Facebook Twitter Instagram
    Monday, June 8
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ನವೆಂಬರ್ 27 ರಂದು ಕಾಂತಾರ ಸಿನೆಮಾ ಪ್ರೀಕ್ವೆಲ್‌ ಫಸ್ಟ್‌ ಲುಕ್‌ ರಿಲೀಸ್
    ಇತ್ತೀಚಿನ ಸುದ್ದಿ

    ನವೆಂಬರ್ 27 ರಂದು ಕಾಂತಾರ ಸಿನೆಮಾ ಪ್ರೀಕ್ವೆಲ್‌ ಫಸ್ಟ್‌ ಲುಕ್‌ ರಿಲೀಸ್

    November 25, 2023
    Share

    ಬೆಂಗಳೂರು: ರಿಷಬ್‌ ಶೆಟ್ಟಿ ಅವರ ʼಕಾಂತಾರʼ ಸಿನಿಮಾದ ಪ್ರೀಕ್ವೆಲ್ ಬಗ್ಗೆ ಹೊಂಬಾಳೆ ಫಿಲ್ಮ್ಸ್‌ ಶನಿವಾರ(ನ.25 ರಂದು) ಬಿಗ್‌ ಅಪ್ಡೇಟ್‌ ವೊಂದನ್ನು ನೀಡಿದೆ.

    ರಿಷಬ್‌ ಶೆಟ್ಟಿ ಬರೆದು ನಿರ್ದೇಶನ ಮಾಡಿರುವ ‘ಕಾಂತಾರ’ ತುಳುನಾಡಿನ ದೈವದ ಆಚರಣೆ ಹಾಗೂ ಸಂಪ್ರದಾಯದ ಸುತ್ತ ಸಾಗಿದ ಕಥೆಯನ್ನು ಒಳಗೊಂಡಿತ್ತು.

    ಕನ್ನಡದಲ್ಲಿ ಬಿಡುಗಡೆಯಾಗಿ ಪ್ರಾದೇಶಿಕ ಭಾಷೆಯಲ್ಲಿ ರಿಮೇಕ್ ಆಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ ಹೊಸ ಬಾಳೆ ಫಿಲ್ಮ್ಸ್ ನ ‘ಕಾಂತಾರ’ ಬಾಕ್ಸ್ ಆಫೀಸ್‌ನಲ್ಲಿ 400 ಕೋಟಗೂ ಅಧಿಕ ಗಳಿಕೆ ಕಂಡಿತ್ತು.

    ಮೊದಲ ಭಾಗ ಹಿಟ್ ಆದ ಬಳಿಕ ಸಿನಿಮಾದ ಎರಡನೇ ಭಾಗ ಅಂದರೆ ಪ್ರೀಕ್ವೆಲ್ ರಿಲೀಸ್ ಮಾಡುವುದಾಗಿ ರಿಷಬ್ ಸಿನಿಮಾದ ಶತದಿನದ ಸಂಭ್ರಮದಂದು ಹೇಳಿದ್ದರು. ಅದರಂತೆ ಸ್ಕ್ರಿಪ್ಟ್ ಹಾಗೂ ಲೋಕೇಷನ್ ಹುಡುಕಾಟದ ಬಳಿಕ ಸಿನಿಮಾದ ಬಗ್ಗೆ ಒಂದೊಂದು ಅಪ್ಡೇಟ್ ಗಳು ನಿಧಾನವಾಗಿ ಬರುತ್ತಲೇ ಹೋಯಿತು.

    ಪ್ರೀಕ್ವೆಲ್‌ ನಲ್ಲಿ ಪಂಜುರ್ಲಿ ದೈವದ ಹುಟ್ಟು ಹಾಗೂ ಮೂಲದ ಕಥೆ ಇರಲಿದೆ ಎನ್ನಲಾಗಿದೆ.

    ಇದೇ ತಿಂಗಳ ಕೊನೆಯಲ್ಲಿ ಸಿನಿಮಾದ ಮುಹೂರ್ತ ಉಡುಪಿಯಲ್ಲಿ ನಡೆಯಲಿದೆ ಎನ್ನಲಾಗಿದೆ. ಈ ಮಾತು ಚರ್ಚೆಯಲ್ಲಿರುವಾಗಲೇ ಇದೀಗ ಹೊಂಬಾಳೆ ಫಿಲ್ಮ್ಸ್ ಸಿನಿಮಾದ ಫಸ್ಟ್ ರಿಲೀಸ್ ಮಾಡುವ ದಿನಾಂಕವನ್ನು ರಿವೀಲ್ ಮಾಡಿದೆ.

    ಪ್ರತಿ ಕ್ಷಣವೂ ದೈವಿಕ ಸ್ಪರ್ಶವನ್ನು ಅನುಭವಿಸುವ ಜತೆ ಇತಿಹಾಸದ ನಿಗೂಢ ಸತ್ಯವನ್ನು ಅನ್ವೇಷಿಸಿ. ಹಿಂದೆಂದಿಗೂ ನೋಡದ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ಕಾತುರರಾಗಿ. ಇದು ಬರಿ ಬೆಳಕಲ್ಲ, ದರ್ಶನ ಎಂದು ಪೋಸ್ಟ್‌ ನಲ್ಲಿ ಬರೆದುಕೊಂಡಿದೆ.

    ನ.27 ರಂದು ಮಧ್ಯಾಹ್ನ 12:25 ರಂದು ಫಸ್ಟ್‌ ರಿಲೀಸ್‌ ಆಗಲಿದೆ ಎಂದು ಚಿತ್ರತಂಡ ಹೇಳಿದೆ.

    Post Views: 562

    Related Posts

    ಹುಲಿಕಲ್ ಘಾಟ್‌ನಲ್ಲಿ ಖಾಸಗಿ ಬಸ್‌ಗೆ ಬೆಂಕಿ; 17 ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪಾರು

    June 7, 2026

    ಆನ್‌ಲೈನ್ ಗೇಮ್ ವ್ಯಸನದ ಭೀಕರ ಅಂತ್ಯ: ತಂದೆ-ಅಕ್ಕನನ್ನೇ ಚಾಕುವಿನಿಂದ ಕೊಂದ ಪುತ್ರ

    June 7, 2026

    ತಲೆಮರೆಸಿಕೊಂಡಿದ್ದ ದರೋಡೆಕೋರನಿಗೆ ಪೊಲೀಸರ ಬಲೆ: ಉಳ್ಳಾಲ ಠಾಣೆ ತಂಡದ ಯಶಸ್ಸು

    June 7, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.