ಕಾರ್ಕಳ : ಲಾಭಾಂಶದ ಆಸೆಗೆ ಆನ್‌ಲೈನ್‌ನಲ್ಲಿ ಹೂಡಿಕೆ ಮಾಡಿ ವ್ಯಕ್ತಿಯೋರ್ವರು 32 ಲಕ್ಷ ರೂ. ಕಳೆದುಕೊಂಡ ಘಟನೆ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜು. 17ರಂದು ಲಕ್ಷ್ಮಣ್ ಎಂಬವರಿಗೆ ಫೇಸ್ ಬುಕ್‌ನಲ್ಲಿ ಒಂದು ವೀಡಿಯೋ ಬಂದಿದ್ದು ಅದರಲ್ಲಿ JB (Julius Baer VIP Group) ಮತ್ತು 5paisa ಆ್ಯಪ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಡಬಲ್ ಲಾಭಾಂಶ ಕೊಡುವುದಾಗಿ ಇತ್ತು. ಅದರಲ್ಲಿದ್ದ ಲಿಂಕನ್ನು ಲಕ್ಷ್ಮಣ್ ಅವರು ಕ್ಲಿಕ್ ಮಾಡಿದಾಗ JB (Julius Baer VIP Group) ಮತ್ತು 5paisa ಎಂಬ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಿರುತ್ತಾರೆ.
ವ್ಯಾಟ್ಸಪ್ ಗ್ರೂಪ್‌ನಲ್ಲಿ ಅಪರಿಚಿತರು ಹೆಚ್ಚಿನ ಲಾಭಾಂಶ ಮಾಡುವ ಷೇರು ಮತ್ತು IPOಗಳಲ್ಲಿ ಹೂಡಿಕೆ ಮಾಡಬೇಕಾಗಿ ತಿಳಿಸಿದಂತೆ ಲಕ್ಷ್ಮಣ್ ಅವರು ಜು. 17ರಿಂದ ಆ. 4ರವರೆಗೆ ಹಂತ ಹಂತವಾಗಿ ಒಟ್ಟು 32,68,000 ರೂ. ಹಣವನ್ನು ವರ್ಗಾಯಿಸಿದ್ದಾರೆ. ಆದರೆ ಅಪರಿಚಿತ ವ್ಯಕ್ತಿಯು ಈ ತನಕ ಹೂಡಿಕೆ ಮಾಡಿದ ಹಣವನ್ನಾಗಲಿ ಅಥವಾ ಲಾಭಾಂಶವನ್ನು ನೀಡದೇ ಮೋಸ ಮಾಡಿದ್ದಾರೆ.




