Facebook Twitter Instagram
    Friday, April 24
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಒಂಟಿ ಮಹಿಳೆಯ ಕೈಕಾಲು ಕಟ್ಟಿಹಾಕಿ ಲಕ್ಷಾಂತರ ರೂಪಾಯಿ ಚಿನ್ನಾಭರಣ ದೋಚಿದ ದರೋಡೆಕೋರರು
    ಇತ್ತೀಚಿನ ಸುದ್ದಿ

    ಒಂಟಿ ಮಹಿಳೆಯ ಕೈಕಾಲು ಕಟ್ಟಿಹಾಕಿ ಲಕ್ಷಾಂತರ ರೂಪಾಯಿ ಚಿನ್ನಾಭರಣ ದೋಚಿದ ದರೋಡೆಕೋರರು

    November 13, 2022
    Share

    ವೇಣೂರು: ಒಂಟಿ ಮಹಿಳೆ ಇರುವ ಮನೆಗೆ ಬಂದ ನಾಲ್ವರು ಮುಸುಕುದಾರಿಗಳು ಮಹಿಳೆಯ ಕೈಕಾಲು ಕಟ್ಟಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ನ.12 ರಂದು ಸಂಜೆ ನಡೆದಿದೆ.

    ಬೆಳ್ತಂಗಡಿ ತಾಲೂಕಿನ ನಾರಾವಿ ಸಮೀಪದ ಅರಸಿಕಟ್ಟೆಯ ಪ್ರಭಾವತಿ ನಾಯ್ಕ ಎಂಬವರ ಮನೆಯಲ್ಲಿ ಈ ದರೋಡೆ ಪ್ರಕರಣ ನಡೆದಿದೆ.

    ಪ್ರಭಾವತಿ ನಾಯ್ಕರ ಮನೆಗೆ ಏಕಾಏಕಿ ಬಂದ ಮುಸುಕುದಾರಿಗಳು ಅವರ ಬಾಯಿಗೆ ಬಟ್ಟೆ ತುರುಕಿಸಿ, ಹಗ್ಗದಿಂದ ಕೈಕಾಲನ್ನು ಕಟ್ಟಿ ಹಾಕಿ, ಕುತ್ತಿಗೆಯಲ್ಲಿದ್ದ ಚಿನ್ನದ ಸರ, ಕಿವಿಯಲ್ಲಿದ್ದ ಬೆಂಡೋಲೆಯನ್ನು ಬಲಾತ್ಕಾರವಾಗಿ ತೆಗೆದು ಬಳಿಕ ಮನೆಯೊಳಗಿದ್ದ 3 ಚಿನ್ನದ ಬಳೆಗಳು, 3 ಚಿನ್ನದ ಉಂಗುರಗಳು, ಚಿನ್ನದ ಚೈನ್ ಹಾಗೂ ಒಂದು ಮೊಬೈಲ್‌ನ್ನು ದೋಚಿ ʼಎಂಕ್ಲು ಬತ್ತಿನಾ ಕೆಲಸ ಆಂಡ್ʼ ಎಂದು ತುಳುವಿನಲ್ಲಿ ಹೇಳುತ್ತಲೇ ದರೋಡೆಕೋರರು ಪರಾರಿಯಾಗಿದ್ದಾರೆ.

    ಆರೋಪಿತರು ದೋಚಿದ ಚಿನ್ನದ ಅಂದಾಜು ಮೌಲ್ಯ ಒಟ್ಟು ರೂ. 4,60,000 ಆಗಬಹುದೆಂದು ಅಂದಾಜಿಸಲಾಗಿದೆ. ವೇಣೂರು ಠಾಣೆಯ ಪೊಲೀಸ್ ಉಪನಿರೀಕ್ಷಕಿ ಸೌಮ್ಯ ಜೆ. ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

    Post Views: 200

    Related Posts

    DrDevansAcademy.org ನಿಂದ ವೈದ್ಯಕೀಯ ಶಿಕ್ಷಣಕ್ಕೆ ಕ್ರಾಂತಿಕಾರಿ ಕ್ಲೌಡ್ ಆಧಾರಿತ ಸಂವಾದಾತ್ಮಕ ಕಲಿಕಾ ವೇದಿಕೆ ಬಿಡುಗಡೆ

    April 23, 2026

    ವಿಡಿಯೋ ಬೆದರಿಕೆ: ₹1.5 ಕೋಟಿ ಸುಲಿಗೆ ಆರೋಪ, ಇನ್‌ಫ್ಲೂಯೆನ್ಸರ್ ಸಾಧನಾ ಶೆಟ್ಟಿ ವಿರುದ್ಧ ಪ್ರಕರಣ

    April 23, 2026

    ಚುನಾವಣಾ ಹಂತದಲ್ಲಿ ಉದ್ವಿಗ್ನತೆ: ಮತದಾನ ವೇಳೆ ಕಚ್ಚಾ ಬಾಂಬ್ ದಾಳಿ, ಹಲವರಿಗೆ ಗಾಯ

    April 23, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.