Facebook Twitter Instagram
    Tuesday, September 22
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಪುತ್ತೂರು ಕಾರ್ತಿಕ್ ಮೇರ್ಲ ಕೊಲೆ ಪ್ರಕರಣ: ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ!!
    ಇತ್ತೀಚಿನ ಸುದ್ದಿ

    ಪುತ್ತೂರು ಕಾರ್ತಿಕ್ ಮೇರ್ಲ ಕೊಲೆ ಪ್ರಕರಣ: ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ!!

    September 22, 2026
    Share

    ಪುತ್ತೂರು : ಹಿಂದೂ ಜಾಗರಣ ವೇದಿಕೆಯ ತಾಲೂಕು ಪ್ರಧಾನ ಕಾರ್ಯದರ್ಶಿ ಕಾರ್ತಿಕ್ ಸುವರ್ಣ ಮೇರ್ಲ (27) ಕೊಲೆ ಪ್ರಕರಣದಲ್ಲಿ ಅಪರಾಧ ಸಾಬೀತಾಗಿದ್ದ ಇಬ್ಬರು ಆರೋಪಿಗಳಿಗೆ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆಯೊಂದಿಗೆ ತಲಾ 3 ಲಕ್ಷ ರೂ. ದಂಡವನ್ನೂ ವಿಧಿಸಿದೆ. ದಂಡದ ಮೊತ್ತದಲ್ಲಿ 5.90 ಲಕ್ಷ ರೂ.ಗಳನ್ನು ಕಾರ್ತಿಕ್ ಮೇರ್ಲ ಅವರ ತಾಯಿ ಹೇಮಾವತಿ ಅವರಿಗೆ ನೀಡುವಂತೆ ನ್ಯಾಯಾಲಯ ಸೂಚಿಸಿದೆ. ಮತ್ತೊಬ್ಬ ಆರೋಪಿ ಮಂಗಳೂರಿನ ಅತ್ತಾವರದ ಸ್ಟೀವನ್ ಮೊಂತೆರೊ ಮೇಲಿನ ಆರೋಪ ಸಾಬೀತಾಗದ ಹಿನ್ನೆಲೆಯಲ್ಲಿ ಅವರನ್ನು ಖುಲಾಸೆಗೊಳಿಸಲಾಗಿದೆ.

    ಪ್ರಕರಣದಲ್ಲಿ ಕಿರಣ್ ರೈ ಅವರ ಸಹೋದರ ಚರಣ್ ರಾಜ್ ರೈ ಕೂಡ ಆರೋಪಿಯಾಗಿದ್ದು, ವಿಚಾರಣೆ ಸಂದರ್ಭಜಾಮೀನಿನಲ್ಲಿದ್ದ ಅವರು 2022ರಲ್ಲಿ ಹತ್ಯೆಯಾಗಿದ್ದರು. ಹತ್ಯೆಗೀಡಾದ ಕಾರ್ತಿಕ್ ಅವರು ಸೆ.3ರಂದು ರಾತ್ರಿ ಸುಮಾರು 10 ಗಂಟೆ ತನಕ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಗಣೇಶೋತ್ಸವ ಸಮಾರಂಭದಲ್ಲಿ ಭಾಗಿಯಾಗಿದ್ದರು. ಆ ಬಳಿಕ ಅಲ್ಲಿಂದ ಬಂದವರು ತನ್ನ ಊರು ಸಂಪ್ಯದ ಗಣೇಶೋತ್ಸವದ ಶೋಭಾ ಯಾತ್ರೆಯಲ್ಲಿ ಸ್ವಲ್ಪಹೊತ್ತು ಪಾಲ್ಗೊಂಡಿದ್ದರು.ಸಂಪ್ಯದಲ್ಲಿ ಗಣೇಶನ ಶೋಭಾಯಾತ್ರೆ ಬಳಿಕ ಗಣೇಶೋತ್ಸವದ ವೇದಿಕೆಯಲ್ಲಿ ಯಕ್ಷಗಾನ ನಡೆಯುತ್ತಿತ್ತು.ಕಾರ್ತಿಕ್ ಅವರು ಯಕ್ಷಗಾನ ನೋಡಲು ಗಣೇಶೋತ್ಸವದ ಪೆಂಡಾಲ್ ಬಳಿ ಬಂದಿದ್ದರು.ಮುಖ್ಯರಸ್ತೆಯಿಂದ ಸಂಪ್ಯ ಠಾಣೆಗೆ ಹೋಗುವ ಡಾಮರುರಸ್ತೆಯಲ್ಲಿ ನಿಂತು ಯಕ್ಷಗಾನ ನೋಡುತ್ತಿದ್ದಾಗ ಅಲ್ಲಿ ಆರೋಪಿಗಳಾದ ಚರಣ್‌ ರಾಜ್, ಕಿರಣ್ ಮತ್ತು ಅವರ ವಾಹನ ಚಾಲಕ ಪ್ರೀತೇಶ್‌ ಶೆಟ್ಟಿ ಅಲ್ಲಿಗೆ ಬಂದಿದ್ದರು.ಅದ್ಯಾವುದೋ ವಿಚಾರಕ್ಕೆ ಸಂಬಂಧಿಸಿ ಅಲ್ಲಿ ಅವರೊಳಗೆ ಮಾತಿಗೆ ಮಾತು ಬೆಳೆದು ಅದು ತಾರಕಕ್ಕೇರಿ,ಚರಣ್‌ರಾಜ್ ರೈ ಮತ್ತು ಕಿರಣ್ ರೈ ಸಹೋದರರು ಕಾರ್ತಿಕ್ ಅವರ ಕೈಯನ್ನು ಹಿಡಿದಿದ್ದರು.ಈ ವೇಳೆ ಪ್ರೀತೇಶ್ ಹರಿತವಾದ ಆಯುಧದಿಂದ ಕಾರ್ತಿಕ್ ಸುವರ್ಣ ಅವರ ಎದೆಯ ಕೆಳಭಾಗಕ್ಕೆ ತಿವಿದ ಪರಿಣಾಮವಾಗಿ ಗಾಯವಾಗಿ ರಕ್ತ ಸುರಿಯಲಾರಂಭಿಸಿ ಕಾರ್ತಿಕ್ ಅಲ್ಲೇ ಕುಸಿದು ಬಿದ್ದಿದ್ದರು. ಆ ವೇಳೆ ಸಾರ್ವಜನಿಕರು ಸೇರಿದಾಗ ಆರೋಪಿಗಳು, ಕೃತ್ಯಕ್ಕೆ ಉಪಯೋಗಿಸಿದ ಚೂರಿಯೊಂದಿಗೆ ಕೆ.ಎ.21: ಝಡ್ 234 ನಂಬ್ರದ ಕಾರಿನಲ್ಲಿ ಸ್ಥಳದಿಂದ ಪರಾರಿಯಾಗಿದ್ದರು. ಸಂಪ್ಯ ಪೊಲೀಸರು ಮತ್ತು ಸಾರ್ವಜನಿಕರು ಸೇರಿಕೊಂಡು ಕಾರ್ತಿಕ್ ಸುವರ್ಣರನ್ನು ಚಿಕಿತ್ಸೆಗಾಗಿ ರಿಕ್ಷಾವೊಂದರಲ್ಲಿ ಪುತ್ತೂರು ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋದರಾದರೂ ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು. ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದ ಕಾರ್ತಿಕ್ ಅವರು ಮುಕ್ರಂಪಾಡಿಯಲ್ಲಿ ಮುಂಡೂರು ತಿರುವಿನ ಬಳಿ ತನ್ನ ಬೈಕ್ ನಿಲ್ಲಿಸಿ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು.ಮೊಟ್ಟೆತಡ್ಕದಿಂದ ಶೋಭಾಯಾತ್ರೆ ಹಿಂತಿರುಗಿದ ಬಳಿಕ ಮುಕ್ರಂಪಾಡಿಯಿಂದ ತನ್ನ ಬೈಕ್‌ನಲ್ಲಿ ಅವರು ಹೊರಟು ಬಂದಿದ್ದರು. ಆ ವೇಳೆ ತನ್ನ ಪರಿಚಿತರೋರ್ವರನ್ನು ಬೈಕಲ್ಲಿ ಸಂಪ್ಯಕ್ಕೆ ಡ್ರಾಪ್ ಮಾಡಿದ್ದ ಕಾರ್ತಿಕ್ ತನಗೆ ಸುಸ್ತಾಗಿರುವುದಾಗಿಯೂ,ತಾನಿನ್ನು ಮನೆಗೆ ಹೋಗುವುದಾಗಿಯೂ ಹೇಳಿ ತನ್ನ ಅಪಾಚಿ ಬೈಕ್‌ನಲ್ಲಿ ಹೊರಟು ಹೋಗಿದ್ದರು. ಆದರೆ ಅವರು ಮನೆಗೆ ಹೋಗದೆ ಗಣೇಶೋತ್ಸವದಲ್ಲಿಗೆ ಬಂದು ಯಕ್ಷಗಾನ ನೋಡುತ್ತಿದ್ದರು.ಗಣೇಶೋತ್ಸವದ ಪೆಂಡಾಲ್‌ನ ಒಳಗೆಯೇ ಕೃತ್ಯ ನಡೆದಿತ್ತು.

    ಕೊಲೆ ನಡೆದ ಮಾಹಿತಿ ತಿಳಿದ ತಕ್ಷಣವೇ ಆಗಿನ ಎಸ್ಪಿ ಬಿ.ಎಂ.ಲಕ್ಷ್ಮೀಪ್ರಸಾದ್‌ರವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಘಟನೆಗೆ ಸಂಬಂಧಿಸಿ ಮೃತರ ಚಿಕ್ಕಪ್ಪ ಕೇಶವ ಸುವರ್ಣ ಅವರು ನೀಡಿದ್ದ ದೂರಿನಂತೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ 504,341,302 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿತ್ತು. ಕಾಸರಗೋಡು ಜಿಲ್ಲೆಯ ಉಪ್ಪಳ ಸ್ಟೇಷನಿನಲ್ಲಿ ರೌಡಿ ಶೀಟರ್ ಆಗಿದ್ದು, ಈತನ ವಿರುದ್ಧ ಹಲವು ಪ್ರಕರಣಗಳು ಕೇರಳ ಠಾಣೆಯಲ್ಲಿ ಇದೆ.ಈತನೇ ಕಾರ್ತಿಕ್ ಅವರಿಗೆ ಚೂರಿಯಿಂದ ಇರಿದ ವ್ಯಕ್ತಿ ಎಂದು ಪೊಲೀಸರು ಮಾಹಿತಿ ಕಲೆ ಹಾಕಿದ್ದರು.ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸರ 2 ತಂಡ ರಚನೆ ಮಾಡಲಾಗಿತ್ತು.ಕೊನೆಗೂ
    ನಾಲ್ವರು ಆರೋಪಿಗಳನ್ನೂ ಪೊಲೀಸರು ಬಂಧಿಸಿದ್ದರು. ಸರ್ಕಾರದ ಪರ ಸರ್ಕಾರಿ ಅಭಿಯೋಜಕಿ ಜಯಂತಿ ಸತೀಶ್ ಭಟ್ ವಾದಿಸಿದ್ದರು.

    Post Views: 1

    Related Posts

    ಮೂಡುಬಿದಿರೆ: ಬಿಜೆಪಿ ಯುವ ಮುಖಂಡ ಪ್ರತೀಕ್ ಶೆಟ್ಟಿ ನಿಧನ

    September 22, 2026

    ಉಡುಪಿ: ಬಸ್ ಟೈಮಿಂಗ್ಸ್ ವಿಚಾರಕ್ಕೆ ಕಂಡಕ್ಟರ್‌ಗಳ ಗಲಾಟೆ..! ಪೊಲೀಸರ ಎದುರೇ ಹೊಡೆದಾಟ, ಇಬ್ಬರು ವಶಕ್ಕೆ

    September 22, 2026

    ಮಂಗಳೂರು: ವರ್ಕ್ ಫ್ರಮ್ ಹೋಮ್ ಡೇಟಾ ಎಂಟ್ರಿ ಆಮಿಷ- ಯುವತಿಗೆ 9.33 ಲಕ್ಷ ರೂ. ವಂಚನೆ

    September 22, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಪುತ್ತೂರು ಕಾರ್ತಿಕ್ ಮೇರ್ಲ ಕೊಲೆ ಪ್ರಕರಣ: ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ!!

    September 22, 2026

    ಮೂಡುಬಿದಿರೆ: ಬಿಜೆಪಿ ಯುವ ಮುಖಂಡ ಪ್ರತೀಕ್ ಶೆಟ್ಟಿ ನಿಧನ

    September 22, 2026

    ಉಡುಪಿ: ಬಸ್ ಟೈಮಿಂಗ್ಸ್ ವಿಚಾರಕ್ಕೆ ಕಂಡಕ್ಟರ್‌ಗಳ ಗಲಾಟೆ..! ಪೊಲೀಸರ ಎದುರೇ ಹೊಡೆದಾಟ, ಇಬ್ಬರು ವಶಕ್ಕೆ

    September 22, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.