Facebook Twitter Instagram
    Friday, September 25
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಫಾಜಿಲ್‌ ಹತ್ಯೆ: ಆರೋಪಿಗಳ ಪ್ಲಾನ್ ವಿವರಿಸಿದ ಕಮಿಷನರ್ ಶಶಿಕುಮಾರ್
    ಇತ್ತೀಚಿನ ಸುದ್ದಿ

    ಫಾಜಿಲ್‌ ಹತ್ಯೆ: ಆರೋಪಿಗಳ ಪ್ಲಾನ್ ವಿವರಿಸಿದ ಕಮಿಷನರ್ ಶಶಿಕುಮಾರ್

    August 2, 2022
    Share

    ಸುರತ್ಕಲ್‌; ಫಾಝಿಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಪ್ರಮುಖ ಆರೋಪಿಗಳನ್ನು ಬಂಧಿಸಿದ ಮಂಗಳೂರು ಪೊಲೀಸರು ಈ ಬಗ್ಗೆ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

    ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಮಿಷನರ್ ಶಶಿಕುಮಾರ್, ಪ್ರಕರಣಕ್ಕೆ ಸಂಬಂಧಿಸಿ ಆರು ಜನರ ಬಂಧನವಾಗಿದೆ ಎಂದು ಹೇಳಿದ್ದು, ಇದೊಂದು ಪೂರ್ವ ನಿಯೋಜಿತ‌ ಕೃತ್ಯ ಎಂದು ಹೇಳಿದ್ದಾರೆ.

    ಘಟನೆಗೆ ಸಂಬಂಧಿಸಿ ಶ್ರೀನಿವಾಸ್ ಕಾಟಿಪಳ್ಳ (23), ಅಭಿಷೇಕ್ (23) ದೀಕ್ಷಿತ್ ಕಾಟಿಪಳ್ಳ (21), ಸುಹಾಸ್ ( 29), ಮೋಹನ್ (23) ಮತ್ತು ಗಿರೀಶ್ (27) ಎಂಬುವವರನ್ನು ಬಂಧಿಸಲಾಗಿದೆ.

    ಬಂಧಿತರೆಲ್ಲರೂ ಅಪರಾಧ ಹಿನ್ನೆಲೆಯುಳ್ಳವರಾಗಿದ್ದಾರೆ ಎಂದು ತಿಳಿದುಬಂದಿದೆ. ಬಜಪೆಯ ಸುಹಾಸ್ ಶೆಟ್ಟಿ ಎಂಬಾತ ಅಭಿಷೇಕ್ ಮೂಲಕ ಹತ್ಯೆಗೆ ಮೊದಲು ಸ್ಕೆಚ್ ಹಾಕಿದ್ದಾರೆ. ಜುಲೈ 27ರಂದು ಸುರತ್ಕಲ್‌ನ ಒಂದು ಜಾಗದಲ್ಲಿ ಅಭಿಷೇಕ್, ಶ್ರೀನಿವಾಸ ಹಾಗೂ ಉಳಿದವರನ್ನ ಸೇರಿಸಿ ಹತ್ಯೆಗೆ ಸಂಚು ರೂಪಿಸಿದ್ದಾನೆ. ಮೋಹನ್ ಮತ್ತು ಗಿರಿಧರ್ ಮಧ್ಯಾಹ್ನದ ವೇಳೆಗೆ ಅಜಿತ್ ಕ್ರಾಸ್ತಾ ಅವರ ಕಾರನ್ನು 15 ಸಾವಿರ ರೂಪಾಯಿಗೆ ಡೀಲ್ ಮಾಡಿ ತರುತ್ತಾರೆ ಎಂದರು.ಜುಲೈ 27 ರಂದು ಮಧ್ಯಾಹ್ನ ಮೋಹನ್ ಮತ್ತು ಗಿರಿಧರ್ ಕಾರು ತೆಗೊಂಡು ಬಂದಿದ್ದಾರೆ. ಗಿರಿಧರ್ ಇಯಾನ್ ಕಾರನ್ನು ಡ್ರೈವ್ ಮಾಡಿಕೊಂಡು ಬಂದರೆ, ಸುಹಾಸ್, ಮೋಹನ್, ಅಭಿಷೇಕ್ ಟಾರ್ಗೆಟ್ ಪ್ಲಾನ್ ಮಾಡಿದ್ದಾರೆ. ಟಾರ್ಗೆಟ್ ಮಂಗಳೂರಿನ‌ ಕೋರ್ಟ್ ಬಳಿಯೇ ನಡೆಸಿದ್ದಾರೆ. ಯಾಕೆಂದರೆ ಆರೋಪಿಗಳಲ್ಲಿ ಕೆಲವರಿಗೆ ಆ ದಿನ ಕೋರ್ಟ್ ಇತ್ತು. ಅದಕ್ಕೆ‌ ಅಲ್ಲೇ ಸೇರಿ ತಂತ್ರ ಮಾಡಿದ್ದಾರೆ. ಯಾರನ್ನು ಹತ್ಯೆ ಮಾಡಬೇಕು ಎಂದು ತಂತ್ರ ಮಾಡುವಾಗ ಫಾಝಿಲ್ ನ‌ ಹೆಸರು ಬರುತ್ತದೆ. ಬಳಿಕ
    ಫಾಜಿಲ್ ಗೆ ಟಾರ್ಗೆಟ್ ಮಾಡಿದ ಆರೋಪಿಗಳು, ಆ ಬಳಿಕ ಮಂಕಿಕ್ಯಾಪ್ ರೆಡಿ ಮಾಡಿ ಸುರತ್ಕಲ್ ಹೊರವಲಯದಲ್ಲಿ ಬಳಿಕ ಊಟ ಮಾಡಿ ಹತ್ಯೆಗೆ ಸಿದ್ದತೆ ನಡೆಸಿದ್ದಾರೆ.

    ಫಾಜಿಲ್ ಹತ್ಯೆಗೂ ಮುನ್ನ ‌ಸುರತ್ಕಲ್‌ನಲ್ಲಿ ಹತ್ಯೆಯಾದ ಜಾಗದಲ್ಲಿ ಎಲ್ಲಾ ಆರೋಪಿಗಳು ಮೂರು‌ ಬಾರಿ ಓಡಾಟ ಮಾಡಿದ್ದಾರೆ. ಸಂಜೆ ಆರು ಜನರು ಕಾರಿನಲ್ಲಿ ಬಂದು ಫಾಜಿಲ್​ ಬರುವಿಕೆಗಾಗಿ ಕಾಯುತ್ತಿರುತ್ತಾರೆ. ಸರಿಯಾದ ಸ್ಥಳದಲ್ಲಿ ಫಾಜಿಲ್ ಕಣ್ಣಿಗೆ ಬೀಳುತ್ತಿದ್ದಂತೆ ಶ್ರೀನಿವಾಸ, ಮೋಹನ್ ಮತ್ತು ಸುಹಾಸ್ ಮಾರಕಾಸ್ತ್ರ ಹಿಡಿದು ಫಾಜಿಲ್ ಮೇಲೆ ದಾಳಿ ಮಾಡಿದ್ದಾರೆ.

    ಕೃತ್ಯದ ವೇಳೆ ಗಿರಿಧರ್ ಕಾರು ಚಾಲಕನಾಗಿದ್ದನು, ದೀಕ್ಷಿತ್ ಕಾರಿನಲ್ಲೇ ಕುಳಿತಿದ್ದನು, ಅಭಿಷೇಕ್ ಕಾರಿನಿಂದ ಪರಾರಿಯಾಗುವ ಸಂದರ್ಭದಲ್ಲಿ ಯಾರು ಕೂಡ ಅಡ್ಡಿ ಬರಬಾರದೆಂದು ಕಾರಿನ ಬಳಿ ನಿಲ್ಲುತ್ತಾನೆ ಎಂದು ಆಯುಕ್ತರು ವಿವರಿಸಿದರು.

    ಕೃತ್ಯ ನಡೆಸಿದ ಬಳಿಕ ಕಾರಿನಲ್ಲೇ ಪರಾರಿಯಾದ ಆರೋಪಿಗಳು ನಿರ್ಜನ ಪ್ರದೇಶದಲ್ಲಿ ಕಾರನ್ನು ನಿಲ್ಲಿಸಿ, ಸ್ನೇಹಿತನ ಮೂಲಕ ಬೇರೆ ಕಾರೊಂದನ್ನು ತರಿಸಿಕೊಂಡು ಪರಾರಿಯಾಗಿದ್ದಾರೆ. ಉಡುಪಿಯ ಉದ್ಯಾವರ ಬಳಿ ಆರು ಆರೋಪಿಗಳನ್ನ ಬಂಧಿಸಲಾಗಿದೆ. ಸದ್ಯ ಆರೂ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ಹತ್ಯೆಗೆ ಪ್ರೇಮ ಪ್ರಕರಣ ಮತ್ತು ಫಾಜಿಲ್ ಸಮುದಾಯದವರ ಒಳಗಡೆ ಇರುವ ಪಂಗಡಗಳ ನಡುವೆ ಆದಂತಹ ವ್ಯತ್ಯಾಸಗಳೇ ಕಾರಣ ಎಂಬ ಸುದ್ದಿಗಳು ಹಬ್ಬಿದ್ದವು, ಆದರೆ ಕೃತ್ಯಕ್ಕೆ ಇವ್ಯಾವುದೇ ಕಾರಣಗಳಲ್ಲ ಎಂದು ಆಯುಕ್ತರು ಸ್ಪಷ್ಟಪಡಿಸಿದ್ದಾರೆ.

    ಕೆಲವು ರೌಡಿಗಳು ಕೃತ್ಯವನ್ನು ನಾವೇ ಮಾಡಿದ್ದೇವೆ, ನಮ್ಮ ಹುಡುಗರೇ ಮಾಡಿದ್ದಾರೆ ಎಂದು ಹೇಳಿಕೊಂಡು ತಿರುಗಾಡಿದ್ದಾರೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ವಿಚಾರಣೆ ನಡೆಸಲಾಗುವುದು ಎಂದು ಶಶಿಕುಮಾರ್ ತಿಳಿಸಿದ್ದಾರೆ.

    Post Views: 192

    Related Posts

    ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆಗೆ ಹೊಸ ತಿರುವು; ಶಶಿಕುಮಾರ್ ನೇತೃತ್ವದಲ್ಲಿ SIT ರಚನೆ

    September 25, 2026

    ನಿಯಂತ್ರಣ ತಪ್ಪಿ ಆಟೋಗೆ ಆಂಬ್ಯುಲೆನ್ಸ್ ಡಿಕ್ಕಿ- ಚಾಲಕ ಗಂಭೀರ

    September 24, 2026

    ಮಂಗಳೂರು: ಮಾದಕ ದ್ರವ್ಯ ಮಾರಾಟ ಜಾಲ ಪತ್ತೆ – ಓರ್ವ ಆರೋಪಿಯ ಬಂಧನ

    September 24, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆಗೆ ಹೊಸ ತಿರುವು; ಶಶಿಕುಮಾರ್ ನೇತೃತ್ವದಲ್ಲಿ SIT ರಚನೆ

    September 25, 2026

    ನಿಯಂತ್ರಣ ತಪ್ಪಿ ಆಟೋಗೆ ಆಂಬ್ಯುಲೆನ್ಸ್ ಡಿಕ್ಕಿ- ಚಾಲಕ ಗಂಭೀರ

    September 24, 2026

    ಮಂಗಳೂರು: ಮಾದಕ ದ್ರವ್ಯ ಮಾರಾಟ ಜಾಲ ಪತ್ತೆ – ಓರ್ವ ಆರೋಪಿಯ ಬಂಧನ

    September 24, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.