Facebook Twitter Instagram
    Monday, May 4
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಕೌಟುಂಬಿಕ ಕಲಹ ದುರಂತಕ್ಕೆ: ನಾಲ್ವರು ಮಕ್ಕಳು ಸೇರಿ ಐವರ ಹತ್ಯೆ
    ಇತ್ತೀಚಿನ ಸುದ್ದಿ

    ಕೌಟುಂಬಿಕ ಕಲಹ ದುರಂತಕ್ಕೆ: ನಾಲ್ವರು ಮಕ್ಕಳು ಸೇರಿ ಐವರ ಹತ್ಯೆ

    May 4, 2026
    Share

    ಗುರುಗ್ರಾಮ್: ವಜೀರ್‌ಪುರ ಪ್ರದೇಶದಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ ನಾಲ್ವರು ಮಕ್ಕಳಿಗೆ ವಿಷ ನೀಡಿ ಹತ್ಯೆ ಮಾಡಿ, ತಾನು ಆತ್ಮಹತ್ಯೆಗೆ ಯತ್ನಿಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

    ಮೂಲತಃ ಮೊರಾದಾಬಾದ್ ನಿವಾಸಿಯಾದ ನಜೀಮ್ ಎಂಬಾತ ಗುರುಗ್ರಾಮ್‌ನಲ್ಲಿ ಸಲೂನ್ ನಡೆಸುತ್ತಾ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಸುಮಾರು ಏಳು ವರ್ಷಗಳ ಹಿಂದೆ ದೆಹಲಿ ಮೂಲದ ನಜ್ಮಾ ಅವರೊಂದಿಗೆ ಈತನ ಪ್ರೇಮ ವಿವಾಹವಾಗಿತ್ತು. ಶನಿವಾರ ರಾತ್ರಿ ನಜೀಮ್ ತನ್ನ ಪತ್ನಿ ನಜ್ಮಾ (35) ಹಾಗೂ ಮಕ್ಕಳಾದ ಇಕ್ರಾ (14), ಸಿಫಾ (12), ಖತಿನಾ (10), ಮತ್ತು ಅಯಾನ್ (8) ಅವರಿಗೆ ವಿಷಪ್ರಾಶನ ಮಾಡಿದ್ದಾನೆ. ಐವರೂ ಮೃತಪಟ್ಟ ನಂತರ ತಾನು ಕೂಡ ರಕ್ತನಾಳ ಕತ್ತರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

    ಪ್ರಸ್ತುತ ನಜೀಮ್ ಗಂಭೀರ ಸ್ಥಿತಿಯಲ್ಲಿ ಸಿವಿಲ್ ಆಸ್ಪತ್ರೆಯಲ್ಲಿ ಪೊಲೀಸ್ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಪೊಲೀಸರು ಸ್ಥಳದಿಂದ ಮುರಿದ ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ಕೌಟುಂಬಿಕ ವಿವಾದ ಅಥವಾ ಮಾನಸಿಕ ಒತ್ತಡ ಈ ಹತ್ಯಾಕಾಂಡಕ್ಕೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಸದಾ ಹರ್ಷಚಿತ್ತದಿಂದ ಇರುತ್ತಿದ್ದ ಈ ಕುಟುಂಬದಲ್ಲಿ ಇಂತಹದೊಂದು ಘಟನೆ ನಡೆದಿರುವುದು ನೆರೆಹೊರೆಯವರಲ್ಲಿ ತೀವ್ರ ಆಘಾತ ಮೂಡಿಸಿದೆ.

    Post Views: 11

    PoliceInvestigation

    Related Posts

    ತಾಯಿಯೇ ಮಗು ಮಾರಾಟ ಮಾಡಿದ ಆರೋಪ: ಬೆಂಗಳೂರಿನಲ್ಲಿ ಗಂಭೀರ ಪ್ರಕರಣ

    May 4, 2026

    ಸೋಶಿಯಲ್ ಮೀಡಿಯಾ ಹುಚ್ಚು: 60 ಅಡಿ ಟ್ಯಾಂಕ್ ಏರಿದ ಬಾಲಕ ಸಾವು, ಇಬ್ಬರ ರಕ್ಷಣೆ

    May 4, 2026

    ಟ್ಯಾಕ್ಸಿವೇಯಲ್ಲಿ ಚಲಿಸುತ್ತಿದ್ದ ವಿಮಾನದಿಂದ ಜಿಗಿದ ಪ್ರಯಾಣಿಕ

    May 3, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.