ಉಡುಪಿ: ಬ್ರಹ್ಮಗಿರಿ ಜಂಕ್ಷನ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಎಸ್. ಗೌತಮ್ ( 24), ಕುಕ್ಕಿಕಟ್ಟೆ ಮೀನು ಮಾರುಕಟ್ಟೆಯ ಬಳಿ ಗೌರವ ಜೆ. (26), ಶಾಂತಿನಗರದ ಬಳಿ ಜಗದೀಶ್ (31)ನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಫಾರೆನ್ಸಿಕ್ ವರದಿಯಲ್ಲಿ ಗಾಂಜಾ ಸೇವನೆ ದೃಢಪಟ್ಟಿದೆ. ಉಡುಪಿ ಸೆನ್ ಹಾಗೂ ಮಣಿಪಾಲ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.