Author: main-admin

ಮಂಗಳೂರು: ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಕಾವೂರು ಮರಕಡದ ಜ್ಯೋತಿನಗರದ ಧರ್ಮರಾಜ (60) ಎಂದು ಗುರುತಿಸಲಾಗಿದೆ. ಆರೋಪಿಯು 2018ರಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದರಿಂದ ನ್ಯಾಯಾಲಯವು ಎಲ್‌ಪಿಸಿ ವಾರೆಂಡ್ ಹೊರಡಿಸಿತ್ತು. ಅದರಂತೆ ಕಾವೂರು ಠಾಣೆಯ ಪೊಲೀಸರು ಮುಲ್ಕಿಯ ಪಕ್ಷಿಕರೆಯ ಕೆಂಬ್ರಾಲ್‌ನಿಂದ ಬಂಧಿಸಿದ್ದಾರೆ. ಆರೋಪಿಯನ್ನು 1ನೇ ಹೆಚ್ಚುವರಿ ಹಿರಿಯ ಸಿವಿಲ್ ಜಡ್ಜ್ ಮತ್ತು ಸಿಜೆಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಆರೋಪಿಗೆ ಅ.29ರವರೆಗೆ ನ್ಯಾಯಾಂಗ ಬಂದನಕ್ಕೆ ಒಪ್ಪಿಸಿದೆ.

Read More

ಉಡುಪಿ: ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಅಂಬಲಪಾಡಿ ಕಾಳಿಕಾಂಬನಗರದ ಲೇಬರ್ ಕಾಲೋನಿಯಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ವಲಸೆ ಕಾರ್ಮಿಕ ಕುಟುಂಬದ ಕಾಲೇಜು ವಿದ್ಯಾರ್ಥಿನಿ ಪವಿತ್ರ (17), ಯುವಕ ವಲಸೆ ಕಾರ್ಮಿಕ ಮಲ್ಲೇಶ (23) ಎಂದು ಗುರುತಿಸಲಾಗಿದೆ. ಯುವತಿ ವಾಸವಾಗಿರುವ ಬಾಡಿಗೆ ಜೋಪಡಿಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ತನಿಖೆ ಪ್ರಗತಿಯಲ್ಲಿದೆ. ನಗರ ಪೋಲಿಸ್ ಠಾಣೆಯ ಎಸ್.ಐ ಭರತೇಶ್, ಎ.ಎಸ್.ಐ ಪರಮೇಶ್ವರ್ ಕೆ, ಎ.ಎಸ್ ಐ ರಮೇಶ್, ಮುಖ್ಯ ಆರಕ್ಷಕ ಜಯಕ‌ರ್ ಘಟನಾ ಸ್ಥಳಕ್ಕೆ ಆಗಮಿಸಿ ಕಾನೂನು ಪ್ರಕ್ರಿಯೆ ನಡೆಸಿದರು. ಸಮಾಜಸೇವಕ ನಿತ್ಯಾನಂದ ಒಳಕಾಡು ಎರಡು ಮೃತದೇಹಗಳನ್ನು ನೇಣುಕುಣಿಕೆಯಿಂದ ತೆರವುಗೊಳಿಸಿ ಅಂಬುಲೆನ್ಸ್ ವಾಹನದಲ್ಲಿ ಅಜ್ಜರಕಾಡು ಜಿಲ್ಲಾಸ್ಪತ್ರೆಯ ಮರಣೋತ್ತರ ಪರೀಕ್ಷಾ ಘಟಕಕ್ಕೆ ಸಾಗಿಸಲು ಪೋಲಿಸ್ ಇಲಾಖೆಗೆ ನೆರವು ನೀಡಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

ಮಂಗಳೂರು: ವಿ.ಕೆ. ಫರ್ನಿಚರ್ ಅಂಡ್ ಎಲೆಕ್ಟ್ರಾನಿಕ್ಸ್ ವತಿಯಿಂದ “Diya With Rangoli Competition – 2025” ಎಂಬ ಆಕರ್ಷಕ ಸ್ಪರ್ಧೆ ಆಯೋಜಿಸಲಾಗಿದೆ. ದೀಪಾವಳಿ ಹಬ್ಬದ ಸಂಭ್ರಮದಲ್ಲಿ ರಂಗೋಲಿ ಮತ್ತು ದಿಯಾ ವಿನ್ಯಾಸವನ್ನು ಪ್ರದರ್ಶಿಸಿ ₹10,000 ಮೌಲ್ಯದ ಗಿಫ್ಟ್ ವೌಚರ್ ಗೆಲ್ಲುವ ಅವಕಾಶವನ್ನು ಭಾಗವಹಿಸುವವರಿಗೆ ನೀಡಲಾಗಿದೆ.ಸ್ಪರ್ಧೆಯ ಅವಧಿ: ಅಕ್ಟೋಬರ್ 20ರಿಂದ ಅಕ್ಟೋಬರ್ 24, 2025ರವರೆಗೆ.ಭಾಗವಹಿಸುವ ವಿಧಾನ:• ಸ್ಪರ್ಧೆಯಲ್ಲಿ ಭಾಗವಹಿಸಲು ಇನ್‌ಸ್ಟಾಗ್ರಾಂನಲ್ಲಿ @vkfurniture_electronics ಪುಟವನ್ನು ಫಾಲೋ ಮಾಡಬೇಕು.• ದಿಯಾ ಇರಿಸಿದ ಸುಂದರವಾದ ರಂಗೋಲಿಯ ಚಿತ್ರವನ್ನು ಪೋಸ್ಟ್ ಹಾಗೂ ಸ್ಟೋರಿಯಾಗಿ ಅಪ್ಲೋಡ್ ಮಾಡಬೇಕು.• ಪೋಸ್ಟ್‌ನಲ್ಲಿ @vkfurniture_electronics ಟ್ಯಾಗ್ ಮಾಡಿ, #vkfurnitureandelectronicsRangoliwithdiya ಹ್ಯಾಶ್‌ಟ್ಯಾಗ್ ಬಳಸಬೇಕು.• ಹೆಚ್ಚು ಲೈಕ್ ಮತ್ತು ಶೇರ್ ಪಡೆದ ಪೋಸ್ಟ್‌ಗಳಿಗೆ ಗೆಲ್ಲುವ ಹೆಚ್ಚಿನ ಅವಕಾಶ.ಗಮನಿಸಿ: ರಂಗೋಲಿ ದೀಪಾವಳಿ ಕಾಲದಲ್ಲಿಯೇ (2025) ಸೃಜಿಸಲ್ಪಟ್ಟಿರಬೇಕು.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 📞 87488 00666ಅಥವಾ ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಿ: VK Furniture & Electronics

Read More

ಬಂಟ್ವಾಳ: ತಾಲೂಕಿನ ಪಾಣೆ ಮಂಗಳೂರಿನಲ್ಲಿ ರಿಕ್ಷಾ ಚಾಲಕನೋರ್ವ ನಿಷೇಧಿತ ಎಂ.ಡಿ.ಎಂ.ಎ. ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪದ ಮೇಲೆ ಬಂಟ್ವಾಳ ನಗರ ಠಾಣಾ ಪೋಲೀಸರ ತಂಡ ಕಾರ್ಯಾಚರಣೆ ನಡೆಸಿ ಬಂಧಿಸಿದೆ. ಬಂಟ್ವಾಳ ನಿವಾಸಿ ಆಗಿರುವ ಮೊಹಮ್ಮದ್ ಇಮ್ತಿಯಾಜ್ (40) ಬಂಧಿತ ಆರೋಪಿಯಾಗಿದ್ದಾನೆ. ‌‌‌ ಪಾಣೆಮಂಗಳೂರು ಸ್ಮಶಾನದ ರಸ್ತೆಯಲ್ಲಿ ಈತ ಅನುಮಾಸ್ಪವಾಗಿ ರಿಕ್ಷಾದಲ್ಲಿ ನಿಂತಿರುವ ವೇಳೆ ಪೊಲೀಸರು ವಿಚಾರಿಸಿದಾಗ ಈತನ ಬಳಿ ಒಂದು ಸಾವಿರ ರೂಪಾಯಿ ಮೌಲ್ಯದ 760 ಮಿಲಿ ಗ್ರಾಂ ಎಂ.ಡಿ.ಎಂ.ಎ.ಮಾದಕ ವಸ್ತುಸಿಕ್ಕಿದ್ದು ಪೋಲೀಸರು ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Read More

ಮಂಗಳೂರು : ಅಪರಾಧ ಪ್ರಕರಣಗಳಲ್ಲಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿರುವ ಆರೋಪಿಗಳ ಬೆನ್ನು ಬಿದ್ದಿರುವ ಪೊಲೀಸರು ಸದ್ರಿ ಆರೋಪಿಗಳಿಗೆ ಜಾಮೀನು ನೀಡಿದ್ದ ಶ್ಯೂರಿಟಿದಾರರು ಮತ್ತು ಶ್ಯೂರಿಟಿಗಾಗಿ ನೀಡಿರುವ ಜಮೀನನ್ನು ಮುಟ್ಟುಗೋಲು ಹಾಕಲು ಕ್ರಮ ಕೈಗೊಂಡಿದ್ದಾರೆ.  ‘ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತ್ತಿಯಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿ ತನಿಖೆಯನ್ನು ಪೂರೈಸಿ, ನ್ಯಾಯಾಲಯಕ್ಕೆ ಆರೋಪಿಗಳ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ ನಂತರ ಕೆಲವು ಪ್ರಕರಣಗಳಲ್ಲಿ ಆರೋಪಿಗಳು ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದಾರೆ. ಸದ್ರಿ ಆರೋಪಿಗಳು ತಲೆಮರೆಸಿಕೊಂಡ ಪ್ರಕರಣಗಳಲ್ಲಿ ನ್ಯಾಯಾಲಯದಿಂದ ಆರೋಪಿಗಳ ಬಿಡುಗಡೆ ಸಮಯದಲ್ಲಿ ಶ್ಯೂರಿಟಿದಾರರು ಭದ್ರತೆಯ ಆಧಾರವಾಗಿ ನೀಡಿದ ಜಮೀನು/ಸೊತ್ತು ವಿವರಗಳನ್ನು ಸಂಗ್ರಹಿಸಲಾಗಿದೆ. ನ್ಯಾಯಾಲಯದಿಂದ ಆದೇಶವನ್ನು ಪಡೆದು ಶ್ಯೂರಿಟಿದಾರರಿಗೆ ಸಂಬಂಧಿಸಿದ ಸೊತ್ತುಗಳನ್ನು ಮುಟ್ಟುಗೋಲು ಹಾಕಲು ಮತ್ತು ಅದಕ್ಕೆ ಆಧಾರವಾಗಿಟ್ಟಿದ್ದ ದಂಡವನ್ನು ವಸೂಲಿ ಮಾಡಲು ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದರ ಬಗ್ಗೆ ಮುಟ್ಟುಗೋಲು ಮಾಡಿರುವ ಆಸ್ತಿಯ ಆರ್.ಟಿ.ಸಿ. ಪತ್ರದಲ್ಲಿ ವಿವರಗಳನ್ನು ನಮೂದಿಸಲಾಗಿದೆ. ಕೆಲವು ಪ್ರಕರಣಗಳಲ್ಲಿ ಮುಟ್ಟುಗೋಲು ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ. ಕಳೆದ ಒಂದು ತಿಂಗಳಿನಿಂದ ಇಂತಹ 5 ಅಪರಾಧ…

Read More

ಬಂಟ್ವಾಳ: ಎರಡನೇ ಮದುವೆಯಾಗಲು ಹೆಣ್ಣು ತೋರಿಸುವ ನೆಪದಲ್ಲಿ ಹನಿಟ್ರ್ಯಾಪ್ ನಡೆಸಿದ ಬಂಟ್ವಾಳ ಮೂಲದ ತಂಡವೊಂದು ಆತನಿಂದ 45 ಲಕ್ಷಕ್ಕೂ ಹೆಚ್ಚು ಹಣ ಸುಲಿಗೆ ಮಾಡಿದ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಏಳು ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಅಲ್ಲದೆ ಈ ಕುರಿತು ಸಂತ್ರಸ್ತನಿಗೆ ಆರೋಪಿಗಳಿಂದ ನಿರಂತರ ಬೆದರಿಕೆ ಕರೆ ಬಂದಿದ್ದು, ಈ ಬಗ್ಗೆ ಕೂಡ ಗಲ್ಫ್ ಉದ್ಯಮಿ ಕೇರಳದ ತಾವರಕಡನ್ ಮೂಲದ ಮಹಮ್ಮದ್ ಅಶ್ರಫ್ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸಂತ್ರಸ್ತ ನೀಡಿರುವ ದೂರಿನಲ್ಲಿ, ನನ್ನ ಫೋನ್ ನಂಬರಿಗೆ ಬೇರೆ ಬೇರೆ ವ್ಯಕ್ತಿಗಳು ಕರೆ ಮಾಡಿ ಈ ಪ್ರಕರಣದಿಂದ ಆರೋಪಿಗಳನ್ನು ಕೈಬಿಡಬೇಕು ಮತ್ತೊಂದು ಕರೆಯಲ್ಲಿ ನಿಮ್ಮನ್ನು ನಾವು ಹೊರಗಡೆ ನೋಡುತ್ತೇವೆ, ಆರೋಪಿಗಳನ್ನು ಕೈ ಬಿಡಿ ಅವರು ಮಗ್ಧರು. ಈ ರೀತಿ ನನ್ನಲ್ಲಿ ಹೇಳಿದ್ದಾರೆ. ಸೇಫಿಯಾ ಮಾಣಿ ಎಂಬ ಆರೋಪಿ ಈ ರೀತಿ ಕರೆ ಮಾಡಿ ಕೇಸ್ ವಪಾಸು ಪಡೆಯದಿದ್ದರೆ ವೀಡಿಯೋ, ಫೋಟೋ ಅವರ ಜಮಾತಿಗೆ ಅವರ ಪತ್ನಿ ಸಂಬಂಧಿಕರಿಗೆ…

Read More

ಉಳ್ಳಾಲ: ಕೊಣಾಜೆ ಪೊಲೀಸ್ ಠಾಣೆ ವ್ಯಾಪ್ತಿಯ ಮುದುಂಗಾರುಕಟ್ಟೆ ಬಸ್ ನಿಲ್ದಾಣದಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು, ಮೃತನು ಅಸ್ವಾಭಾವಿಕವಾಗಿ ಮೃತಪಟ್ಟ ಸ್ಥಿತಿಯಲ್ಲಿ ಕಂಡು ಬಂದ ಹಿನ್ನೆಲೆಯಲ್ಲಿ ತಜ್ಞರ ತಂಡಗಳಾದ ಸೊಕೊ ತಂಡ, ಶ್ವಾನದಳ ಮತ್ತು ಬೆರಳಚ್ಚು ತಂಡಕ್ಕೆ ಮಾಹಿತಿ ನೀಡಿದ್ದು, ಮತ್ತು ಸದರಿ ತಂಡಗಳು ಘಟನೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಪಾತೂರು ಜುಮಾ ಮಸೀದಿ ಸಮೀಪದ ನಿವಾಸಿ ನಿಯಾಫ್‌ (28) ಎಂಬವರ ಮೃತದೇಹ ಆಗಿದ್ದು, ಅ.12 ರಂದು ಸಂಜೆ ಮನೆಯಿಂದ ನಾಪತ್ತೆಯಾದವರು ವಾಪಸ್ಸು ಬಾರದೇ ನಾಪತ್ತೆಯಾಗಿದ್ದರು. ನಿಯಾಫ್‌ ವರ್ಷದ ಹಿಂದೆ ಮಹಿಳೆಯ ಚಿನ್ನದ ಸರ ಕಿತ್ತು ನಾಪತ್ತೆಯಾದ ಪ್ರಕರಣದಲ್ಲಿ ಆರೋಪಿಯಾಗಿ ಜೈಲಿನಿಂದ ಬಿಡುಗಡೆಗೊಂಡಿದ್ದನು. ಕೊಣಾಜೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Read More

ಮಲ್ಪೆ: ಪರ್ಮಿಟ್‌ ಪಡೆಯದೆ ಕಾರುಗಳನ್ನು ಬಾಡಿಗೆಗೆ ನೀಡುತ್ತಿದ್ದ ಆರೋಪದ ಮೇಲೆ ಉಡುಪಿ ಜಿಲ್ಲೆಯ ಮಲ್ಪೆ ಪೊಲೀಸರು ಕಾರ್ಯಾಚರಣೆ ನಡೆಸಿ ಬಾಡಿಗೆಗೆ ನೀಡುತ್ತಿದ್ದ 18 ವಿವಿಧ ಮಾದರಿಯ ವೈಟ್‌ ಬೋರ್ಡ್‌ ಕಾರುಗಳನ್ನು ಪತ್ತೆ ಹಚ್ಚಿ ಆರೋಪಿಯ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ. ಸಂಬಂಧಪಟ್ಟ ಪ್ರಾಧಿಕಾರದಿಂದ ಅಧಿಕೃತ ಪರವಾನಿಗೆಯನ್ನು ಪಡೆಯದೆ ಮಲ್ಪೆ ಮತ್ತು ಉಡುಪಿ ಪರಿಸರದ ಸಾರ್ವಜನಿಕ ಸ್ಥಳಗಳಲ್ಲಿ ವೈಟ್‌ ಬೋರ್ಡ್‌ ಕಾರುಗಳನ್ನು ಬಾಡಿಗೆಗೆ ನೀಡುತ್ತಿರುವ ಬಗ್ಗೆ ಉಡುಪಿ ಜಿಲ್ಲಾ ಟ್ಯಾಕ್ಸಿಮೆನ್‌ ಆ್ಯಂಡ್‌ ಮ್ಯಾಕ್ಸಿಕ್ಯಾಬ್‌ ಅಸೋಸಿಯೇಶನಿನ ಮಲ್ಪೆ ಘಟಕದ ಅಧ್ಯಕ್ಷರು ಮತ್ತು ಸದಸ್ಯರು ಮಲ್ಪೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಮಲ್ಪೆ ಪೊಲೀಸ್‌ ಉಪನಿರೀಕ್ಷಕರು ಮತ್ತು ಸಿಬಂದಿ ತೆಂಕನಿಡಿಯೂರು ಗ್ರಾಮದ ಬೆಳ್ಕಲೆ ಹಿರಣ್ಯಧಾಮ ಲೇಔಟ್‌ ಎಂಬಲ್ಲಿ ಆರ್‌.ರಶೀದ್‌ ಎಂಬವರ ಮನೆಯ ಬಳಿ ಇದ್ದ ಕಾರುಗಳ ಪರಿಶೀಲನೆ ನಡೆಸಿದಾಗ ಸ್ಥಳದಲ್ಲಿ 18 ವಿವಿಧ ಮಾದರಿಯ ವೈಟ್‌ ಬೋರ್ಡ್‌ ಕಾರುಗಳು ನಿಲ್ಲಿಸಿರುವುದು ಕಂಡು ಬಂದಿತ್ತು. ಈ ಬಗ್ಗೆ ಆರ್‌. ರಶೀದ್‌ ಅವರನ್ನು ವಿಚಾರಿಸಿದಾಗ, ಆತ ಈ…

Read More

ಉಡುಪಿ: ಟೆಲಿಗ್ರಾಂ ನಲ್ಲಿ ಬಂದ ಆನ್ ಲೈನ್ ಹೂಡಿಕೆ ನಂಬಿ ವ್ಯಕ್ತಿಯೊಬ್ಬ ಬರೋಬ್ಬರಿ 29 ಲಕ್ಷ ಹಣ ಕಳೆದುಕೊಂಡ ಘಟನೆ ನಡೆದಿದೆ. ಸಿಇಎನ್ ಠಾಣೆಗೆ ನೀಡಿದ ದೂರಿನಲ್ಲಿ, ಸೆಪ್ಟೆಂಬರ್ 11 ರಂದು ಟೆಲಿಗ್ರಾಮ್‌ನಲ್ಲಿ @Anjana_198_off ಬಳಕೆದಾರರಿಂದ ಟೆಲಿಗ್ರಾಮ್‌ನಲ್ಲಿ ಸಂದೇಶ ಬಂದಿದೆ. ಇದನ್ನು ಅಧಿಕೃತ ಯುಕೆ ಸರ್ಕಾರ ಎಂದು ವಿವರಿಸಲಾಗಿದೆ. ಆ ಸಂದೇಶದಲ್ಲಿ ಚಿನ್ನ, ಬೆಳ್ಳಿ ನಾಣ್ಯಗಳು, ಬಾರ್‌ಗಳು ಮತ್ತು ಇತರ ಚಿನ್ನ-ಸಂಬಂಧಿತ ಉತ್ಪನ್ನಗಳ ಮೇಲೆ ಲಾಭದಾಯಕ ಆದಾಯದ ಭರವಸೆ ನೀಡಲಾಗಿದೆ. ಈ ವೇದಿಕೆಯಲ್ಲಿ “ಚಿನ್ನದ ಬಿಡ್ಡರ್” ಆಗಿ ಕೆಲಸ ಮಾಡುವ ಮೂಲಕ, ಅವರು ತಮ್ಮ ಮೊಬೈಲ್ ಫೋನ್ ಅಥವಾ ಲ್ಯಾಪ್‌ಟಾಪ್ ಅನ್ನು ಬಳಸಿಕೊಂಡು ದಿನಕ್ಕೆ ರೂ. 1,500 ರಿಂದ 5,000 ವರೆಗೂ ಆದಾಯ ಗಳಿಸಬಹುದು ಎಂದು ಚಂದ್ರಕಾಂತ್ ಅವರಿಗೆ ತಿಳಿಸಲಾಗಿದೆ

Read More

ಮಂಗಳೂರು: ಬಾಲಕಿ ಮೇಲೆ ಬೀದಿನಾಯಿಗಳು ದಾಳಿ ಮಾಡಿದ ಪರಿಣಾಮ ಆಕೆ ಗಂಭೀರ ಗಾಯಗೊಂಡಿರುವ ಘಟನೆ ಬುಧವಾರ ಸಂಜೆ ಮಂಗಳೂರು ಹೊರವಲಯ ಸುರತ್ಕಲ್ ಕಾನ ಮೈದಗುರಿಯಲ್ಲಿ ನಡೆದಿದೆ. ಮೈಂದಗುರಿ ನಿವಾಸಿ ಹೈದರ್ ಅಲಿ ಅವರ‌ ಮಗಳು ರಿದಾ ಫಾತಿಮ (9) ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ತಿಳಿದು ಬಂದಿದೆ‌.ರಿದಾ ಫಾತಿಮ ಸಂಜೆಯ ವೇಳೆ‌ ಮನೆ ಬಳಿಯ ಅಂಗಡಿಗೆ ಹೋಗುತ್ತಿದ್ದಳು. ಈ ವೇಳೆ ಎಲ್ಲಿಂದಲೋ ಜಗಳ ಮಾಡಿಕೊಂಡು ಬೀದಿನಾಯಿಗಳು ಅಲ್ಲಿಗೆ ಬಂದಿವೆ. ನಾಯಿಗಳ ಜಗಳ‌‌ ಕಂಡು ಬೆಚ್ಚಿಬಿದ್ದ ಬಾಲಕಿ ಮನೆಗೆ ಹಿಂದಿರುಗಿ ಓಡುವ ಭರದಲ್ಲಿ ಕೈಯ್ಯಲ್ಲಿದ್ದ ಹಣ ಕೆಳಗೆ ಬಿದ್ದಿದೆ. ಅದನ್ನು ಹೆಕ್ಕುವಷ್ಟರಲ್ಲಿ ನಾಯಿಗಳ‌ ಹಿಂಡು ಬಾಲಕಿಯ ಮೇಲೆ ದಾಳಿ ಮಾಡಿವೆ.ದಾಳಿಯಿಂದ ಬಾಲಕಿಯ ಕೈ, ಕಾಲಿಗೆ ಕಚ್ಚಿದ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಬಾಲಕಿಯ ಬೊಬ್ಬೆ ಕೇಳಿ ಸ್ಥಳಕ್ಕೆ ಬಂದ ಸಾರ್ವಜನಿಕರು ನಾಯಿಗಳ ಬಾಯಿಯಿಂದ ಬಾಲಕಿಯನ್ನು ರಕ್ಷಿಸಿ ಸುರತ್ಕಲ್‌ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಗಿಸಿ ಪ್ರಾಥಮಿಕ ಆರೋಗ್ಯ…

Read More