Facebook Twitter Instagram
    Friday, July 24
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಪೊಲೀಸರು ಮಧ್ಯರಾತ್ರಿ ಮನೆಗೆ ನುಗ್ಗುಲು ನಾನೇನೂ ಟೆರರಿಸ್ಟ್ ಅಲ್ಲ-ಪ್ರತಿಭಾ ಕುಳಾಯಿ
    ಇತ್ತೀಚಿನ ಸುದ್ದಿ

    ಪೊಲೀಸರು ಮಧ್ಯರಾತ್ರಿ ಮನೆಗೆ ನುಗ್ಗುಲು ನಾನೇನೂ ಟೆರರಿಸ್ಟ್ ಅಲ್ಲ-ಪ್ರತಿಭಾ ಕುಳಾಯಿ

    October 16, 2022
    Share

    ಸುರತ್ಕಲ್: ಅಕ್ಟೊಬರ್ 18ರಂದು ಸುರತ್ಕಲ್ ಟೋಲ್ ಗೇಟ್ ಒಡೆದೇ ಸಿದ್ಧ ಎಂದಿರುವ ಟೋಲ್ ವಿರೋಧಿ ಹೋರಾಟ ಸಮಿತಿಯನ್ನು ಹತ್ತಿಕ್ಕಲು ಶತಾಯಗತಾಯ ಮುಂದಾಗಿರುವ ಜಿಲ್ಲಾಡಳಿತ ನಿನ್ನೆ ಮಧ್ಯರಾತ್ರಿ ನೂರಕ್ಕೂ ಅಧಿಕ ಹೋರಾಟಗಾರರ ಮನೆಗಳ ಮೇಲೆ ಮಧ್ಯರಾತ್ರಿ ಭೇಟಿ ಕೊಟ್ಟು ನೋಟಿಸ್ ನೀಡಿದೆ.

    ಗಲಾಟೆ ಮಾಡುವುದಿಲ್ಲ ಎಂದು 2 ಲಕ್ಷದ ಬಾಂಡ್ ಗೆ ಸಹಿ ನೀಡಬೇಕು ಎಂದು ಪೊಲೀಸರು ಒತ್ತಡ ಹೇರಿದ್ದಾರೆ ಎನ್ನಲಾಗಿದ್ದು ಸಮಿತಿ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ಅವರು, “ಬಿಜೆಪಿ ಎಂಎಲ್ಎ, ಎಂಪಿ ಅವರು ಸುರತ್ಕಲ್ ಟೋಲ್ ಗೇಟ್ ವಿಚಾರದಲ್ಲಿ ಮಾನಸಿಕ ಸ್ವಾಸ್ಥ್ಯ ಕಳೆದುಕೊಂಡಂತಿದೆ. ಅ.18ರ ಟೋಲ್ ಗೇಟ್ ಹೋರಾಟವನ್ನು ಹತ್ತಿಕ್ಕಲು ನನ್ನ ಮನೆಗೆ ಮಧ್ಯರಾತ್ರಿ ಪೊಲೀಸರನ್ನು ಕಳುಹಿಸಿ ನೋಟಿಸ್ ನೀಡಿರುವ ಜಿಲ್ಲಾಡಳಿತಕ್ಕೆ ನಾಚಿಕೆಯಾಗಬೇಕು.

    ನಾನೊಬ್ಬ ಸಾಮಾಜಿಕ ಕಾರ್ಯಕರ್ತೆಯೇ ಹೊರತು ಉಗ್ರಗಾಮಿ ಅಲ್ಲ. ನಾನೊಬ್ಬ ಭಾರತ ದೇಶದ ಜವಾಬ್ದಾರಿಯುತ ಪ್ರಜೆಯಾಗಿ ಈ ದೇಶದ ಕಾನೂನನ್ನು ಗೌರವಿಸುತ್ತೇನೆ. ನಿನ್ನೆ ಮಧ್ಯರಾತ್ರಿ ಸುರತ್ಕಲ್ ಠಾಣೆಯ 5 ಮಂದಿ ಪೊಲೀಸರು 11:45ಕ್ಕೆ ಕುಳಾಯಿಯಲ್ಲಿರುವ ನನ್ನ ಮನೆಗೆ ಬಂದಿರುವುದು ಸಿಸಿ ಕೆಮರಾದಲ್ಲಿ ದಾಖಲಾಗಿದೆ. ಈ ಸಂದರ್ಭದಲ್ಲಿ ನನ್ನ ಮನೆಯಲ್ಲಿ 74 ವರ್ಷ ಪ್ರಾಯದ ನನ್ನ ಅತ್ತೆ ಇದ್ದು ಪೊಲೀಸರ ನಡವಳಿಕೆಯಿಂದ ಭಯಭೀತರಾಗಿದ್ದರು. ನಾನು ಮನೆಯಲ್ಲಿ ಇರದ ಕಾರಣ ನೋಟಿಸ್ ಪಡೆದುಕೊಂಡಿಲ್ಲ. ನನ್ನ ಪ್ರಶ್ನೆ ಏನೆಂದರೆ ಮಂಗಳೂರು ನಿಜಕ್ಕೂ ಸುರಕ್ಷಿತವೇ? ಮಂಗಳೂರಿನಲ್ಲಿ ಮಹಿಳೆಯರು ಸುರಕ್ಷಿತರೇ? ಮಹಿಳೆಯರು ಇರುವ ಮನೆಗೆ ಯಾರು ಬೇಕಾದರೂ ಮಧ್ಯರಾತ್ರಿ ಬಂದು ಬಾಗಿಲು ತಟ್ಟಬಹುದೇ? ಇದೆಂತಾ ಪ್ರಜಾಪ್ರಭುತ್ವ?” ಎಂದಿದ್ದಾರೆ.

    Post Views: 197

    Related Posts

    ಪುತ್ತೂರು: ರಸ್ತೆಯಂಚಿಗೆ ಇಳಿದು ಟಾಟಾ ಏಸ್ ಪಲ್ಟಿ-ಅಪಾಯದಿಂದ ಪಾರಾದ ಬಾಲಕ

    July 24, 2026

    ಬೆಳ್ತಂಗಡಿ: ಮಹಿಳೆಗೆ ಬೆದರಿಕೆ, ನಗದು ಕಳವು ಆರೋಪ- ಇಬ್ಬರ ವಿರುದ್ಧ FIR

    July 24, 2026

    AI ಬಳಸಿ 121 ನಕಲಿ ಬ್ಯಾಂಕಿಂಗ್ ಆ್ಯಪ್ ತಯಾರಿ : 17 ವರ್ಷದ ಬಾಲಕನಿಂದ ₹64.38 ಕೋಟಿ ವಂಚನೆ!!

    July 23, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಪುತ್ತೂರು: ರಸ್ತೆಯಂಚಿಗೆ ಇಳಿದು ಟಾಟಾ ಏಸ್ ಪಲ್ಟಿ-ಅಪಾಯದಿಂದ ಪಾರಾದ ಬಾಲಕ

    July 24, 2026

    ಬೆಳ್ತಂಗಡಿ: ಮಹಿಳೆಗೆ ಬೆದರಿಕೆ, ನಗದು ಕಳವು ಆರೋಪ- ಇಬ್ಬರ ವಿರುದ್ಧ FIR

    July 24, 2026

    AI ಬಳಸಿ 121 ನಕಲಿ ಬ್ಯಾಂಕಿಂಗ್ ಆ್ಯಪ್ ತಯಾರಿ : 17 ವರ್ಷದ ಬಾಲಕನಿಂದ ₹64.38 ಕೋಟಿ ವಂಚನೆ!!

    July 23, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.