Facebook Twitter Instagram
    Thursday, July 23
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಕ್ರೈಂ ಸ್ಟೋರಿ»ಬೆಂಗಳೂರಿನ ಹೋಟೆಲ್‌ನಲ್ಲಿ ಖೋಟಾ ನೋಟು ಮುದ್ರಣ: ಆರೋಪಿ ಬಂಧನ
    ಕ್ರೈಂ ಸ್ಟೋರಿ

    ಬೆಂಗಳೂರಿನ ಹೋಟೆಲ್‌ನಲ್ಲಿ ಖೋಟಾ ನೋಟು ಮುದ್ರಣ: ಆರೋಪಿ ಬಂಧನ

    June 13, 2025
    Share

    ಬೆಂಗಳೂರು, ಜೂ. 13: ಹೋಟೆಲ್ ರೂಮ್‌ನಲ್ಲಿ ಖೋಟಾ ನೋಟುಗಳನ್ನು ಪ್ರಿಂಟ್ ಮಾಡಿದ್ದ ಆರೋಪಿಯನ್ನು ಕಮರ್ಷಿಯಲ್ ಸ್ಟ್ರೀಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕ್ರಿಷ್ ಮಾಲಿ (23) ಬಂಧಿತ ಆರೋಪಿ.ಟಸ್ಕರ್ ಟೌನ್‌ನಲ್ಲಿರುವ ಹೋಟೆಲ್‌ನಲ್ಲಿ ಜೂನ್ 1ರಂದು ರೂಮ್ ಬುಕ್ ಮಾಡಿದ್ದ ಆರೋಪಿ, ಖೋಟಾ ನೋಟುಗಳನ್ನು ಪ್ರಿಂಟ್ ಮಾಡಿದ್ದ.

    ಅಲ್ಲದೇ ಜೂನ್ 7ರಂದು ಹೋಟೆಲ್‌ನಿಂದ ಚೆಕ್ ಔಟ್ ಆಗುವಾಗ ನಕಲಿ ನೋಟುಗಳ ಮೂಲಕ ಬಿಲ್​ ಪಾವತಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.ಟೆಕ್ಸ್ ಟೈಲ್ಸ್ ಉದ್ಯಮಿಯೊಬ್ಬರ ಮಗನಾಗಿರುವ ಕ್ರಿಷ್ ಮಾಲಿ, ಮನೆಯಲ್ಲಿ ಕ್ಷುಲ್ಲಕ ವಿಚಾರಕ್ಕೆ ಜಗಳ ಮಾಡಿಕೊಂಡು ಆನ್‌ಲೈನ್‌ ಮೂಲಕ ಹೋಟೆಲ್‌ನಲ್ಲಿ ರೂಮ್ ಬುಕ್ ಮಾಡಿದ್ದ. ತನ್ನ ಬಳಿಯಿರುವ ಹಣ ಎಷ್ಟು ದಿನಗಳ ಕಾಲ ಸಾಲಬಹುದು ಎಂದು ಯೋಚಿಸಿದ್ದ ಆರೋಪಿ, ಅದಕ್ಕಾಗಿ ತಾನೇ ಖೋಟಾ ನೋಟುಗಳನ್ನು ಪ್ರಿಂಟ್ ಮಾಡಲು ಯೋಚಿಸಿದ್ದ.ಬ್ಯಾಗ್‌ನಲ್ಲಿ ಪ್ರಿಂಟರ್, ಸ್ಕ್ಯಾನರ್‌ಗಳನ್ನು ತಂದಿದ್ದ ಆರೋಪಿ ಹೋಟೆಲ್‌ನಲ್ಲಿ ಕುಳಿತೇ 500 ರೂ. ಮುಖಬೆಲೆಯ ನಕಲಿ ನೋಟುಗಳನ್ನು ಕಲರ್ ಜೆರಾಕ್ಸ್ ಮಾಡಿದ್ದ.

    ಬಳಿಕ ಜೂನ್ 7ರಂದು ಮಧ್ಯಾಹ್ನ ಹೋಟೆಲ್‌ನಿಂದ ಚೆಕ್ ಔಟ್ ಆಗುವಾಗ ನಕಲಿ ನೋಟುಗಳ ಮೂಲಕವೇ 3 ಸಾವಿರ ರೂ. ಬಿಲ್ ಪಾವತಿಸಿ ತೆರಳಿದ್ದ. ಅದೇ ದಿನ ಬೆಳಗ್ಗೆ ಹೋಟೆಲ್‌ನಿಂದ ಸಂಗ್ರಹಿಸಲಾದ ತ್ಯಾಜ್ಯದಲ್ಲಿ ಕೆಲ ನಕಲಿ ನೋಟುಗಳು ಪತ್ತೆಯಾಗಿರುವುದನ್ನು ಪೌರಕಾರ್ಮಿಕ ಸಿಬ್ಬಂದಿ ಹೋಟೆಲ್ ಮ್ಯಾನೇಜರ್ ಬಳಿ ಹೇಳಿದ್ದರು.ಆರೋಪಿಯ ಚೆಕ್ ಔಟ್ ಆದ ಕೆಲ ಸಮಯದ ಬಳಿಕ ಅನುಮಾನಗೊಂಡ ಹೋಟೆಲ್ ಸಿಬ್ಬಂದಿ ಆತ ನೀಡಿದ್ದ ನೋಟುಗಳನ್ನು ಪರಿಶೀಲಿಸಿದಾಗ ಅವು ನಕಲಿ ಎಂದು ತಿಳಿದು ಬಂದಿತ್ತು.

    ಬಳಿಕ ಆತ ತಂಗಿದ್ದ ರೂಮ್‌ನಲ್ಲಿ ಪರಿಶೀಲಿಸಿದಾಗ ಬಿಳಿ ಹಾಳೆಗಳ ಬಂಡಲ್, ನಕಲಿ ನೋಟ್​ನ ಚೂರುಗಳು ಪತ್ತೆಯಾಗಿದ್ದವು. ನಂತರ ಹೋಟೆಲ್ ಮ್ಯಾನೇಜರ್ ಮೊಹಮ್ಮದ್ ಷರೀಫ್ ಉದ್ದೀನ್ ಅವರು ಕಮರ್ಷಿಯಲ್ ಸ್ಟ್ರೀಟ್ ಠಾಣೆಗೆ ದೂರು ನೀಡಿದ್ದರು.ರೂಮ್ ಬಾಡಿಗೆಗೆ ಪಡೆದುಕೊಳ್ಳುವಾಗ ಆರೋಪಿ ನೀಡಿದ್ದ ಆಧಾರ್‌ನಲ್ಲಿದ್ದ ವಿಳಾಸ ಆಧರಿಸಿ ಆರೋಪಿಯನ್ನು ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ. ಈ ರೀತಿಯ ನಕಲಿ ನೋಟುಗಳನ್ನು ಆರೋಪಿ ಬೇರೆ ಎಲ್ಲಿಯಾದರೂ ನೀಡಿದ್ದನಾ ಎಂದು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    Post Views: 246

    CrimeNews karnataka PoliceInvestigation

    Related Posts

     ಶಾಸಕ ಬಿಪಿ ಹರೀಶ್ ಗೆ ಮೊಟ್ಟೆ ಎಸೆತ : ಕಮಿಷನರ್ ಗೆ ಬಿಜೆಪಿ ನಾಯಕರಿಂದ ದೂರು ಸಲ್ಲಿಕೆ

    July 22, 2026

    CCB ಪೊಲೀಸರಿಂದ ಆಪರೇಷನ್ ರೈಸ್ ಕಾರ್ಯಾಚರಣೆ: 15.29 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ!

    July 21, 2026

    ಬೆಳ್ತಂಗಡಿ:16 ವರ್ಷದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ- ಗರ್ಭಿಣಿಯಾದ ಪ್ರಕರಣದಲ್ಲಿ ಆರೋಪಿಯ ಬಂಧನ

    July 21, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

     ಶಾಸಕ ಬಿಪಿ ಹರೀಶ್ ಗೆ ಮೊಟ್ಟೆ ಎಸೆತ : ಕಮಿಷನರ್ ಗೆ ಬಿಜೆಪಿ ನಾಯಕರಿಂದ ದೂರು ಸಲ್ಲಿಕೆ

    July 22, 2026

    ಫರಂಗಿಪೇಟೆ ಬ್ಯಾಂಕ್‌ ಕಳ್ಳತನ ಯತ್ನ ಪ್ರಕರಣ: ಆರೋಪಿಗಳ ಪತ್ತೆಗೆ ಪ್ರತ್ಯೇಕ ವಿಶೇಷ ತಂಡ

    July 22, 2026

    ಬೆಳ್ತಂಗಡಿ: ಖೋಟಾ ನೋಟು ದಂಧೆ ಪ್ರಕರಣ : ನಾಲ್ವರಿಗೆ ಮತ್ತೆ ಪೊಲೀಸ್ ಕಸ್ಟಡಿ : ಮೂವರಿಗೆ ನ್ಯಾಯಾಂಗ ಬಂಧನ

    July 22, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.