ಮಂಗಳೂರು: ಕುಂದಾಪುರದಿಂದ ಮೈಸೂರು- ಮಂಡ್ಯಕ್ಕೆ ತೆರಳುವ ಖಾಸಗಿ ಮೋಟಾಸ್೯ ಬಸ್ ಚಾಲಕನ ಧಾವಂತಕ್ಕೆ ಒಂದು ಹಸು ಸಾವನ್ನಪ್ಪಿ, ಇನ್ನೊಂದು ಗಂಭೀರ ಗಾಯಗೊಂಡಿರುವ ಘಟನೆ ಕೋಡಿಕಲ್ ಜಂಕ್ಷನ್‌ನಲ್ಲಿ ಶುಕ್ರವಾರ ತಡರಾತ್ರಿ ವೇಳೆ ಸಂಭವಿಸಿದೆ.
ಅಪಘಾತ ನಡೆಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಸ್ಥಳೀಯರು ಹಾಗೂ ವಾಹನ ಸವಾರರು ಬಸ್ ತಡೆದು ಚಾಲಕನನ್ನು ತರಾಟೆಗೆತ್ತಿಕೊಂಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.