Facebook Twitter Instagram
    Friday, September 11
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಉಳ್ಳಾಲ: ಇಬ್ಬರು ಸಿಟಿ ಬಸ್ ಕಂಡೆಕಟ್ಟರ್ ಗಳ ಹೊಡೆದಾಟ..! ದೂರು ದಾಖಲು
    ಇತ್ತೀಚಿನ ಸುದ್ದಿ

    ಉಳ್ಳಾಲ: ಇಬ್ಬರು ಸಿಟಿ ಬಸ್ ಕಂಡೆಕಟ್ಟರ್ ಗಳ ಹೊಡೆದಾಟ..! ದೂರು ದಾಖಲು

    September 6, 2024
    Share

    ಉಳ್ಳಾಲ : ಇಬ್ಬರು ಸಿಟಿ ಬಸ್ ಕಂಡೆಕಟ್ಟರ್ ಗಳು ಸಾರ್ವಜನಿಕರ ಎದುರೇ  ಪರಸ್ಪರ ಹೊಡೆದಾಡಿಕೊಂಡ  ಘಟನೆ ಮಂಗಳೂರು ಹೊರವಲಯದ ಉಳ್ಳಾಲದಲ್ಲಿ ನಡೆದಿದೆ.

    ತಲಪಾಡಿ – ಮಂಗಳೂರು ನಡುವೆ ಸಂಚರಿಸುವ ಪದ್ಮ ಟ್ರಾವೆಲ್ಸ್ ಬಸ್ ಮತ್ತು ಹೊಸಂಗಡಿ ಜಂಕ್ಷನ್ ನಿಂದ ಮಂಗಳೂರು ನಡುವೆ ಸಂಚರಿಸುವ ಅಸರ್ ಟ್ರಾವೆಲ್ಸ್ ಬಸ್ ನಿರ್ವಾಹಕರ ನಡುವೆ ಜಗಳ ನಡೆದಿದ್ದು, ಇದರ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಸ್ ನಿರ್ವಾಹಕರಾದ ಅಜಯ್ ಮತ್ತು ವಿಷ್ಣು ಎಂಬವರು ಪರಸ್ಪರ ಹೊಡೆದಾಡಿಕೊಂಡಿದ್ದು,ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬುಧವಾರ ಸಂಜೆ ವೇಳೆ ತೊಕ್ಕೊಟ್ಟು ಸಮೀಪ ಈ ಘಟನೆ ನಡೆದಿದೆ. ತಲಪಾಡಿಯಿಂದ ಮಂಗಳೂರಿಗೆ ಹೋಗುತ್ತಿದ್ದ ಬಸ್ಸನ್ನು ಬೆನ್ನಟ್ಟಿದ ಇನ್ನೊಂದು ಬಸ್ಸು ಚಾಲಕ ಓವರ್ ಬ್ರಿಡ್ಜ್ ಬಸ್ಸು ನಿಲ್ದಾಣದಲ್ಲಿ ಅಡ್ಡಲಾಗಿ ಇಟ್ಟಿದ್ದ. ಈ ವೇಳೆ ಎರಡು ಬಸ್ಸು ನಿರ್ವಾಹಕರ ನಡುವೆ ಮಾತಿನ ಚಕಮಕಿ ನಡೆದು ಹೊಯ್ ಕೈಯಾಗಿ ಬೀದಿ ಕಾಳಗ ಆಗಿದೆ ಎಂದು ತಿಳಿದುಬಂದಿದೆ. ಈ ವೇಳೆ ಓವರ್ ಬ್ರಿಡ್ಜ್ ಆಟೋ ರಿಕ್ಷಾ ಪಾರ್ಕಿನ ರಿಕ್ಷಾ ಚಾಲಕರು ಮಧ್ಯ ಪ್ರವೇಶಿಸಿ ಗಲಾಟೆ ನಿಲ್ಲಿಸಿದ್ದು ಬಸ್ಸು ನಿರ್ವಾಹಕ ರನ್ನು ಸಮಾಧಾನಗೊಳಿಸಿ ಕಳುಹಿಸಿದ್ದಾರೆ. ನಿರ್ವಾಹಕರು ಬೀದಿಯಲ್ಲಿ ಕಾದಾಡುತ್ತಿರುವ ದೃಶ್ಯವನ್ನು ಕಾರು ಪ್ರಯಾಣಿಕರೊಬ್ಬರು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿದ್ದಾರೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Post Views: 246

    Related Posts

    ಉಪ್ಪಿನಂಗಡಿ: ತಲೆಮರೆಸಿಕೊಂಡಿದ್ದ ಪೋಕ್ಸೋ ಪ್ರಕರಣದ ವಾರಂಟ್‌ ಆರೋಪಿ ಅರೆಸ್ಟ್

    September 11, 2026

    ಮುಲ್ಕಿ: ಕೊರ್ದಬ್ಬು ದೈವಸ್ಥಾನ ಕಳವು ಪ್ರಕರಣ,₹17.20 ಲಕ್ಷ ಮೌಲ್ಯದ ವಸ್ತು ಜಪ್ತಿ

    September 11, 2026

    ಉಡುಪಿ: ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿ ನ್ಯಾಯಾಲಯಕ್ಕೆ ಸಲ್ಲಿಕೆ-ಇಬ್ಬರು ಆರೋಪಿಗಳ ಬಂಧನ

    September 11, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಉಪ್ಪಿನಂಗಡಿ: ತಲೆಮರೆಸಿಕೊಂಡಿದ್ದ ಪೋಕ್ಸೋ ಪ್ರಕರಣದ ವಾರಂಟ್‌ ಆರೋಪಿ ಅರೆಸ್ಟ್

    September 11, 2026

    ಮುಲ್ಕಿ: ಕೊರ್ದಬ್ಬು ದೈವಸ್ಥಾನ ಕಳವು ಪ್ರಕರಣ,₹17.20 ಲಕ್ಷ ಮೌಲ್ಯದ ವಸ್ತು ಜಪ್ತಿ

    September 11, 2026

    ಉಡುಪಿ: ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿ ನ್ಯಾಯಾಲಯಕ್ಕೆ ಸಲ್ಲಿಕೆ-ಇಬ್ಬರು ಆರೋಪಿಗಳ ಬಂಧನ

    September 11, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.