Facebook Twitter Instagram
    Sunday, July 26
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಗದ್ದೆಯಲ್ಲಿ ಸುಡುಮಣ್ಣಿಗೆ ಹಾಕಿದ್ದ ಬೆಂಕಿ ನಂದಿಸಲು ಹೋಗಿ ರೈತ ಸಜೀವ ದಹನ
    ಇತ್ತೀಚಿನ ಸುದ್ದಿ

    ಗದ್ದೆಯಲ್ಲಿ ಸುಡುಮಣ್ಣಿಗೆ ಹಾಕಿದ್ದ ಬೆಂಕಿ ನಂದಿಸಲು ಹೋಗಿ ರೈತ ಸಜೀವ ದಹನ

    April 6, 2025
    Share

    ಕುಂದಾಪುರ : ಕೃಷಿ ಗದ್ದೆಯಲ್ಲಿ ಸುಡುಮಣ್ಣು ಹಾಕಿದ್ದ ಬೆಂಕಿ ನಂದಿಸಲು ಹೋದ ಕೃಷಿಕರೊಬ್ಬರು ಸಜೀವ ದಹನವಾದ ಘಟನೆ ಕಾಳಾವರದ ಬಡಾಗುಡ್ಡೆ ಸಾಂತಾವರ ಎಂಬಲ್ಲಿ ಶನಿವಾರ ಮಧ್ಯಾಹ್ನದ ಹೊತ್ತಿಗೆ ನಡೆದಿದೆ.

    ಮೃತರನ್ನು ಕಾಳಾವರ ನಿವಾಸಿ ಮಹಾಲಿಂಗ ದೇವಾಡಿಗ (83)ಎಂದು ಗುರುತಿಸಲಾಗಿದೆ.

    ಇವರು ಮಳೆಗಾಲದ ಕೃಷಿಗಾಗಿ ತಮ್ಮ ಗದ್ದೆಯಲ್ಲಿ ಮಗಳೊಂದಿಗೆ ಸುಡುಮಣ್ಣು ತಯಾರಿಗಾಗಿ ಬೆಂಕಿ ಹಾಕಿದ್ದರು. ಈ ವೇಳೆ ಬೆಂಕಿಯ ಕೆನ್ನಾಲಗೆ ಸುತ್ತಲೂ ಪಸರಿಸಿದ್ದು ಸಮೀಪದ ನಾಗಬನಕ್ಕೂ ಬೆಂಕಿ ಹಬ್ಬಿದೆ. ಎಲ್ಲಾ ಕಡೆಗೂ ಹೊಗೆಯಿಂದ ಆವರಿಸಿದೆ ಕೂಡಲೇ ಎಚ್ಚೆತ್ತ ಮಗಳು ಬೇಬಿ ಅಲ್ಲಿಗೆ ತೆರಳಿ ಬೆಂಕಿ ನಂದಿಸಲು ಪ್ರಯತ್ನಿಸುತ್ತಿರುವಾಗಲೇ ತಂದೆ ಮಹಾಲಿಂಗ ದೇವಾಡಿಗ ಬೆಂಕಿಯ ಮಧ್ಯೆ ಸಿಲುಕಿದ್ದರು.

    ಕೂಡಲೇ ಅಗ್ನಿಶಾಮಕದಳದವರಿಗೆ ಮಾಹಿತಿ ನೀಡಲಾಯಿತು. ಆದರೆ ಅಗ್ನಿಶಾಮಕದಳದ ವಾಹನ ಬರುವಷ್ಟರಲ್ಲಿ ರೈತ ಮಹಾಲಿಂಗ ಅವರು ಸಜೀವ ದಹನವಾಗಿದ್ದಾರೆ.

    ಸ್ಥಳಕ್ಕೆ ಕುಂದಾಪುರ ಗ್ರಾಮಾಂತರ ಠಾಣೆಯ ಠಾಣಾಧಿಕಾರಿ ಭೀಮಾಶಂಕರ್ ಹಾಗೂ ಸಿಬ್ಬಂದಿಗಳು, ಅಗ್ನಿಶಾಮಕದಳದವರು ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Post Views: 220

    Related Posts

    ಪುತ್ತೂರು: ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣ- ಎರಡನೇ ಆರೋಪಿಗೆ ಷರತ್ತುಬದ್ಧ ಜಾಮೀನು

    July 26, 2026

    ಬಂಟ್ವಾಳ: ಶಾಲಾ ಬಸ್ ದುರಂತ ಪ್ರಕರಣ-ಶ್ರೀರಾಮ ವಿದ್ಯಾಕೇಂದ್ರ ವಿರುದ್ಧ FIR

    July 26, 2026

    ಸಂತ ಜೋಸೆಫರ ವಿಶ್ವವಿದ್ಯಾಲಯ: ‘ಓಪನ್ ಡೇ 2026’ (Open Day-2026), ಜುಲೈ 27, ಸೋಮವಾರ

    July 26, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಪುತ್ತೂರು: ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣ- ಎರಡನೇ ಆರೋಪಿಗೆ ಷರತ್ತುಬದ್ಧ ಜಾಮೀನು

    July 26, 2026

    ಬಂಟ್ವಾಳ: ಶಾಲಾ ಬಸ್ ದುರಂತ ಪ್ರಕರಣ-ಶ್ರೀರಾಮ ವಿದ್ಯಾಕೇಂದ್ರ ವಿರುದ್ಧ FIR

    July 26, 2026

    ಸಂತ ಜೋಸೆಫರ ವಿಶ್ವವಿದ್ಯಾಲಯ: ‘ಓಪನ್ ಡೇ 2026’ (Open Day-2026), ಜುಲೈ 27, ಸೋಮವಾರ

    July 26, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.