Facebook Twitter Instagram
    Tuesday, September 8
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಬೆಳ್ತಂಗಡಿ ಕೊಲೆ ಪ್ರಕರಣ: ಮನೋರೋಗದಿಂದ ಬಳಲುತ್ತಿದ್ದ ಆರೋಪಿಗೆ ಜೈಲುವಾಸವಿಲ್ಲ
    ಇತ್ತೀಚಿನ ಸುದ್ದಿ

    ಬೆಳ್ತಂಗಡಿ ಕೊಲೆ ಪ್ರಕರಣ: ಮನೋರೋಗದಿಂದ ಬಳಲುತ್ತಿದ್ದ ಆರೋಪಿಗೆ ಜೈಲುವಾಸವಿಲ್ಲ

    December 24, 2025
    Share

    ಬೆಳ್ತಂಗಡಿ: ಪತಿಯನ್ನೇ ಕೊಂದ ಪತ್ನಿಯ ಪ್ರಕರಣದ ಆರೋಪಿ ಎಲಿಯಮ್ಮ ನ ಕೃತ್ಯ ಸಾಬೀತಾದರೂ, ಆಕೆ ‘Delusional Disorder’ ನಿಂದ ಬಳಲುತ್ತಿದ್ದ ಕಾರಣ ಅಪರಾಧ ಮುಕ್ತಗೊಳಿಸಿದ ಘಟನೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್.ಟಿ.ಎಸ್.ಸಿ -1 (ಪೋಕ್ಸೋ) ದಲ್ಲಿ ನಡೆದಿದೆ. ನ್ಯಾಯಾಧೀಶರಾದ  ಮೋಹನ ಜೆ.ಎಸ್. ಅವರು ತೀರ್ಪು ನೀಡಿದ್ದಾರೆ.

    2022 ರ ಜುಲೈ 5 ರಂದು ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದಲ್ಲಿ ಬೆಳಗಿನ ಜಾವ 5:30 ಕ್ಕೆ ಯೋಹಾನನ್ ಎಂಬುವರನ್ನು ಅವರ ಪತ್ನಿ ಎಲಿಯಮ್ಮ ಕತ್ತಿಯಿಂದ ಕಡಿದು ಕೊಲೆ ಮಾಡಿದ್ದರು. ಬೆಳ್ತಂಗಡಿ ಪೊಲೀಸರು ದಾಖಲಿಸಿದ ಈ ಪ್ರಕರಣದ ವಿಚಾರಣೆ ವೇಳೆ, ಆರೋಪಿ ಎಲಿಯಮ್ಮ “ತಾನು ಕೊಂದಿರುವುದು ಹೌದು” ಎಂದು ಒಪ್ಪಿಕೊಂಡಿದ್ದರು.

    ಆದರೆ, ಕೃತ್ಯದ ಗಂಭೀರತೆಯನ್ನು ಪರಿಗಣಿಸಿ ನ್ಯಾಯಾಲಯ ಸಾಕ್ಷಿ ವಿಚಾರಣೆಯನ್ನು ಮುಂದುವರೆಸಿತ್ತು. ಸಾಕ್ಷಿದಾರರು ಆಕೆಯ ವಿರುದ್ಧ ಸಾಕ್ಷಿ ನುಡಿದಿದ್ದರು. ವಿಚಾರಣೆಯ ಕ್ರಾಸ್ ಎಕ್ಸಾಮಿನೇಷನ್ ಹಂತದಲ್ಲಿ, ಆರೋಪಿ ಪರ ವಕೀಲರಾದ ವಿಕ್ರಮ್ ರಾಜ್ ಎ. ಅವರು ಆರೋಪಿಯ ವೈದ್ಯಕೀಯ ಹಿನ್ನೆಲೆಯನ್ನು ಅನಾವರಣಗೊಳಿಸಿದರು. ಎಲಿಯಮ್ಮ ಅವರು ದೀರ್ಘಕಾಲದಿಂದ ಮಾನಸಿಕ ಅಸ್ವಸ್ಥತೆ ಮತ್ತು ಭ್ರಮೆಗಳಿಂದ (Delusional Disorder) ಬಳಲುತ್ತಿದ್ದರು ಎಂಬುದು ಸಾಬೀತಾಯಿತು.

    “ಮಾನಸಿಕ ಅಸ್ವಸ್ಥತೆಯ ಕಾರಣದಿಂದಾಗಿ, ತಾನು ಮಾಡುತ್ತಿರುವ ಕೃತ್ಯವು ತಪ್ಪು ಅಥವಾ ಕಾನೂನು ಬಾಹಿರ ಎಂದು ತಿಳಿಯುವ ಸ್ಥಿತಿಯಲ್ಲಿ ಆರೋಪಿ ಇರಲಿಲ್ಲ. ಆದ್ದರಿಂದ ಆಕೆ ಅಪರಾಧ ಎಸಗಿಲ್ಲ,” ಎಂದು ವಕೀಲರು ವಾದ ಮಂಡಿಸಿದರು. ವಾದ-ಪ್ರತಿವಾದಗಳನ್ನು ಆಲಿಸಿ ತೀರ್ಪು ಕಾಯ್ದಿರಿಸಿದ್ದ ನ್ಯಾಯಾಧೀಶರಾದ ಮೋಹನ ಜೆ.ಎಸ್. ಇಂದು ತೀರ್ಪನ್ನು ಪ್ರಕಟಿಸಿದ್ದಾರೆ. ಕೊಲೆ ಕೃತ್ಯ ಸಾಬೀತಾಗಿದೆ: ಆದರೆ ಆರೋಪಿ ಅಪರಾಧಿಕ ಹೊಣೆಯಿಂದ ಮುಕ್ತವಾಗಿದ್ದಾರೆ.

    ನ್ಯಾಯಾಲಯವು ಜೈಲು ಅಧೀಕ್ಷಕರಿಗೆ ಆದೇಶ ನೀಡಿ, ಆರೋಪಿಯನ್ನು ನಿಮ್ಹಾನ್ಸ್‌ಗೆ (NIMHANS) ಕಳುಹಿಸಿ, ಆಕೆ ಬಿಡುಗಡೆಗೆ ಯೋಗ್ಯಳೇ ಮತ್ತು ಆಕೆಯಿಂದ ಸಮಾಜಕ್ಕೆ ಅಥವಾ ಆಕೆಗೆ ಅಪಾಯವಿದೆಯೇ ಎಂಬ ಬಗ್ಗೆ ವರದಿ ಸಲ್ಲಿಸುವಂತೆ ಸೂಚಿಸಿದೆ.  ಆರೋಪಿ ಪರ ನ್ಯಾಯವಾದಿಗಳಾದ ವಿಕ್ರಮ್ ರಾಜ್ ಎ ಮತ್ತು ಜೀವನ್ ಎ.ಎಂ. ವಾದ ಮಂಡಿಸಿದ್ದರು.

    Post Views: 459

    Related Posts

    ತಡರಾತ್ರಿ ಮಂಗಳೂರು ಜೈಲಿಗೆ ಪೊಲೀಸ್ ದಾಳಿ: ಕೈದಿಗಳ ಬಳಿಯಿದ್ದ ಮೊಬೈಲ್‌ಗಳು ಜಪ್ತಿ

    September 8, 2026

    ಕರಾವಳಿ ಕರ್ನಾಟಕ ವಾಣಿಜ್ಯ ಮೇಳ ಮತ್ತು ‘ಮಂಗಳೂರನ್ನು ಬ್ರ್ಯಾಂಡ್ ಆಗಿ ರೂಪಿಸುವ’ ರಚನಾ ದೃಷ್ಟಿಕೋನಕ್ಕೆ ಪ್ರವಾಸೋದ್ಯಮ ಸಚಿವರ ಮೆಚ್ಚುಗೆ

    September 8, 2026

    ಮದುವೆಯಾಗುವುದಾಗಿ ನಂಬಿಸಿ ವಂಚನೆ, ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ- ಬೆಳ್ತಂಗಡಿಯ ಯುವ ವಕೀಲನ ವಿರುದ್ಧ FIR

    September 7, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ತಡರಾತ್ರಿ ಮಂಗಳೂರು ಜೈಲಿಗೆ ಪೊಲೀಸ್ ದಾಳಿ: ಕೈದಿಗಳ ಬಳಿಯಿದ್ದ ಮೊಬೈಲ್‌ಗಳು ಜಪ್ತಿ

    September 8, 2026

    ಕರಾವಳಿ ಕರ್ನಾಟಕ ವಾಣಿಜ್ಯ ಮೇಳ ಮತ್ತು ‘ಮಂಗಳೂರನ್ನು ಬ್ರ್ಯಾಂಡ್ ಆಗಿ ರೂಪಿಸುವ’ ರಚನಾ ದೃಷ್ಟಿಕೋನಕ್ಕೆ ಪ್ರವಾಸೋದ್ಯಮ ಸಚಿವರ ಮೆಚ್ಚುಗೆ

    September 8, 2026

    ಮದುವೆಯಾಗುವುದಾಗಿ ನಂಬಿಸಿ ವಂಚನೆ, ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ- ಬೆಳ್ತಂಗಡಿಯ ಯುವ ವಕೀಲನ ವಿರುದ್ಧ FIR

    September 7, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.