Facebook Twitter Instagram
    Saturday, April 25
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಕಾಪು: ಭಾರೀ ಗಾಳಿ ಮಳೆಗೆ ಚಲಿಸುತ್ತಿದ್ದ ರಿಕ್ಷಾ ಮೇಲೆ ಬಿದ್ದ ಮರ, ಇಬ್ಬರು ಪ್ರಯಾಣಿಕರು ಮೃತ್ಯು
    ಇತ್ತೀಚಿನ ಸುದ್ದಿ

    ಕಾಪು: ಭಾರೀ ಗಾಳಿ ಮಳೆಗೆ ಚಲಿಸುತ್ತಿದ್ದ ರಿಕ್ಷಾ ಮೇಲೆ ಬಿದ್ದ ಮರ, ಇಬ್ಬರು ಪ್ರಯಾಣಿಕರು ಮೃತ್ಯು

    May 12, 2023
    Share

    ಕಾಪು: ಭಾರೀ ಗಾಳಿ ಮಳೆಯಿಂದಾಗಿ ರಸ್ತೆ ಬದಿಯ ಮರವೊಂದು ಚಲಿಸುತ್ತಿದ್ದ ರಿಕ್ಷಾದ ಮೇಲೆ ಬಿದ್ದ ಪರಿಣಾಮ ಇಬ್ಬರು ಪ್ರಯಾಣಿಕರು ಮೃತಪಟ್ಟ ಘಟನೆ ಮಜೂರು ಮಸೀದಿ ಬಳಿ ಇಂದು ರಾತ್ರಿ ವೇಳೆ ನಡೆದಿದೆ.

    ಮೃತರನ್ನು ಶಿರ್ವ ಶಾಂತಿಗುಡ್ಡೆಯ ಪುಷ್ಪಾ(45) ಹಾಗೂ ಅವರ ಮೈದುನ ಎಂದು ಗುರುತಿಸಲಾಗಿದೆ. ಕಾಪು ಕಡೆಯಿಂದ ಶಿರ್ವ ಕಡೆಗೆ ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿದ್ದ ಶರೀಫ್ ಎಂಬವರ ರಿಕ್ಷಾ ಮತ್ತು ಶಿರ್ವ ಕಡೆಯಿಂದ ಕಾಪು ಕಡೆಗೆ ಬರುತ್ತಿದ್ದ ದಿನೇಶ್ ಎಂಬವರ ರಿಕ್ಷಾದ ಮೇಲೆ ಮರ ಬಿತ್ತೆನ್ನಲಾಗಿದೆ.

    ಇದರಿಂದ ಎರಡೂ ರಿಕ್ಷಾಗಳು ಸಂಪೂರ್ಣ ಜಖಂಗೊಂಡಿದ್ದು, ಈ ಎರಡು ರಿಕ್ಷಾಗಳ ಚಾಲಕರು ಅಪಾಯದಿಂದ ಪಾರಾದರು. ಶರೀಫ್‌ನ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ರಿಕ್ಷಾದೊಳಗೆ ಸಿಲುಕಿ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟರು.

    ಸುಮಾರು ಒಂದೂವರೆ ಗಂಟೆಗಳ ಕಾರ್ಯಾಚರಣೆ ಬಳಿಕ ರಿಕ್ಷಾದ ಮೇಲೆ ಬಿದ್ದ ಮರವನ್ನು ತೆರವುಗೊಳಿಸಿ ಮೃತದೇಹವನ್ನು ಹೊರಗೆ ತೆಗೆಯಲಾಯಿತು. ಸ್ಥಳದಲ್ಲಿ ಕಾಪು ಪೊಲೀಸರು ಹಾಜರಿದ್ದರು.

    Post Views: 276

    Related Posts

    ಭಾರತದ ನಕ್ಷೆಯಲ್ಲಿ ಮಹತ್ವದ ಬದಲಾವಣೆ: ರಾಜ್ಯ ರಾಜಧಾನಿಗೆ ಸಂಸತ್ತಿನ ಕಾನೂನು ಮಾನ್ಯತೆ

    April 24, 2026

    ಪಾತ್ರೆಯಲ್ಲಿ ಸಿಲುಕಿದ ಪುಟ್ಟ ಮಗು: ಪೊಲೀಸರ ಸಮಯೋಚಿತ ರಕ್ಷಣಾ ಕಾರ್ಯಕ್ಕೆ ಶ್ಲಾಘನೆ

    April 24, 2026

    ವಿದ್ಯುತ್ ಅವಘಡದಲ್ಲಿ ನವವಿವಾಹಿತ ಸೇರಿದಂತೆ ಇಬ್ಬರ ಸಾವು

    April 24, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.