Facebook Twitter Instagram
    Saturday, November 28
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಡಿಜಿಟಲ್ ತಂತ್ರಜ್ಞಾನದ ಮೂಲಕ M.I.O ವತಿಯಿಂದ ‘M.I.O ಕ್ಯಾನ್ಸರ್ ಸ್ಟ್ರೀನರ್‌ ಆ್ಯಪ್’ ಬಿಡುಗಡೆ
    ಇತ್ತೀಚಿನ ಸುದ್ದಿ

    ಡಿಜಿಟಲ್ ತಂತ್ರಜ್ಞಾನದ ಮೂಲಕ M.I.O ವತಿಯಿಂದ ‘M.I.O ಕ್ಯಾನ್ಸರ್ ಸ್ಟ್ರೀನರ್‌ ಆ್ಯಪ್’ ಬಿಡುಗಡೆ

    November 28, 2026
    Share

    ಮಂಗಳೂರು: ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕ್ಯಾನ್ಸರ್‌ನ ಸವಾಲು ಮತ್ತು ರೋಗವನ್ನು ಆರಂಭಿಕ ಹಂತದಲ್ಲಿಯೇ ಗುರುತಿಸುವ ಮಹತ್ವವನ್ನು ಮನಗಂಡು, M.I.O ಆಸ್ಪತ್ರೆಯು ‘M.I.O ಕ್ಯಾನ್ಸರ್ ಸ್ಟ್ರೀನರ್ ಆ್ಯಪ್’ ಅನ್ನು ಬಿಡುಗಡೆ ಮಾಡಿದೆ.

    ಅಧಿಕೃತ ಆ್ಯಪ್ ಬಿಡುಗಡೆ ಸಮಾರಂಭ:
    M.I.O ಕ್ಯಾನ್ಸರ್ ಸ್ಟ್ರೀನರ್ ಆ್ಯಪ್ ಅನ್ನು ನವೆಂಬರ್ 28ರಂದು ಬೆಳಿಗ್ಗೆ 10:30ಕ್ಕೆ ಮಂಗಳೂರಿನ ಶಹನಾಯಿ ಹಾಲ್, ದೀಪಾ ಕಂಫರ್ಟ್ಸ್, ಮಂಗಳೂರು ಆವರಣದಲ್ಲಿ ಗಣ್ಯ ಅತಿಥಿಗಳ ಉಪಸ್ಥಿತಿಯಲ್ಲಿ ನಡೆಯಲಿದೆ.ಮುಖ್ಯ ಅತಿಥಿಗಳು (Chief Guest): ಶ್ರೀ ಮೈಕೆಲ್ ಡಿ’ಸೋಜಾ (Michael D’Souza) ಅನಿವಾಸಿ ಭಾರತೀಯ ಉದ್ಯಮಿ ಹಾಗೂ ಸಮಾಜಸೇವಕರು. ಗೌರವಾನ್ವಿತ ಅತಿಥಿಗಳು (Guests of Honour): ಶ್ರೀ ವಿವೇಕ ಚೈತನ್ಯಾನಂದ ಸ್ವಾಮೀಜಿ, (ಅಧ್ಯಕ್ಷರು, ಶ್ರೀ ರಾಮಕೃಷ್ಣ ತಪೋವನ, ಪೊಳಲಿ), ಶ್ರೀ ಐವನ್ ಡಿ’ಸೋಜಾ (ವಿಧಾನ ಪರಿಷತ್ ಸದಸ್ಯರು), ಶ್ರೀ ವಾಲ್ಟರ್ ನಂದಳಿಕೆ (ವ್ಯವಸ್ಥಾಪಕ ನಿರ್ದೇಶಕರು, ದೈಜಿವರ್ಲ್ಡ್ ಮೀಡಿಯಾ), ಶ್ರೀ ವೈ. ಭರತ್ ಶೆಟ್ಟಿ (ಶಾಸಕರು, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ).ಭಾರತದಲ್ಲಿ ಕ್ಯಾನ್ಸ‌ರ್ ಒಂದು ಪ್ರಮುಖ ಆರೋಗ್ಯ ಸವಾಲಾಗಿ ಮುಂದುವರಿದಿದ್ದು, ಜನಸಂಖ್ಯೆಯ ವಯೋವೃದ್ಧಿ, ಜೀವನಶೈಲಿಯಲ್ಲಿನ ಬದಲಾವಣೆಗಳು, ತಂಬಾಕು ಮತ್ತು ಮದ್ಯಪಾನದ ಬಳಕೆ, ಪರಿಸರದ ಪ್ರಭಾವ ಹಾಗೂ ರೋಗಗಳ ಬದಲಾಗುತ್ತಿರುವ ಸ್ವರೂಪಗಳು ಕ್ಯಾನ್ಸರ್ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿವೆ. ಕ್ಯಾನ್ಸರ್ ಚಿಕಿತ್ಸೆಯಲ್ಲಿ ವೈದ್ಯಕೀಯ ವಿಜ್ಞಾನವು ಗಣನೀಯ ಪ್ರಗತಿ ಸಾಧಿಸಿದ್ದರೂ, ರೋಗವನ್ನು ಆರಂಭಿಕ ಹಂತದಲ್ಲಿಯೇ ಗುರುತಿಸುವುದು ಮತ್ತು ಸಕಾಲದಲ್ಲಿ ಸೂಕ್ತ ವೈದ್ಯಕೀಯ ಸೇವೆ ಪಡೆಯುವುದು ರೋಗಿಯ ಬದುಕುಳಿಯುವಿಕೆ ಹಾಗೂ ಜೀವನದ ಗುಣಮಟ್ಟವನ್ನು ಸುಧಾರಿಸುವಲ್ಲಿ ಅತ್ಯಂತ ಮಹತ್ವದ್ದಾಗಿದೆ. ಈ ಹಿನ್ನೆಲೆಯಲ್ಲಿ, ಡಿಜಿಟಲ್ ತಂತ್ರಜ್ಞಾನದ ನೆರವಿನಿಂದ ವ್ಯಕ್ತಿಗಳು ತಮ್ಮಲ್ಲಿರುವ ಸಂಭಾವ್ಯ ಕ್ಯಾನ್ಸರ್ ಅಪಾಯದ ಅಂಶಗಳನ್ನು ತಿಳಿದುಕೊಳ್ಳಲು ಹಾಗೂ ವೈದ್ಯಕೀಯ ಗಮನ ಅಗತ್ಯವಿರುವ ಲಕ್ಷಣಗಳನ್ನು ಗುರುತಿಸಿಕೊಳ್ಳಲು ಈ ಆ್ಯಪ್ ಸಹಕಾರಿಯಾಗಲಿದೆ.ಕ್ಯಾನ್ಸರ್ ಅಪಾಯದ ಮೌಲ್ಯಮಾಪನಕ್ಕೆ ಡಿಜಿಟಲ್ ಸಾಧನ
    M.I.O ಕ್ಯಾನ್ಸರ್ ಸ್ಟ್ರೀನರ್ ಆ್ಯಪ್ ಒಂದು ವ್ಯವಸ್ಥಿತ ಡಿಜಿಟಲ್ ಅಪಾಯ ಮೌಲ್ಯಮಾಪನ ಮತ್ತು ಅರಿವು ಮೂಡಿಸುವ ವೇದಿಕೆಯಾಗಿದೆ. ಇದು ವ್ಯಕ್ತಿಯ ವಯಸ್ಸು, ಕುಟುಂಬದಲ್ಲಿ ಕ್ಯಾನ್ಸ‌ರ್ ಇತಿಹಾಸ, ತಂಬಾಕು ಸೇವನೆ, ಮದ್ಯಪಾನ, ಬೊಜ್ಜು, ಜೀವನಶೈಲಿಗೆ ಸಂಬಂಧಿಸಿದ ಅಪಾಯದ ಅಂಶಗಳು ಹಾಗೂ ಕ್ಯಾನ್ಸರ್‌ಗೆ ಸಂಬಂಧಿಸಿದ ಲಕ್ಷಣಗಳು ಸೇರಿದಂತೆ ವಿವಿಧ ಅಂಶಗಳನ್ನು ಆಧರಿಸಿ ಮೌಲ್ಯಮಾಪನ ಮಾಡುತ್ತದೆ. ಬಳಕೆದಾರರು ಒದಗಿಸುವ ಮಾಹಿತಿಯ ಆಧಾರದ ಮೇಲೆ ವ್ಯಕ್ತಿಗಳನ್ನು ನಾಲ್ಕು ಅಪಾಯದ ವರ್ಗಗಳಾಗಿ ವಿಂಗಡಿಸಲಾಗುತ್ತದೆ: ಸಾಮಾನ್ಯ ಅಪಾಯ (Normal Risk), ಮಧ್ಯಂತರ ಅಪಾಯ (Intermediate Risk), ಮಧ್ಯಮ ಅಪಾಯ (Moderate Risk), ಹೆಚ್ಚಿನ ಅಪಾಯ (High Risk), ಗುರುತಿಸಲಾದ ಅಪಾಯದ ವರ್ಗಕ್ಕೆ ಅನುಗುಣವಾಗಿ ಆರೋಗ್ಯ ಜಾಗೃತಿ, ಲಕ್ಷಣಗಳ ಮೇಲ್ವಿಚಾರಣೆ, ವೈದ್ಯಕೀಯ ಸಮಾಲೋಚನೆ, ಅಗತ್ಯ ಸ್ತ್ರೀನಿಂಗ್ ಪರೀಕ್ಷೆಗಳು ಹಾಗೂ ಅವಶ್ಯಕತೆ ಇದ್ದಲ್ಲಿ ತಜ್ಞ ವೈದ್ಯರ ಸಲಹೆ ಮತ್ತು ಚಿಕಿತ್ಸೆಗೆ ಶಿಫಾರಸು ಮಾಡುವ ಮಾರ್ಗದರ್ಶನವನ್ನು ಈ ಆ್ಯಪ್ ಒದಗಿಸುತ್ತದೆ. ಭಾರತೀಯರಲ್ಲಿ ಕಂಡುಬರುವ ಪ್ರಮುಖ ಕ್ಯಾನ್ಸರ್‌ಗಳಾದ ಬಾಯಿಯ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಗರ್ಭಕಂಠದ ಕ್ಯಾನ್ಸರ್, ದೊಡ್ಡ ಕರುಳಿನ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್, ಪ್ರಾಸ್ಟೇಟ್ ಕ್ಯಾನ್ಸರ್, ಗರ್ಭಾಶಯದ ಒಳಪದರದ ಕ್ಯಾನ್ಸರ್, ಅಂಡಾಶಯದ ಕ್ಯಾನ್ಸರ್ ಹಾಗೂ ಜಠರದ ಕ್ಯಾನ್ಸರ್‌ಗಳನ್ನು ಈ ಆ್ಯಪ್ ಒಳಗೊಂಡಿದೆ.ಮುಖ್ಯವಾಗಿ, ಈ ಆ್ಯಪ್ ಕ್ಯಾನ್ಸರ್ ರೋಗವನ್ನು ಪತ್ತೆಹಚ್ಚುವ ಸಾಧನವಲ್ಲ. ಇದು ಕ್ಯಾನ್ಸರ್ ಅಪಾಯದ ಮೌಲ್ಯಮಾಪನ ಮತ್ತು ಅರಿವು ಮೂಡಿಸುವ ಸಾಧನವಾಗಿದ್ದು, ಹೆಚ್ಚಿನ ವೈದ್ಯಕೀಯ ತಪಾಸಣೆ ಅಗತ್ಯವಿರುವ ವ್ಯಕ್ತಿಗಳು ಸೂಕ್ತ ವೈದ್ಯಕೀಯ ಸಲಹೆ ಪಡೆಯಲು ಪ್ರೇರೇಪಿಸುತ್ತದೆ. ಇದು ವೈದ್ಯಕೀಯ ಪರೀಕ್ಷೆ, ಅನುಮೋದಿತ ಕ್ಯಾನ್ಸರ್ ಸ್ಟ್ರೀನಿಂಗ್ ವಿಧಾನಗಳು, ರೋಗನಿರ್ಣಯ ಪರೀಕ್ಷೆಗಳು ಅಥವಾ ಚಿಕಿತ್ಸೆಗೆ ಪರ್ಯಾಯವಲ್ಲ.ಕ್ಯಾನ್ಸ‌ರ್ ಅಪಾಯದ ಅರಿವನ್ನು ಜನಸಾಮಾನ್ಯರಿಗೆ ತಲುಪಿಸುವ ಪ್ರಯತ್ನ ಕ್ಯಾನ್ಸರ್‌ನ ಲಕ್ಷಣಗಳು ಗಂಭೀರ ಸ್ವರೂಪ ಪಡೆಯುವವರೆಗೆ ಕಾಯದೆ, ಆರಂಭದಲ್ಲಿಯೇ ತಮ್ಮ ಆರೋಗ್ಯದ ಬಗ್ಗೆ ಜಾಗೃತರಾಗುವಂತೆ ಜನರನ್ನು ಪ್ರೇರೇಪಿಸುವುದು ಈ ಆ್ಯಪ್‌ನ ಪ್ರಮುಖ ಉದ್ದೇಶವಾಗಿದೆ.ವೈಯಕ್ತಿಕ ಬಳಕೆದಾರರ ಜೊತೆಗೆ ಆಶಾ ಕಾರ್ಯಕರ್ತೆಯರು (ASHA Workers), ಆರೋಗ್ಯ ಸಹಾಯಕಿಯರು (ANMs) ಹಾಗೂ ಪ್ರಾಥಮಿಕ ಆರೋಗ್ಯ ಸೇವಾ ಸಿಬ್ಬಂದಿಗೂ ಈ ಆ್ಯಪ್ ಒಂದು ಸಹಾಯಕ ಸಾಧನವಾಗುವ ಸಾಮರ್ಥ್ಯ ಹೊಂದಿದೆ. ಇದು ಅಪಾಯದ ಅಂಶಗಳನ್ನು ವ್ಯವಸ್ಥಿತವಾಗಿ ಗುರುತಿಸಲು ಹಾಗೂ ಅಗತ್ಯವಿರುವ ವ್ಯಕ್ತಿಗಳಿಗೆ ಸೂಕ್ತ ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸಾ ಸೇವೆಗಳಿಗೆ ಮಾರ್ಗದರ್ಶನ ನೀಡಲು ನೆರವಾಗಬಹುದು.ಡಿಜಿಟಲ್ ತಂತ್ರಜ್ಞಾನದ ಮೂಲಕ ಕ್ಯಾನ್ಸರ್ ಅಪಾಯದ ಮೌಲ್ಯಮಾಪನವನ್ನು ಜನರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡುವುದರಿಂದ, ಆರೋಗ್ಯ ಜಾಗೃತಿ ಮತ್ತು ತಡೆಗಟ್ಟುವ ಆರೋಗ್ಯ ಸೇವೆಗಳಲ್ಲಿ ಸಾರ್ವಜನಿಕರ ಭಾಗವಹಿಸುವಿಕೆಯನ್ನು ಹೆಚ್ಚಿಸುವುದು ಈ ಉಪಕ್ರಮದ ಆಶಯವಾಗಿದೆ.ವಿಶೇಷವಾಗಿ ಕ್ಯಾನ್ಸರ್‌ಗೆ ಸಂಬಂಧಿಸಿದ ಅಪಾಯದ ಅಂಶಗಳನ್ನು ಹೊಂದಿರುವವರು ಹಾಗೂ ದೀರ್ಘಕಾಲದಿಂದ ಲಕ್ಷಣಗಳನ್ನು ಅನುಭವಿಸುತ್ತಿರುವವರು ಸಕಾಲದಲ್ಲಿ ವೈದ್ಯಕೀಯ ಸಲಹೆ ಪಡೆಯಲು ಇದು ಪ್ರೇರಣೆಯಾಗಲಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳೆರಡರಲ್ಲೂ ಕ್ಯಾನ್ಸರ್ ಕುರಿತು ಅರಿವು ಹಾಗೂ ಆರಂಭಿಕ ಗುರುತಿಸುವಿಕೆಯ ಪ್ರಯತ್ನಗಳಿಗೆ ಈ ಆ್ಯಪ್ ಸಹಾಯಕವಾಗಲಿದೆ ಎಂಬ ಆಶಯವನ್ನು M.I.O ಹೊಂದಿದೆ.ತಂತ್ರಜ್ಞಾನ ಆಧಾರಿತ ತಡೆಗಟ್ಟುವ ಆರೋಗ್ಯ ಸೇವೆಯತ್ತ ಮತ್ತೊಂದು ಹೆಜ್ಜೆ
    ಕ್ಯಾನ್ಸರ್ ಚಿಕಿತ್ಸೆಯ ಫಲಿತಾಂಶಗಳನ್ನು ಸುಧಾರಿಸಲು ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳಷ್ಟೇ ಸಾಕಾಗುವುದಿಲ್ಲ. ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸುವುದು, ಆರಂಭಿಕ ಎಚ್ಚರಿಕೆಯ ಲಕ್ಷಣಗಳನ್ನು ಗುರುತಿಸುವುದು, ತಂತ್ರಜ್ಞಾನವನ್ನು ಜವಾಬ್ದಾರಿಯುತವಾಗಿ ಬಳಸುವುದು ಹಾಗೂ ಸಕಾಲದಲ್ಲಿ ಸೂಕ್ತ ವೈದ್ಯಕೀಯ ಸೇವೆ ಒದಗಿಸುವುದೂ ಅಷ್ಟೇ ಮುಖ್ಯವಾಗಿದೆ. M.I.O ಕ್ಯಾನ್ಸರ್ ಸ್ಟ್ರೀನರ್ ಆ್ಯಪ್‌ನ ಬಿಡುಗಡೆ ವೈದ್ಯಕೀಯ ಪರಿಣತಿ ಮತ್ತು ಡಿಜಿಟಲ್ ತಂತ್ರಜ್ಞಾನವನ್ನು ಸಂಯೋಜಿಸುವ ಮೂಲಕ ಕ್ಯಾನ್ಸರ್ ಅಪಾಯದ ಅರಿವನ್ನು ಜನಸಾಮಾನ್ಯರಿಗೆ ಸುಲಭವಾಗಿ ತಲುಪಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.ಡಾ. ಸುರೇಶ್ ರಾವ್, ನಿರ್ದೇಶಕರು,


    ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಆಂಕಾಲಜಿ (M.I.O.), ಮಂಗಳೂರು.M.I.O ಕ್ಯಾನ್ಸರ್ ಆ್ಯಪ್ ಕುರಿತು:
    ಈ ಆ್ಯಪ್ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲಿಯೇ ಪತ್ತೆಹಚ್ಚಲು ಮಾರ್ಗದರ್ಶನ ನೀಡುವ ಸಾಧನವಾಗಿದೆ. ನಿಮ್ಮ ಕ್ಯಾನ್ಸರ್ ಅಪಾಯದ ಮಟ್ಟವು ಸಾಮಾನ್ಯವಾಗಿದೆ ಎಂದ ಮಾತ್ರಕ್ಕೆ ನಿಮಗೆ ಕ್ಯಾನ್ಸರ್ ಇಲ್ಲ ಎಂದು ಅರ್ಥವಲ್ಲ. ಏಕೆಂದರೆ ಎಲ್ಲಾ ರೀತಿಯ ಕ್ಯಾನ್ಸರ್‌ಗಳಲ್ಲಿಯೂ ಆರಂಭಿಕ ಹಂತದಲ್ಲಿ ಗುರುತಿಸಬಹುದಾದ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ. ನಿಮ್ಮ ಕ್ಯಾನ್ಸರ್ ಅಪಾಯದ ಮಟ್ಟವು ಸಾಮಾನ್ಯದಿಂದ ಹೆಚ್ಚಿನ ಅಪಾಯದ ಮಟ್ಟಕ್ಕೆ ಏರಿದಂತೆ, ನಿಮಗೆ ಕ್ಯಾನ್ಸರ್ ಇರುವ ಸಾಧ್ಯತೆ ಹೆಚ್ಚಿರಬಹುದು. ಆದರೆ ಇದರಿಂದ ಕ್ಯಾನ್ಸರ್ ಇದೆ ಎಂದು ಖಚಿತಪಡಿಸಲಾಗುವುದಿಲ್ಲ. ಹೆಚ್ಚಿನ ಅಪಾಯದ ಮಟ್ಟವಿದ್ದರೂ ಸಹ ಕ್ಯಾನ್ಸರ್ ಇದೆ ಎಂದರ್ಥವಲ್ಲ. ಏಕೆಂದರೆ ಕ್ಯಾನ್ಸರ್ ಹೊರತಾದ ಇತರ ಆರೋಗ್ಯ ಸಮಸ್ಯೆಗಳೂ ಇದೇ ರೀತಿಯ ಲಕ್ಷಣಗಳನ್ನು ಉಂಟುಮಾಡಬಹುದು. ಕ್ಯಾನ್ಸರ್ ಇರುವುದನ್ನು ಖಚಿತಪಡಿಸುವುದು ಮತ್ತು ಅದರ ಹಂತವನ್ನು ನಿರ್ಧರಿಸುವುದು ಅರ್ಹ ವೈದ್ಯರಿಂದ ಆಸ್ಪತ್ರೆಯಲ್ಲಿ ಮಾತ್ರ ಸಾಧ್ಯ. ಕ್ಯಾನ್ಸರ್ ಅನ್ನು ಸಾಧ್ಯವಾದಷ್ಟು ಬೇಗ ಪತ್ತೆಹಚ್ಚಲು ಈ ಆ್ಯಪ್ ಅನ್ನು ಬಳಸಿ. ಏಕೆಂದರೆ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲಿಯೇ ಪತ್ತೆಹಚ್ಚಿದರೆ ಗುಣಮುಖರಾಗುವ ಸಾಧ್ಯತೆ ಹೆಚ್ಚಿರುತ್ತದೆ.ಆ್ಯಪ್ ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ:
    https://play.google.com/store/apps/details?id=com.cancer.cancerscreen&pcampaignid=web_share

    Post Views: 19

    Related Posts

    ಉಡುಪಿ: ಮನೋಹರ್ ಶೆಟ್ಟಿ ಕೊಲೆ ಪ್ರಕರಣ- ದುಬೈನಿಂದ ಮೋಸ್ಟ್ ವಾಂಟೆಡ್ ಆರೋಪಿ ರಾಜೇಶ್ ಆಚಾರ್ಯ ಗಡಿಪಾರು

    November 28, 2026

    ಬೆಳ್ತಂಗಡಿ: ವಿಷ ಸೇವಿಸಿ ಅಸ್ವಸ್ಥಗೊಂಡಿದ್ದ ಐಟಿಐ ವಿದ್ಯಾರ್ಥಿ ಚಿಕಿತ್ಸೆ ಫಲಕಾರಿಯಾಗದೆ ಸಾವು

    November 28, 2026

    ಕಡಬ: ಕಾರು–ಸ್ಕೂಟರ್ ಮುಖಾಮುಖಿ ಡಿಕ್ಕಿ; ಸ್ಕೂಟರ್ ಸವಾರ ಸಾವು

    November 28, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಉಡುಪಿ: ಮನೋಹರ್ ಶೆಟ್ಟಿ ಕೊಲೆ ಪ್ರಕರಣ- ದುಬೈನಿಂದ ಮೋಸ್ಟ್ ವಾಂಟೆಡ್ ಆರೋಪಿ ರಾಜೇಶ್ ಆಚಾರ್ಯ ಗಡಿಪಾರು

    November 28, 2026

    ಡಿಜಿಟಲ್ ತಂತ್ರಜ್ಞಾನದ ಮೂಲಕ M.I.O ವತಿಯಿಂದ ‘M.I.O ಕ್ಯಾನ್ಸರ್ ಸ್ಟ್ರೀನರ್‌ ಆ್ಯಪ್’ ಬಿಡುಗಡೆ

    November 28, 2026

    ಬೆಳ್ತಂಗಡಿ: ವಿಷ ಸೇವಿಸಿ ಅಸ್ವಸ್ಥಗೊಂಡಿದ್ದ ಐಟಿಐ ವಿದ್ಯಾರ್ಥಿ ಚಿಕಿತ್ಸೆ ಫಲಕಾರಿಯಾಗದೆ ಸಾವು

    November 28, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.