Facebook Twitter Instagram
    Wednesday, July 29
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಫೇಸ್ಬುಕ್ ನಲ್ಲಿ ಹುಡುಗಿ ಹೆಸರು ಬಳಸಿ ಚಾಟಿಂಗ್ : ಪ್ರೀತಿ ಮಾತಿಗೆ ಮರುಳಾಗಿ 6 ಲಕ್ಷ ಕಳೆದುಕೊಂಡ ಯುವಕ
    ಇತ್ತೀಚಿನ ಸುದ್ದಿ

    ಫೇಸ್ಬುಕ್ ನಲ್ಲಿ ಹುಡುಗಿ ಹೆಸರು ಬಳಸಿ ಚಾಟಿಂಗ್ : ಪ್ರೀತಿ ಮಾತಿಗೆ ಮರುಳಾಗಿ 6 ಲಕ್ಷ ಕಳೆದುಕೊಂಡ ಯುವಕ

    December 15, 2023
    Share

    ಫೇಸ್ ಬುಕ್ ನಲ್ಲಿ ಹುಡುಗಿಯ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ ಯುವಕನೋರ್ವನಿಗೆ ಸುಮಾರು 6.87 ಲಕ್ಷ ರೂಪಾಯಿಗಳನ್ನು ವಂಚಿಸಿದ ವ್ಯಕ್ತಿಯನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಂ, ಹಾಗೂ ಫೇಸ್ ಬುಕ್ ನಿಂದ ಅತೀ ಹೆಚ್ಚು ಜನ ಪರಿಚಯವಾಗುತ್ತಾರೆ.

    ಹೆಚ್ಚು ಆತ್ಮೀಯರಾದರೆ ಕೊನೆಗೆ ಮೂರುನಾಮ ಇಟ್ಟು ಹೋಗುತ್ತಾರೆ. ಹಾಗಾಗಿ ಸೋಷಿಯಲ್ ಮೀಡಿಯಾ ಬಳಸುವ ಮುನ್ನ ಎಚ್ಚರಿಕೆ ವಹಿಸಲೇಬೇಕು. ಯಾಕಂದರೆ ಶಿವಮೊಗ್ಗದಲ್ಲಿ ಸೋಷಿಯಲ್ ಮೀಡಿಯಾದಿಂದ ವಂಚನೆಗೊಳಗಾದ ವ್ಯಕ್ತಿ ಹಣ ಕಳೆದುಕೊಂಡ ಘಟನೆ ನಡೆದಿದೆ.

    ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪಟ್ಟಣದಲ್ಲಿರುವ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿರುವ ಆರೋಪಿ ಸುಜೇಂದ್ರ (21) ಎಂಬಾತ ಸಿರಾ ಪಟ್ಟಣದ ವಿದ್ಯಾನಗರದ ನಿವಾಸಿ ಭರತ್‌ಕುಮಾರ್ ಎಂಬಾತನ ಜತೆ ಫೇಸ್‌ಬುಕ್‌ನಲ್ಲಿ ಫ್ರೆಂಡ್ ಶಿಪ್ ಮಾಡಿಕೊಂಡಿದ್ದ. ಆರೋಪಿ ಸುಜೇಂದ್ರ ಫೇಸ್‌ಬುಕ್‌ನಲ್ಲಿ ಹುಡುಗಿಯ ಹೆಸರಲ್ಲಿ ನಕಲಿ ಖಾತೆ ರಚಿಸಿ ಅದರಲ್ಲಿ ಹುಡುಗಿಯ ಫೋಟೊ ಹಾಕಿ ಹುಡುಗಿಯಂತೆ ವರ್ತಿಸುತ್ತಿದ್ದ. ಆತ ಶರ್ಮಿಳ ಮತ್ತು ದಿವ್ಯ ಎಂಬ ಎರಡು ಹೆಸರಿನಲ್ಲಿ ಕಾತೆ ಕ್ರೀಯೆಟ್ ಮಾಡಿ ಮೆಸೇಜ್ ಮಾಡುತ್ತಿದ್ದನು. ಬಳಿಕ ವಾಟ್ಸಪ್ ನಲ್ಲಿ ಮೆಸೇಜ್ ಮಾಡಿದ್ದಾನೆ. ಇದಾದ ಬಳಿಕ ಕೆಲವು ದಿನಗಳ ನಂತರ ಆರೋಪಿ ನನಗೆ ಕಷ್ಟ ಇದೆ ಎಂದು ಹೇಳಿ ಆತನ ನಂಬಿಸಿ ಹಣವನ್ನು ಫೋನ್ ಪೇ, ಪೇಟಿಎಂ, ಗೂಗಲ್ ಪೇ ಹಾಗೂ ಬ್ಯಾಂಕ್ ಖಾತೆಗಳಿಗೆ ಹಾಕಿಸಿಕೊಂಡು ವಂಚಿಸಿದ್ದಾರೆ. ಸುಮಾರು 6.87 ಲಕ್ಷ ರೂ. ಗಳನ್ನು ವಂಚಿಸಿದ್ದಾನೆ. ಹಣ ಕಳೆದುಕೊಂಡ ಯುವಕ ವಿದ್ಯಾರ್ಥಿಯಾಗಿದ್ದು, ಆತನ ತಂದೆ ಆತನ ತಂದೆ ಶಾಂತಕುಮಾರ್ ಸಿಇಎನ್ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಡಿ. 12ರಂದು ಶಿವಮೊಗ್ಗ ನಗರ, ತೀರ್ಥಹಳ್ಳಿ ರಸ್ತೆ, ಶಿವಮೊಗ್ಗ ಟೌನ್ ನಿವಾಸಿ ಸುಜೇಂದ್ರ ಎಂ.ಬಿ ಎಂಬ ಆರೋಪಿಯನ್ನು ಬಂಧಿಸಿದ್ದಾರೆ. ಇತರೆ ಆರೋಪಿಗಳ ಬಂಧನಕ್ಕೆ ತನಿಖೆ ಮುಂದುವರಿದಿದೆ. ವಿಚಾರಣೆ ವೇಳೆ ಆರೋಪಿ ತಾನು ಆನ್‌ಲೈನ್ ಜೂಜಾಟದ ಚಟ ಹೊಂದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಸಂತ್ರಸ್ತನಿಂದ ಪಡೆದಿದ್ದ ಹಣವನ್ನು ಕಳೆದುಕೊಂಡಿರುವುದಾಗಿ ತಿಳಿಸಿದ್ದಾನೆ. ಸಿಇಎನ್ ಇನ್ಸ್‌ಪೆಕ್ಟರ್ ರಾಮಕೃಷ್ಣಯ್ಯ ನೇತೃತ್ವದ ತಂಡ ತನಿಖೆ ಕೈಗೊಂಡಿದೆಯಾಗಿದೆ.

    Post Views: 223

    Related Posts

    ಮಗನ ವಂಚನೆಗೆ ಪೋಷಕರ ಮೇಲೆ ಕೇಸ್ ಹಾಕುವುದು ತಪ್ಪು : ಕರ್ನಾಟಕ ಹೈಕೋರ್ಟ್ 

    July 28, 2026

    ಲಾವಣ್ಯ ಹತ್ಯೆ ಪ್ರಕರಣದ ಆರೋಪಿ ಆಸ್ಪತ್ರೆಯಿಂದ ಡಿಸ್ಚಾರ್ಜ್, ಪೊಲೀಸರ ವಶಕ್ಕೆ!!

    July 28, 2026

    ಮಂಗಳೂರು: ಹಂಪನಕಟ್ಟೆಯಲ್ಲಿ ಶೂ ಅಂಗಡಿ ಬೆಂಕಿಗಾಹುತಿ- ಅಪಾರ ನಷ್ಟ!!

    July 28, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಮಗನ ವಂಚನೆಗೆ ಪೋಷಕರ ಮೇಲೆ ಕೇಸ್ ಹಾಕುವುದು ತಪ್ಪು : ಕರ್ನಾಟಕ ಹೈಕೋರ್ಟ್ 

    July 28, 2026

    ಲಾವಣ್ಯ ಹತ್ಯೆ ಪ್ರಕರಣದ ಆರೋಪಿ ಆಸ್ಪತ್ರೆಯಿಂದ ಡಿಸ್ಚಾರ್ಜ್, ಪೊಲೀಸರ ವಶಕ್ಕೆ!!

    July 28, 2026

    ಮಂಗಳೂರು: ಹಂಪನಕಟ್ಟೆಯಲ್ಲಿ ಶೂ ಅಂಗಡಿ ಬೆಂಕಿಗಾಹುತಿ- ಅಪಾರ ನಷ್ಟ!!

    July 28, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.