ಬೆಂಗಳೂರು : ರಾಜ್ಯ ಸರ್ಕಾರವು ಅನರ್ಹ ಬಿಪಿಎಲ್ ಕಾರ್ಡ್ ಪಡೆದವರಿಗೆ ಬಿಗ್ ಶಾಕ್ ನೀಡಿದ್ದು, ರಾಜ್ಯಾದ್ಯಂತ 4.9 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸಲಾಗಿದೆ. ಹೌದು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕೈಗೊಂಡಿರುವ ಅನರ್ಹ ಪಡಿತರದಾರರ ಪತ್ತೆ ಕಾರ್ಯದಲ್ಲಿ ಕಳೆದ ಕೆಲ ವಾರಗಳಲ್ಲಿ ಬರೋಬ್ಬರಿ 2 ಲಕ್ಷಕ್ಕೂ ಅಧಿಕ ಅನರ್ಹ ಫಲಾನುಭವಿಗಳನ್ನು ಗುರುತಿಸಿ ಅವರೆಲ್ಲರ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಗೊಳಿಸಿದೆ. ಈ ಮೂಲಕ ರದ್ದಾದ ಅನರ್ಹ ಬಿಪಿಎಲ್ ಕಾರ್ಡ್‌ಗಳ ಸಂಖ್ಯೆ 4.9 ಲಕ್ಷಕ್ಕೆ ಏರಿಕೆಯಾಗಿದೆ. ಈ ಅಭಿಯಾನದಲ್ಲಿ ಬಿಪಿಲ್ ಕಾರ್ಡ್‌ಗಳನ್ನು ಕಳೆದುಕೊಂಡ ಅನರ್ಹ ಫಲಾನುಭವಿಗಳಿಗೆ ಎಪಿಎಲ್ ಕಾರ್ಡ್‌ಗಳನ್ನು ನೀಡಲು ಸರ್ಕಾರ ಮುಂದಾಗಿದೆ. ಅಕ್ರಮವಾಗಿ ಬಿಪಿಎಲ್ ಕಾರ್ಡ್ ಪಡೆದು ಯೋಜನೆಯ ಫಲ ಅನುಭವಿಸಿರುವ ಫಲಾನುಭವಿಗಳಿಗೆ ದಂಡ ವಿಧಿಸಲು ಸಹ ಆಹಾರ ಇಲಾಖೆ ಚಿಂತನೆ ನಡೆಸಿದೆ. ಈ ಸಂಬಂಧ ದಂಡದ ರೂಪುರೇಷೆಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಹೇಳಲಾಗಿದೆ.
Author: main-admin
ಉಡುಪಿ: ಕಾರ್ಕಳ ಅಭಿಷೇಕ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಯುವತಿಯ ಅಶ್ಲೀಲ ವಿಡಿಯೋ ವಾಟ್ಸಾಪ್ ಗ್ರೂಪ್‌ಗೆ ಹಾಕಿದ್ದೆ ಅಭಿಷೇಕ್ ಎಂದು ಉಡುಪಿ ಎಸ್ಪಿ ಹರಿರಾಂ ಶಂಕರ್ ಮಾಹಿತಿ ನೀಡಿದ್ದಾರೆ. ಕಾರ್ಕಳ ಅಭಿಷೇಕ ಆತ್ಮಹತ್ಯೆ ಪ್ರಕರಣದಲ್ಲಿ ಹನಿಟ್ರ್ಯಾಪ್ ಬಗ್ಗೆ ಯಾವುದೇ ಸಾಕ್ಷಿ ಇಲ್ಲ – ಯುವತಿ ಅಶ್ಲೀಲ ವಿಡಿಯೋ ವಾಟ್ಸಾಪ್ ಗ್ರೂಪ್‌ಗೆ ಹಾಕಿದ್ದೆ ಅಭಿಷೇಕ್ ಎಂದು ತಿಳಿಸಿದ್ದಾರೆ. ಈ ಪ್ರಕರಣದ ಎಲ್ಲಾ ಆರೋಪಿಗಳ ಮೊಬೈಲ್ ಗಳನ್ನು ಪರಿಶೀಲನೆ ಮಾಡಲಾಗಿದೆ. ಆರೋಪಿತ ಮೊಬೈಲ್ ದಾಖಲೆಗಳ ಆದಾರದಲ್ಲಿ ಬ್ಯಾಂಕ್ ವಹಿವಾಟು, ಫೋನ್ ಕರೆ ಹಾಗೂ ಚಾಟ್ ದಾಖಲೆಗಳನ್ನು ಆಧರಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಅದೇ ರೀತಿ ಅಭಿಷೇಕನ ಸ್ನೇಹಿತರು, ಬಂಧುಗಳು ಮತ್ತು ಸಂಬಂಧಿಕರನ್ನು ಕೂಡ ವಿಚಾರಣೆ ಮಾಡಿದ್ದಾರೆ.ಮೇಲಿನ ಎಲ್ಲಾ ವಿಚಾರಣೆ ಬಳಿಕ ಪೊಲೀಸರು ಈ ಪ್ರಕರಣದಲ್ಲಿ ಯಾವುದೇ ಹನಿಟ್ರ್ಯಾಪ್ ಸಂಬಂಧಿಸಿದಂತೆ ಯಾವುದೇ ಸಾಕ್ಷಿ ಸಿಕ್ಕಿಲ್ಲ ಎಂದಿದ್ದಾರೆ. ಆರೋಪಿ ಯುವತಿಯ ಮೊಬೈಲ್‌ನಲ್ಲಿ ಯಾವುದೇ ರೀತಿಯ ಅಶ್ಲೀಲ ಫೋಟೋ ಅಥವಾ ವಿಡಿಯೋಗಳು ಸಿಕ್ಕಿಲ್ಲ ಮತ್ತು ಆಕೆ ಯಾವುದೇ ವಿಡಿಯೋವನ್ನು ಯಾರಿಗೂ…
ಮಂಗಳೂರು: ಮಂಗಳೂರು ನಗರ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ದಾಖಲಾಗಿದ್ದ ಒಟ್ಟು ಒಂಬತ್ತು ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿತೆಯನ್ನು ಬರ್ಕೆ ಠಾಣೆ ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ. ಬರ್ಕೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮೊಕದ್ದಮೆ ನಂ.77/2025 (ಕಲಂ 316(2), 318(2), 3(5) BNS-2023) ಪ್ರಕರಣದಲ್ಲಿ ಪಿರ್ಯಾದಿ ಜಯರಾಯ ರವರು ಮಂಗಳೂರು ನಗರದ ಎಂಪೈರ್ ಮಾಲ್‌ನಲ್ಲಿರುವ ಲ್ಯಾಪ್‌ಟಾಪ್ ಬಜಾರ್ ಎಂಬ ಅಂಗಡಿಯನ್ನು ನಡೆಸುತ್ತಿದ್ದು, ವಿವಿಧ ಕಂಪನಿಗಳ ಲ್ಯಾಪ್‌ಟಾಪ್ ಮಾರಾಟ ಮತ್ತು ಸರ್ವೀಸ್ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.ಪಿರ್ಯಾದಿದಾರರ ಅಂಗಡಿಯಿಂದ ಆರೋಪಿತೆ ಫರಿದಾ ಬೇಗಂ @ ಫರಿದಾ (28), ಪತಿ ರಮಿಜ್ ರಾಜ್, ನಿವಾಸಿ – ಮುತ್ತೂರು ಗ್ರಾಮ, ಮಂಗಳೂರು ತಾ. ಅವರು ತಮ್ಮ ಪರಿಚಯದ ವ್ಯಕ್ತಿಯ ಮೂಲಕ ಮಾನ್ಯತೆ ಇಲ್ಲದ ಚೆಕ್‌ಗಳನ್ನು ನೀಡಿ ಕೆಳಗಿನ ಲ್ಯಾಪ್‌ಟಾಪ್‌ಗಳನ್ನು ಖರೀದಿಸಿ, ಒಟ್ಟು ರೂ. 1,98,000 ಪಾವತಿಸದೇ ವಂಚನೆ ಮಾಡಿದ್ದಾರೆಂದು ತಿಳಿದುಬಂದಿದೆ:ತನಿಖೆಯ ವೇಳೆ, ಬರ್ಕೆ ಠಾಣೆಯ ಪೊಲೀಸ್ ನಿರೀಕ್ಷಕ ಶ್ರೀ ಮೋಹನ ಕೊಟ್ಟಾರಿ ಅವರ ನೇತೃತ್ವದಲ್ಲಿ ಪ್ರಕರಣದ ತನಿಖಾಧಿಕಾರಿ ವಿನಾಯಕ ತೊರಗಲ್…
ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಕಿನ್ನಿಗೋಳಿ ಪರಿಸರದಲ್ಲಿನ ಸಾರ್ವಜನಿಕರಿಗೆ ಮಾರುಕಟ್ಟೆಯಲ್ಲಿ ಹಣವನ್ನು ಹೊಡಿಕೆ ಮಾಡಿ ಲಾಭಾಂಶ ನೀಡುವುದಾಗಿ ಸುಮಾರು 1.5 ಕೋಟಿ ಹಣ ಹಾಗೂ ಚಿನ್ನವನ್ನು ಪರಿಚಯಸ್ಥರಿಂದ ಪಡೆದು ಹಲವರಿಗೆ ವಂಚಿಸಿದ್ದ ಆರೋಪಿ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ ಬಂಧಿತ ಆರೋಪಿಯನ್ನು ಕವತ್ತಾರಿನ ರಿಚ್ಚರ್ಡ್ ಡಿ ಸೋಜಾ ಮತ್ತು ಅವರ ಪತ್ನಿ ರಶ್ಮಿ ರೀಟಾ ಪಿಂಟೋ ಎಂದು ಗುರುತಿಸಲಾಗಿದೆ. ಇವರು ಹಣ ಪಡೆದು ವಂಚನೆ ಎಸಗುತ್ತಿದ್ದ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಂಧನಕ್ಕೆ ಸಿಗದೆ ದಂಪತಿ ಸುಮಾರು ಒಂದೂವರೆ ವರ್ಷಗಳಿಂದ ಮುಂಬೈನಲ್ಲಿ ತಲೆಮರೆಸಿಕೊಂಡಿದ್ದರು. ಇದೀಗ ಅಲ್ಲಿ ಗಂಡ-ಹೆಂಡತಿಯನ್ನು ಮುಲ್ಕಿ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಕಾರ್ಕಳದ ಯುವಕ ಅಭಿಷೇಕ್ ಆಚಾರ್ಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತಾಂತ್ರಿಕ ಸಾಕ್ಷ್ಯಗಳನ್ನು ಸಂಗ್ರಹಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಉಡುಪಿ ಜಿಲ್ಲಾ ಎಸ್ಪಿ ಹರಿರಾಮ್ ಶಂಕರ್ ಹೇಳಿದ್ದಾರೆ. ಹನಿ ಟ್ರ್ಯಾಪ್ ಗೆ ಒಳಗಾಗಿ ಡೆತ್ ನೋಟ್ ಬರೆದಿಟ್ಟು ಅಭಿಷೇಕ್ ಆಚಾರ್ಯ ಆತ್ಮಹತ್ಯೆ ಮಾಡಿಕೊಂಡಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿಲ್ಲ ಎನ್ನುವ ಆರೋಪಗಳು ಕೇಳಿ ಬಂದಿದ್ದವು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಎಸ್ಪಿ ಹರಿರಾಮ್ ಶಂಕರ್, ಡೆತ್ ನೋಟ್ ನಲ್ಲಿ ಉಲ್ಲೇಖಸಿರುವ ಎಲ್ಲಾ ವಿಷಯಗಳ ಬಗ್ಗೆ ತನಿಖೆ ನಡೆಸುವ ಅವಶ್ಯಕತೆ ಇದೆ. ಆರಂಭಿಕವಾಗಿ ಇದು ಪ್ರೀತಿ ವೈಫಲ್ಯದ ಪ್ರಕರಣವೆಂದು ಕಂಡುಬಂದರೂ, ಸೂಸೈಡ್ ನೋಟ್‌ನಲ್ಲಿರುವ ವಿಷಯಗಳ ಬಗ್ಗೆ ಸಂಪೂರ್ಣ ತನಿಖೆ ನಡೆಸುವ ಅಗತ್ಯವಿದೆ ಎಂದು ತಿಳಿಸಿದ್ದಾರೆ. ತಾಂತ್ರಿಕ ಸಾಕ್ಷ್ಯಗಳನ್ನು ಸಂಗ್ರಹಿಸಿ, ಆತ್ಮಹತ್ಯೆಯ ಹಿಂದಿರುವ ನೈಜತೆಯನ್ನು ಪತ್ತೆಹಚ್ಚುವತ್ತ ಗಮನಹರಿಸಲಾಗಿದೆ. ಈಗಲೇ ಯಾವುದೇ ತೀರ್ಮಾನಕ್ಕೆ ಬರುವುದಿಲ್ಲ, ಆತ್ಮಹತ್ಯೆಗೆ ಪ್ರಚೋದನೆ ನೀಡಿದವರು ಯಾರೇ ಇದ್ದರೂ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ತನಿಖೆ ಪಾರದರ್ಶಕವಾಗಿ ನಡೆಯಲಿದೆ ಎಂದು ತಿಳಿಸಿದ್ದಾರೆ. ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆ…
ಕಾಸರಗೋಡು: ಕಾರಿನಲ್ಲಿ ಬಂದ ಇಬ್ಬರು ದುರ್ಷ್ಕಮಿಗಳು ಓಮ್ನಿ ವ್ಯಾನ್ ನ್ನು ತಡೆದು ವ್ಯಾಪಾರಿಯ ಕುತ್ತಿಗೆಯಲ್ಲಿದ್ದ ಮೂರು ಪವನ್ ನ ಚಿನ್ನದ ಸರ ಎಗರಿಸಿದ ಬಗ್ಗೆ ಮಂಜೇಶ್ವರ ಠಾಣಾ ಪೊಲೀಸರಿಗೆ ದೂರು ನೀಡಲಾಗಿದೆ. ವರ್ಕಾಡಿ ಅರಿಬೈಲು ನಿವಾಸಿ ಸೀತಾರಾಮ ಶೆಟ್ಟಿ ( 33) ರವರ ಕುತ್ತಿಗೆಯಲ್ಲಿದ್ದ ಸರವನ್ನು ಎಗರಿಸಲಾಗಿದೆ. ಮೊರತ್ತನೆ ಯಲ್ಲಿ ಚಿಕನ್ ಸೆಂಟರ್ ಮಾಲಕ ರಾಗಿರುವ ಸೀತಾರಾಮ ಶೆಟ್ಟಿ ರವರು ಮಧ್ಯಾಹ್ನ ಅಂಗಡಿಯಿಂದ ವ್ಯಾನ್ ನಲ್ಲಿ ಮನೆಗೆ ಮರಳುತ್ತಿದ್ದಾಗ ಕಾರಿನಲ್ಲಿ ಬಂದ ಇಬ್ಬರು ವ್ಯಾನ್ ನ್ನು ತಡೆದು ಕೃತ್ಯ ನಡೆಸಿರುವುದಾಗಿ ದೂರಲಾಗಿದೆ.ಬಳಿಕ ಕಾರಲ್ಲಿದ್ದವರು ಪರಾರಿಯಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
ಮಂಗಳೂರು: ಸಾಮಾಜಿಕ ಜಾಲ ತಾಣದಲ್ಲಿ ಆತಂಕಕಾರಿ ಸಂದೇಶ ರವಾನೆ ಮಾಡಿದ ಆರೋಪದಲ್ಲಿ ಇಬ್ಬರನ್ನು ಮುಲ್ಕಿ ಠಾಣಾ ಪೊಲೀರು ಬಂಧಿಸಿದ್ದಾರೆ.ಬಂಧಿತ ಆರೋಪಿಗಳನ್ನು ತಾಳಿಪ್ಪಾಡಿ ಗ್ರಾಮದ ಗುತ್ತಕಾಡು, ಶಾಂತಿನಗರ ಮೆಹನಾಝ್ ಮಂಝಿಲ್ ನಿವಾಸಿ ಟಿ ಎ ಮೊಯಿದಿನ್ ಎಂಬವರ ಪುತ್ರರಾದ ಮೊಹಮ್ಮದ್ ಅನ್ವರ್ (44) ಹಾಗೂ ತಾಯಿರ್ ನಕಾಶ್ (42) ಎಂದು ಹೆಸರಿಸಲಾಗಿದೆ. ಅ 15 ರಂದು ಸೋಷಿಯಲ್ ಮೀಡಿಯಾದಲ್ಲಿ ಓರ್ವ ವ್ಯಕ್ತಿಯು ಬ್ಯಾರಿ ಭಾಷೆಯಲ್ಲಿ ಮಾತಾಡುತ್ತಾ ಸಮಾಜದಲ್ಲಿ ಕೋಮು ಗಲಭೆಯಾಗುವಂತಹ ಕೃತ್ಯಕ್ಕೆ ಕಾರಣವಾಗುವ ಸಂದೇಶವನ್ನು ರವಾನಿಸಿದ್ದಾನೆ. ಈ ಸಂದೇಶದಲ್ಲಿ ‘ಒಂದು ಗ್ಯಾಂಗ್ ಇದೆ ಯಾರು ಕ್ಯಾರ್ ಲೆಸ್ ಮಾಡಬೇಡಿ, ಖಾಲಿ ಬಜಪೆ, ಸುರತ್ಕಲ್ ಅಂತಲ್ಲ, ಅವರ ಗ್ಯಾಂಗ್ ಇರುವುದು ಭಟ್ಟಕೋಡಿಯಲ್ಲಿ. ಬಜಪೆ ಮತ್ತು ಸುರತ್ಕಲ್ ಜನರು ಮಾತ್ರ ಕ್ಯಾರ್ ಫುಲ್ ಆಗಿರುವುದಲ್ಲ. ಕಿನ್ನಿಗೋಳಿಯವರು ಕ್ಯಾರ್ ಫುಲ್ ಆಗಿರಬೇಕಾಗುತ್ತದೆ ಹಾಗೂ ಎಲ್ಲಾ ಕುಡುಕರ ಗ್ಯಾಂಗ್ ಇರುವುದು ಭಟ್ಟಕೋಡಿ ಬಾರ್ ನಲ್ಲಿ. ನಾನು ಖುದ್ದು ಅವರ ಟೀಮ್ ಎಲ್ಲಾ ಭಟ್ಟಕೋಡಿಯಲ್ಲಿ ನೋಡಿದ್ದೇನೆ. ಸುಮಾರು ಒಂದೂವರೆ ತಿಂಗಳ…
ಪುತ್ತೂರು: ಅ.17ರಂದು ಸಂಜೆ ಆಟೋ ಚಾಲಕ ಬಶೀರ್ ಕುರಿಯ ಗ್ರಾಮ ಎಂಬವರು ಸಮವಸ್ತ್ರ ಧರಿಸಿದೇ ಆಟೋ ಚಲಾಯಿಸಿಕೊಂಡು ಬರುತ್ತಿರುವಾಗ, ಕರ್ತವ್ಯದಲ್ಲಿದ್ದ ಪುತ್ತೂರು ಸಂಚಾರ ಪೊಲೀಸ್ ಠಾಣಾ ಚಿದಾನಂದ ರೈ, ಎ.ಎಸ್.ಐ ಮತ್ತು ಸಿಪಿಸಿ 2283, ಶ್ರೀ ಶೈಲ ಎಂ ಕೆ, ಕೈ ಸನ್ನೆ ಮೂಲಕ ನಿಲ್ಲಿಸಲು ಸೂಚಿಸಿದ್ದರೂ, ತನ್ನ ವಾಹನವನ್ನು ನಿಲ್ಲಿಸದೇ ವೇಗವಾಗಿ ಚಲಾಯಿಸಿಕೊಂಡು ಬಂದು ಮೋಟಾರ್ ವಾಹನ ಕಾಯ್ದೆ ಉಲ್ಲಂಘನೆ ಮಾಡಿದ್ದು ಈ ಕುರಿತು ಬಶೀರ್ ಅವರನ್ನು ಹಿಂಬಾಲಿಸಿ ವಾಹನವನ್ನು ತಡೆದು ಆತನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೈಯಿಂದ ಹಲ್ಲೆ ಮಾಡಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ವೈರಲ್ ಆಗಿದೆ. ಇದನ್ನು ಪರಿಶೀಲಿಸಿ ಚಿದಾನಂದ ರೈ, ಎ.ಎಸ್.ಐ ಮತ್ತು ಸಿಪಿಸಿ 2283, ಶ್ರೀ ಶೈಲ ಎಂ ಕೆ ರವರನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ ಎಂದು ಜಿಲ್ಲಾ ಎಸ್ಪಿ ತಿಳಿಸಿದ್ದಾರೆ.
ಮಂಗಳೂರು: ಇ ಪರಿವಾಹನ್ ಚಲನ್ ಆಧಾರಿತ ಲಿಂಕ್ ಕ್ಲಿಕ್ ಮಾಡಿದ ವ್ಯಕ್ತಿಯೊಬ್ಬರ ಮೊಬೈಲ್ ಫೋನ್ ಹ್ಯಾಕ್ ಆಗಿ 64,000 ರೂ. ಕಳೆದುಕೊಂಡ ಘಟನೆಗೆ ಸಂಬಂಧಿಸಿದಂತೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ದೂರುದಾರರು ಅಕ್ಟೋಬರ್ 5 ರಂದು ಸ್ನೇಹಿತರನ್ನು ಭೇಟಿ ಮಾಡಲು ನಗರಕ್ಕೆ ಬಂದಿದ್ದರು. ಅಂದು ಸಂಜೆ, ಅವರಿಗೆ ಅಪರಿಚಿತ ಸಂಖ್ಯೆಯಿಂದ ಇ ಪರಿವಾಹನ್ ಚಲನ್ ಆಧಾರಿತ ಲಿಂಕ್ ಇರುವ ವಾಟ್ಸಾಪ್ ಸಂದೇಶ ಬಂದಿತ್ತು. ಆ ರಾತ್ರಿ, ಅವರು ಅದನ್ನು ಪರಿಶೀಲಿಸಲು ಆ ಲಿಂಕ್ ಅನ್ನು ಕ್ಲಿಕ್ ಮಾಡಿದ್ದಾರೆ. ಪರಿಣಾಮ ಅವರ ಸಂಪೂರ್ಣ ಮೊಬೈಲ್ ಫೋನ್ ಹ್ಯಾಕ್ ಆಗಿದೆ. ವಂಚಕರು ದೂರುದಾರರ ಫೋನಿನಲ್ಲಿರುವ ಯುಪಿಐ ಆಧಾರಿತ ಅಪ್ಲಿಕೇಶನ್‌ಗಳಿಗೆ ಪ್ರವೇಶ ಪಡೆದುಕೊಂಡಿದ್ದಾರೆ. ಇದರಿಂದಾಗಿ ವಿಭಿನ್ನ ಲಾಗಿನ್‌ಗಳ ಒಟಿಪಿಗಳು ಅವರಿಗೆ ಬಂದಿದೆ. ನಂತರ ಅವರಿಗೆ ತಿಳಿಯದಂತೆ ಎರಡು ಪ್ರತ್ಯೇಕ ವಹಿವಾಟುಗಳ ಮೂಲಕ 60,000 ರೂ. ಮತ್ತು 4,000 ರೂ. ವರ್ಗಾಯಿಸಿಕೊಂಡಿದ್ದಾರೆ. ಈ ವಂಚನೆಯಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ದೂರುದಾರರು ಅಧಿಕಾರಿಗಳಿಗೆ…
ಮಂಗಳೂರು : ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಲಾಭ ಗಳಿಸಿಕೊಡುತ್ತೇವೆ ಎಂದು ನಂಬಿಸಿ ಕಿನ್ನಿಗೋಳಿ ಪರಿಸರದ ಪರಿಚಯಸ್ಥ ಜನರಿಗೆ ಕೋಟಿಗಟ್ಟಲೆ ರೂಪಾಯಿ ವಂಚಿಸಿದ್ದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಿನ್ನಿಗೋಳಿ ಸಮೀಪದ ಕವತ್ತಾರಿನ ರಿಚರ್ಡ್ ಡಿಸೋಜ ಮತ್ತು ಅವನ ಹೆಂಡತಿ ರಶ್ಮಿ ರೀಟಾ ಪಿಂಟೊ ಸೆರೆಯಾಗಿರುವ ಆರೋಪಿಗಳು. ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಸಾರ್ವಜನಿಕರಿಗೆ ಹೂಡಿಕೆ ನೆಪದಲ್ಲಿ ಸುಮಾರು 1.5 ಕೋ. ರೂ. ವಂಚಿಸಿದ ಪ್ರಕರಣ ದಾಖಲಾಗಿತ್ತು. ಆರೋಪಿಗಳು ಸುಮಾರು ಒಂದೂವರೆ ವರ್ಷದಿಂದ ಮುಂಬೈಯಲ್ಲಿ ತಲೆಮರೆಸಿಕೊಂಡಿದ್ದರು. ಮೂಲ್ಕಿ ಪೊಲೀಸರು ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೊಪ್ಪಿಸಿದೆ.



