Facebook Twitter Instagram
    Thursday, July 23
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಪ್ರೇಮ ವಿವಾದಕ್ಕೆ ಅಣ್ಣನೇ ಬಲಿಯಾದ ಘಟನೆ: ಬ್ಯಾಡರಹಳ್ಳಿಯಲ್ಲಿ ಕಿಡ್ನಾಪ್ ಮಾಡಿ ಮಾರಣಾಂತಿಕ ಹಲ್ಲೆ
    ಇತ್ತೀಚಿನ ಸುದ್ದಿ

    ಪ್ರೇಮ ವಿವಾದಕ್ಕೆ ಅಣ್ಣನೇ ಬಲಿಯಾದ ಘಟನೆ: ಬ್ಯಾಡರಹಳ್ಳಿಯಲ್ಲಿ ಕಿಡ್ನಾಪ್ ಮಾಡಿ ಮಾರಣಾಂತಿಕ ಹಲ್ಲೆ

    May 11, 2026
    Share

    ಬೆಂಗಳೂರು: ಪ್ರೀತಿ ಮಾಡಿದ ತಮ್ಮನ ತಪ್ಪಿಗೆ ಅಣ್ಣನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಿಯಕರನ ಅಣ್ಣನನ್ನೇ ಕಿಡ್ನಾಪ್ ಮಾಡಿ, ಕೈಕಾಲು ಕಟ್ಟಿ ಹಾಕಿ ದೌರ್ಜನ್ಯ ನಡೆಸಿರುವ ವೀಡಿಯೋ ಈಗ ಆತಂಕ ಸೃಷ್ಟಿಸಿದೆ.

    ಬ್ಯಾಡರಹಳ್ಳಿಯ ಶಿವಕುಮಾರ್ ಎಂಬಾತ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದನು. ಆದರೆ ಇವರ ಪ್ರೀತಿಗೆ ಯುವತಿಯ ಮನೆಯವರಿಂದ ತೀವ್ರ ವಿರೋಧವಿತ್ತು. ಈ ಹಿನ್ನೆಲೆಯಲ್ಲಿ ಇಬ್ಬರೂ ಇತ್ತೀಚೆಗೆ ಮನೆ ಬಿಟ್ಟು ಓಡಿ ಹೋಗಿದ್ದರು. ಇದರಿಂದ ಕೆರಳಿದ ಯುವತಿಯ ತಂದೆ ಬಸವರಾಜ್ ಮತ್ತು ಅವರ ಸಂಬಂಧಿಕರು, ಶಿವಕುಮಾರ್ ಸಿಗದಿದ್ದಕ್ಕೆ ಆತನ ಅಣ್ಣ ಕೊಟ್ರೇಶ್ ಎಂಬಾತನ ಮೇಲೆ ಸೇಡು ತೀರಿಸಿಕೊಳ್ಳಲು ಸಂಚು ರೂಪಿಸಿದ್ದರು.

    ಕೊಟ್ರೇಶ್ ಬ್ಯಾಡರಹಳ್ಳಿಯ ದೇವಸ್ಥಾನವೊಂದರಲ್ಲಿ ಅರ್ಚಕರಾಗಿ ಕೆಲಸ ಮಾಡುತ್ತಿದ್ದರು. “ಪೊಲೀಸ್ ಸ್ಟೇಷನ್‌ಗೆ ಹೋಗೋಣ ಬಾ” ಎಂದು ನಂಬಿಸಿ ಆರೋಪಿಗಳು ಕೊಟ್ರೇಶ್‌ನನ್ನು ಕಾರಿನಲ್ಲಿ ಅಪಹರಿಸಿದ್ದಾರೆ. ಅಜ್ಞಾತ ಸ್ಥಳಕ್ಕೆ ಕರೆದೊಯ್ದು, ಕೊಟ್ರೇಶ್‌ನ ಕೈಕಾಲುಗಳನ್ನು ಕಟ್ಟಿ ಹಾಕಿ ಮನಬಂದಂತೆ ಥಳಿಸಿದ್ದಾರೆ.

    ಹಲ್ಲೆ ನಡೆಸುವಾಗ ಆರೋಪಿಗಳು ವೀಡಿಯೋ ರೆಕಾರ್ಡ್ ಮಾಡಿದ್ದಾರೆ. “ಶಿವು ಎಲ್ಲೇ ಇದ್ದರೂ ಹುಡುಗಿಯನ್ನು ತಂದು ಒಪ್ಪಿಸು” ಎಂದು ಕೊಟ್ರೇಶ್ ಕೈಯಲ್ಲಿ ಹೇಳಿಸಿ, ಆ ವೀಡಿಯೋವನ್ನು ಅವರ ಸಂಬಂಧಿಕರಿಗೆ ಕಳುಹಿಸಿ ಬೆದರಿಕೆ ಹಾಕಿದ್ದಾರೆ. ವೀಡಿಯೋದಲ್ಲಿ ಕೊಟ್ರೇಶ್ ಜೀವಕ್ಕಾಗಿ ಅಂಗಲಾಚುತ್ತಿರುವುದು ಕಂಡುಬಂದಿದೆ. ವೀಡಿಯೋ ಬೆನ್ನಲ್ಲೇ ಕೊಟ್ರೇಶ್ ಸಂಬಂಧಿಕರು ಬ್ಯಾಡರಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಯಾವಗಾ ಪೊಲೀಸರು ಈ ಪ್ರಕರಣದ ಬಗ್ಗೆ ತನಿಖೆ ಮಾಡಲು ಶುರು ಮಾಡಿದದ್ದಾರೆ ಎಂದು ಆರೋಪಿಗಳಿಗೆ ಗೊತ್ತಾಯಿತಿ ತಕ್ಷಣ ಕೊಟ್ರೇಶ್‌ನನ್ನು ಬಿಟ್ಟು ಪರಾರಿಯಾಗಿದ್ದಾರೆ. ಇದೀಗ ಬ್ಯಾಡರಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

    Post Views: 160

    karnataka PoliceInvestigation

    Related Posts

     ಶಾಸಕ ಬಿಪಿ ಹರೀಶ್ ಗೆ ಮೊಟ್ಟೆ ಎಸೆತ : ಕಮಿಷನರ್ ಗೆ ಬಿಜೆಪಿ ನಾಯಕರಿಂದ ದೂರು ಸಲ್ಲಿಕೆ

    July 22, 2026

    ಫರಂಗಿಪೇಟೆ ಬ್ಯಾಂಕ್‌ ಕಳ್ಳತನ ಯತ್ನ ಪ್ರಕರಣ: ಆರೋಪಿಗಳ ಪತ್ತೆಗೆ ಪ್ರತ್ಯೇಕ ವಿಶೇಷ ತಂಡ

    July 22, 2026

    ಬೆಳ್ತಂಗಡಿ: ಖೋಟಾ ನೋಟು ದಂಧೆ ಪ್ರಕರಣ : ನಾಲ್ವರಿಗೆ ಮತ್ತೆ ಪೊಲೀಸ್ ಕಸ್ಟಡಿ : ಮೂವರಿಗೆ ನ್ಯಾಯಾಂಗ ಬಂಧನ

    July 22, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

     ಶಾಸಕ ಬಿಪಿ ಹರೀಶ್ ಗೆ ಮೊಟ್ಟೆ ಎಸೆತ : ಕಮಿಷನರ್ ಗೆ ಬಿಜೆಪಿ ನಾಯಕರಿಂದ ದೂರು ಸಲ್ಲಿಕೆ

    July 22, 2026

    ಫರಂಗಿಪೇಟೆ ಬ್ಯಾಂಕ್‌ ಕಳ್ಳತನ ಯತ್ನ ಪ್ರಕರಣ: ಆರೋಪಿಗಳ ಪತ್ತೆಗೆ ಪ್ರತ್ಯೇಕ ವಿಶೇಷ ತಂಡ

    July 22, 2026

    ಬೆಳ್ತಂಗಡಿ: ಖೋಟಾ ನೋಟು ದಂಧೆ ಪ್ರಕರಣ : ನಾಲ್ವರಿಗೆ ಮತ್ತೆ ಪೊಲೀಸ್ ಕಸ್ಟಡಿ : ಮೂವರಿಗೆ ನ್ಯಾಯಾಂಗ ಬಂಧನ

    July 22, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.