Author: main-admin

ಮಂಗಳೂರು : ಅಪರಿಚಿತ ಸ್ಕಾರ್ಪಿಯೋ ಕಾರೊಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ರವರ ಕಾರನ್ನು ಹಿಂಬಾಲಿಸಿ, ಅಡ್ಡಗಟ್ಟಿ ಆಯುಧ ತೋರಿಸಿ ಜೀವ ಬೆದರಿಕೆ ಒಡ್ಡಿದ್ದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪುದು ಗ್ರಾಮದ ಫರಂಗಿ ಪೇಟೆ ಎಂಬಲ್ಲಿ ಅ 13 ರಂದು ತಡ ರಾತ್ರಿ ನಡೆದಿದ್ದೆ. ಈ ಬಗ್ಗೆ ಹರೀಶ್ ಪೂಂಜಾರವರ ಕಾರು ಚಾಲಕ ನೀಡಿದ ದೂರಿನಂತೆ ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗುರುವಾರ ಸಂಜೆ ಬೆಂಗಳೂರಿನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ, ಹರೀಶ್ ಪೂಂಜಾರವರು ಬೆಳ್ತಂಗಡಿಗೆ ಕಾರಿನಲ್ಲಿ ಹಿಂತಿರುಗಿ ಹೋಗುತ್ತಿದ್ದ ಸಂದರ್ಭ ಘಟನೆ ನಡೆದಿದೆ. ಮೊದಲು ಶಾಶಕರ ಕಾರನ್ನು ದುಷ್ಕರ್ಮಿಯು ಬಿಳಿ ಸ್ಕಾರ್ಪಿಯೋ ಕಾರಿನಲ್ಲಿ ಹಿಂಬಾಲಿಸಿದ್ದಾನೆ. ಶಾಶಕರಿದ್ದ ಕಾರು ಫರಂಗಿ ಪೇಟೆಯ ಮೀನು ಮಾರುಕಟ್ಟೆ ಬಳಿ ತಲುಪುತ್ತಲೇ, ದುಷ್ಕರ್ಮಿ ತನ್ನ ಕಾರನ್ನು ಅದಕ್ಕೆ ಅಡ್ಡ ನಿಲ್ಲಿಸಿ ಕಾರಿನಲ್ಲಿದ್ದವರಿಗೆ ಅವಾಚ್ಯ ಶಬ್ದಗಳಿಂದ ಬೈದು ತನ್ನ ಕೈಯಲಿದ್ದ ಆಯುಧವನ್ನು ತೋರಿಸಿ ಜೀವ ಬೆದರಿಕೆ ಒಡ್ಡಿದ್ದಾನೆ ಎಂದು ಆರೋಪಿಸಲಾಗಿದೆ

Read More

ಉಡುಪಿ : ಮಂಗಳೂರು – ಉಡುಪಿ ರಾಷ್ಟ್ರೀಯ ಹೆದ್ದಾರಿಯ ಉಚ್ಚಿಲದಲ್ಲಿ ಗುರುವಾರ ರಾತ್ರಿ ಸರಣಿ ಅಪಘಾತ ಸಂಭವಿಸಿದ್ದು ಘಟನೆಯಲ್ಲಿ ಐದು ವಾಹನಗಳು ಜಖಂಗೊಂಡಿದೆ. ಮಂಗಳೂರಿನಿಂದ ಉಡುಪಿ ಕಡೆಗೆ ವೇಗವಾಗಿ ಸಾಗುತ್ತಿದ್ದ ಸ್ಕಾರ್ಪಿಯೋ ವಾಹನ ನಾಲ್ಕು ವಾಹನಗಳಿಗೆ ಢಿಕ್ಕಿ ಹೊಡೆದಿದೆ. ರಾಷ್ಟ್ರೀಯ ಹೆದ್ದಾರಿ 66 ರ ಉಚ್ಚಿಲ ಮಸೀದಿ ಬಳಿ ಈ ಘಟನೆ ನಡೆದಿದೆ. ಅಪಘಾತದಲ್ಲಿ ಎರಡು ಬೈಕ್, ಕಾರು, ಬೈಕು ಮತ್ತು ಮೀನಿನ ಲಾರಿ ಗಳಿಗೂ ಹಾನಿಯಾಗಿದ್ದು ಬೈಕ್ ಸವಾರ ಗಂಭೀರ ಗಾಯಗೊಂಡಿದ್ದಾನೆ. ಸ್ಕಾರ್ಪಿಯೋ ಕಾರು ಗುದ್ದಿದ ರಭಸಕ್ಕೆ ಎರ್ಟಿಗಾ ಕಾರು ಹೆದ್ದಾರಿ ವಿಭಾಜಕವನ್ನು ಏರಿ ದಾಟಿ ಹೋಗಿದ್ದು, ಮಂಗಳೂರಿನತ್ತ ತೆರಳುವ ರಾ.ಹೆದ್ದಾರಿಯ ಪಥದತ್ತ ಮುಖ ಮಾಡಿ ನಿಂತಿದೆ. ಸ್ಕೂಟಿ ಸವಾರ ಸ್ಥಳೀಯ ಸೈಕಲ್ ಅಂಗಡಿ ಮಾಲಕ ಸಹಿತ ಕಾರಿನಲ್ಲಿದ್ದ ಕೆಲ ಮಂದಿ ಗಾಯಗೊಂಡಿದ್ದು ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಘಟನೆಯ ಸಂದರ್ಭ ರಾ.ಹೆದ್ದಾರಿಯಲ್ಲಿ ಕೆಲ ಕಾಲ ವಾಹನ ಸಂಚಾರ ವ್ಯತ್ಯಯಗೊಂಡಿತ್ತು. ಸ್ಥಳೀಯರು ಮತ್ತು ಪೋಲೀಸರು ಸುಗಮ ಸಂಚಾರಕ್ಕೆ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ.…

Read More

ಬಂಟ್ವಾಳ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಾಣಿಸಿಕೊಂಡು ಆತಂಕ ಮೂಡಿಸಿರುವ ಜಾನುವಾರುಗಳ ಚರ್ಮಗಂಟು ರೋಗ ಇದೇ ಮೊದಲ ಬಾರಿಗೆ ದ.ಕ.ಜಿಲ್ಲೆಯಲ್ಲಿ ಕಾಣಿಸಿಕೊಂಡಿದ್ದು, ಬಂಟ್ವಾಳ ತಾಲೂಕು ಬಿಳಿಯೂರು ಗ್ರಾಮದ ಒಂದೇ ಮನೆಯ ಮೂರು ದನಗಳಲ್ಲಿ ಶಂಕಿತ ಪ್ರಕರಣ ಪತ್ತೆಯಾಗಿದೆ. ಅದರಲ್ಲಿ ಒಂದು ದನ ಈಗಾಗಲೇ ಮೃತಪಟ್ಟಿದ್ದು, ಎರಡು ದನಗಳು ಚಿಕಿತ್ಸೆಯ ಬಳಿಕ ಬಹುತೇಕ ಗುಣಮುಖವಾಗಿವೆ. ದ.ಕ.ಜಿಲ್ಲಾ ಪಶು ಪಾಲನ ಇಲಾಖೆಯ ಮಾಹಿತಿ ಪ್ರಕಾರ ಬಿಳಿಯೂರಿನ ಮಲ್ಲಡ್ಕದಲ್ಲಿ ಕಾಣಿಸಿಕೊಂಡ ಶಂಕಿತ ಪ್ರಕರಣಕ್ಕೆ ಅ. 8ರಿಂದ ಕೆಎಂಎಫ್‌ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಒಂದು ದನ ಅ. 11ರಂದು ಮೃತಪಟ್ಟಿದೆ. ಆದರೆ ಉಳಿದ 2 ದನಗಳು ಬಹುತೇಕ ಗುಣಮುಖವಾಗಿವೆ. ದನ ಚರ್ಮಗಂಟು ರೋಗ ದಿಂದ ಸತ್ತಿಲ್ಲ, ಅದಕ್ಕೆ ಬೇರೆ ಕಾಯಿಲೆಯೂ ಇತ್ತು ಎನ್ನಲಾಗಿದೆ. ಈ ಖಾಯಿಲೆಯ ಮುಂಜಾಗ್ರತ ಕ್ರಮವಾಗಿ ಪ್ರಕರಣ ಕಂಡುಬಂದ ಮನೆಯ ಸುತ್ತಲೂ ಸೇರಿದಂತೆ ಗ್ರಾಮದ ಬಹುತೇಕ ಜಾನುವಾರುಗಳಿಗೆ ಎಲ್‌ಎಸ್‌ಡಿ ಲಸಿಕೆ ನೀಡಲಾಗಿದ್ದು, ಜತೆಗೆ ಸೊಳ್ಳೆಗಳ ನಿಯಂತ್ರಣಕ್ಕಾಗಿ ಫಾಗಿಂಗ್‌ ಕಾರ್ಯವನ್ನೂ ಮಾಡಲಾಗಿದೆ. ಜತೆಗೆ ಪ್ರದೇಶದ ಮನೆಗಳಿಗೆ ಮುಂಜಾಗ್ರತ…

Read More

ಮಂಗಳೂರು: ನಗರದ ಶರ್ಬತ್ ಕಟ್ಟೆಯ ಫ್ಲ್ಯಾಟ್‌ವೊಂದರ ನಿವಾಸಿ, ಕೆನರಾ ಬ್ಯಾಂಕ್ ಬಿಜೈ ಬ್ರಾಂಚ್‌ನ ಮ್ಯಾನೇಜರ್‌ ಪದ್ಮಾವತಿ (52) ಎಂಬವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಮೂಲತಃ ಶಕ್ತಿನಗರದ ಪದ್ಮಾವತಿ ಶರ್ಬತ್ ಕಟ್ಟೆಯಲ್ಲಿ‌ ಇತ್ತೀಚೆಗೆ ‌ಪ್ಲ್ಯಾಟ್‌ ಖರೀದಿಸಿದ್ದು, ಗೃಹಪ್ರವೇಶ ಕಾರ್ಯಕ್ರಮ ಕಳೆದ ಸೋಮವಾರ ನಡೆದಿತ್ತು‌.

Read More

ನವದೆಹಲಿ: ಕರ್ನಾಟಕದ ಶಾಲಾ ಕಾಲೇಜುಗಳ ತರಗತಿಯೊಳಗೆ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್​ ನಿಷೇಧಿಸಿ ಹೈಕೋರ್ಟ್​ ನೀಡಿದ ಆದೇಶದ ವಿರುದ್ಧ ಸಲ್ಲಿಸಲಾದ ಮೇಲ್ಮನವಿ ಅರ್ಜಿಗಳ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ಸುಪ್ರೀಂಕೋರ್ಟ್​ ಇಂದು ಪ್ರಕಟಿಸಿದೆ. ಇಬ್ಬರು ನ್ಯಾಯಮೂರ್ತಿಗಳಿಂದ ವಿಭಿನ್ನ ತೀರ್ಪು ಹೊರಬಿದ್ದಿದೆ. ಹೀಗಾಗಿ ಸುಪ್ರೀಂ ಕೋರ್ಟ್​ ಮುಖ್ಯ ನ್ಯಾಯಮೂರ್ತಿ ಅವರ ಪೀಠದಿಂದ ಅಂತಿಮ ತೀರ್ಪು ಹೊರಬೀಳಲಿದೆ. ನ್ಯಾಯಮೂರ್ತಿ ಹೇಮಂತ್ ಗುಪ್ತಾ ಅವರು, ಮೇಲ್ಮನವಿ ಅರ್ಜಿಯ ವಜಾ ಪರ ತೀರ್ಪು ನೀಡಿದ್ದರೆ, ನ್ಯಾಯಮೂರ್ತಿ ಸುಧಾಂಶು ಧುಲಿಯಾ ಕರ್ನಾಟಕ ಹೈಕೋರ್ಟ್​ ಆದೇಶವನ್ನು ರದ್ದು ಮಾಡುವ ಪರವಾಗಿ ತೀರ್ಪು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣವು ಸುಪ್ರೀಂ ಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್ ಅವರ ಮುಂದೆ ಬರಲಿದೆ. ನ್ಯಾಯಮೂರ್ತಿಗಳ ವಿಸ್ತೃತ ಪೀಠಕ್ಕೆ ಪ್ರಕರಣ ವರ್ಗಾವಣೆಯಾಗಿದೆ. ಅಲ್ಲಿಯವರೆಗೆ ಹಿಜಾಬ್​ ವಿಚಾರದಲ್ಲಿ ಯಥಾಸ್ಥಿತಿ ಮುಂದುವರಿಯಲಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಬ್ಯಾನ್ ಕುರಿತ ಕರ್ನಾಟಕ ಹೈಕೋಟ್​​ನ ತೀರ್ಪು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಹೇಮಂತ್ ಗುಪ್ತಾ ಅವರು ವಜಾಗೊಳಿಗೊಳಿಸಿ ತೀರ್ಪು ನೀಡಿದರು. ಇನ್ನು…

Read More

ನವದೆಹಲಿ: ಕರ್ನಾಟಕದ ಶಾಲಾ ಕಾಲೇಜುಗಳ ತರಗತಿಯೊಳಗೆ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್​ ನಿಷೇಧಿಸಿ ಹೈಕೋರ್ಟ್​ ನೀಡಿದ ಆದೇಶದ ವಿರುದ್ಧ ಸಲ್ಲಿಸಲಾದ ಮೇಲ್ಮನವಿ ಅರ್ಜಿಗಳ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ಸುಪ್ರೀಂಕೋರ್ಟ್​ ಇಂದು ಪ್ರಕಟಿಸುವ ಸಾಧ್ಯತೆಯಿದೆ. ನ್ಯಾಯಮೂರ್ತಿ ಹೇಮಂತ್ ಗುಪ್ತಾ ನೇತೃತ್ವದ ಪೀಠ, ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರೊಂದಿಗೆ ಅಂತಿಮ ತೀರ್ಪು ಪ್ರಕಟಿಸಲಿದೆ. ಪೀಠದ ನೇತೃತ್ವ ವಹಿಸಿದ್ದ ನ್ಯಾ. ಗುಪ್ತಾ ಅವರು ಅಕ್ಟೋಬರ್ 16 ರಂದು ನಿವೃತ್ತರಾಗಲಿರುವ ಕಾರಣ ಇಂದು ತೀರ್ಪು ಪ್ರಕಟವಾಗುವ ನಿರೀಕ್ಷೆಯಿದೆ. ಸೆಪ್ಟೆಂಬರ್ 22 ರಂದು ಪ್ರಕರಣದ ಕೊನೆಯ ದಿನದ ವಿಚಾರಣೆ ನಡೆದು, ವಾದ – ಪ್ರತಿವಾದ ಪೂರ್ಣಗೊಂಡ ಬಳಿಕ ದ್ವಿಸದಸ್ಯ ಪೀಠ ತನ್ನ ತೀರ್ಪು ಕಾಯ್ದಿರಿಸಿತ್ತು. ಸುಪ್ರೀಂಕೋರ್ಟ್‌ನಲ್ಲಿ ನಡೆದ ವಿಚಾರಣೆಯ ವೇಳೆ ಕರ್ನಾಟಕ ಹೈಕೋರ್ಟ್​ ನೀಡಿದ ತೀರ್ಪನ್ನು ತಡೆ ಹಿಡಿಯುವಂತೆ ಕೋರಲಾಗಿತ್ತು. ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಅವಕಾಶ ನೀಡದಿದ್ದರೆ ಅವರು ಶಾಲೆಗೆ ತೆರಳದೇ ಶಿಕ್ಷಣದಿಂದ ವಂಚಿತರಾಗಲಿದ್ದಾರೆ. ಹೀಗಾಗಿ ಶಾಲೆಯಲ್ಲೂ ಹಿಜಾಬ್​ ಧರಿಸಲು ಅವಕಾಶ ನೀಡಬೇಕು ಎಂದು ಫಿರ್ಯಾದುದಾರರ ಪರ ವಕೀಲರು…

Read More

ಮಂಗಳೂರು: ಬೆಳ್ಳಂಬೆಳಗ್ಗೆ ನಿಷೇಧಿತ ಪಿಎಫ್ಐಗೆ ಪೊಲೀಸರು ಶಾಕ್ ಕೊಟ್ಟಿದ್ದಾರೆ. ಮಂಗಳೂರಿನಲ್ಲಿ SDPI, ನಿಷೇಧಿತ PFI ಮುಖಂಡರ ಮನೆಗಳ ಮೇಲೆ ಮತ್ತೆ ದಾಳಿ ನಡೆಸಲಾಗಿದೆ. ಪೊಲೀಸ್ ಕಮಿಷನರ್ N.ಶಶಿಕುಮಾರ್ ನೇತೃತ್ವದಲ್ಲಿ ದಾಳಿ ನಡೆದಿದ್ದು ಐವರು ಪಿಎಫ್​​ಐ ಮುಖಂಡರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪಣಂಬೂರು, ಸುರತ್ಕಲ್, ಮಂಗಳೂರು ಗ್ರಾಮಾಂತರ, ಉಳ್ಳಾಲ ಸೇರಿ ಏಳೆಂಟು ಕಡೆ ದಾಳಿ ಮಾಡಿರುವ ಪೊಲೀಸರು ಮನೆಗಳ ಸಂಪೂರ್ಣ ಪರಿಶೀಲನೆ ನಡೆಸುತ್ತಿದ್ದಾರೆ. ವಶಕ್ಕೆ ಪಡೆದ ಪಿಎಫ್​​ಐ ಮುಂಡರ ವಿರುದ್ಧ UAPA ಕಾಯ್ದೆ ಸೇರಿ ವಿವಿಧ ಸೆಕ್ಷನ್​​​ಗಳಡಿ ಕೇಸ್​ ದಾಖಲಿಸಲಾಗಿದೆ.

Read More

ಮಂಗಳೂರು: ನಗರದ ಪಂಪ್‌ವೆಲ್‌ ಪ್ರದೇಶದಲ್ಲಿ ನೂತನವಾಗಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಬಸ್‌ ತಂಗುದಾನಕ್ಕೆ ಭೂ ಸ್ವಾಧೀನ ಮಾಡಿರುವ ಜಮೀನಿಗೆ ಪರಿಹಾರದ ಹಣ ನೀಡದ ಹಿನ್ನೆಲೆಯಲ್ಲಿ ಮಂಗಳೂರು ಮನಪಾ ಚರಾಸ್ತಿ ಜಪ್ತಿಗೆ ಮಂಗಳೂರು ಜಿಲ್ಲಾ ನ್ಯಾಯಾಲಯವು ಆದೇಶ ಮಾಡಿದೆ. ನ್ಯಾಯಾಲಯದ ಅಮೀನ್‌ ನ್ಯಾಯಾಲಯದ ಜಪ್ತಿ ಆದೇಶವನ್ನು ಜಾರಿಗೊಳಿಸಲು ಮಂಗಳೂರು ಮಹಾನಗರ ಪಾಲಿಕೆ ಕಚೇರಿಗೆ ಬುಧವಾರ ತೆರಳಿದ್ದಾರೆ. ಆದರೆ ಪಾಲಿಕೆಯ ವಿನಂತಿಯ ಮೇರೆಗೆ ಪರಿಹಾರ ಪಾವತಿಗೆ ಅಕ್ಟೋಬರ್ 25ರವರೆಗೆ ಕಾಲಾವಕಾಶ ನೀಡಲಾಗಿದೆ. ಪಂಪ್‌ವೆಲ್‌ ನಲ್ಲಿ ಬಸ್‌ನಿಲ್ದಾಣ ನಿರ್ಮಾಣಕ್ಕೆ ಪಾಲಿಕೆಯು 7 ಎಕರೆ 23.5 ಸೆಂಟ್ಸ್‌ ಭೂಮಿಯನ್ನು 2008ರಲ್ಲಿ ಸ್ವಾಧೀನಪಡಿಸಿತ್ತು. 33 ಕುಟುಂಬಗಳು ಈ ಯೋಜನೆಗೆ ಜಮೀನು ನೀಡಿತ್ತು. ಆದರೆ ಸರಕಾರ ನಿಗದಿಪಡಿಸಿದ ಭೂ ಪರಿಹಾರದ ಮೊತ್ತಕ್ಕೆ 16 ಕುಟುಂಬಗಳು ತಕರಾರು ಎತ್ತಿ ಹೆಚ್ಚಿನ ಪರಿಹಾರಕ್ಕಾಗಿ ಜಿಲ್ಲಾ ನ್ಯಾಯಾಲಯದ ಮೆಟ್ಟಿಲೇರಿತ್ತು. ಈ ಸಂಬಂಧ 16 ವ್ಯಾಜ್ಯಗಳ ವಿಚಾರಣೆ ನಡೆಯುತ್ತಿದ್ದು ಈ ಪ್ರಕರಣಗಳಿಗೆ ಪಾಲಿಕೆ ತಡೆಯಾಜ್ಞೆಯನ್ನು ತಂದಿತ್ತು. ಆದರೆ, ತಡೆಯಾಜ್ಞೆಯ ಅವಧಿ ಮುಗಿದ 1 ಪ್ರಕರಣದಲ್ಲಿ ನ್ಯಾಯಾಲಯವು…

Read More

ಉಡುಪಿ: ಗೂಡ್ಸ್ ವಾಹನವೊಂದು ಎರಡು ಆಟೊ ರಿಕ್ಷಾಕ್ಕೆ ಡಿಕ್ಕಿ ಹೊಡೆದು ಮಗುಚಿಬಿದ್ದ ಘಟನೆ ಕೋಟ ಸರ್ಕಲ್ ನಲ್ಲಿ ಇಂದು ನಡೆದಿದೆ. ಸರ್ವಿಸ್ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿ 66 ಅನ್ನು ದಾಟುತ್ತಿದ್ದ ರಿಕ್ಷಾಕ್ಕೆ ಕುಂದಾಪುರ ಕಡೆಗೆ ಸಾಗುತ್ತಿದ್ದ ಗೂಡ್ಸ್ ವಾಹನ ಡಿಕ್ಕಿ ಹೊಡೆದಿದ್ದು, ಆ ಬಳಿಕ ಎಡಬದಿಯ ಸರ್ವಿಸ್ ರಸ್ತೆಯಿಂದ ಹೆದ್ದಾರಿಗೆ ಸಾಗುತ್ತಿದ್ದ ರಿಕ್ಷಾಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಗೂಡ್ಸ್ ವಾಹನದಲ್ಲಿದ್ದ ಬಾಕ್ಸ್ ಗಳು ರಸ್ತೆಗೆ ಬಿದ್ದು ಚೆಲ್ಲಾಪಿಲ್ಲಿಯಾಗಿವೆ. ಎರಡು ರಿಕ್ಷಾಗಳು ಜಖಂಗೊಂಡಿವೆ. ಅಪಘಾತದ ರಭಸಕ್ಕೆ ರಿಕ್ಷಾ ಚಾಲಕ ರಿಕ್ಷಾದಿಂದ ಎಸೆಯಲ್ಪಟ್ಟು ರಸ್ತೆಗೆ ಬಿದ್ದು ಗಾಯಗೊಂಡಿದ್ದಾನೆ ಎನ್ನಲಾಗಿದೆ. ಅಪಘಾತ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭಿಸಬೇಕಾಗಿದೆ‌.

Read More

ಮಂಗಳೂರು: ಸಿಐಎಸ್ಎಫ್ ಮಹಿಳಾ ಪಿಎಸ್ಐ ಒಬ್ಬರು ಬೆಳ್ಳಂಬೆಳಗ್ಗೆ ಎನ್ಎಂಪಿಎ ಮುಖ್ಯದ್ವಾರದ ಬಳಿಯೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಎ.ಜೆ.ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಜಸ್ತಾನ ರಾಜ್ಯದ ಭರತ್ ಪುರ ಜಿಲ್ಲೆ ಮೂಲದ ಜ್ಯೋತಿ ಬಾಯಿ ಆತ್ಮಹತ್ಯೆಗೆ ಯತ್ನಿಸಿದವರು. ಎನ್ಎಂಪಿಎ ಮುಖ್ಯ ದ್ವಾರದ ಬಳಿ ಕರ್ತವ್ಯದಲ್ಲಿದ್ದಾಗಲೇ ಜ್ಯೋತಿ ಬಾಯಿ ಬೆಳ್ಳಂಬೆಳಗ್ಗೆ 6 – 6.15ರ ನಡುವಿನ ವೇಳೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣ ಅವರನ್ನು ಎ.ಜೆ.ಆಸ್ಪತ್ರೆಗೆ ದಾಖಲಿಸಲಾಗಿದೆ. ಜ್ಯೋತಿ ಬಾಯಿಯವರ ಪತಿ ಓಂಬೀರ್ ಸಿಂಗ್ ಪಾರ್ಮರ್ ಅವರು ಮಂಗಳೂರಿನ ಎಂಆರ್ ಪಿಎಲ್ ನಲ್ಲಿ ಅಸಿಸ್ಟೆಂಟ್ ಕಮಾಂಡರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರಾಥಮಿಕ ವರದಿಯ ಪ್ರಕಾರ ಅದರಲ್ಲಿ ಕೌಟುಂಬಿಕ ಕಲಹವೇ ಆತ್ಮಹತ್ಯೆಗೆ ಕಾರಣ ಎನ್ನಲಾಗುತ್ತಿದೆ‌. ಆತ್ಮಹತ್ಯೆಗೆ ಯತ್ನಿಸುವ ಮೊದಲು ಜ್ಯೋತಿ ಬಾಯಿಯವರು ತಮ್ಮ ತಾಯಿಯನ್ನು ಉಲ್ಲೇಖಿಸಿ ಹಿಂದಿ ಭಾಷೆಯಲ್ಲಿ ಡೆತ್ ನೋಟ್ ಕೂಡಾ ಬರೆದಿದ್ದಾರೆ. ‘ ಈ ಜಗತ್ತಿನಲ್ಲಿ ತನಗೆ ಬದುಕಲು ಸಾಧ್ಯವಿಲ್ಲ. ಅದಕ್ಕಾಗಿ ನನ್ನ ಇಚ್ಛೆಯಿಂದಲೇ ನಾನು…

Read More