Facebook Twitter Instagram
    Tuesday, May 19
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಗಂಟಲಿನಲ್ಲಿ ಸಿಲುಕಿದ ನೆಲ್ಲಿಕಾಯಿ ಎರಡು ವರ್ಷದ ಮಗುವಿನ ದುರಂತ ಸಾವು
    ಇತ್ತೀಚಿನ ಸುದ್ದಿ

    ಗಂಟಲಿನಲ್ಲಿ ಸಿಲುಕಿದ ನೆಲ್ಲಿಕಾಯಿ ಎರಡು ವರ್ಷದ ಮಗುವಿನ ದುರಂತ ಸಾವು

    May 19, 2026
    Share

    ಕೋಲಾರ: ಆಟವಾಡುವಾಗ ಆಕಸ್ಮಿಕವಾಗಿ ಬೆಟ್ಟದ ನೆಲ್ಲಿಕಾಯಿಯನ್ನು ನುಂಗಿದ ಎರಡು ವರ್ಷದ ಮಗು, ಅದು ಗಂಟಲಿನಲ್ಲಿ ಸಿಲುಕಿ ಉಸಿರುಗಟ್ಟಿ ಸಾವನ್ನಪ್ಪಿರುವ ಅತ್ಯಂತ ಹೃದಯವಿದ್ರಾವಕ ಘಟನೆ ಮಾಲೂರು ಪಟ್ಟಣದ ಗಾಂಧಿ ಸರ್ಕಲ್ ಬಳಿ ಸೋಮವಾರ ನಡೆದಿದೆ.ಮಾಲೂರು ನಿವಾಸಿಗಳಾದ ರವಿ ಹಾಗೂ ಮಾಲಾ ದಂಪತಿಯ ಎರಡು ವರ್ಷದ ಪುತ್ರ ವಿಜಯೇಂದ್ರ ಮೃತಪಟ್ಟ ದುರ್ದೈವಿ.ಮಗು ವಿಜಯೇಂದ್ರ ಮನೆಯಲ್ಲಿ ಎಂದಿನಂತೆ ಆಟವಾಡುತ್ತಿದ್ದಾಗ ಅಲ್ಲಿದ್ದ ಬೆಟ್ಟದ ನೆಲ್ಲಿಕಾಯಿಯನ್ನು ಬಾಯಿಗೆ ಹಾಕಿಕೊಂಡಿದ್ದಾನೆ. ಈ ವೇಳೆ ನೆಲ್ಲಿಕಾಯಿ ಆಕಸ್ಮಿಕವಾಗಿ ಮಗುವಿನ ಗಂಟಲಿನಲ್ಲಿ ಸಿಲುಕಿಕೊಂಡಿದೆ. ಪರಿಣಾಮ ಮಗುವಿಗೆ ತೀವ್ರ ಉಸಿರಾಟದ ಸಮಸ್ಯೆ ಉಂಟಾಗಿದ್ದು, ಗಾಬರಿಗೊಂಡ ಪೋಷಕರು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ಧಾವಿಸಿದ್ದಾರೆ. ಆದರೆ, ಅಷ್ಟರಲ್ಲೇ ಗಂಟಲಿನಲ್ಲಿ ಸಿಲುಕಿದ್ದ ನೆಲ್ಲಿಕಾಯಿಯನ್ನು ಹೊರತೆಗೆಯಲಾಗದೆ ಮಗು ಉಸಿರುಗಟ್ಟಿ ಕೊನೆಯುಸಿರೆಳೆದಿದೆ. ಕಣ್ಣೆದುರೇ ಆಡುತ್ತಿದ್ದ ಪುಟ್ಟ ಮಗನನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲುಮುಟ್ಟಿದೆ. ಮಾಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

    Post Views: 9

    karnataka PoliceInvestigation

    Related Posts

    24 ಗಂಟೆಯೊಳಗೆ ಕೊಲೆ ಆರೋಪಿಗಳ ಬಂಧನ: ಬದಿಯಡ್ಕ ಪೊಲೀಸರ ಚುರುಕಿನ ಕಾರ್ಯಾಚರಣೆ

    May 19, 2026

    ವಿಟ್ಲ: ನಿಯಂತ್ರಣ ತಪ್ಪಿದ ಪಿಕಪ್ ಸ್ಕೂಟರ್‌ಗೆ ಡಿಕ್ಕಿ, ವ್ಯಕ್ತಿ ಸಾವು

    May 19, 2026

    ವಂದೇ ಭಾರತ್ ಎಕ್ಸ್‌ಪ್ರೆಸ್ ಒಳಗೆ ಕಲ್ಲು ತೂರಾಟ: ಭದ್ರತಾ ಪಡೆಯಿಂದ ತನಿಖೆ ಆರಂಭ

    May 18, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.