Facebook Twitter Instagram
    Saturday, March 7
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಮಣಿಪಾಲ: ಮಾನಹಾನಿ, ಜೀವ ಬೆದರಿಕೆ ಆರೋಪ- ದೂರು ದಾಖಲು
    ಇತ್ತೀಚಿನ ಸುದ್ದಿ

    ಮಣಿಪಾಲ: ಮಾನಹಾನಿ, ಜೀವ ಬೆದರಿಕೆ ಆರೋಪ- ದೂರು ದಾಖಲು

    December 28, 2023
    Share

    ಮಣಿಪಾಲ: ದಲಿತ ಮಹಿಳೆಯೋರ್ವರು ಪರಿಶಿಷ್ಟ ಜಾತಿ /ಪಂಗಡ ನಿಗಮದಿಂದ ಸಾಲ ಪಡೆದು ತನಗೆ ನೀಡಲಿಲ್ಲ ಎಂಬ ದ್ವೇಷದಿಂದ ಜಿಲ್ಲಾ ಕರವೇ ಸದಸ್ಯನೋರ್ವ ಮಹಿಳೆಯ ಬಗ್ಗೆ ಸುಳ್ಳು ಮೆಸೇಜ್‌ ಹರಿಯಬಿಟ್ಟು ಮಾನ ಹಾನಿ ಮಾಡಿದ್ದಾನೆ ಎಂದು ನೊಂದ ಮಹಿಳೆ ಮಣಿಪಾಲ ಪೊಲೀಸರಿಗೆ ದೂರು ನೀಡಿದ್ದಾರೆ.

    ನೊಂದ ಮಹಿಳೆಯು ಕರ್ನಾಟಕ ರಕ್ಷಣಾ ವೇದಿಕೆಯ ಸದಸ್ಯೆಯಾಗಿದ್ದು, ಆರೋಪಿ ಪ್ರಭಾಕರ ಕೂಡ ಇದರ ಸದಸ್ಯನಾಗಿದ್ದಾನೆ. ಮಹಿಳೆಗೆ ಪರಿಶಿಷ್ಟ ಜಾತಿ ನಿಗಮದಿಂದ ಸಾಲ ಪಡೆದು ನೀಡುವಂತೆ ಒತ್ತಾಯಿಸುತ್ತಿದ್ದನು ಎನ್ನಲಾಗಿದೆ. ಮಹಿಳೆಯೂ ಸಾಲ ನೀಡಲು ನಿರಾಕರಿಸಿದ್ದು, ಈ ದ್ವೇಷದಿಂದ ಆರೋಪಿ ಮಹಿಳೆಯ ನಡತೆಯ ಬಗ್ಗೆ ತಪ್ಪು ಅಭಿಪ್ರಾಯ ಬರುವಂತೆ ಪ್ರಚಾರ ಮಾಡಿ ಮತ್ತೋರ್ವ ಕರವೇ ಸದಸ್ಯೆಯ ಮೊಬೈಲ್‌ಗೆ ದಲಿತ ಮಹಿಳೆಯ ಕುರಿತು ಅವಹೇಳನಕಾರಿ ವಾಯ್ಸ ಮೆಸೇಜ್‌ ಕಳುಹಿಸಿದ್ದಾನೆ. ಆ ಮೆಸೇಜ್‌ನಲ್ಲಿ ನೊಂದ ಮಹಿಳೆಯ ಮಾನಕ್ಕೆ ಕುಂದು ಬರುವಂತಹ ಅವಾಚ್ಯ ಮಾತುಗಳಿದ್ದು, ಆಕೆಯ ಮನೆಗೆ ಬೆಂಕಿ ಹಾಕುವುದಾಗಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ನೊಂದ ಮಹಿಳೆ ಮಣಿಪಾಲ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

    Post Views: 180

    Related Posts

    ವಿಟ್ಲ: ಸೈಕಲ್ ನಿಂದ ಬಿದ್ದು ಬಾಲಕ ಮೃತ್ಯು!

    March 7, 2026

    ಬಂಟ್ವಾಳ: ನದಿ ದಡದಲ್ಲಿ ಆಧಾರ್ ಕಾರ್ಡ್ ಪತ್ತೆ ಪ್ರಕರಣ – ಅಂಚೆ ಇಲಾಖೆ ವಿರುದ್ಧ ಕೇಸ್‌

    March 7, 2026

    ಕಾರ್ಕಳ: ಹಲವು ವರ್ಷಗಳಿಂದ ತಲೆಮಾರಿಸಿಕೊಂಡಿದ್ದ ಆರೋಪಿ ಅರೆಸ್ಟ್

    March 7, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.