Facebook Twitter Instagram
    Monday, July 27
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ತಿಂಗಳ ಹಿಂದೆ ಸಮುದ್ರಕ್ಕೆ ಹಾರಿ ಪುತ್ರ ಆತ್ಮಹತ್ಯೆ: ಶೋಕದಲ್ಲಿದ್ದ ತಂದೆಯೂ ಆತ್ಮಹತ್ಯೆ
    ಇತ್ತೀಚಿನ ಸುದ್ದಿ

    ತಿಂಗಳ ಹಿಂದೆ ಸಮುದ್ರಕ್ಕೆ ಹಾರಿ ಪುತ್ರ ಆತ್ಮಹತ್ಯೆ: ಶೋಕದಲ್ಲಿದ್ದ ತಂದೆಯೂ ಆತ್ಮಹತ್ಯೆ

    August 16, 2023
    Share

    ಮಂಗಳೂರು: ಮಗ ಆತ್ಮಹತ್ಯೆ ಮಾಡಿಕೊಂಡ 32 ದಿನಗಳ ಬಳಿಕ ತಂದೆಯೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಳ್ಳಾಲದಲ್ಲಿ ನಡೆದಿದೆ. ಮೃತರನ್ನು ಆತ್ಮಹತ್ಯೆ ಮಾಡಿಕೊಂಡ ಕೇರಳ ಕುಂಬಳೆ ಬಳಿಯ ಬಂಬ್ರಾಣ ಕಲ್ಕುಲ ನಿವಾಸಿ ಕಲ್ಲಿನ ಮೇಸ್ತ್ರಿ ಕೆಲಸ ಮಾಡುತ್ತಿದ್ದ ಲೋಕೇಶ್ (52) ಎಂದು ಗುರುತಿಸಲಾಗಿದ್ದು ಅವರ ಮೃತದೇಹ ಸೋಮವಾರ ಬೆಳಿಗ್ಗೆ ಉಳ್ಳಾಲ ಕಡಲ ಕಿನಾರೆಯಲ್ಲಿ ಪತ್ತೆಯಾಗಿದೆ.

    ಪುತ್ರ ರಾಜೇಶ್ (26) ಕಳೆದ ಜುಲೈ 10 ರಂದು ನಾಪತ್ತೆಯಾಗಿದ್ದ, ಎರಡು ದಿನಗಳ ಬಳಿಕ ರಾಜೇಶ್ ನ ಮೃತದೇಹ ಮಂಗಳೂರು ಬೆಂಗರೆ ನೇತ್ರಾವತಿ ನದಿ ತೀರದಲ್ಲಿ ಪತ್ತೆಯಾಗಿತ್ತು. ಮಗನ ಅಂತ್ಯಕ್ರಿಯೆ ಕಳೆದ ಬಳಿಕ ತಂದೆ ಲೋಕೇಶ್ ನೊಂದುಕೊಂಡಿದ್ದು, ಅಲ್ಲದೆ ಮಗನ ಸಾವಿನ ಬಳಿಕ ಮಾನಸಿಕವಾಗಿ, ಕುಗ್ಗಿ ಹೋಗಿದ್ದರು. ಅಗಸ್ಟ್ 13 ರಂದು ಬೆಳಗ್ಗೆ 9.00 ಗಂಟೆಯ ವೇಳೆ ಪರಿಸರದ ಕೆಲವು ಮಂದಿಗೆ ಲೋಕೇಶ್ ರವರು ಮೊಬೈಲ್ ಮೂಲಕ ವಾಟ್ಸಪ್ ಸಂದೇಶ ಕಳುಹಿಸಿ “ನಾನು ಈಗ ಸೋಮೇಶ್ವರಕ್ಕೆ ಹೋಗಿ ಸಮುದ್ರಕ್ಕೆ ಹಾರುತ್ತೇನೆ.

    ನನ್ನ ಹೆಣ ಉಳ್ಳಾಲದಲ್ಲಿ ಸಿಗಬಹುದು” ನಾನು ಮೊಬೈಲ್ ಕೊಂಡು ಹೋಗುವುದಿಲ್ಲ ಮನೆಯಲ್ಲಿ ಇಟ್ಟು ಹೋಗ್ತೇನೆ ಎಂದು ಹೇಳಿ ಮನೆಯಿಂದ ತೆರಳಿದ್ದರು. ವಾಟ್ಸಪ್ ಸಂದೇಶ ಕೇಳಿದ ಕೂಡಲೇ ಪರಿಸರದವರು ಕರೆ ಮಾಡಿದಾಗ ಮನೆ ಮಂದಿ ಕಾಲ್ ರಿಸೀವ್ ಮಾಡಿದ್ದರು. ಕೂಡಲೇ ಈ ವಿಷಯವನ್ನು ಉಳ್ಳಾಲ ಠಾಣೆಗೆ ಮನೆಯವರು ಹಾಗೂ ಪರಿಸರ ನಿವಾಸಿಗಳು ತಿಳಿಸಿದ್ದರು. ಸೋಮವಾರ ಲೋಕೇಶ್ ರ ಮೃತದೇಹ ಉಳ್ಳಾಲದಲ್ಲಿ ಮೀನುಗಾರರಿಗೆ ಸಿಕ್ಕಿದೆ. ರಾಜೇಶ್ ರವರ ಸಾವಿನ ಬಳಿಕ ಕೇವಲ 33 ದಿನದಲ್ಲಿ ತಂದೆ ಲೋಕೇಶ್ ರ ಸಾವು ಇದೀಗ ಮನೆಯವರಿಗೆ ಹಾಗೂ ಪರಿಸರ ಪ್ರದೇಶದಲ್ಲಿ ಶೋಕಸಾಗರವನ್ನುಂಟುಮಾಡಿದೆ. ಪ್ರಕರಣ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

    Post Views: 232

    Related Posts

    ಫೇಸ್‌ಬುಕ್ ಲಿಂಕ್ ನಂಬಿದ ಹಿರಿಯ ನಾಗರಿಕ; ₹3.73 ಲಕ್ಷ ಸೈಬರ್ ವಂಚಕರ ಪಾಲು

    July 27, 2026

    ಪುತ್ತೂರು: ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣ- ಎರಡನೇ ಆರೋಪಿಗೆ ಷರತ್ತುಬದ್ಧ ಜಾಮೀನು

    July 26, 2026

    ಬಂಟ್ವಾಳ: ಶಾಲಾ ಬಸ್ ದುರಂತ ಪ್ರಕರಣ-ಶ್ರೀರಾಮ ವಿದ್ಯಾಕೇಂದ್ರ ವಿರುದ್ಧ FIR

    July 26, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಫೇಸ್‌ಬುಕ್ ಲಿಂಕ್ ನಂಬಿದ ಹಿರಿಯ ನಾಗರಿಕ; ₹3.73 ಲಕ್ಷ ಸೈಬರ್ ವಂಚಕರ ಪಾಲು

    July 27, 2026

    ಪುತ್ತೂರು: ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣ- ಎರಡನೇ ಆರೋಪಿಗೆ ಷರತ್ತುಬದ್ಧ ಜಾಮೀನು

    July 26, 2026

    ಬಂಟ್ವಾಳ: ಶಾಲಾ ಬಸ್ ದುರಂತ ಪ್ರಕರಣ-ಶ್ರೀರಾಮ ವಿದ್ಯಾಕೇಂದ್ರ ವಿರುದ್ಧ FIR

    July 26, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.