Facebook Twitter Instagram
    Monday, August 17
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಬೆಳ್ತಂಗಡಿ: ಕೇರೆ ಹಾವನ್ನು ಬೆನ್ನಟ್ಟಿ ಮನೆಯೊಳಗೆ ನುಗ್ಗಿದ ಬೃಹತ್ ಕಾಳಿಂಗ ಸರ್ಪ
    ಇತ್ತೀಚಿನ ಸುದ್ದಿ

    ಬೆಳ್ತಂಗಡಿ: ಕೇರೆ ಹಾವನ್ನು ಬೆನ್ನಟ್ಟಿ ಮನೆಯೊಳಗೆ ನುಗ್ಗಿದ ಬೃಹತ್ ಕಾಳಿಂಗ ಸರ್ಪ

    August 17, 2026
    Share

    ಬೆಳ್ತಂಗಡಿ: ಕೇರೆ ಹಾವನ್ನು ತಿನ್ನಲು ಅಟ್ಟಾಡಿಸಿಕೊಂಡು ಬಂದ ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದು ಏಕಾಏಕಿ ಮನೆಯೊಳಗೆ ನುಗ್ಗಿದ ಘಟನೆ ತಾಲೂಕಿನ ಕಿಲ್ಲೂರು ಎಂಬಲ್ಲಿ ನಡೆದಿದೆ.

    ಕಿಲ್ಲೂರಿನ ಖಾಸಗಿ ಮನೆಯೊಂದರ ಬಳಿ ಕೇರೆ ಹಾವನ್ನು ಕಬಳಿಸಲು ಕಾಳಿಂಗ ಸರ್ಪ ಬೆನ್ನಟ್ಟಿಕೊಂಡು ಬಂದಿದೆ. ಪ್ರಾಣಭಯದಿಂದ ಕೇರೆ ಹಾವು ಮನೆಯೊಳಗೆ ನುಗ್ಗಿದ್ದು, ಅದರ ಬೆನ್ನಲ್ಲೇ ಬೃಹತ್ ಕಾಳಿಂಗ ಸರ್ಪವೂ ಮನೆ ಪ್ರವೇಶಿಸಿದೆ. ಇದನ್ನು ಕಂಡು ಆತಂಕಗೊಂಡ ಮನೆ ಮಂದಿ ತಕ್ಷಣವೇ ಸ್ಥಳೀಯ ಉರಗ ತಜ್ಞ ಬೆಳ್ತಂಗಡಿಯ ಅಶೋಕ್ ಲಾಯಿಲಾ ಅವರಿಗೆ ಮಾಹಿತಿ ನೀಡಿದ್ದಾರೆ.

    ಮಾಹಿತಿ ಲಭಿಸುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಅಶೋಕ್ ಲಾಯಿಲಾ ಅವರು ಸುದೀರ್ಘ ಕಾರ್ಯಾಚರಣೆ ನಡೆಸಿ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ವೇಳೆ ಕೈಗೆ ಸಿಕ್ಕ ಆಹಾರ (ಕೇರೆ ಹಾವು) ಕೈತಪ್ಪಿದ ಕೋಪದಲ್ಲಿ ಕಾಳಿಂಗ ಸರ್ಪ ಹಲವು ಬಾರಿ ಉರಗ ತಜ್ಞ ಅಶೋಕ್ ಅವರ ಮೇಲೆಯೇ ಬುಸುಗುಟ್ಟಿ ದಾಳಿಗೆ ಯತ್ನಿಸಿದೆ. ಕೊನೆಗೂ ಹರಸಾಹಸ ಪಟ್ಟು ಹಾವನ್ನು ಸೆರೆಹಿಡಿದ ಅಶೋಕ್ ಲಾಯಿಲಾ, ಅದನ್ನು ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಸುರಕ್ಷಿತವಾಗಿ ರಕ್ಷಿತಾರಣ್ಯಕ್ಕೆ ಬಿಟ್ಟಿದ್ದಾರೆ.

    Post Views: 1

    dakshina kannada mangalore

    Related Posts

    ಕುಕ್ಕೆ ಸುಬ್ರಹ್ಮಣ್ಯ ಹೆಸರಿನಲ್ಲಿ ₹750 ವಂಚನೆಗೆ ಯತ್ನ; ನಕಲಿ ವಿಡಿಯೋ ವಿರುದ್ಧ ಪೊಲೀಸರಿಗೆ ದೂರು

    August 17, 2026

    ಕಾಸರಗೋಡು: ಒಂದೇ ಕೊಠಡಿಯಲ್ಲಿ ತಂದೆ-ಮಗಳ ಮೃತದೇಹ ಪತ್ತೆ

    August 17, 2026

    ಎಂಡಿಎಂಎ, ಕೊಕೇನ್ ಸಾಗಾಟ: ಬಂಟ್ವಾಳದಲ್ಲಿ ಆರೋಪಿಯ ಬಂಧನ

    August 17, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಬೆಳ್ತಂಗಡಿ: ಕೇರೆ ಹಾವನ್ನು ಬೆನ್ನಟ್ಟಿ ಮನೆಯೊಳಗೆ ನುಗ್ಗಿದ ಬೃಹತ್ ಕಾಳಿಂಗ ಸರ್ಪ

    August 17, 2026

    ಕುಕ್ಕೆ ಸುಬ್ರಹ್ಮಣ್ಯ ಹೆಸರಿನಲ್ಲಿ ₹750 ವಂಚನೆಗೆ ಯತ್ನ; ನಕಲಿ ವಿಡಿಯೋ ವಿರುದ್ಧ ಪೊಲೀಸರಿಗೆ ದೂರು

    August 17, 2026

    ಕಾಸರಗೋಡು: ಒಂದೇ ಕೊಠಡಿಯಲ್ಲಿ ತಂದೆ-ಮಗಳ ಮೃತದೇಹ ಪತ್ತೆ

    August 17, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.