Facebook Twitter Instagram
    Friday, July 24
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಮಂಗಳೂರು: BSNL ತಾಮ್ರದ ಕೇಬಲ್ ಕಳವು ಪ್ರಕರಣ ಭೇದನೆ – ಮೂವರು ಆರೋಪಿಗಳ ಬಂಧನ, ₹10 ಲಕ್ಷ ನಗದು ವಶ
    ಇತ್ತೀಚಿನ ಸುದ್ದಿ

    ಮಂಗಳೂರು: BSNL ತಾಮ್ರದ ಕೇಬಲ್ ಕಳವು ಪ್ರಕರಣ ಭೇದನೆ – ಮೂವರು ಆರೋಪಿಗಳ ಬಂಧನ, ₹10 ಲಕ್ಷ ನಗದು ವಶ

    February 20, 2026
    Share

    ಮಂಗಳೂರು: ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ BSNL ಇಲಾಖೆಗೆ ಸೇರಿದ ತಾಮ್ರದ ಕೇಬಲ್ ಕಳವು ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ದಿನಾಂಕ 16-02-2026ರಂದು BSNL ಕಚೇರಿ, ಪಾಂಡೇಶ್ವರ, ಮಂಗಳೂರು ಇಲ್ಲಿ ಜೂನಿಯರ್ ಟೆಲಿಕಾಂ ಆಫೀಸರ್ ಆಗಿರುವ ವಿನೋದ ಶೇಖರ್ ನಾಯಕ್ ಅವರು ಠಾಣೆಗೆ ಹಾಜರಾಗಿ ದೂರು ನೀಡಿದ್ದರು. ಡಿಸೆಂಬರ್ 2025ರಿಂದ 14-02-2026ರವರೆಗೆ BSNL ಇಲಾಖೆಗೆ ಸೇರಿದ ತಾಮ್ರದ ಕೇಬಲ್‌ಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಿನಲ್ಲಿ ತಿಳಿಸಿದ್ದರು.

    ಕಳುವಾದ ಕೇಬಲ್‌ಗಳ ಅಂದಾಜು ಮೌಲ್ಯ ಸುಮಾರು ₹70 ಲಕ್ಷ ಎಂದು ಹೇಳಲಾಗಿದೆ. ಈ ಸಂಬಂಧ ಮಂಗಳೂರು ದಕ್ಷಿಣ ಪೊಲೀಸ್ ಠಾಣೆ ಯಲ್ಲಿ ಠಾಣಾ ಅ.ಕ್ರ.45/2026, ಕಲಂ 303(2) BNS 2023 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

    ಪ್ರಕರಣದ ತನಿಖೆ ನಡೆಸಿದ ಪೊಲೀಸರು 18-02-2026ರಂದು ಕೆಳಕಂಡ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಎಕ್ಕೂರು ನಿವಾಸಿ ಮಂಜುನಾಥ ಡಿ (29) (ಕೇಬಲ್ ಜಾಯಿಂಟರ್, NFS ಕೇಬಲ್, L&T ಕಂಪನಿ, ಕದ್ರಿ ಮಂಗಳೂರು), ಕಣ್ಣೂರು ಮೂಲದ ಪ್ರಸ್ತುತ ಮಾರ್ನಮಿಕಟ್ಟೆ ನಿವಾಸಿ ಕೆ.ಕೆ. ಚಾಮಿ (59), ಖಾಯಂ (ಟೆಲಿಕಾಂ ಟೆಕ್ನಿಷಿಯನ್, BSNL ಕಚೇರಿ, ಪಾಂಡೇಶ್ವರ), ಹಾಸನ ಮೂಲದ ಪ್ರಸ್ತುತ ಪಂಪವೆಲ್ ನಿವಾಸಿ ನ್ನೀರ್ ಪಾಷಾ (50) (ಅಸಿಸ್ಟೆಂಟ್ ಆಫೀಸ್ ಸೂಪರಿಂಟೆಂಡೆಂಟ್, BSNL ಕಚೇರಿ, ಪಾಂಡೇಶ್ವರ) ಇವರನ್ನು ಬಂಧಿಸಲಾಗಿದೆ.

    ಬಂಧಿತ ಆರೋಪಿಗಳಿಂದ ಸುಮಾರು 45 ಕೆ.ಜಿ ತಾಮ್ರದ ಕೇಬಲ್ (ಅಂದಾಜು ಮೌಲ್ಯ ₹2,50,000) ಹಾಗೂ ಕಳವು ಮಾಡಿದ ಕೇಬಲ್ ಮಾರಾಟದಿಂದ ಬಂದಿರುವ ₹10,00,000 ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪ್ರಕರಣದ ಮುಂದಿನ ತನಿಖೆ ಮುಂದುವರಿದಿದೆ.

    Post Views: 161

    Related Posts

    ನೀಟ್ ಪ್ರತಿಭಟನೆ ಕುರಿತು ವಿವಾದಾತ್ಮಕ ಪೋಸ್ಟ್; ವಿಟ್ಲದಲ್ಲಿ ವ್ಯಕ್ತಿಯ ಅರೆಸ್ಟ್

    July 24, 2026

    ಪುತ್ತೂರು: ರಸ್ತೆಯಂಚಿಗೆ ಇಳಿದು ಟಾಟಾ ಏಸ್ ಪಲ್ಟಿ-ಅಪಾಯದಿಂದ ಪಾರಾದ ಬಾಲಕ

    July 24, 2026

    ಬೆಳ್ತಂಗಡಿ: ಮಹಿಳೆಗೆ ಬೆದರಿಕೆ, ನಗದು ಕಳವು ಆರೋಪ- ಇಬ್ಬರ ವಿರುದ್ಧ FIR

    July 24, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ನೀಟ್ ಪ್ರತಿಭಟನೆ ಕುರಿತು ವಿವಾದಾತ್ಮಕ ಪೋಸ್ಟ್; ವಿಟ್ಲದಲ್ಲಿ ವ್ಯಕ್ತಿಯ ಅರೆಸ್ಟ್

    July 24, 2026

    ಪುತ್ತೂರು: ರಸ್ತೆಯಂಚಿಗೆ ಇಳಿದು ಟಾಟಾ ಏಸ್ ಪಲ್ಟಿ-ಅಪಾಯದಿಂದ ಪಾರಾದ ಬಾಲಕ

    July 24, 2026

    ಬೆಳ್ತಂಗಡಿ: ಮಹಿಳೆಗೆ ಬೆದರಿಕೆ, ನಗದು ಕಳವು ಆರೋಪ- ಇಬ್ಬರ ವಿರುದ್ಧ FIR

    July 24, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.