Facebook Twitter Instagram
    Thursday, July 23
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಕೇರಳ ಲಾಟರಿ ಹೆಸರಿನಲ್ಲಿ ಸೈಬರ್ ವಂಚನೆ: ಮಂಗಳೂರಿನ ವ್ಯಕ್ತಿಗೆ ಲಕ್ಷಾಂತರ ರೂ. ನಷ್ಟ
    ಇತ್ತೀಚಿನ ಸುದ್ದಿ

    ಕೇರಳ ಲಾಟರಿ ಹೆಸರಿನಲ್ಲಿ ಸೈಬರ್ ವಂಚನೆ: ಮಂಗಳೂರಿನ ವ್ಯಕ್ತಿಗೆ ಲಕ್ಷಾಂತರ ರೂ. ನಷ್ಟ

    June 6, 2026
    Share

    ಮಂಗಳೂರು: ಫೇಸ್‌ಬುಕ್‌ನಲ್ಲಿ ಬಂದ ಕೇರಳ ಲಾಟರಿಯ ನಕಲಿ ಜಾಹೀರಾತನ್ನು ನಂಬಿ ಸಾರ್ವಜನಿಕರೊಬ್ಬರು ಹಂತ-ಹಂತವಾಗಿ ಬರೋಬ್ಬರಿ ₹1,85,636 ಹಣವನ್ನು ಆನ್‌ಲೈನ್ ಮೂಲಕ ಪಾವತಿಸಿ ವಂಚನೆಗೊಳಗಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಸಂತ್ರಸ್ತ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.ಮೇ 29 ರಂದು ಸಂತ್ರಸ್ತರು ತಮ್ಮ ಮೊಬೈಲ್‌ನಲ್ಲಿ ಫೇಸ್‌ಬುಕ್ ವೀಕ್ಷಿಸುತ್ತಿದ್ದಾಗ “₹50 ರ ಟಿಕೆಟ್‌ಗೆ ಸಂಜೆ ಡ್ರಾ” ಎಂಬ ಕೇರಳ ಲಾಟರಿಯ ಜಾಹೀರಾತು ಕಂಡುಬಂದಿತ್ತು. ಅದಲ್ಲಿದ್ದ ಲಿಂಕ್ ಮೂಲಕ ಕರೆ ಮಾಡಿದಾಗ ನವೀನ್ ಎಂಬ ಅಪರಿಚಿತ ವ್ಯಕ್ತಿ ಲಾಟರಿ ನಂಬರ್‌ಗಳನ್ನು ಕಳುಹಿಸಿದ್ದನು. ಅದರಲ್ಲಿ ಎರಡು ನಂಬರ್ ಆಯ್ಕೆ ಮಾಡಿದ್ದ ಸಂತ್ರಸ್ತರು, ಆತ ಕಳುಹಿಸಿದ ಕ್ಯೂಆರ್ ಕೋಡ್ ಸ್ಕ್ಯಾನರ್ ಮುಖೇನ ₹100 ಪಾವತಿಸಿದ್ದರು. ಅಂದೇ ಸಂಜೆ 4 ಗಂಟೆಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ, “ನಿಮಗೆ ₹12 ಲಕ್ಷ ರೂಪಾಯಿ ಬಂಪರ್ ಲಾಟರಿ ಬಹುಮಾನ ಬಂದಿದೆ” ಎಂದು ನಂಬಿಸಿದ್ದನು.ಬಹುಮಾನದ ಹಣ ವರ್ಗಾಯಿಸಲು ಸಂತ್ರಸ್ತರ ಬ್ಯಾಂಕ್ ಖಾತೆ, ಐಎಫ್‌ಎಸ್‌ಸಿ ಕೋಡ್ ಹಾಗೂ ಗುರುತಿನ ಚೀಟಿ (UIDAI) ದಾಖಲೆಗಳನ್ನು ಪಡೆದ ವಂಚಕರು, ಬಳಿಕ ಪ್ರೊಸೆಸಿಂಗ್ ಫೀಸ್ ಮತ್ತು ವಿವಿಧ ತೆರಿಗೆಗಳ ಹೆಸರಲ್ಲಿ ಹಣ ಪೀಕಲು ಆರಂಭಿಸಿದರು. ಮೊದಲು 1% ಕಮಿಷನ್ ಎಂದು ದೀಪಕ್ ಎಂಬುವವರ ಗೂಗಲ್ ಪೇ ನಂಬರ್‌ಗೆ (9729838069) ₹12,000 ಪಾವತಿಸಿಕೊಳ್ಳಲಾಯಿತು. ಮೇ 30 ರಂದು ತೆರಿಗೆ ಎಂದು ಅದೇ ನಂಬರ್‌ಗೆ ₹24,981 ಹಾಕಿಸಿಕೊಳ್ಳಲಾಯಿತು. ತದನಂತರ ತೆರಿಗೆ ಬಾಂಡ್ ಹೆಸರಿನಲ್ಲಿ ರಾಜ್ ಕುಮಾರ್ ಎಂಬುವವರ ಗೂಗಲ್ ಪೇ ನಂಬರ್‌ಗೆ (9523765412) ₹58,760 ವರ್ಗಾಯಿಸಿಕೊಳ್ಳಲಾಯಿತು. ಕೊನೆಯದಾಗಿ,ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನ ಖಾತೆಗೆ (272201000005603) ₹89,895 ಹಣವನ್ನು ನೆಫ್ಟ್ (NEFT) ಮಾಡಿಸಿಕೊಳ್ಳಲಾಗಿತ್ತು.ಒಟ್ಟು ₹1,85,636 ಪಾವತಿಸಿದ ಬಳಿಕವೂ ಹಣ ಬಾರದಿದ್ದಾಗ ಸಂತ್ರಸ್ತರಿಗೆ ಅನುಮಾನ ಬಂದು ಕಚೇರಿ ವಿಳಾಸ ಕೇಳಿದ್ದಾರೆ. ವಂಚಕ ಕೇರಳದ ತ್ರಿವೇಂಡ್ರಮ್‌ನ ನಕಲಿ ರೂಟ್ ಮ್ಯಾಪ್ ಕಳುಹಿಸಿದ್ದನು. ಜೂನ್ 1 ರಂದು ಸಂತ್ರಸ್ತರು ತಮ್ಮ ಸ್ನೇಹಿತನೊಂದಿಗೆ ರೈಲಿನಲ್ಲಿ ಹೊರಟು ಜೂನ್ 2 ರಂದು ತ್ರಿವೇಂಡ್ರಮ್ ತಲುಪಿದ್ದಾರೆ. ಅಲ್ಲಿಗೆ ಹೋಗಿ ವಂಚಕನ ಮೊಬೈಲ್ ನಂಬರ್‌ಗೆ (9032823911) ಕರೆ ಮಾಡಿದಾಗ, “ನಾನು ಕಚೇರಿಯಲ್ಲಿ ಇಲ್ಲ, ಸಂಜೆಯಾಗುತ್ತದೆ” ಎಂದು ಉತ್ತರಿಸಿದ್ದಾನೆ. ಆದರೆ ಸಂತ್ರಸ್ತರು ನೇರವಾಗಿ ಅಲ್ಲಿನ ಅಧಿಕೃತ ಲಾಟರಿ ಕಚೇರಿಗೆ ತೆರಳಿ ವಿಚಾರಿಸಿದಾಗ, ಇದೊಂದು ಸಂಪೂರ್ಣ ನಕಲಿ (Fake) ಲಾಟರಿ ಜಾಲ ಎಂಬುದು ತಿಳಿದುಬಂದಿದೆ. ತಮಗೆ ಆನ್‌ಲೈನ್ ಮೂಲಕ ವಂಚಿಸಿದ ಕಿರಾತಕರನ್ನು ಪತ್ತೆಹಚ್ಚುವಂತೆ ಸಂತ್ರಸ್ತರು ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

    Post Views: 112

    karnataka PoliceInvestigation

    Related Posts

     ಶಾಸಕ ಬಿಪಿ ಹರೀಶ್ ಗೆ ಮೊಟ್ಟೆ ಎಸೆತ : ಕಮಿಷನರ್ ಗೆ ಬಿಜೆಪಿ ನಾಯಕರಿಂದ ದೂರು ಸಲ್ಲಿಕೆ

    July 22, 2026

    ಫರಂಗಿಪೇಟೆ ಬ್ಯಾಂಕ್‌ ಕಳ್ಳತನ ಯತ್ನ ಪ್ರಕರಣ: ಆರೋಪಿಗಳ ಪತ್ತೆಗೆ ಪ್ರತ್ಯೇಕ ವಿಶೇಷ ತಂಡ

    July 22, 2026

    ಬೆಳ್ತಂಗಡಿ: ಖೋಟಾ ನೋಟು ದಂಧೆ ಪ್ರಕರಣ : ನಾಲ್ವರಿಗೆ ಮತ್ತೆ ಪೊಲೀಸ್ ಕಸ್ಟಡಿ : ಮೂವರಿಗೆ ನ್ಯಾಯಾಂಗ ಬಂಧನ

    July 22, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

     ಶಾಸಕ ಬಿಪಿ ಹರೀಶ್ ಗೆ ಮೊಟ್ಟೆ ಎಸೆತ : ಕಮಿಷನರ್ ಗೆ ಬಿಜೆಪಿ ನಾಯಕರಿಂದ ದೂರು ಸಲ್ಲಿಕೆ

    July 22, 2026

    ಫರಂಗಿಪೇಟೆ ಬ್ಯಾಂಕ್‌ ಕಳ್ಳತನ ಯತ್ನ ಪ್ರಕರಣ: ಆರೋಪಿಗಳ ಪತ್ತೆಗೆ ಪ್ರತ್ಯೇಕ ವಿಶೇಷ ತಂಡ

    July 22, 2026

    ಬೆಳ್ತಂಗಡಿ: ಖೋಟಾ ನೋಟು ದಂಧೆ ಪ್ರಕರಣ : ನಾಲ್ವರಿಗೆ ಮತ್ತೆ ಪೊಲೀಸ್ ಕಸ್ಟಡಿ : ಮೂವರಿಗೆ ನ್ಯಾಯಾಂಗ ಬಂಧನ

    July 22, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.