Facebook Twitter Instagram
    Thursday, September 10
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಕರ್ನಾಟಕ ಪೊಲೀಸರ ಕ್ಯಾಪ್ ಬದಲಾವಣೆಗೆ ರಾಜ್ಯ ಸರ್ಕಾರ ಚಿಂತನೆ
    ಇತ್ತೀಚಿನ ಸುದ್ದಿ

    ಕರ್ನಾಟಕ ಪೊಲೀಸರ ಕ್ಯಾಪ್ ಬದಲಾವಣೆಗೆ ರಾಜ್ಯ ಸರ್ಕಾರ ಚಿಂತನೆ

    June 27, 2025
    Share

    ಬೆಂಗಳೂರು : ರಾಜ್ಯ ಪೊಲೀಸ್​ ಇಲಾಖೆಯ ಕಾನ್​ಸ್ಟೇಬಲ್‌ಗಳು ಧರಿಸುತ್ತಿರುವ ಬ್ರಿಟಿಷ್​ ಕಾಲದ ಟೋಪಿ ಬದಲಾವಣೆಯ ಕಾಲ ಸನ್ನಿಹಿತವಾಗಿದೆ. ಟೋಪಿ ಬದಲಿಸುವಂತೆ ಹಲವು ವರ್ಷಗಳಿಂದಲೂ ಪೊಲೀಸ್ ಸಿಬ್ಬಂದಿ ಬೇಡಿಕೆಯಿಡುತ್ತಲೇ ಬಂದಿದ್ದರಾದರೂ ಇದುವರೆಗೂ ಬೇಡಿಕೆ ಈಡೇರಿಲ್ಲ. ಇದೀಗ ಹಳೆಯ ಮಾದರಿಯ ಸ್ಲೋಚ್ ಹ್ಯಾಟ್ ಬದಲಿಗೆ ಪೀಕ್​ ಕ್ಯಾಪ್​ ನೀಡುವುದರ ಕುರಿತು ಚರ್ಚೆ ನಡೆಸಿ ನೂತನ ಕ್ಯಾಪ್ ಬಳಕೆಗೆ ಚಿಂತನೆ ನಡೆಸಲಾಗುತ್ತಿದೆ.

    ಹೌದು ಕರ್ನಾಟಕ ಪೊಲೀಸರ ಕ್ಯಾಪ್ ದಲಾವಣೆಗೆ ಇದೀಗ ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದ್ದು, ರಾಜ್ಯದಲ್ಲಿ ಸದ್ಯ ಪೊಲೀಸರು ಬಳಸುತ್ತಿರುವ ಕ್ಯಾಪ್ ಬದಲು ಮಾಡಲು ರಾಜ್ಯ ಸರ್ಕಾರ ಮಹತ್ವದ ಚಿಂತನೆ ನಡೆಸುತ್ತಿದೆ. ಹೊಸ ಮಾದರಿಯ ಪೊಲೀಸ್ ಕ್ಯಾಪ್ ಬಳಕೆಗೆ ಸರ್ಕಾರ ಚಿಂತನೆ ನಡೆಸುತ್ತಿದೆ. ಹೊಸ ಪ್ರಸ್ತಾಪಿತ ಕ್ಯಾಪ್ ಅನ್ನು ಗೃಹ ಸಚಿವ ಜಿ. ಪರಮೇಶ್ವರ್ ಅವರು ಇಂದು ವೀಕ್ಷಿಸಿದರು. ಬೇರೆ ರಾಜ್ಯಗಳ ಪೊಲೀಸರು ಬಳಸುತ್ತಿರುವ ಕ್ಯಾಪ್ ಗಳನ್ನು ಇದೇ ಸಂದರ್ಭದಲ್ಲಿ ವೀಕ್ಷಣೆ ಮಾಡಿದರು. ರಾಜ್ಯ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಗೃಹ ಸಚಿವ ಜಿ ಪರಮೇಶ್ವರ್ ಇಂದು ಬೇರೆ ಬೇರೆ ರಾಜ್ಯಗಳ ಪೊಲೀಸ್ ಕ್ಯಾಪ್ ಗಳನ್ನು ವೀಕ್ಷಣೆ ಮಾಡಿದರು.ಹಾಗಾಗಿ ಶೀಘ್ರದಲ್ಲಿ ರಾಜ್ಯದಲ್ಲಿ ಪೊಲೀಸರಿಗೆ ಹೊಸ ಕ್ಯಾಪ್ ಬಳಕೆಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.

    ಸ್ಲೋಚ್ ಕ್ಯಾಪ್ ಇತಿಹಾಸ:

    ರಾಜ್ಯದಲ್ಲಿ ಪೊಲೀಸ್ ಕ್ಯಾಪ್‌ಗಳಿಗೆ ಶತಮಾನದ ಇತಿಹಾಸವಿದೆ. ಮೈಸೂರು ಮಹಾರಾಜರ ಅವಧಿಯಲ್ಲಿ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಕಿ ಅಂಗಿ, ಅರ್ಧ ಪ್ಯಾಂಟ್, ಬಣ್ಣದ ಪೇಟ ಮತ್ತು ಕಂದು ಬಣ್ಣದ ಬೂಟುಗಳನ್ನು ಧರಿಸಲಾಗುತ್ತಿತ್ತು. ರಾಜಪ್ರಭುತ್ವ ಅಂತ್ಯವಾದ ಬಳಿಕವೂ ಪೊಲೀಸರ ಸಾಂಪ್ರದಾಯಿಕ ಶೈಲಿಯ ಉಡುಗೆಯನ್ನು ಉಳಿಸಿಕೊಳ್ಳಲಾಯಿತು. ನಂತರದ ದಿನಗಳಲ್ಲಿ ಅರ್ಧ ಪ್ಯಾಂಟ್ ಬದಲು ಪೂರ್ಣ ಪ್ರಮಾಣದ ಪ್ಯಾಂಟ್ ಹಾಗೂ ನೀಲಿ ಮತ್ತು ಕೆಂಪು ಬಣ್ಣಗಳುಳ್ಳ ಟರ್ಬನ್ ಮಾದರಿಯ ಕ್ಯಾಪ್ ಪರಿಚಯಿಸಲಾಯಿತು.

    ಆದರೆ ರಾಜ್ಯ ಪೊಲೀಸ್ ಕಾನ್ಸ್‌ಟೇಬಲ್‌ಗಳು ಪ್ರಸ್ತುತ ಬಳಸುತ್ತಿರುವ ಸ್ಲೋಚ್ ಕ್ಯಾಪ್‌ಗಳನ್ನು ಆರ್.ಗುಂಡೂರಾವ್ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ (1980-83) ಆರಂಭಿಸಲಾಯಿತು. ಅಲ್ಲಿಯವರೆಗೂ ಇದ್ದ ನೀಲಿ ಬಣ್ಣದ ಕೆಂಪು ಪಟ್ಟಿಗಳಿದ್ದ ಟರ್ಬನ್‌ಗಳ ಬದಲಿಗೆ ಸ್ಲೋಚ್ ಕ್ಯಾಪ್‌ಗಳನ್ನು ದೈನಂದಿನ ಕರ್ತವ್ಯದ ಸಂದರ್ಭಗಳಿಗಾಗಿ ಪರಿಚಯಿಸಲಾಯಿತು ಸದ್ಯ ಪರೇಡ್ ಮತ್ತಿತರ ಸಂದರ್ಭಗಳಲ್ಲಿ ಮಾತ್ರವೇ ಟರ್ಬನ್‌ಗಳನ್ನು ಬಳಸಲಾಗುತ್ತಿದೆ. ಕಾನ್ಸ್‌ಟೇಬಲ್‌ಗಳ ಕ್ಯಾಪ್ ಬದಲಾವಣೆ ಕುರಿತ ಚರ್ಚೆ ಇದೇ ಮೊದಲೇನಲ್ಲ. ಈ ಹಿಂದೆಯೂ ಸಹ ಕಾನ್ಸ್‌ಟೇಬಲ್‌ಗಳ ಕ್ಯಾಪ್ ಬದಲಾವಣೆಯ ಕುರಿತ ಸಾಧಕ-ಭಾದಕಗಳ ಕುರಿತು ಹಿರಿಯ ಅಧಿಕಾರಿಗಳ ಸಭೆ ನಡೆಸಲಾಗಿತ್ತು.

    Post Views: 263

    Related Posts

    ಮುಲ್ಕಿ: ಕಿಲ್ಪಾಡಿ ಕೋರ್ದಬ್ಬು ದೈವಸ್ಥಾನ ಕಳವು ಪ್ರಕರಣದಲ್ಲಿ ನಾಲ್ವರು ಅರೆಸ್ಟ್

    September 10, 2026

    ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾಗಿ ಯುವ ನಾಯಕ ಪದ್ಮರಾಜ್ ರಾಮಯ್ಯ ಪೂಜಾರಿ ನೇಮಕ

    September 10, 2026

    ಪುತ್ತೂರು: ವಿದ್ಯಾರ್ಥಿನಿ ನಿಲಯದಲ್ಲಿ ಒಣಗಲು ಹಾಕಿದ್ದ ಬಟ್ಟೆ ಕಳ್ಳತನ ಮಾಡುತ್ತಿದ್ದ ಆರೋಪಿ ಅರೆಸ್ಟ್..!!

    September 9, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಮುಲ್ಕಿ: ಕಿಲ್ಪಾಡಿ ಕೋರ್ದಬ್ಬು ದೈವಸ್ಥಾನ ಕಳವು ಪ್ರಕರಣದಲ್ಲಿ ನಾಲ್ವರು ಅರೆಸ್ಟ್

    September 10, 2026

    ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾಗಿ ಯುವ ನಾಯಕ ಪದ್ಮರಾಜ್ ರಾಮಯ್ಯ ಪೂಜಾರಿ ನೇಮಕ

    September 10, 2026

    ಪುತ್ತೂರು: ವಿದ್ಯಾರ್ಥಿನಿ ನಿಲಯದಲ್ಲಿ ಒಣಗಲು ಹಾಕಿದ್ದ ಬಟ್ಟೆ ಕಳ್ಳತನ ಮಾಡುತ್ತಿದ್ದ ಆರೋಪಿ ಅರೆಸ್ಟ್..!!

    September 9, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.