Facebook Twitter Instagram
    Monday, June 8
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ರಾಜ್ಯ ಸುದ್ದಿ»ಡ್ರೋನ್, ಕ್ಷಿಪಣಿ ಎಫ್‌-16 ಯುದ್ಧ ವಿಮಾನ ಧ್ವಂಸಗೊಳಿಸಿದ ಭಾರತೀಯ ಸೇನಾಪಡೆ
    ರಾಜ್ಯ ಸುದ್ದಿ

    ಡ್ರೋನ್, ಕ್ಷಿಪಣಿ ಎಫ್‌-16 ಯುದ್ಧ ವಿಮಾನ ಧ್ವಂಸಗೊಳಿಸಿದ ಭಾರತೀಯ ಸೇನಾಪಡೆ

    May 9, 2025
    Share

    ನವದೆಹಲಿ: ಪ್ರತೀಕಾರವಾಗಿ ಪಾಕಿಸ್ತಾನ , ಭಾರತೀಯ ಸೇನಾ ನೆಲೆಯನ್ನೇ ಟಾರ್ಗೆಟ್ ಮಾಡಿ ದಾಳಿ ಮಾಡಲು ಮುಂದಾಗಿದೆ. ಆದರೆ ಭಾರತ, ಪಾಕ್ ಡ್ರೋನ್‌ಗಳನ್ನು ಹೊಡೆದುರುಳಿಸಿದೆ. ಜಮ್ಮು ವಾಯುನೆಲೆ, ಜೈಸಲ್ಮೇರ್‌, ಪಠಾಣ್‌ಕೋಟ್‌, ಅಖ್ನೂರ್‌, ರಾಜೌರಿ,ಪೂಂಚ್‌, ತಂಗಹಾರ್‌, ಸೇರಿದಂತೆ ಗಡಿ ಸಮೀಪದ ಹಲವಾರು ಪ್ರದೇಶಗಳ ಮೇಲೆ ಪಾಕಿಸ್ತಾನ ಡ್ರೋನ್‌ ದಾಳಿಗೆ ಯತ್ನಿಸಿದೆ.  ಆದ್ರೆ, ಇದನ್ನು ಭಾರತೀಯ ಸೇನೆ ವಿಫಲಗೊಳಿಸಿದೆ. ಅಲ್ಲದೇ ಪಾಕಿಸ್ತಾನದ​ ಫೈಟರ್​ ಜೆಟ್​ ಎಫ್‌-16 ಅನ್ನು ಭಾರತೀಯ ಸೇನಾಪಡೆ ಧ್ವಂಸಗೊಳಿಸಿದೆ. ಎನ್ನುವ ಮಾಹಿತಿ ಲಭ್ಯವಾಗಿದೆ.

    ಪ್ರಮುಖವಾಗಿ ಚನಿ ಹಿಮತ್‌, ಆರ್‌ಎಸ್‌ ಪುರ, ಜಮ್ಮುವಿನ 3 ಕಡೆಯಲ್ಲಿ ಪಾಕಿಸ್ತಾನ ಡ್ರೋನ್‌ ದಾಳಿಗೆ ಯತ್ನ ಮಾಡಿದೆ. ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕ್‌ನಿಂದ ಗುಂಡಿನ ದಾಳಿ ಕೂಡ ಮುಂದುವರಿದಿದೆ. ಈ ಬಿಗುವಿನ ವಾತಾವರಣದಲ್ಲಿ ಜಮ್ಮುವಿನಾದ್ಯಂತ ವಾಯು ದಾಳಿ ಸೈರನ್‌ ಮೊಳಗಿದೆ. ಜಮ್ಮು ವಿಮಾನ ನಿಲ್ದಾಣದ ಮೇಲೆ ದಾಳಿ ಮಾಡಲು ಪಾಕಿಸ್ತಾನ ವಿಫಲ ಪ್ರಯತ್ನ ನಡೆಸಿದ್ದು,, ಎಸ್ -400 ಹಲವಾರು ಪಾಕ್ ಡ್ರೋನ್‌ಗಳನ್ನು ಹೊಡೆದುರುಳಿಸಿದೆ. ಪಾಕಿಸ್ತಾನದಿಂದ ಕಳುಹಿಸಲಾದ ಕ್ಷಿಪಣಿ, ಡ್ರೋನ್‌ಗಳನ್ನು ಭಾರತೀಯ ಸೇನೆ ಧ್ವಂಸಗೊಳಿಸಿದೆ.  ಇನ್ನು ಪಾಕಿಸ್ತಾನದ 1 ಎಫ್‌-16, 2 ಜೆಎಫ್‌-17 ಫೈಟರ್ ಜೆಟ್‌ಗಳನ್ನು ಉಡೀಸ್ ಮಾಡಿದೆ. ಈ ಘಟನೆಯಿಂದ ಜಮ್ಮುವಿನಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗಿದೆ.

    ಸಾಂಬಾ ರಾಷ್ಟ್ರೀಯ ಹೆದ್ದಾರಿ ಗುರಿಯಾಗಿಸಿ ಪಾಕ್​​ ಕ್ಷಿಪಣಿ, ಡ್ರೋನ್​ ದಾಳಿಗೆ ಯತ್ನಿಸುತ್ತಿದ್ದು, ಅದನ್ನು ಭಾರತೀಯ ಸೇನೆ ವಿಫಲಗೊಳಿಸಿದೆ. ಇನ್ನು ಶ್ರೀನಗರದ ಏರ್‌ಪೋರ್ಟ್‌ನಲ್ಲಿ ಹೈ ಅಲರ್ಟ್‌ ಘೋಷಣೆ ಮಾಡಲಾಗಿದ್ದು, ಶ್ರೀನಗರದ ಏರ್‌ಪೋರ್ಟ್‌ನಲ್ಲಿ ಏರ್‌ ಡಿಫೆನ್ಸ್‌ ಸಿಸ್ಟಮ್‌ ಆ್ಯಕ್ಟೀವ್​ ಆಗಿದೆ.

    ಇನ್ನು ಪಂಜಾಬ್‌ನ ಹೋಸಿಯಾರ್‌ಪುರದ ಮೇಲೂ ಪಾಕಿಸ್ತಾನದಿಂದ ಡ್ರೋನ್‌ ದಾಳಿಗೆ ಯತ್ನಿಸಿದೆ. ಆದ್ರೆ, ಇದನ್ನು ಭಾರತ ಸೇನೆ ವಿಫಲಗೊಳಿಸಿದೆ. ಇನ್ನು ಪಾಕಿಸ್ತಾನದ ಎರಡು ಜೆಎಪ್‌-17 ಯುದ್ಧ ವಿಮಾನಗಳನ್ನ ಸಹ ಹೊಡೆದುರುಳಿಸುವಲ್ಲಿ ಭಾರತ ಯಶಸ್ವಿಯಾಗಿದೆ ಎಂದು ತಿಳಿದುಬಂದಿದೆ.

    Post Views: 170

    Related Posts

    ಹುಲಿಕಲ್ ಘಾಟ್‌ನಲ್ಲಿ ಖಾಸಗಿ ಬಸ್‌ಗೆ ಬೆಂಕಿ; 17 ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪಾರು

    June 7, 2026

    ಆನ್‌ಲೈನ್ ಗೇಮ್ ವ್ಯಸನದ ಭೀಕರ ಅಂತ್ಯ: ತಂದೆ-ಅಕ್ಕನನ್ನೇ ಚಾಕುವಿನಿಂದ ಕೊಂದ ಪುತ್ರ

    June 7, 2026

    ಸಾಕು ಪ್ರಾಣಿಯೇ ಜೀವದಾತ! ಬೆಕ್ಕಿನ ಕಾರಣದಿಂದ ಭೀಕರ ದುರಂತದಿಂದ ಪಾರಾದ ಕುಟುಂಬ

    June 7, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.