Facebook Twitter Instagram
    Thursday, July 23
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ತಾಯಿಯ ಕೊಂದು ಸೂಟ್ ಕೇಸ್​ನಲ್ಲಿ ಶವವನ್ನು ಪೊಲೀಸ್​ ಠಾಣೆಗೆ ತಂದ ಪುತ್ರಿ..!
    ಇತ್ತೀಚಿನ ಸುದ್ದಿ

    ತಾಯಿಯ ಕೊಂದು ಸೂಟ್ ಕೇಸ್​ನಲ್ಲಿ ಶವವನ್ನು ಪೊಲೀಸ್​ ಠಾಣೆಗೆ ತಂದ ಪುತ್ರಿ..!

    June 13, 2023
    Share

    ಬೆಂಗಳೂರು: ಹೆತ್ತ ತಾಯಿಯನ್ನು ಕೊಂದು ಸೂಟ್​ಕೇಸ್​ನಲ್ಲಿ ಶವವಿಟ್ಟು ಪೊಲೀಸ್​ ಠಾಣೆಗೆ ಹೊತ್ತು ತಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.

    ಮಗಳು ಸೇನಾಲಿ ಸೇನ್​ ಎಂಬಾಕೆ ತಾಯಿ ಬೀವಾ ಪಾಲ್ (70) ಎಂಬಾಕೆಯನ್ನು ಕೊಲೆ ಮಾಡಿ, ಸೂಟ್​ಕೇಸ್​ನಲ್ಲಿ ತಂದೆಯ ಫೋಟೋ ಜತೆಗೆ ತಾಯಿ ಶವವಿಟ್ಟು, ಮೈಕೊಲೇಔಟ್ ಪೊಲೀಸ್ ಠಾಣೆಗೆ ಹೊತ್ತು ತಂದು ಶರಣಾಗಿದ್ದಾಳೆ.

    ನೀನು ನನ್ನ ತಂದೆ ಬಳಿ ಹೋಗು: ಈ ಪ್ರಕರಣದ ವಿಚಾರಣೆ ವೇಳೆ ಸೆನಾಲಿ ಸೇನ್​ ಮತ್ತಷ್ಟು ಮಾಹಿತಿಯನ್ನು ಬಿಚ್ಚಿಟ್ಟಿದ್ದಾಳೆ. ತಾಯಿಯೇ ಮಗಳ ಬಳಿ ನಿದ್ರೆ ಮಾತ್ರೆ ಕೊಟ್ಟು ಸಾಯಿಸುವಂತೆ ಹೇಳಿದಳು ಎಂಬ ಅಂಶ ಬೆಳಕಿಗೆ ಬಂದಿದೆ. ಕೆಲವು ವರ್ಷಗಳ ಹಿಂದೆ ಸೆನಾಲಿ ತಂದೆ ತೀರಿ ಹೋಗಿದ್ದಾರೆ. ನೀನು ನನ್ನ ತಂದೆ ಬಳಿ ಹೋಗು, ನಾನು ಜೈಲಿಗೆ ಹೋಗ್ತೀನಿ ಎಂದು ಕೊಲೆ ಮಾಡುವ ಮುಂಚೆಯೇ ತಾಯಿ-ಮಗಳು ಮಾತನಾಡಿದ್ದರು ಎಂಬ ಸಂಗತಿ ಬಯಲಾಗಿದೆ.

    ಮಾನಸಿಕವಾಗಿ ಕುಗ್ಗಿ ಹೋಗಿದ್ದಳು: ಆರೋಪಿ ಸೆನಾಲಿ ಸೇನ್, ತಾಯಿ ಬೀವಾ ಪಾಲ್​ ಮತ್ತು ಸೆನಾಲಿ ಅತ್ತೆ ಒಂದೇ ಮನೆಯಲ್ಲಿ ವಾಸವಿದ್ದರು. ಇಬ್ಬರು ಪ್ರತಿನಿತ್ಯ ಗಲಾಟೆ ಮಾಡುತ್ತಿದ್ದರಂತೆ. ತಾಯಿ ಮತ್ತು ಅತ್ತೆ ಜಗಳದಿಂದ ಬೇಸತ್ತು ಸೆನಾಲಿ ಮಾನಸಿಕವಾಗಿ ಕುಗ್ಗಿ ಹೋಗಿದ್ದಳು. ಸೇನಾಲಿ ಮಗನಿಗೂ ಕೂಡ ಮಾನಸಿಕ ತೊಂದರೆ ಕಾಡುತ್ತಿತ್ತು. ಒಂದು ಕಡೆ ಮಗನ ಚಿಂತೆ, ಇನ್ನೊಂದು ಕಡೆ ಅತ್ತೆ-ತಾಯಿಯ ಜಗಳ. ಇದರಿಂದ ಜೀವನದಲ್ಲಿ ಬೇಸತ್ತು ಹೋಗಿದ್ದ ಸೆನಾಲಿ ಈ ದುಷ್ಕ್ರತ್ಯ ಎಸಗಿದ್ದಾಳೆ.

    ಆಟೋ ಬುಕ್:ಸೆನಾಲಿ ಬಿಳೇಕಳ್ಳಿಯ ಎನ್​​ಎಸ್​ಆರ್​ ಗ್ರೀನ್ ಅಪಾರ್ಟ್​ಮೆಂಟ್​​ನ 106 ನಂಬರ್​ನ ಫ್ಲ್ಯಾಟ್​ನಲ್ಲಿ ವಾಸವಿದ್ದರು. ಸುಮಾರು ಆರು ವರ್ಷದಿಂದ ಒಂದೇ ಫ್ಲ್ಯಾಟ್​ನಲ್ಲಿ ನೆಲೆಸಿದ್ದಾರೆ. ಸೆನಾಲಿಗೆ ಒಬ್ಬ ಮಗ ಸಹ ಇದ್ದಾನೆ. ಇವರು ಮೂಲತಃ ಕೊಲ್ಕತಾ ನಿವಾಸಿಗಳು. ನಿನ್ನೆ ತಾಯಿಯನ್ನು ಕೊಲೆ ಮಾಡಿ ಉಬರ್ ಮುಖಾಂತರ ಆಟೋ ಬುಕ್ ಮಾಡಿ ಠಾಣೆಗೆ ಬಂದು ಸೆನಾಲಿ ಶರಣಾಗಿದ್ದಾಳೆ

    Post Views: 400

    Related Posts

    ಫರಂಗಿಪೇಟೆ ಕೆನರಾ ಬ್ಯಾಂಕ್ ಕಳವು ಯತ್ನ ಪ್ರಕರಣ: ಓರ್ವ ಆರೋಪಿ ಬಂಧನ

    July 23, 2026

    ಉಡುಪಿ: ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಯುವಕನ ಮೃತದೇಹ ಬೀಚ್‌ನಲ್ಲಿ ಪತ್ತೆ!!

    July 23, 2026

     ಶಾಸಕ ಬಿಪಿ ಹರೀಶ್ ಗೆ ಮೊಟ್ಟೆ ಎಸೆತ : ಕಮಿಷನರ್ ಗೆ ಬಿಜೆಪಿ ನಾಯಕರಿಂದ ದೂರು ಸಲ್ಲಿಕೆ

    July 22, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಫರಂಗಿಪೇಟೆ ಕೆನರಾ ಬ್ಯಾಂಕ್ ಕಳವು ಯತ್ನ ಪ್ರಕರಣ: ಓರ್ವ ಆರೋಪಿ ಬಂಧನ

    July 23, 2026

    ಉಡುಪಿ: ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಯುವಕನ ಮೃತದೇಹ ಬೀಚ್‌ನಲ್ಲಿ ಪತ್ತೆ!!

    July 23, 2026

     ಶಾಸಕ ಬಿಪಿ ಹರೀಶ್ ಗೆ ಮೊಟ್ಟೆ ಎಸೆತ : ಕಮಿಷನರ್ ಗೆ ಬಿಜೆಪಿ ನಾಯಕರಿಂದ ದೂರು ಸಲ್ಲಿಕೆ

    July 22, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.