ಮಣಿಪಾಲ: ದಲಿತ ಮಹಿಳೆಯೋರ್ವರು ಪರಿಶಿಷ್ಟ ಜಾತಿ /ಪಂಗಡ ನಿಗಮದಿಂದ ಸಾಲ ಪಡೆದು ತನಗೆ ನೀಡಲಿಲ್ಲ ಎಂಬ ದ್ವೇಷದಿಂದ ಜಿಲ್ಲಾ ಕರವೇ ಸದಸ್ಯನೋರ್ವ ಮಹಿಳೆಯ ಬಗ್ಗೆ ಸುಳ್ಳು ಮೆಸೇಜ್ ಹರಿಯಬಿಟ್ಟು ಮಾನ ಹಾನಿ ಮಾಡಿದ್ದಾನೆ ಎಂದು ನೊಂದ ಮಹಿಳೆ ಮಣಿಪಾಲ ಪೊಲೀಸರಿಗೆ ದೂರು ನೀಡಿದ್ದಾರೆ.
ನೊಂದ ಮಹಿಳೆಯು ಕರ್ನಾಟಕ ರಕ್ಷಣಾ ವೇದಿಕೆಯ ಸದಸ್ಯೆಯಾಗಿದ್ದು, ಆರೋಪಿ ಪ್ರಭಾಕರ ಕೂಡ ಇದರ ಸದಸ್ಯನಾಗಿದ್ದಾನೆ. ಮಹಿಳೆಗೆ ಪರಿಶಿಷ್ಟ ಜಾತಿ ನಿಗಮದಿಂದ ಸಾಲ ಪಡೆದು ನೀಡುವಂತೆ ಒತ್ತಾಯಿಸುತ್ತಿದ್ದನು ಎನ್ನಲಾಗಿದೆ. ಮಹಿಳೆಯೂ ಸಾಲ ನೀಡಲು ನಿರಾಕರಿಸಿದ್ದು, ಈ ದ್ವೇಷದಿಂದ ಆರೋಪಿ ಮಹಿಳೆಯ ನಡತೆಯ ಬಗ್ಗೆ ತಪ್ಪು ಅಭಿಪ್ರಾಯ ಬರುವಂತೆ ಪ್ರಚಾರ ಮಾಡಿ ಮತ್ತೋರ್ವ ಕರವೇ ಸದಸ್ಯೆಯ ಮೊಬೈಲ್‌ಗೆ ದಲಿತ ಮಹಿಳೆಯ ಕುರಿತು ಅವಹೇಳನಕಾರಿ ವಾಯ್ಸ ಮೆಸೇಜ್ ಕಳುಹಿಸಿದ್ದಾನೆ. ಆ ಮೆಸೇಜ್‌ನಲ್ಲಿ ನೊಂದ ಮಹಿಳೆಯ ಮಾನಕ್ಕೆ ಕುಂದು ಬರುವಂತಹ ಅವಾಚ್ಯ ಮಾತುಗಳಿದ್ದು, ಆಕೆಯ ಮನೆಗೆ ಬೆಂಕಿ ಹಾಕುವುದಾಗಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ನೊಂದ ಮಹಿಳೆ ಮಣಿಪಾಲ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.