Facebook Twitter Instagram
    Thursday, July 23
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»Uncategorized»ಪುತ್ತೂರು: ಮೂರು ಪ್ರತ್ಯೇಕ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿಗಳ ದಸ್ತಗಿರಿ
    Uncategorized

    ಪುತ್ತೂರು: ಮೂರು ಪ್ರತ್ಯೇಕ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿಗಳ ದಸ್ತಗಿರಿ

    August 14, 2025
    Share

    ಪುತ್ತೂರು: ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಪೊಲೀಸರು ದಸ್ತಗಿರಿ ಮಾಡಿದ್ದಾರೆ.

    ಪುತ್ತೂರು ನಗರ ಠಾಣಾ ಅಕ್ರ 69/2023 ಕಲ: 379 ಐ.ಪಿ.ಸಿ ಪ್ರಕರಣದಲ್ಲಿ 9 ಬಾರಿ ವಾರಂಟ್ ಜಾರಿಯಾಗಿದ್ದರೂ, ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಹಾವೇರಿ, ಸವಣೂರು ನಿವಾಸಿ ಶಿವಕುಮಾರ್ ಯಾನೆ ಶಿವು ಎಂಬಾತನನ್ನು ಪೊಲೀಸರು ದಸ್ತಗಿರಿ ಮಾಡಿದ್ದಾರೆ. ಪುತ್ತೂರು ಉಪವಿಭಾಗದ ಡಿವೈಎಸ್ಪಿ ಅರುಣ್ ನಾಗೇಗೌಡರವರು ಹಾಗೂ ಪುತ್ತೂರು ನಗರ ಠಾಣಾ ಪೊಲೀಸ್ ನಿರೀಕ್ಷಕರಾದ ಕಿರಣ್ ಜಾನ್ಸನ್ ಡಿಸೋಜಾ ರವರ ಮಾರ್ಗದರ್ಶನದಲ್ಲಿ, ಉಪ್ಪಿನಂಗಡಿ ಠಾಣಾ ಪಿ.ಎಸ್.ಐ ಕೌಶಿಕ್ ರವರ ನೇತೃತ್ವದ, ಸಿಬ್ಬಂದಿಗಳಾದ ಸಿ ಹೆಚ್ ಸಿ 685 ಪ್ರಶಾಂತ ರೈ, ಸಿಹೆಚ್ ಸಿ 1028 ಗಣೇಶ ಎನ್, ಸಿಪಿಸಿ 2283 ಶ್ರೀಶೈಲ ಎಂ.ಕೆ, ಸಿಪಿಸಿ 2404 ಮಹಮ್ಮದ್ ಮೌಲಾನಾ ಅವರುಗಳನ್ನು ಒಳಗೊಂಡ ವಿಶೇಷ ತಂಡವು ಆಗಸ್ಟ್ 12ರಂದು ಬೆಂಗಳೂರಿನ ಅಬ್ಜಿಗೆರೆ ಎಂಬಲ್ಲಿ ದಸ್ತಗಿರಿ ಮಾಡಿರುತ್ತಾರೆ.ಉಪ್ಪಿನಂಗಡಿ ಪೊಲೀಸ್ ಠಾಣಾ ಅ.ಕ್ರ: 14/2022, ಕಲಂ:394 ಐ.ಪಿ.ಸಿ. ಪ್ರಕರಣದಲ್ಲಿ ಆರೋಪಿಯಾಗಿ, ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ 3 ವರ್ಷಗಳಿಂದ ತಲೆಮರೆಸಿಕೊಂಡಿದ್ದ, ಬೆಂಗಳೂರು, ಜಗಜೀವನ್ ರಾಮ್ ನಗರ ನಿವಾಸಿ ಸಯ್ಯದ್ ಕಲೀಂ ಯಾನೆ ಕಲ್ಲು ಮಾಮು ಎಂಬಾತನನ್ನು ಪೊಲೀಸರು ದಸ್ತಗಿರಿ ಮಾಡಿದ್ದಾರೆ. ಪುತ್ತೂರು ಉಪವಿಭಾಗದ ಉಪಾಧೀಕ್ಷಕರಾದ ಅರುಣ್ ನಾಗೇಗೌಡ ರವರ ಮಾರ್ಗದರ್ಶನದಲ್ಲಿ, ಉಪ್ಪಿನಂಗಡಿ ಪೊಲೀಸ್ ವೃತ್ತ ನಿರೀಕ್ಷಕರಾದ ರವಿ ಬಿ.ಎಸ್ ಹಾಗೂ ಪೊಲೀಸ್ ಉಪನಿರೀಕ್ಷರಾದ ಕೌಶಿಕ್ ರವರ ನೇತೃತ್ವದಲ್ಲಿ, ಉಪ್ಪಿನಂಗಡಿ ಠಾಣಾ CHC -826 ಶಿವರಾಮ ರೈ ಮತ್ತು ಡಿವೈಎಸ್‌ಪಿ ವಿಶೇಷ ತಂಡದ ಸಿಬ್ಬಂದಿಗಳಾದ CPC 2384 ಶಾಂತಕುಮಾರ್, CPC 1035  ರವಿಕುಮಾರ್, CPC 1926  ರಮೇಶ್ ರವರುಗಳನ್ನು ಒಳಗೊಂಡ ತಂಡವು ದಸ್ತಗಿರಿ ಮಾಡಿರುತ್ತಾರೆ.ಸದ್ರಿ ಆರೋಪಿಯ ವಿರುದ್ಧ ಬೆಂಗಳೂರು ನಗರದ ವಿವಿಧ ಠಾಣೆಗಳಲ್ಲಿ 4 ಪ್ರಕರಣಗಳು ದಾಖಲಾಗಿರುತ್ತದೆ.ಕಡಬ ಪೊಲೀಸ್ ಠಾಣಾ ಅ ಕ್ರ: 91/2019 ಕಲಂ: 341, 323, 324, 504, 506 R/w 34 IPC ಪ್ರಕರಣದಲ್ಲಿ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ, ಕಳೆದ ಮೂರು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕಡಬ ರಾಮಕುಂಜ ನಿವಾಸಿ ಯೂಸೂಫ್ (32) ಎಂಬಾತನನ್ನು ಕಡಬ ಠಾಣಾ ಪೊಲೀಸರು ಆ.12 ರಂದು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ. ನ್ಯಾಯಾಲಯವು ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.

    Post Views: 176

    Related Posts

    ನ್ಯಾಯಾಲಯಕ್ಕೆ ಹಾಜರಾಗದೆ ಆರು ವರ್ಷಗಳಿಂದ ಪರಾರಿಯಾಗಿದ್ದ ಆರೋಪಿ ವಶಕ್ಕೆ

    May 16, 2026

    ಕಾಪು: ಸ್ಕೂಟಿಗೆ ಬಸ್ ಡಿಕ್ಕಿ- ಬಾಲಕಿ ಸಾವು

    April 22, 2026

    ಸುಳ್ಯ : ಕಂಬಕ್ಕೆ ಬೈಕ್ ಡಿಕ್ಕಿ- ಮೆಸ್ಕಾಂ ಸಿಬ್ಬಂದಿ ಮೃತ್ಯು

    March 25, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

     ಶಾಸಕ ಬಿಪಿ ಹರೀಶ್ ಗೆ ಮೊಟ್ಟೆ ಎಸೆತ : ಕಮಿಷನರ್ ಗೆ ಬಿಜೆಪಿ ನಾಯಕರಿಂದ ದೂರು ಸಲ್ಲಿಕೆ

    July 22, 2026

    ಫರಂಗಿಪೇಟೆ ಬ್ಯಾಂಕ್‌ ಕಳ್ಳತನ ಯತ್ನ ಪ್ರಕರಣ: ಆರೋಪಿಗಳ ಪತ್ತೆಗೆ ಪ್ರತ್ಯೇಕ ವಿಶೇಷ ತಂಡ

    July 22, 2026

    ಬೆಳ್ತಂಗಡಿ: ಖೋಟಾ ನೋಟು ದಂಧೆ ಪ್ರಕರಣ : ನಾಲ್ವರಿಗೆ ಮತ್ತೆ ಪೊಲೀಸ್ ಕಸ್ಟಡಿ : ಮೂವರಿಗೆ ನ್ಯಾಯಾಂಗ ಬಂಧನ

    July 22, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.