Facebook Twitter Instagram
    Wednesday, October 21
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ರಾಷ್ಟ್ರೀಯ ಸುದ್ದಿ»ಜನಸಂಖ್ಯೆ ಹೆಚ್ಚಿಸೋಕೆ ಬಾಲಕರ ಮೇಲೆ ಐಸಿಸ್‌ ಮಹಿಳೆಯರಿಂದ ಲೈಂಗಿಕ ದೌರ್ಜನ್ಯ: ರಕ್ಷಣಾ ಶಿಬಿರದಲ್ಲಿ ಬಯಲಾದ ಕರಾಳತೆ
    ರಾಷ್ಟ್ರೀಯ ಸುದ್ದಿ

    ಜನಸಂಖ್ಯೆ ಹೆಚ್ಚಿಸೋಕೆ ಬಾಲಕರ ಮೇಲೆ ಐಸಿಸ್‌ ಮಹಿಳೆಯರಿಂದ ಲೈಂಗಿಕ ದೌರ್ಜನ್ಯ: ರಕ್ಷಣಾ ಶಿಬಿರದಲ್ಲಿ ಬಯಲಾದ ಕರಾಳತೆ

    March 1, 2023
    Share

    ಐಸಿಸ್‌ ಉಗ್ರರ ಸೋಲಿನ ನಂತರ ಸಿರಿಯಾದ ರಕ್ಷಣಾ ಶಿಬಿರಗಳಲ್ಲಿರುವ ಕೆಲ ಐಸಿಸ್‌ ಮಹಿಳೆಯರು ತಮ್ಮ ಇಸ್ಲಾಮಿಕ್‌ ಜನಸಂಖ್ಯೆಯನ್ನು ಹೆಚ್ಚಿಸುವ ದುರುದ್ದೇಶದಿಂದ ಅಲ್ಲಿನ ಹದಿಹರೆಯದ ಬಾಲಕರ ಮೇಲೆಯೇ ಲೈಂಗಿಕ ದೌರ್ಜನ್ಯ ನಡೆಸುತ್ತಿರುವ ಘಟನೆಗಳು ಈಗ ಬೆಳಕಿಗೆ ಬಂದಿವೆ.

    13 ವರ್ಷದ ಪುಟ್ಟ ಬಾಲಕರ ಬಳಿ ಲೈಂಗಿಕ ಸಂಬಂಧ ಬೆಳೆಸಿ ತಮ್ಮನ್ನು ಗರ್ಭವತಿಯನ್ನಾಗಿಸುವಂತೆ ಕೆಲವು ಕಟ್ಟರ್‌ ಐಸಿಸ್‌ ಮಹಿಳೆಯರು ರಕ್ಷಣಾ ಶಿಬಿರದಲ್ಲಿ ಒತ್ತಾಯಿಸುತ್ತಿದ್ದಾರೆ. ಈಶಾನ್ಯ ಸಿರಿಯಾದ ರಕ್ಷಣಾ ಶಿಬಿರ ಅಲ್-ಹೌಲ್‌ನಲ್ಲಿ ಅಹ್ಮತ್ ಮತ್ತು ಹಮೀದ್ ಎಂಬ ಇಬ್ಬರು ಬಾಲಕರು ಅಲ್ಲಿನ ಭದ್ರತಾ ಸಿಬ್ಬಂದಿಯ ಬಳಿ ತಮ್ಮನ್ನು ಮಹಿಳೆಯರು ಪೀಡಿಸುತ್ತಿದ್ದಾರೆ. ದಯವಿಟ್ಟು ನಮ್ಮನ್ನು ಬಿಡಿಸಿ ಎಂದು ವಿನಂತಿಸಿಕೊಂಡಿದ್ದಾರೆ ಈ ಘಟನೆಯ ನಂತರ ತನಿಖೆ ನಡೆಸಿದಾಗ ಈ ಕರಾಳತೆ ಬಯಲಾಗಿದೆ.

    2019ರಲ್ಲಿ ಐಸಿಸ್‌ ಉಗ್ರರ ಸೋಲಿನ ನಂತರ ಸುಮಾರು 8 ಸಾವಿರದಷ್ಟು ಐಸಿಸ್ ಮಹಿಳೆಯರು ಮತ್ತು ಮಕ್ಕಳನ್ನು ಸಿರಿಯನ್‌ ಸರ್ಕಾರವು ಬಂಧಿಸಿದೆ. ಇವರ ಪೈಕಿ ವಯಸ್ಕ ಪುರುಷರನ್ನು ಪ್ರತ್ಯೇಕ ಶಿಬಿರಗಳಲ್ಲಿ ಇರಿಸಲಾಗಿದೆ. ಬಂಧಿತ ಮಹಿಳೆಯರಲ್ಲಿ ಕೆಲವರು ಐಸಿಸ್‌ ಕುರಿತಾಗಿ ಋಣಾತ್ಮಕ ಭಾವನೆ ತಳೆದಿದ್ದಾರೆ, ಆದರೆ ಇನ್ನುಳಿದ ಕೆಲವರು ಕಟ್ಟರ್‌ ಐಸಿಸ್‌ ವಾದಿಗಳಾಗಿದ್ದು ತಮ್ಮ ಇಸ್ಲಾಮಿಕ್‌ ಸ್ಟೇಟ್‌ ಧ್ಯೇಯೋದ್ದೇಶಗಳಿಗೇ ಬದ್ಧರಾಗಿದ್ದಾರೆ. ಹೀಗಾಗಿ ಜನಸಂಖ್ಯೆಯನ್ನು ಹೆಚ್ಚಿಸೋಕೆ ಅವರು ಅಲ್ಲಿ ವಯಸ್ಕರ ಪುರುಷರು ಇಲ್ಲದ ಕಾರಣ 13-14 ರ ಹದಿಹರೆಯದ ಬಾಲಕರನ್ನು ಬಳಸಿಕೊಂಡು ಗರ್ಭವತಿಯಾಗುತ್ತಿದ್ದಾರೆ.

    ಅಹ್ಮತ್ ಮತ್ತು ಹಮೀದ್ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಇನ್ನೂ ಹಲವಾರು ಬಾಲಕರು ಇದೇ ರೀತಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವುದು ಬೆಳಕಿಗೆ ಬಂದಿದೆ. ವರದಿಯೊಂದರ ಪ್ರಕಾರ ಒಬ್ಬ ಹುಡುಗನೊಂದಿಗೆ ಕೆಲವೇ ದಿನಗಳಲ್ಲಿ ಎಂಟು ಮಹಿಳೆಯರು ಸಂಬಂಧ ಬೆಳೆಸಿದ್ದಾರೆ. ಇದಲ್ಲದೇ ಈ ಮಹಿಳೆಯರು ತಮ್ಮ ಉದ್ದೇಶವನ್ನು ಸಫಲವಾಗಿಸಲು ಬಾಲಕರಿಗೆ ಉದ್ದೀಪನ ಮದ್ದುಗಳನ್ನು ನೀಡುತ್ತಿದ್ದಾರೆ, ಕೆಲ ಬಾಲಕರು ಈ ಮದ್ದುಗಳಿಂದ ಆರೋಗ್ಯ ಸಮಸ್ಯೆ ಅನುಭವಿಸುತ್ತಿದ್ದಾರೆ.

    ಈ ಕುರಿತು ಅಲ್ಲಿನ ಸರ್ಕಾರ ತನಿಖೆ ನಡೆಸಿದಾಗ ಶಿಬಿರದಲ್ಲಿ ಹಲವಾರು ಗರ್ಭಿಣಿಯರು ಇರುವುದು ಪತ್ತೆಯಾಗಿದೆ. ಅವರು ಸುರಂಗಗಳಲ್ಲಿ ಬಚ್ಚಿಟ್ಟಿದ್ದ ಕೆಲ ಬಾಲಕರನ್ನು ರಕ್ಷಿಸಲಾಗಿದೆ. ಕ್ಯಾಂಪ್ ಅಲ್ ಹಾಲ್‌ನಲ್ಲಿರುವ ಕೆಲವು ISIS ಮಹಿಳೆಯರು ಶಿಬಿರದ ಅಧಿಕೃತ ವೈದ್ಯಕೀಯ ಸಿಬ್ಬಂದಿಯ ಸಹಾಯವಿಲ್ಲದೆ, ಈ ಹಿಂದೆ ಐಸಿಸ್‌ ಕ್ಯಾಂಪ್‌ ನಲ್ಲಿ ದಾದಿಯರಾಗಿ ಕೆಲಸ ಮಾಡಿದ್ದ ಕೆಲ ಮಹಿಳೆಯರ ಸಹಾಯದಿಂದ ಮಗುವಿಗೆ ಜನ್ಮವನ್ನೂ ನೀಡಿದ್ದಾರೆ ಎನ್ನಲಾಗಿದೆ.

    ಸಿರಿಯಾದ ಈಶಾನ್ಯ ಭಾಗದಲ್ಲಿರುವ ಇನ್ನೊಂದು ಶಿಬಿರ ಅಲ್-ರೋಜ್‌ನಲ್ಲಿಯೂ ಕೂಡ ಈ ರೀತಿ ಹದಿಹರೆಯದ ಬಾಲಕರ ಮೇಲೆ ಶೋಷಣೆಗಳಾಗಿರುವ ಘಟನೆಗಳು ನಡೆದಿರುವುದು ವರದಿಯಾಗಿದೆ. ಈ ಹದಿಹರೆಯದವರ ತಾಯಂದಿರು ತಮ್ಮ ಮಕ್ಕಳನ್ನು ಈ ಮಹಿಳೆಯರಿಂದ ದೂರವಿಡಲು ಬೇರೆಡೆಗೆ ವರ್ಗಾಯಿಸುವಂತೆ ವಿನಂತಿಸಿದ್ದಾರೆ. ಈ ಕುರಿತು ವಿಶ್ವಸಂಸ್ಥೆಯು ಸಿರಿಯಾವನ್ನು ಟೀಕಿಸಿದೆ. ಆದರೆ ಸಿರಿಯಾ ಈ ಎಲ್ಲ ಹದಿರಹರೆಯದವರನ್ನೂ ರಕ್ಷಿಸಿ ಅವರನ್ನು ಸುರಕ್ಷಿತವಾಗಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ ಎಂಬುದನ್ನು ಮೂಲಗಳ ವರದಿ ಉಲ್ಲೇಖಿಸಿದೆ.

    Post Views: 253

    Related Posts

    ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ: ಮೂವರು ಶೂಟರ್ಗಳ ಬಂಧನ!!

    October 19, 2026

    ಮೊಬೈಲ್‌ ಹೊಂದಿದವರೆಲ್ಲರೂ ಪತ್ರಕರ್ತರಲ್ಲ..! ಮಹತ್ವದ ಅಭಿಪ್ರಾಯ ಮಂಡಿಸಿದ ಸುಪ್ರೀಂ ಕೋರ್ಟ್‌

    October 16, 2026

    ಕಡಿಮೆ ಬೆಲೆಗೆ ಚಿನ್ನದ ಆಮಿಷ, ರೂ. 12 ಲಕ್ಷ ವಂಚನೆ – ನಕಲಿ ಸನ್ಯಾಸಿ ಸೇರಿ 9 ಮಂದಿ ಬಂಧನ

    October 14, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಮಂಗಳೂರು: ಫೇಸ್‌ಬುಕ್‌ನಲ್ಲಿ ಬಂದಿದ್ದ APK ಫೈಲ್ ಡೌನ್‌ಲೋಡ್ ಮಾಡಿ ₹1.78 ಲಕ್ಷ. ಕಳೆದುಕೊಂಡ ವ್ಯಕ್ತಿ!!

    October 21, 2026

    ಕಡಬ: ವೃದ್ಧೆಯ ಮೇಲೆ ಕಲ್ಲು ಎಸೆದು ಹಲ್ಲೆ – ಸೊಸೆಯ ವಿರುದ್ಧ ಪ್ರಕರಣ ದಾಖಲು

    October 21, 2026

    ಮಂಗಳೂರು ದಸರಾ: ಇಂದು ಸಂಜೆ 4ರಿಂದ ವಾಹನ ಸಂಚಾರ ಮಾರ್ಗ ಬದಲಾವಣೆ

    October 21, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.