Facebook Twitter Instagram
    Friday, April 24
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಕಾಲ್‌ಸೆಂಟರ್‌ ಉದ್ಯೋಗಿಗಳನ್ನು ಅಪಹರಿಸಿ ಹಣ ಸುಲಿಗೆ : ಹೆಡ್‌ಕಾನ್‌ಸ್ಟೆಬಲ್‌ ಸಹಿತ 8 ಆರೋಪಿಗಳು ಸೆರೆ
    ಇತ್ತೀಚಿನ ಸುದ್ದಿ

    ಕಾಲ್‌ಸೆಂಟರ್‌ ಉದ್ಯೋಗಿಗಳನ್ನು ಅಪಹರಿಸಿ ಹಣ ಸುಲಿಗೆ : ಹೆಡ್‌ಕಾನ್‌ಸ್ಟೆಬಲ್‌ ಸಹಿತ 8 ಆರೋಪಿಗಳು ಸೆರೆ

    November 23, 2025
    Share

    ಬೆಂಗಳೂರು : ಪೊಲೀಸ್‌ ಕಾನ್‌ಸ್ಟೆಬಲ್‌ ಒಬ್ಬ ದರೋಡೆ ಕೃತ್ಯದಲ್ಲಿ ಶಾಮೀಲಾಗಿ ಇಡೀ ಪೊಲೀಸ್‌ ಇಲಾಖೆ ತಲೆತಗ್ಗಿಸುವಂತಾದ ಬೆನ್ನಿಗೆ ಇಂಥದ್ದೇ ಮತ್ತೊಂದು ಕೃತ್ಯ ಬೆಂಗಳೂರಿನಲ್ಲಿ ಸಂಭವಿಸಿದೆ. ಕಾಲ್‌ಸೆಂಟರ್ ಉದ್ಯೋಗಿಗಳನ್ನು ಕಿಡ್ನಾಪ್ ಮಾಡಿ ಹಣಕ್ಕೆ ಬೇಡಿಕೆ ಪ್ರಕರಣ ಸಂಬಂಧ ಘಟನೆ ನಡೆದು 12 ಗಂಟೆ ಒಳಗೆ ಪೊಲೀಸರು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಛಲಪತಿ, ಭರತ್, ಪವನ್, ಪ್ರಸನ್ನ, ಅತೀಕ್, ಜಬಿವುಲ್ಲ ಸೇರಿದಂತೆ 8 ಆರೋಪಿಗಳನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದು, ಆ ಪೈಕಿ ಛಲಪತಿ ಕೋಲಾರ ಜಿಲ್ಲೆಯ ಹೆಡ್‌ಕಾನ್‌ಸ್ಟೆಟೇಬಲ್ ಎಂದು ತಿಳಿದುಬಂದಿದೆ. ಕೋರಮಂಗಲದಲ್ಲಿರುವ ಗ್ಲೋಬಲ್ ಕನೆಕ್ಟ್​​ ಟೆಲಿಕಾಂ ಪ್ರೈ.ಲಿ. ಸಂಸ್ಥೆಯ ನಾಲ್ವರು ಕಾಲ್ ಸೆಂಟರ್ ಉದ್ಯೋಗಿಗಳನ್ನು ಆರೋಪಿಗಳು ಕಿಡ್ನಾಪ್​ ಮಾಡಿದ್ದರು.

    ಮಧ್ಯರಾತ್ರಿ ಕಾಲ್‌ಸೆಂಟರ್ ಬಳಿ ಹೋಗಿದ್ದ ಆರೋಪಿಗಳು, ನಾಲ್ವರು ಸಿಬ್ಬಂದಿಯನ್ನು ಕರೆದು ನಾವು ಪೊಲೀಸರು ಎಂದು ಬೆದರಿಸಿದ್ದರು. ಬಳಿಕ ಪವನ್, ರಾಜ್‌ವೀರ್, ಆಕಾಶ್, ಅನಸ್ ಎಂಬವರನ್ನು ಅಪಹರಣ ಮಾಡಿ 25 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹಾಗೆ ಆಪರೇಷನ್ ಮ್ಯಾನೇಜರ್ ಅಕೌಂಟ್​​ನಿಂದ 18 ಲಕ್ಷ ರೂ. ವರ್ಗಾವಣೆ ಕೂಡ ಮಾಡಿಕೊಂಡಿದ್ದರು ಎನ್ನಲಾಗಿದೆ.

    ವಿಷಯವನ್ನು ಬಿಪಿಒ ಸಿಬ್ಬಂದಿ ಮುಂಜಾನೆ 4 ಗಂಟೆಗೆ ಪೊಲೀಸರಿಗೆ ತಿಳಿಸಿದ್ದು, ತಕ್ಷಣವೇ ಆರೋಪಿಗಳ ಬೇಟೆಗೆ ಪೊಲೀಸರು ಮುಂದಾಗಿದ್ದಾರೆ. ಬೆಳಗ್ಗೆ 11 ಗಂಟೆಗೆ ಸುಮಾರಿಗೆ ಆರೋಪಿಗಳಿದ್ದ ಜಾಗ ಪತ್ತೆ ಮಾಡಿರುವ ಪೊಲೀಸರು ಹೊಸಕೋಟೆಯ ಲಾಡ್ಜ್‌ನಲ್ಲಿ ಆರೋಪಿಗಳು ಕೂಡಿ ಹಾಕಿದ್ದ ನಾಲ್ವರನ್ನು ರಕ್ಷಿಸಿದೆ. ಪ್ರಕರಣ ಸಂಬಂಧ 8 ಜನರ ಬಂಧನದ ಜೊತೆಗೆ 2 ಕಾರ್​​ ಸೀಜ್​ ಮಾಡಲಾಗಿದೆ. ಇತ್ತಿಚೆಗೆ ನಡೆದಿದ್ದ ಕಾಲ್ ಸೆಂಟರ್ ರೇಡ್ ಕೇಸ್ ಬಂಡವಾಳ ಮಾಡಿಕೊಂಡು ಕೃತ್ಯ ನಡೆಸಿರುವ ಶಂಕೆ ವ್ಯಕ್ತವಾಗಿದ್ದು, ಬಂಧಿತ ಎಲ್ಲ ಆರೋಪಿಗಳು 27-30 ವರ್ಷದ ಒಳಗಿನ ಯುವಕರು ಎಂಬುದು ಗೊತ್ತಾಗಿದೆ.

    Post Views: 120

    Related Posts

    DrDevansAcademy.org ನಿಂದ ವೈದ್ಯಕೀಯ ಶಿಕ್ಷಣಕ್ಕೆ ಕ್ರಾಂತಿಕಾರಿ ಕ್ಲೌಡ್ ಆಧಾರಿತ ಸಂವಾದಾತ್ಮಕ ಕಲಿಕಾ ವೇದಿಕೆ ಬಿಡುಗಡೆ

    April 23, 2026

    ವಿಡಿಯೋ ಬೆದರಿಕೆ: ₹1.5 ಕೋಟಿ ಸುಲಿಗೆ ಆರೋಪ, ಇನ್‌ಫ್ಲೂಯೆನ್ಸರ್ ಸಾಧನಾ ಶೆಟ್ಟಿ ವಿರುದ್ಧ ಪ್ರಕರಣ

    April 23, 2026

    ಚುನಾವಣಾ ಹಂತದಲ್ಲಿ ಉದ್ವಿಗ್ನತೆ: ಮತದಾನ ವೇಳೆ ಕಚ್ಚಾ ಬಾಂಬ್ ದಾಳಿ, ಹಲವರಿಗೆ ಗಾಯ

    April 23, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.