Facebook Twitter Instagram
    Thursday, July 23
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಆರೋಗ್ಯ»ಬಲು ಸುಲಭ ʼಕ್ಯಾಬೇಜ್ʼ​ ಮಂಚೂರಿಯನ್​ ರೆಸಿಪಿ
    ಆರೋಗ್ಯ

    ಬಲು ಸುಲಭ ʼಕ್ಯಾಬೇಜ್ʼ​ ಮಂಚೂರಿಯನ್​ ರೆಸಿಪಿ

    August 28, 2022
    Share

    ರಸ್ತೆ ಬದಿಗಳಲ್ಲಿ ಇರುವ ಚಾಟ್ಸ್ ಅಂಗಡಿಗಳಲ್ಲಿ ನಿಂತು ಕ್ಯಾಬೇಜ್​ ಮಂಚೂರಿಯನ್​ ಸವಿಯೋ ಮಜಾನೇ ಬೇರೆ. ಆದರೆ ಕರೊನಾದಿಂದಾಗಿ ಮನೆಯಿಂದ ಹೊರಗೆ ಬರೋಕೂ ನೂರು ಬಾರಿ ಯೋಚನೆ ಮಾಡಬೇಕಾದ ಪರಿಸ್ಥಿತಿ ಬಂದುಬಿಟ್ಟಿದೆ. ಆದರೆ ಈ ಕ್ಯಾಬೇಜ್​ ಮಂಚೂರಿಯನ್​ನ್ನ ನೀವು ಮನೆಯಲ್ಲೇ ಬಹಳ ಆರಾಮಾಗಿ ತಯಾರು ಮಾಡಬಹುದು.

    ಬೇಕಾಗುವ ಸಾಮಗ್ರಿ: ಕ್ಯಾಬೇಜ್​ – 1 (ಮಧ್ಯಮ ಗಾತ್ರದ್ದು), ಮೈದಾ ಹಿಟ್ಟು – 1/2 ಕಪ್​​, ಜೋಳದ ಹಿಟ್ಟು – 3/4 ಕಪ್​, ಈರುಳ್ಳಿ – 1(ದೊಡ್ಡದು).ಹಸಿ ಮೆಣಸು – 2, ಕೊತ್ತಂಬರಿಸೊಪ್ಪು, 1 ಕಪ್ ಅಡುಗೆ ಎಣ್ಣೆ – 1, ಕಾಳು ಮೆಣಸು ಪುಡಿ – 1/2 ಚಮಚ, ಸೋಯಾ ಸಾಸ್​ – 1 ಚಮಚ , ವಿನೇಗರ್​ – 1 ಚಮಚ, ಶುಂಠಿ ಬೆಳ್ಳುಳ್ಳಿ ಪೇಸ್ಟ್ – 2 ಚಮಚ, ಚಿಟಿಕೆಯಷ್ಟು ರೆಡ್​ ಫುಡ್​ ಕಲರ್​( ಅಗತ್ಯವಿದ್ದರೆ ಮಾತ್ರ), ರುಚಿಗೆ ತಕ್ಕಷ್ಟು ಉಪ್ಪು, ನೀರು

    ಮಾಡುವ ವಿಧಾನ: ಕ್ಯಾಬೇಜ್​ನ್ನ ಸಣ್ಣಗೆ ತುರಿದು ಚೆನ್ನಾಗಿ ತೊಳೆದುಕೊಳ್ಳಿ . ಇದಕ್ಕೆ ಮೈದಾ ಹಿಟ್ಟು, ಜೋಳದ ಹಿಟ್ಟು, 1 ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕಾಳು ಮೆಣಸು ಪುಡಿ, ಫುಡ್​ ಕಲರ್, ಉಪ್ಪು​ ಹಾಕಿ ಚೆನ್ನಾಗಿ ಕಲಸಿ. ಕ್ಯಾಬೇಜ್​​ ನೀರು ಬಿಡೋದ್ರಿಂದ ಹೆಚ್ಚಿಗೆ ನೀರು ಹಾಕೋ ಅವಶ್ಯಕತೆ ಇರೋದಿಲ್ಲ. ಒಂದು ವೇಳೆ ಕ್ಯಾಬೇಜ್​​ನಲ್ಲಿದ್ದ ನೀರಿನ ಅಂಶ ಸಾಕಾಗಿಲ್ಲ ಅಂದಲ್ಲಿ ಮಾತ್ರ ನೀರನ್ನ ಮಿಶ್ರಣಕ್ಕೆ ಸಿಂಪಡಿಸಿಕೊಂಡು ಕಲಿಸಿಡಿ. ಈ ಮಿಶ್ರಣವನ್ನ ಚಿಕ್ಕ ಬಾಲ್​ಗಳ ಸೈಜ್​​ನಲ್ಲಿ ಉಂಡೆ ಮಾಡಿ ಎಣ್ಣೆಯಲ್ಲಿ ಚೆನ್ನಾಗಿ ಕರಿಯಿರಿ.

    ಇನ್ನೊಂದು ಪಾತ್ರೆಗೆ ಸ್ವಲ್ಪ ಅಡಿಗೆ ಎಣ್ಣೆ ಹಾಕಿ. ಇದಕ್ಕೆ ಸಣ್ಣಗೆ ಕತ್ತರಿಸಿದ ಈರುಳ್ಳಿ, ಒಂದು ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಸಣ್ಣಗೆ ಕತ್ತರಿಸಿದ ಮೆಣಸನ್ನ ಹಾಕಿ ಹುರಿಯಿರಿ. ಇದಕ್ಕೆ 1 ಚಮಚ ಸೋಯಾ ಸಾಸ್​ ಹಾಗೂ ವಿನೇಗರ್​ ಹಾಕಿ( ಇವೆರೆಡನ್ನ ಮೊದಲೇ ಒಂದು ಕಪ್​ನಲ್ಲಿ ಮಿಶ್ರಣ ಮಾಡಿಟ್ಟರೆ ಇನ್ನೂ ಒಳ್ಳೆಯ ಟೇಸ್ಟ್ ಬರಲಿದೆ), 2 ಚಮಚ ಟೊಮ್ಯಾಟೋ ಸಾಸ್​, ಉಪ್ಪು, ಹಾಗೂ ಸ್ವಲ್ಪ ನೀರಿಗೆ 1 ಚಮಚ ಜೋಳದ ಹಿಟ್ಟನ್ನ ಹಾಕಿ ಮಿಶ್ರಣ ಮಾಡಿ. ಈ ಮಿಶ್ರಣವನ್ನೂ ಗ್ರೇವಿಗೆ ಹಾಕಿ ಕಲಿಸಿ. ಇದಾದ ಬಳಿಕ ಗ್ರೇವಿಗೆ ಎಣ್ಣೆಯಲ್ಲಿ ಕರಿದ ಕ್ಯಾಬೇಜ್​ ಉಂಡೆಗಳನ್ನ ಹಾಕಿ ಕಲಿಸಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪನ್ನ ಹಾಕಿ ಸರ್ವ್​ ಮಾಡಿ.

    Post Views: 275

    Related Posts

     ಶಾಸಕ ಬಿಪಿ ಹರೀಶ್ ಗೆ ಮೊಟ್ಟೆ ಎಸೆತ : ಕಮಿಷನರ್ ಗೆ ಬಿಜೆಪಿ ನಾಯಕರಿಂದ ದೂರು ಸಲ್ಲಿಕೆ

    July 22, 2026

    ಫರಂಗಿಪೇಟೆ ಬ್ಯಾಂಕ್‌ ಕಳ್ಳತನ ಯತ್ನ ಪ್ರಕರಣ: ಆರೋಪಿಗಳ ಪತ್ತೆಗೆ ಪ್ರತ್ಯೇಕ ವಿಶೇಷ ತಂಡ

    July 22, 2026

    ಬೆಳ್ತಂಗಡಿ: ಖೋಟಾ ನೋಟು ದಂಧೆ ಪ್ರಕರಣ : ನಾಲ್ವರಿಗೆ ಮತ್ತೆ ಪೊಲೀಸ್ ಕಸ್ಟಡಿ : ಮೂವರಿಗೆ ನ್ಯಾಯಾಂಗ ಬಂಧನ

    July 22, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

     ಶಾಸಕ ಬಿಪಿ ಹರೀಶ್ ಗೆ ಮೊಟ್ಟೆ ಎಸೆತ : ಕಮಿಷನರ್ ಗೆ ಬಿಜೆಪಿ ನಾಯಕರಿಂದ ದೂರು ಸಲ್ಲಿಕೆ

    July 22, 2026

    ಫರಂಗಿಪೇಟೆ ಬ್ಯಾಂಕ್‌ ಕಳ್ಳತನ ಯತ್ನ ಪ್ರಕರಣ: ಆರೋಪಿಗಳ ಪತ್ತೆಗೆ ಪ್ರತ್ಯೇಕ ವಿಶೇಷ ತಂಡ

    July 22, 2026

    ಬೆಳ್ತಂಗಡಿ: ಖೋಟಾ ನೋಟು ದಂಧೆ ಪ್ರಕರಣ : ನಾಲ್ವರಿಗೆ ಮತ್ತೆ ಪೊಲೀಸ್ ಕಸ್ಟಡಿ : ಮೂವರಿಗೆ ನ್ಯಾಯಾಂಗ ಬಂಧನ

    July 22, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.