೆ ತಡರಾತ್ರಿ ನಡೆದಿದೆ.ಇದೀಗ ಹರ್ಷ ಸಹೋದರಿ ಅಶ್ವಿನಿ ಪ್ರತಿಕ್ರಿಯೆ ನೀಡಿದ್ದಾರೆ. ದುಷ್ಕರ್ಮಿಗಳಿಂದ ನಮಗೆ ಭಯ ಆಗುತ್ತಿದೆ. ನಮಗೆ ಸೂಕ್ತ ರಕ್ಷಣೆ ಬೇಕು ಎಂದು ಹೇಳಿದ್ದಾರೆ.ನಗರದಲ್ಲಿ ಮಾತನಾಡಿದ ಅವರು, ರಾತ್ರಿ 11.15 ರ ಸಮಯಕ್ಕೆ 3-4 ಬೈಕ್ ನಲ್ಲಿ ಯುವಕರು ಬಂದಿದ್ದರು. ಮಾರಕಾಸ್ತ್ರ ಹಿಡಿದುಕೊಂಡು ಓಡಾಡುತ್ತಿದ್ದರು ಎಂದು ಹೇಳಿದರು. ಹರ್ಷನ ತೆಗೆದಿದ್ದು ಸಾಲದಾ, ನಿಮ್ಮನ್ನೂ ತೆಗೆಯಬೇಕಾ. ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಯುವಕರ ಗುಂಪು ಅವಾಜ್ ಹಾಕಿದ್ದಾರೆ. ಇನ್ನು ಎಷ್ಟು ಮಂದಿ ಹಿಂದೂ ಯುವಕರ ಬಲಿಯಾಗಬೇಕು..?. ನನ್ನ ಸಹೋದರ ಹರ್ಷ ಹೋದ, ಪ್ರವೀಣ್ ನೆಟ್ಟಾರ್ ಹೋದ. ಆದರೂ ಅವರ ದಾಹ ಇನ್ನೂ ತೀರಿಲ್ಲ. ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ನಮಗೆ ಸೂಕ್ತ ರಕ್ಷಣೆ ಕೊಡಬೇಕು ಎಂದು ಆಗ್ರಹಿಸಿದ್ದಾರೆ.

Read More

ಸುಳ್ಯ: ನಗರ ಪಂಚಾಯತ್ ಮಾಜಿ ಉಪಾಧ್ಯಕ್ಷೆಯ ಪತಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಇಂದು ನಡೆದಿದೆ. ಗುಂಡು ಹಾರಿಸಿಕೊಂಡವರನ್ನು ಸುಳ್ಯ ನಗರ ಪಂಚಾಯತ್‌ ನ ಮಾಜಿ ಉಪಾಧ್ಯಕ್ಷರಾದ ಶಾಂತಿ ಪ್ರಭುರವರ ಪತಿ ಎನ್ನಲಾಗಿದೆ. ಸುಳ್ಯದ ಜಟ್ಟಿಪಳ್ಳ ನಿವಾಸಿ ಕೇಶವ ಪ್ರಭು ಎಂಬುವವರು ತಲೆಗೆ ಪಿಸ್ತೂಲಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಕೂಡಲೇ ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಈ ಘಟನೆಯು ಇಂದು ಪೂರ್ವಾಹ್ನ 11 ಗಂಟೆಯ ಸುಮಾರಿಗೆ ನಡೆದಿದೆ, ಅವರು ವಾಸವಿದ್ದ ಮನೆಯಲ್ಲಿಯೇ ಈ ಘಟನೆ ನಡೆದಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಗುಂಡು ಹಾರಿಸಿಕೊಳ್ಳಲು ಕಾರಣವೇನೆಂದು ಇನ್ನೂ ತಿಳಿದುಬಂದಿಲ್ಲ.

Read More